Breaking News

Breaking News

ರಸ್ತೆಯಲ್ಲಿ ಹೋಗುವಾಗಲೇ `ವಿದ್ಯುತ್ ತಂತಿ ಸ್ಪರ್ಶಿಸಿ’ ಬಾಲಕ ಸಾವು!

ಮೀಟರ್ ಬಾಕ್ಸ್ ಬಳಿ ತೆರೆದ ಹೈಟೆನ್ಷನ್ ತಂತಿ ಬಿದ್ದಿತ್ತು. ಬಾಲಕ ನಡೆದುಕೊಂಡು ಹೋಗುವಾಗ ತುಳಿದಿದ್ದು, ಈ ವೇಳೆ ಕರೆಂಟ್ ಶಾಕ್ ನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ಅಪಘಾತಕ್ಕೆ ಬಲಿಯಾದ ಬಾಲಕನ ಹೆಸರು ದೀಪಕ್ ಪಿಳ್ಳೈ. ಭಾಂಡಪ್ ರಸ್ತೆ ಜಲಾವೃತವಾಗಿದ್ದು, ಮಳೆಯಿಂದಾಗಿ ಪ್ರದೇಶವು ತೇವವಾಗಿದೆ ಎಂದು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ.ಸ್ಥಳೀಯ ಜನರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ತಲುಪಿ ದೀಪಕ್ನನ್ನು ಆಸ್ಪತ್ರೆಗೆ …

Read More »

ಹುಬ್ಬಳ್ಳಿ ಬ್ರೇಕಿಂಗ್: ಇಡಿ ಅಧಿಕಾರಿಗಳ ಭಯಕ್ಕೆ ಬಾತ್ ರೂಮ್ ನಲ್ಲಿ ಅಡಿಗಿ ಕುಳಿತ್ತಿದ್ದ ಕ್ಯಾಸಿನೋ ಮತ್ತು ಹವಾಲ ಕಿಂಗ್!.

ಇಡಿ ಅಧಿಕಾರಿಗಳ ರೆಡ್ ನಿಂದ ಬಾತ್ರೂಮ್ ನಲ್ಲಿ ಅಡಗಿ ಕುಳಿತಿದ್ದ ಸಾಮುಂದರ್ ಸಿಂಗ್ ನನ್ನು ಬಂದಿಸಲಾಗಿದೆ. ಸುಮಾರು ಎರಡು ಗಂಟೆ ಸಮುಂದರ್ ಸಿಂಗ್ ಪ್ಲಾಟ್ ಎದುರು ಹೈಡ್ರಾಮಾ ಮಾಡಿದ್ದಾರೆ. ಮನೆಯಲ್ಲಿ ಯಾರು ಇಲ್ಲ ಅಂತ ಇಡಿ ಅಧಿಕಾರಿಗಳ ದಾರಿ ತಪ್ಪಿಸಿದ ಸಮುಂದರ್ ಸಿಂಗ್ ಸಂಬಂಧಿಕರು..ಆದರೆ ತನ್ನ ಮನೆಯ ಎದುರು ಪ್ಲಾಟ್ ನಲ್ಲಿನ ಬಾತ್ ರೂಮ್ ನಲ್ಲಿ ಅಡಗಿ ಕುಳಿತ್ತಿದ್ದ ಸಮುಂದರ್ ಸಿಂಗ್. ಬಾತ್ ರೂಮ್ ನಲ್ಲಿ ಸೌಂಡ್ ಬಂದ ಹಿನ್ನೆಲೆ …

Read More »

ಅಪಘಾತ, ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ!

ಅಜಾಗರೂಕತೆ ವಾಹನ ಚಾಲನೆ ಗಂಭೀರ ಅಪಾಯಕ್ಕೆ ಕಾರಣವಾಗುತ್ತಿದೆ. ಬೆಂಗಳೂರಿನಲ್ಲಿ ಇದೀಗ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿಯಾದ ಘಟನೆ ನಡೆದಿದೆ. ಜಾಲಹಳ್ಳಿ ಸರ್ಕಲ್ ಬಳಿ ಇರುವ ಸಿಗ್ನಲ್ ದಾಟುತ್ತಿದ್ದ ಮಹಿಳೆ ಮೇಲೆ ಲಾರಿದ ಹರಿದು ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ಜಾಲಹಳ್ಳಿ ಸರ್ಕಲ್ ಸಿಗ್ನಲ್ ದಾಟುವ ಪ್ರಯತ್ನದಲ್ಲಿದ್ದ ಮಹಿಳೆ ಮೇಲೆ ಚಾಲಕ ಲಾರಿ ಹತ್ತಿಸಿದ್ದಾನೆ. 20 ಅಡಿ ಉದ್ದದ ಲಾರಿ ಯೂಟರ್ನ್ ಮಾಡುವಾಗ ಘಟನೆ ನಡೆದಿದೆ.

