Breaking News

Breaking News

5 ದಿನದಲ್ಲಿ 11 ಪ್ರಯಾಣಿಕರಿಂದ 33.42 ಕೋಟಿ ರೂ. ಮೌಲ್ಯದ ಗಾಂಜಾ ವಶ

ಮುಂಬಯಿ: ಬ್ಯಾಂಕಾಕ್‌ನಿಂದ ಆಗಮಿಸಿದ 11 ಪ್ರಯಾಣಿಕರಿಂದ 33.422 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಕಳೆದ ಐದು ದಿನಗಳಲ್ಲಿ ಮುಂಬಯಿಯ ಕಸ್ಟಮ್ಸ್ ವಲಯ-3 ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಡಿ. 11  – 15ರ ನಡುವೆ ಮುಂಬಯಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಎಂಟು ಪ್ರತ್ಯೇಕ ಪ್ರಕರಣಗಳಲ್ಲಿ 33.4 ಕೆಜಿ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.ಪ್ರಯಾಣಿಕರ ಮಾಹಿತಿ ಆಧರಿಸಿ ಐದು ಪ್ರಯಾಣಿಕರಿಂದ ನಾಲ್ಕು ಪ್ರಕರಣಗಳಲ್ಲಿ 16.482 ಕೆಜಿ ಶಂಕಿತ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ …

Read More »

ಕಾರ್ಕಳಕ್ಕೆ ಕೆಲಸಕ್ಕೆಂದು ಹೋದ ಮಂಚಿಯ ಯುವಕ ನಾಪತ್ತೆ

ಮಂಚಿ ಗ್ರಾಮದ ಪುಳಿತಪಡ್ಪು ನಿವಾಸಿ ಇದಿನಬ್ಬ ಅವರ ಪುತ್ರ ಮಹಮ್ಮದ್ ರಾಝಿಮ್ (23) ನಾಪತ್ತೆಯಾದವರು. ಅವರು ಕಾರ್ಕಳದ ಕಂಪೆನಿಯೊಂದರ ಲಾರಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿನಿತ್ಯ ಮನೆಗೆ ಬಂದು ಹೋಗುತ್ತಿದ್ದರು.ಡಿ. 5ರಂದು ಬೆಳಗ್ಗೆ ಮನೆಯಿಂದ ಹೋದವರು ಮರಳಿ ಬಂದಿಲ್ಲ. ಹುಡುಕಾಡಿದರೂ ಪತ್ತೆಯಾಗಿಲ್ಲ, ಮೊಬೈಲ್ ಫೋನ್‌ ಕೂಡ ಸ್ವಿಚ್ಡ್ ಆಫ್ ಆಗಿರುತ್ತದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More »

ಧಾರವಾಡದಲ್ಲಿ ಘೋರ ದುರಂತ : ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಬಂದಿದ್ದ ಯುವತಿ ರೈಲಿಗೆ ತಲೆಕೊಟ್ಟು ಆತ್ಮಹ್ಯತ್ಯೆ.!

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿ ಯುವತಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ ಶಿವಗಿರಿಯಲ್ಲಿ ನಡೆದಿದೆ.ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲೆಂದು ಬಂದಿದ್ದ ಯುವತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘೋರ ಧಾರವಾಡದ ತಪೋವನ ಬಳಿ ನಡೆದಿದೆ.ಬಳ್ಳಾರಿ ಮೂಲಕ ಪಲ್ಲವಿ (22) ಆತ್ಮಹತ್ಯೆಗೆ ಶರಣಾದ ಯುವತಿ. ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಯಲ್ಲಿದ್ದ ಯುವತಿ ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾಳೆ. ಯುವತಿ ಆತ್ಮಹತ್ಯೆಗೆ ನಿಖರ …

Read More »

ಛತ್ತೀಸಗಢ: 34 ನಕ್ಸಲರು ಶರಣು

ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ 34 ನಕ್ಸಲರು ಮಂಗಳವಾರ ಶರಣಾಗಿದ್ದಾರೆ. ಈ ಪೈಕಿ 26 ಮಂದಿಯ ಸುಳಿವು ನೀಡಿದವರಿಗೆ ಒಟ್ಟು ₹84 ಲಕ್ಷ ಬಹುಮಾನ ಘೋಷಿಸಲಾಗಿತ್ತು.ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ಆರಂಭಿಸಿದ ಪುನರ್ವಸತಿ ಯೋಜನೆಯಡಿ ಏಳು ಮಂದಿ ಮಹಿಳೆಯರು ಸೇರಿದಂತೆ 34 ನಕ್ಸಲರು ಶರಣಾಗಿದ್ದಾರೆ’ ಎಂದು ಬಿಜಾಪುರ ಪೊಲೀಸ್‌ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್‌ ತಿಳಿಸಿದರು.ಶರಣಾದವರಲ್ಲಿ ಪಂಡ್ರು ಪೂನೆಮ್‌ (45), ರುಕ್ನಿ ಹೇಮ್ಲಾ(25), ದೇವ ಉಯ್ಕಾ (22), ರಾಮ್‌ಲಾಲ್‌ ಪೋಯಮ್‌ (27), ಮೋಟು ಪೂನೆಮ್‌ …

