Breaking News

Breaking News

ಬೆಂಗಳೂರು: Hebbal Loop flyover ಉದ್ಘಾಟಿಸಿದ ಸಿಎಂ-ಡಿಸಿಎಂ, ಮೇಲ್ಸೇತುವೆಯಲ್ಲಿ ಬೈಕ್ ಓಡಿಸಿದ ಡಿಕೆಶಿ.

ಹೆಬ್ಬಾಳ ಮೇಲ್ಸೇತುವೆ ಟ್ರಾಫಿಕ್ ಸಮಸ್ಯೆಯನ್ನು ದೂರ ಮಾಡಲು ನೂತನ ಮೇಲ್ಸೇತುವೆ ನಿರ್ಮಾಣವಾಗಿದ್ದು ಕೊನೆಗೂ ಇಂದು ಲೋಕಾರ್ಪಣೆಗೊಂಡಿದೆ.ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹಸಿರು ನಿಶಾನೆ ತೋರಿದ್ದಾರೆ.ಕೆ ಆರ್ ಪುರಂನಿಂದ ಮೇಖ್ರಿ ಸರ್ಕಲ್ ಕಡೆ ಸಂಪರ್ಕಿಸುವ 700 ಮೀಟರ್ ಉದ್ದದ ಹೊಸ ಮೇಲ್ಸೇತುವೆಯನ್ನು 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.ಉದ್ಘಾಟನೆಗೂ ಮುನ್ನ ಡಿಸಿಎಂ ಡಿಕೆ ಶಿವಕುಮಾರ್​​ ಬೈಕ್ ಸವಾರಿ ಮಾಡಿದರು. ತಮ್ಮ ನೆಚ್ಚಿನ …

Read More »

ಜೇವರ್ಗಿ | ಪಿಕಾರ್ಡ್ ಬ್ಯಾಂಕ್: ಕಾಂಗ್ರೆಸ್‌ ಮೇಲುಗೈ

ಜೇವರ್ಗಿ ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ (ಪಿಕಾರ್ಡ್ ಬ್ಯಾಂಕ್‌)ನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 6 ಜನ ಕಾಂಗ್ರೆಸ್, 6 ಜನ ಜೆಡಿಎಸ್ ಬೆಂಬಲಿತ ನಿರ್ದೇಶಕರು ಗೆಲುವು ಸಾಧಿಸಿದ್ದಾರೆ.ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿದ್ದ ಪ್ರತಾಪ ಚಿದಾನಂದ ಕಟ್ಟಿ ಸೇರಿದಂತೆ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತರು ವಿಜಯ ಸಾಧಿಸುವ ಮೂಲಕ ಪಿಕಾರ್ಡ್ ಬ್ಯಾಂಕ್‌ನ ಅಧಿಕಾರ ಹಿಡಿಯುವಷ್ಟು ಸಂಖ್ಯಾಬಲವನ್ನು ಕಾಂಗ್ರೆಸ್ ದಕ್ಕಿಸಿಕೊಂಡಿದೆ.

Read More »

ಕಾಳಗಿ ಚುನಾವಣೆ: ಶೇ 79.76ರಷ್ಟು ಮತದಾನ

ಕಾಳಗಿ ಪಟ್ಟಣ ಪಂಚಾಯಿತಿಯ ಮೊದಲ ಸಾರ್ವತ್ರಿಕ ಚುನಾವಣೆ ಭಾನುವಾರ ಶಾಂತಿಯುತವಾಗಿ ಜರುಗಿತು.ಒಟ್ಟು 11 ವಾರ್ಡ್‌ಗಳ 8,455 ಮತದಾರರ ಪೈಕಿ 3,411 ಪುರುಷ ಹಾಗೂ 3,333 ಮಹಿಳೆ ಹೀಗೆ ಒಟ್ಟ 6,744 ಮತದಾರರು (ಶೇ.79.76) ಮತದಾನ ಮಾಡಿದ್ದಾರೆ’ ಎಂದು ಚುನಾವಣಾಧಿಕಾರಿ ಬಸಲಿಂಗಪ್ಪ ಡಿಗ್ಗಿ ತಿಳಿಸಿದ್ದಾರೆ.ಎಸ್‌ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣವರ್, ಸೇಡಂ ಉಪವಿಭಾಗಾಧಿಕಾರಿ ಪ್ರಭುರೆಡ್ಡಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ತಹಶೀಲ್ದಾರ್ ಪೃಥ್ವಿರಾಜ ಪಾಟೀಲ, ಚುನಾವಣಾಧಿಕಾರಿ …

Read More »

ಮಧ್ಯಪ್ರದೇಶ | ಸರಕಾರಿ ಆಸ್ಪತ್ರೆಯಲ್ಲಿ ಡ್ರಿಪ್ ಬಾಟಲಿ ಹಿಡಿದು ನಿಂತ 72ರ ವೃದ್ಧೆ!