Read More »

ಮೇಖ್ರಿ ಸರ್ಕಲ್ ಬಳಿ ಅಪಘಾತದಲ್ಲಿ ಬೈಕ್ ಸವಾರ ಸಾವು!

ಮೇಖ್ರಿ ಸರ್ಕಲ್ ಬಳಿ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. 23 ವರ್ಷದ ಲೂಯಿಸ್ ಫರ್ನಾಂಡಿಸ್ ಬಸ್ ಓರ್ ಟೇಕ್ ಮಾಡುವಾಗ ಅಪಘಾತ ಸಂಭವಿಸಿದೆ. ಬಸ್ ಟಚ್ ಆಗಿ ಕೆಳಕ್ಕೆ ಬಿದ್ದ ಸವಾರನ ಮೇಲೆ ಬಸ್ ಹರಿದಿದೆ. ಸದಾಶಿವ ನಗರ ಟ್ರಾಫಿಕ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More »

ಸಂಜಯನಗರ ಅಪಘಾತದಲ್ಲಿ ಬೈಕ್ ಸವಾರ ಸಾವು!

ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಮೃತಪಟ್ಟ ಘಟನೆ ಸಂಜಯನಗರದಲ್ಲಿ ವರದಿಯಾಗಿತ್ತು. ಬಸ್ ಓವರ್ ಟೇಕ್ ಮಾಡಲು ಹೋದ ಬೈಕ್ ಸವಾರ ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಮೃತನನ್ನು ಸಂಜಯನಗರ ನಿವಾಸಿ ರೋಷನ್ ಎಂದು ಗುರುತಿಸಲಾಗಿದೆ. ಹೆಬ್ಬಾಳದಿಂದ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಕಡೆಗೆ ಸಂಚರಿಸುತ್ತಿದ್ದ ಬಸ್ ಚಕ್ರಕ್ಕೆ ಸಿಲುಕಿ ರೋಷನ್ ಮೃತಪಟ್ಟಿದ್ದ.

Read More »

BMTC ಬಸ್ ಕೆಳಗೆ ಸಿಲುಕಿ ಟೆಕ್ಕಿ ಸಾವು, ಚಾಲಕ ಬಂಧನ!

ಬೆಂಗಳೂರಿನಲ್ಲಿ BMTCಗೆ ಮತ್ತೊಂದು ಬಲಿಯಾಗಿದ್ದು, ಬಸ್ ಅಡಿ ಸಿಲುಕಿ ಟೆಕ್ಕಿ ಸಾವನ್ನಪ್ಪಿರುವ ಘಟನೆ ಸಂಜಯನಗರ ಮುಖ್ಯ ರಸ್ತೆಯ ವೈಭವ್ ಥಿಯೇಟರ್ ಬಳಿ ಮಂಗಳವಾರ ನಡೆದಿದೆ.ಸಂಜಯ್ ನಗರದ ಎಇಸಿಎಸ್ ಲೇಔಟ್ ನಿವಾಸಿ ರೋಷನ್ (38) ಮೃತಪಟ್ಟವರು. ಇವರು ಕೊಡಗು ಮೂಲದವರಾಗಿದ್ದು, ನಗರದಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

Read More »

ನಟಿ ನೋರಾ ಫತೇಹಿ ರೀತಿ ಕಾಣ್ಬೇಕೆಂದು ನಿತ್ಯ ವ್ಯಾಯಾಮ ಮಾಡಿಸಿ, ಊಟ ಕೊಡದೆ ಪತ್ನಿಗೆ ಪತಿಯಿಂದ ಚಿತ್ರಹಿಂಸೆ!

ಪತ್ನಿಯು ಬಾಲಿವುಡ್ ನಟಿ ನೋರಾ ಫತೇಹಿಯಂತೆ ಕಾಣಬೇಕೆಂದು ಪತಿಯೊಬ್ಬ ಆಕೆಗೆ ಚಿತ್ರಹಿಂಸೆ ನೀಡಿರುವ ಘಟನೆ ಗಾಜಿಯಾಬಾದ್​​ನಲ್ಲಿ ನಡೆದಿದೆ. ಮಹಿಳೆಯೊಬ್ಬರು ತನ್ನ ಪತಿಯ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಗಂಭೀರ ದೂರು ದಾಖಲಿಸಿದ್ದಾರೆ.ಬಾಲಿವುಡ್ ನಟಿ ನೋರಾ ಫತೇಹಿಯಂತೆ ಕಾಣುವಂತೆ ಮತ್ತು ಹಾಗೆ ಆಗುವಂತೆ ಪತಿ ತನ್ನನ್ನು ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.

Read More »

ಹಾಸನ :ಟ್ರ್ಯಾಕ್ಟರ್ ಪಲ್ಟಿಯಾಗಿ ಯುವಕ ಮೃತ್ಯು!!