Read More »

ಅಂಗಡಿಯಿಂದ 1 ಲ.ರೂ. ಮೌಲ್ಯದ ಸೊತ್ತು ಕಳವು

ಬಂಟ್ವಾಳ: ಬಿ.ಸಿ.ರೋಡಿನಲ್ಲಿರುವ ಪರ್ಲಿಯಾ ನಿವಾಸಿ ಮೊಹಮ್ಮದ್‌ ಡಿ. ಅವರ ದೆಂಜಿಪಾಡಿ ಜನರಲ್‌ ಸ್ಟೋರ್‌ನ ಹಿಂಭಾಗದ ಕಿಟಕಿ ಒಡೆದು ನಗದು ಸೇರಿದಂತೆ 1 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಡಿ. 14 ರಾತ್ರಿ ನಡೆದಿದೆ. ಮರುದಿನ ಬೆಳಗ್ಗೆ ಅವರು ಅಂಗಡಿ ತೆರೆಯಲು ಬಂದಾಗ ಕೃತ್ಯ ಅರಿವಿಗೆ ಬಂದಿದೆ.ಸುಮಾರು 60 ಸಾವಿರ ರೂ. ಮೌಲ್ಯದ ಸಿಗರೇಟ್‌ ಪ್ಯಾಕೇಟ್‌, 18 ಸಾವಿರ ರೂ. ಮೌಲ್ಯದ ತುಪ್ಪ, 11 ಸಾವಿರ ರೂ. …

Read More »

ಸಿಪಿಐ(ಎಂ) ನಾಯಕನಿಗೆ ಹಲ್ಲೆ: 6 ಬಿಜೆಪಿಗರ ಬಂಧನ

ಆಲಪ್ಪುಳ (ಕೇರಳ) (ಪಿಟಿಐ): ಸ್ಥಳೀಯ ಸಿಪಿಎಂ ನಾಯಕರೊಬ್ಬರ ಮೇಲೆ ಹಲ್ಲೆ ನಡೆಸಿದ ಅರೋಪದ ಮೇಲೆ ಬಿಜೆಪಿಯ ಆರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಪೊಲೀಸರು ಹೇಳಿದ್ದಾರೆ.ಭಾನುವಾರ ರಾತ್ರಿ 9.15ಕ್ಕೆ ಸ್ಥಳೀಯ ಸಿಪಿಎಂ ನಾಯಕ ರಂಜಿತ್ ಮತ್ತು ಅವರ ಸ್ನೇಹಿತ ರೆನಿತ್ ನೀಲಂಪೆರೂರ್ ಪಂಚಾಯತ್‌ ಪ್ರದೇಶದ ಬಳಿ ತೆರಳಿದ್ದರು.ಇದನ್ನು ಆಕ್ಷೇಪಿಸಿ ಬಿಜೆಪಿ ಕಾರ್ಯಕರ್ತರು ಇಬ್ಬರನ್ನು ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇತ್ತಿಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ …

Read More »

ಜೀಪ್ – ಕಾರು ಢಿಕ್ಕಿ: ಮೂವರು ಸಾವು, ಇಬ್ಬರಿಗೆ ಗಂಭೀರ ಗಾಯ

ಬೀಡ್: ಇಲ್ಲಿನ ಅಂಬಾಜೋಗೈ ಲಾತೂರ್ ಹೆದ್ದಾರಿಯಲ್ಲಿ ಜೀಪ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ 10.30ರ ಸುಮಾರಿಗೆ ಬರ್ದಾಪುರ್ ಕ್ರಾಸ್ ರೋಡ್ ಬಳಿ ಸಂಭವಿಸಿದೆ.ಬೀಡ್‌ನಿಂದ ಲಾತೂರ್ ಕಡೆಗೆ ತೆರಳುತ್ತಿದ್ದ ಜೀಪ್ ಹಾಗೂ ಎದುರಿನಿಂದ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಲಾತೂರ್ ನಿವಾಸಿಗಳು ಎಂದು ಗುರುತಿಸಲಾಗಿದೆ.bಜೀಪಿನಲ್ಲಿದ್ದ …

Read More »