ಗಾಯಗೊಂಡಿದ್ದ ತನ್ನ ಮೊಮ್ಮಗನಿಗೆ ಸುಮಾರು ಅರ್ಧ ಗಂಟೆ ಕಾಲ 72 ವರ್ಷದ ವೃದ್ಧೆಯೊಬ್ಬರು ಡ್ರಿಪ್ಸ್ ಬಾಟಲಿ ಹಿಡಿದು ನಿಂತಿದ್ದ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭ ಬಾಯಿ ಪಟೇಲ್ ಆಸ್ಪತ್ರೆಯಲ್ಲಿ ನಡೆದಿದೆ. ಈ ವೇಳೆ ಗಾಯಾಳು ಬಾಲಕನಿಗೆ ಡ್ರಿಪ್ಸ್ ಬಾಟಲಿ ಹಾಕಲು ಸ್ಟ್ಯಾಂಡ್ ಒದಗಿಸಿರಲಿಲ್ಲ ಎನ್ನಲಾಗಿದೆ.ಪ್ರತ್ಯಕ್ಷದರ್ಶಿಗಳ ಪ್ರಕಾರ, ಆಸ್ಪತ್ರೆಯಲ್ಲಿ ಡ್ರಿಪ್ಸ್ ಸ್ಟ್ಯಾಂಡ್‌ಗಳ ಯಾವುದೇ ಕೊರತೆ ಇರಲಿಲ್ಲ ಹಾಗೂ ಸಂತ್ರಸ್ತ ಗಾಯಾಳುವಿನೊಂದಿಗೆ ಆಸ್ಪತ್ರೆಯ ಸಿಬ್ಬಂದಿಗಳು ತಾರತಮ್ಯದಿಂದ ವರ್ತಿಸಿದರು ಎಂದು ಆರೋಪಿಸಲಾಗಿದೆ.

Read More »

ಕಾರವಾರ: ಅಲೆಗಳ ಅಬ್ಬರದಿಂದಾಗಿ ಕಡಲತೀರಕ್ಕೆ ಬಂದಿದ್ದ ಡಾಲ್ಫಿನ್ ರಕ್ಷಣೆ!

ಅಲೆಗಳ ಅಬ್ಬರದಿಂದಾಗಿ ತಾಲ್ಲೂಕಿನ ದೇವಬಾಗ ಕಡಲತೀರಕ್ಕೆ ಬಂದಿದ್ದ ಡಾಲ್ಫಿನ್ ಮರಿಯನ್ನು ಇಲ್ಲಿನ ಜಂಗಲ್ ಲಾಡ್ಜಸ್ ಆಯಂಡ್ ರೆಸಾರ್ಟ್ ಸಿಬ್ಬಂದಿ ಸೋಮವಾರ ಪುನಃ ಸಮುದ್ರಕ್ಕ ಬಿಟ್ಟು, ರಕ್ಷಿಸಿದರು.ನೀರಿಗೆ ಸಾಗಲು ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ರೆಸಾರ್ಟ್ ನಲ್ಲಿ ತಂಗಿದ್ದ ಪ್ರವಾಸಿಗರು ಸಿಬ್ಬಂದಿ ಗಮನಕ್ಕೆ ತಂದಿದ್ದರು.ಸಿಬ್ಬಂದಿ ನೀಲೇಶ್, ಸುನೀಲ್ ಮತ್ತು ಸಂತೋಷ್ ಡಾಲ್ಫಿನ್ ಮರಿಯನ್ನು ಪುನಃ ಸಮುದ್ರಕ್ಕೆ ಸೇರಿಸಿದರು.ಚಂಡಮಾರುತದ ಕಾರಣದಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ.

Read More »

ಕಾರೊಳಗೆ ಸಿಲುಕಿದ್ದ ಮಗುವನ್ನು ಮೊಬೈಲ್ ಬಳಸಿ ರಕ್ಷಣೆ!

ಕಾರಿನೊಳಗೆ ಲಾಕ್ ಆಗಿದ್ದ ಮಗುವನ್ನು ವ್ಯಕ್ತಿಯೊಬ್ಬರು ಮೊಬೈಲ್ ಬಳಸಿ ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಸಮಯಪ್ರಜ್ಞೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಮಗುವಿಗೆ ಕಾರಿನ ಲಾಕ್ ತೆರೆಯುವುದು ಹೇಗೆ ಎಂಬ ವಿಡಿಯೋವನ್ನು ಮೊಬೈಲ್​​ನಲ್ಲಿ ತೋರಿಸಿ, ಕಾರಿನ ಲಾಕ್​ ತೆರೆಸುವಲ್ಲಿ ಯಶಸ್ವಿಯಾಗಿದ್ದಾರೆ. ಮಗು ಸುರಕ್ಷಿತವಾಗಿ ಹೊರಬಂದಿದೆ.

Read More »

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ‘KSRTC’ ಬಸ್- ಟಾಟಾ ಏಸ್ ನಡುವೆ ಭೀಕರ ಅಪಘಾತ!