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಬ್ಬಳ್ಳಿಗೆರೆ ಗ್ರಾಮದಲ್ಲಿ ರೀಲ್ಸ್​ ಹುಚ್ಚಿನಿಂದ ವಿಜಿ ಕೊಪ್ಪಲು ಗ್ರಾಮದ 19 ವರ್ಷದ ಕಿರಣ್ ಸಾವನ್ನಪ್ಪಿದ್ದಾನೆ. ರೀಲ್ಸ್‌ ವಿಡಿಯೋ ಮಾಡಲು ಆತ ಅಪಾಯಕಾರಿಯಾಗಿ ಟ್ರ್ಯಾಕ್ಟರ್​ ಚಾಲನೆ ಮಾಡಿದ್ದು, ಅದು ಪಲ್ಟಿ ಹೊಡೆದ ಪರಿಣಾಮ, ಅದರಡಿ ಸಿಲುಕಿ ಕಿರಣ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ವರದಿಗಳ ಪ್ರಕಾರ ಕಿರಣ್‌ ರೀಲ್ಸ್ ತಯಾರಿಸುವ ಉತ್ಸಾಹದಲ್ಲಿ ಟ್ರ್ಯಾಕ್ಟರ್‌ನ್ನು ವೇಗವಾಗಿ ಚಾಲನೆ ಮಾಡಿದ್ದಾನೆ. ರಸ್ತೆ ತಿರುವಿನಲ್ಲಿ ಟ್ರ್ಯಾಕ್ಟರ್‌ನ ನಿಯಂತ್ರಣ ಕಳೆದುಕೊಂಡು ಅದು ಪಲ್ಟಿಯಾದ ಪರಿಣಾಮ ಕಿರಣ್‌ …

Read More »

ಚಿತ್ರದುರ್ಗ: ವಿದ್ಯಾರ್ಥಿನಿ ಹತ್ಯೆ!! ಆರೋಪಿಗಳ ಫೋಟೋ ಹಿಡಿದು ಪ್ರತಿಭಟನೆ.

19 ವರ್ಷದ ವಿದ್ಯಾರ್ಥಿನಿ ವರ್ಷಿತಾ ಕೊಲೆ ಪ್ರಕರಣ ಭಾರಿ ಸಂಚಲನ ಉಂಟುಮಾಡಿದ್ದು, ವಿದ್ಯಾರ್ಥಿ ಸಮುದಾಯ ಕಳಕಳಿ ವ್ಯಕ್ತಪಡಿಸಿದೆ.ವಿದ್ಯಾರ್ಥಿನಿಯ ದಾರುಣ ಹತ್ಯೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ, ಚಿತ್ರದುರ್ಗದಲ್ಲಿ ಎಬಿವಿಪಿ ನೇತೃತ್ವದಲ್ಲಿ ಭಾರೀ ಪ್ರತಿಭಟನಾ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳು ಕೈಯಲ್ಲಿ ಪ್ಲೇಕಾರ್ಡ್ ಹಿಡಿದು, ಘೋಷಣೆಗಳನ್ನು ಕೂಗುತ್ತಾ ನಗರ ಮುಖ್ಯರಸ್ತೆಗಳಲ್ಲಿ ಪಂಜಿನ ಮೆರವಣಿಗೆ ನಡೆಸಿದರು.ಆರೋಪಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ವಿದ್ಯಾರ್ಥಿನಿ ವರ್ಷಿತಾ ಅವರ ಕೊಲೆ ಪ್ರಕರಣ ರಾಜ್ಯದಾದ್ಯಂತ ಆಕ್ರೋಶ …

Read More »

ಅರಕಲಗೂಡು: ತಂಬಾಕು ಉತ್ಪನ್ನಗಳ ಮಾರಾಟಗಾರರಿಗೆ ದಂಡ!

ಜಿಲ್ಲಾ ಮತ್ತು ತಾಲ್ಲೂಕು ತಂಬಾಕು ಕೋಶದ ವತಿಯಿಂದ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ನೇತೃತ್ವದಲ್ಲಿ ಪಟ್ಟಣದಲ್ಲಿ ಬುಧವಾರ ತಂಬಾಕು ಉತ್ಪನ್ನಗಳ ಮಾರಾಟ ನಡೆಸುತ್ತಿದ್ದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ₹ 2,890 ದಂಡ ವಿಧಿಸಲಾಯಿತು. ತಂಬಾಕು ನಿಯಂತ್ರಣ ಕಾಯ್ದೆಯ ಉಲ್ಲಂಘನೆಗೆ ಮುಂದೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಯಿತು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ, ಪರಮೇಶ್, ಜಿಲ್ಲಾ ತಂಬಾಕು ಕೋಶದ ಸಂಯೋಜಕಿ ಮಮತಾ, ಕುಮಾರ್, ಪೊಲೀಸ್ ಸಿಬ್ಬಂದಿ ಕುಮಾರ್ …

Read More »