ತೆಂಕ ಎರ್ಮಾಳ್: ಬೈಕ್ ಢಿಕ್ಕಿ ಹೊಡೆದು ಪಾದಾಚಾರಿ ಮೃತ್ಯು

ಪಡುಬಿದ್ರೆ: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಸಂಜೆ ತೆಂಕ ಎರ್ಮಾಳಿನ ಸತ್ಯಂ ಬಾರ್ ಎದುರುಗಡೆ ರಾ.ಹೆದ್ದಾರಿ 66 ರಲ್ಲಿ ನಡೆದಿದೆಮೃತರನ್ನು ತೆಂಕ ಎರ್ಮಾಳಿನ ಅಣ್ಣಯ್ಯ ಬಂಗೇರ (67) ಎಂದು ಗುರುತಿಸಲಾಗಿದೆ.ಬಾದಾಮಿ ಮೂಲದ ಹಸನ್ ಎಂಬವರು ಕಾಪುನಿಂದ ಸುರತ್ಕಲ್ ಕಡೆ ಬೈಕಿನಲ್ಲಿ ಹೋಗುತ್ತಿದ್ದಾಗ ರಸ್ತೆ ದಾಟುತ್ತಿದ್ದ ಅಣ್ಣಯ್ಯ ಬಂಗೇರ ಅವರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಅಣ್ಣಯ್ಯ ಬಂಗೇರ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಅಪಘಾತದಲ್ಲಿ …

Read More »

ಮಹಿಳೆಯ ವಿರುದ್ಧ ಕೇಸು : ಪೊಲೀಸ್‌ಗೆ ವರ್ಗಾವಣೆ

ಕಾಸರಗೋಡು: ಅಪ್ರಾಪ್ತ ಸಹೋದರ ಸ್ಕೂಟರ್‌ ಚಲಾಯಿಸಿದ್ದಾಗಿ ಆರೋಪಿಸಿ ಮಹಿಳೆಯ ವಿರುದ್ಧ ಕೇಸು ದಾಖಲಿಸಿದ ವಿದ್ಯಾನಗರ ಪೊಲೀಸ್‌ ಠಾಣೆಯ ಎಸ್‌.ಐ ಅನೂಪ್‌ ಅವರನ್ನು ಸೈಬರ್ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದೆ. ಕಾಸರಗೋಡು ಸ್ಪೆಷಲ್‌ ಬ್ರಾಂಚ್ ಡಿವೈಎಸ್‌ಪಿ ಸುನಿಲ್‌ ಕುಮಾರ್‌ ನೀಡಿದ ತನಿಖಾ ವರದಿಯಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ.ಬಾಲಕ ಸ್ಕೂಟರ್‌ ಚಲಾಯಿಸಿದ್ದಾಗಿ ಪೊಲೀಸರು ಕೇಸು ದಾಖಲಿಸಿದ್ದರು. ಆದರೆ ಸಿಸಿ ಟಿವಿ ದೃಶ್ಯಗಳಲ್ಲಿ ಬಾಲಕ ಚಲಾಯಿಸಿಲ್ಲ ಎಂಬುದು ತಿಳಿದು ಬಂದಿತು.

Read More »

ಕಾಪು : ಪಾದಚಾರಿಗೆ ಬುಲಟ್ ಢಿಕ್ಕಿ, ಮೂವರಿಗೆ ಗಾಯ

ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಬುಲೆಟ್ ಬೈಕ್ ಢಿಕ್ಕಿ ಹೊಡೆದು ಅವರು ಗಂಭೀರ ಗಾಯಗೊಂಡ ಘಟನೆ ಡಿ. 15ರಂದು ಸಂಜೆ ಕಾಪುವಿನಲ್ಲಿ ಸಂಭವಿಸಿದೆ.ಕಾಪುವಿನಲ್ಲಿ ತೆಂಗಿನಕಾಯಿ ವ್ಯಾಪಾರ ನಡೆಸುತ್ತಿರುವ ಮೊಹಮ್ಮದ್ ಹುಸೇನ್ ಗಾಯಗೊಂಡವರು. ಅವರು ಸೋಮವಾರ ಸಂಜೆ ತಮ್ಮ ತೆಂಗಿನಕಾಯಿ ಗೋದಾಮಿಗೆ ತೆರಳಲು ರಸ್ತೆಯ ಬದಿಯಲ್ಲಿ ನಿಂತಿರುವಾಗ ಬೈಕ್ ಢಿಕ್ಕಿ ಹೊಡೆದಿತ್ತುಬೈಕ್ ಸವಾರರಾದ ಶಾಹಿದ್ ಖಾನ್ ಮತ್ತು ಭರತ್ ಅವರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೊಲೀಸರು …

Read More »