ವೇಗವಾಗಿ ಹೋಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಗೆ ಟಾಟಾ ಏಸ್ ವಾಹನ ಅಡ್ಡವಾಗಿ ಬಂದು ಡಿಕ್ಕಿ ಹೊಡೆದಿದೆ. ಬಸ್ ಚಾಲಕ ಸಡನ್ ಆಗಿ ಬ್ರೇಕ್ ಹೊಡೆದಿದ್ದರಿಂದ ಭಾರಿ ದುರಂತ ತಪ್ಪಿದೆ. ಕಾರಿನ ಡ್ಯಾಷ್ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಕೆಎಸ್ ಆರ್ ಟಿ ಸಿ ಬಸ್ ಮುಂದೆ ಬಂದು ಟಾಟಾ ಏಸ್ ಪಲ್ಟಿಯಾಗಿದೆ.ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದ್ದು, ಬೆಚ್ಚಿ ಬೀಳಿಸುವಂತಿದೆ. ಅದೃಷ್ಟವಶಾತ್ ಟಾಟಾ ಏಸ್ ವಾಹನದ ಚಾಲಕ …

Read More »

ಫಾರ್ವರ್ಡ್ ಮೆಸೇಜ್​​ ತಂದ ಆಪತ್ತು: ಮನೆಗೆ ನುಗ್ಗಿ ಗೆಳಯನ ಹತ್ಯೆ!!

ಉಡುಪಿಯ ನಡುರಾತ್ರಿ ರಕ್ತ ಹರಿದಿದೆ. ನೇಜಾರು ಒಂದೇ ಕುಟುಂಬದ ನಾಲ್ವರ ಮರ್ಡರ್‌ ಬಳಿಕ ಕರಾವಳಿ ಜಿಲ್ಲೆ ಉಡುಪಿ ಶಾಂತವಾಗಿತ್ತು. ಆದರೆ ಅದೊಂದು ವಿಚಾರದಲ್ಲಿ ನಡೆದ ವಾಗ್ವಾದ ಓರ್ವ ವ್ಯಕ್ತಿಯನ್ನು ರಕ್ತ ಮಡುವಿನಲ್ಲಿ ಪ್ರಾಣ ಬಿಡುವಂತೆ ಮಾಡಿತ್ತು.ವಿನಯ್ ಮನೆಯಲ್ಲಿ ಇಲ್ಲ ಎಂದದೇ ತಡ, ತಲವಾರು ಹಿಡಿದು ಬಂದಿದ್ದ ಮೂವರು ಸೀದಾ ವಿನಯ್‌ ಕೋಣೆಗೆ ತೆರಳಿ ವಿನಯ್‌ ಮೇಲೆ ತಲವಾರ್‌ ಬೀಸಿದ್ದಾರೆ. ಪತ್ನಿ ಮತ್ತು ತಾಯಿ ಎಷ್ಟೇ ಕಾಡಿ, ಬೇಡಿಕೊಂಡರು ದುರುಳರ ಮನ …

Read More »

ಬಳ್ಳಾರಿ: ಮಧ್ಯರಾತ್ರಿ ಎಟಿಎಂ ಕಳವು ಮಾಡುತ್ತಿದ್ದವನ ಹೆಡೆಮುರಿ ಕಟ್ಟಿದ ಪೊಲೀಸ್!

ಮಧ್ಯರಾತ್ರಿ ಎಟಿಎಂಗೆ ನುಗ್ಗಿ ಕಳವು ಮಾಡಲು ಮುಂದಾದವನನ್ನು ರಾತ್ರಿ ಬೀಟ್ ಪೊಲೀಸರು ಹೆಡೆಮುರಿ ಕಟ್ಟಿದ ಅಪರೂಪದ ಸನ್ನಿವೇಶಕ್ಕೆ ಬಳ್ಳಾರಿ ಸಾಕ್ಷಿಯಾಗಿದೆ. ಬಳ್ಳಾರಿಯ ಕಾಳಮ್ಮ ಸರ್ಕಲ್ ಬಳಿ ಇರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ನುಗ್ಗಿ ಕಳ್ಳತನ ಮಾಡಲೆತ್ನಿಸಿದಾತನನ್ನು ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ಆಂಧ್ರ ಪ್ರದೇಶದ ಅನಂತಪುರದ ವೆಂಕಟೇಶ ಎಂದು ಗುರುತಿಸಲಾಗಿದೆ.ಪೊಲೀಸ್ ಕಾರ್ಯಾಚರಣೆಯ ರೋಚಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Read More »

ಮನೆಗೆ ನುಗ್ಗಿದ ಮುಸುಕುಧಾರಿಗಳು: ಚಿನ್ನದ ಸರ ಕದ್ದು ಪರಾರಿ!

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದಲ್ಲಿ ಮನೆಗೆ ನುಗ್ಗಿದ ಮುಸುಕುಧಾರಿಗಳು ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಪರಾರಿ ಆಗಿರುವಂತಹ ಘಟನೆ ನಡೆದಿದೆ. ಚಿರಡೋಣಿಯ ಸಿಎಚ್ ಸತ್ಯನಾರಾಯಣ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.

Read More »