Breaking News

Breaking News

ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ!

ಅಪ್ರಾಪ್ತ ಬಾಲಕಿಯ ಕೊರಳಿಗೆ ಯುವಕನೊಬ್ಬ ಚಾಕು ಹಿಡಿದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮಹಾರಾಷ್ಟ್ರದ ಸತಾರಾದಲ್ಲಿ ನಡೆದಿದೆ. ಆ ಬಾಲಕಿಗೆ ಆತ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ ಅದೂ ಹಾಡಹಗಲಲ್ಲಿ.ವರದಿಗಳ ಪ್ರಕಾರ ಇಬ್ಬರು ಒಂದೇ ಪ್ರದೇಶದಲ್ಲಿ ವಾಸವಾಗಿದ್ದಾರೆ. ಆಕೆಯನ್ನು ಅಡ್ಡಗಟ್ಟಿ ಕುತ್ತಿಗೆಗೆ ಚಾಕು ಹಿಡಿದು ಹೆದರಿಸಿದ್ದಾನೆ. ಜನರು ಸ್ಥಳದಲ್ಲಿ ಜಮಾಯಿಸಿದರೂ ಕೂಡಲೇ ಬಾಲಕಿಯನ್ನು ರಕ್ಷಿಸಿ ಆ ಯುವಕನನ್ನು ಥಳಿಸಿ ಪೊಲೀಸರಿಗೆ ಹಿಡಿದುಕೊಡಲಾಯಿತು.

Read More »

ಅಮ್ಮನ ಅವಮಾನಿಸಿದಕ್ಕೆ ಸೇಡು: 10 ವರ್ಷಗಳ ನಂತರ ಎಳನೀರು ವ್ಯಾಪಾರಿ ಕತೆ ಮುಗಿಸಿದ ಮಗ

ತನ್ನ ತಾಯಿಯನ್ನು ಥಳಿಸಿ ಅವಮಾನಿಸಿದ ವ್ಯಕ್ತಿಯೊಬ್ಬನನ್ನು ಯುವಕನೋರ್ವ 10 ವರ್ಷಗಳ ನಂತರ ಕೊನೆಗೂ ಹೊಂಚು ಹಾಕಿ ಆತನ ಕತೆ ಮುಗಿಸಿದ್ದಾನೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ.ಎಳನೀರು ವ್ಯಾಪಾರಿ ಮನೋಜ್ ಕೊಲೆಯ ಬಳಿಕ ಸೋನು ಸ್ನೇಹಿತರ ಜೊತೆ ಸೇರಿ ಪಾರ್ಟಿ ಮಾಡಿದ್ದಾನೆ. ನಂತರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾನೆ. ಈ ಪೋಸ್ಟ್ ಈಗ ಈತ ಹಾಗೂ ಈತನಿಗೆ ಸಹಾಯ ಮಾಡಿದವರನ್ನು ಕಂಬಿ ಹಿಂದೆ ಕೂರಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು …

Read More »

ಲವರ್ ಜೊತೆ ಸೇರಿ ಪತಿಯನ್ನು ಕೊಂದು ಟೈಲ್ಸ್ ಕೆಳಗೆ ಹೂತಿಟ್ಟ ಪತ್ನಿ.!

ಮಹಾರಾಷ್ಟ್ರದಲ್ಲಿ ‘ದೃಶ್ಯಂ’ ಸಿನಿಮಾ ಮಾದರಿಯಲ್ಲಿ ಮರ್ಡರ್ ನಡೆದಿದ್ದು, ಲವರ್ ಜೊತೆ ಸೇರಿ ಪತಿಯನ್ನು ಕೊಂದು ಟೈಲ್ಸ್ ಕೆಳಗೆ ಹೂತಿಟ್ಟ ಘಟನೆ ನಡೆದಿದೆ. ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.ಕೋಮಲ್ ಎರಡು ದಿನಗಳಿಂದ ನಾಪತ್ತೆಯಾಗಿದ್ದು, ನೆರೆಹೊರೆಯ ಮೋನು ಜೊತೆ ಸೇರಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಸೇರಿ ವಿಜಯ್ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈಗ ಪ್ರಕರಣದಲ್ಲಿ ಕೋಮಲಾ ಹಾಗೂ ಲವರ್ …

Read More »

ರಾಜ್ಯದಲ್ಲಿ ಭಾರೀ ಮಳೆ: ಈ 3 ಜಿಲ್ಲೆಗಳಿಗೆ ರೆಡ್‌ ಹಾಗೂ 4 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ವರುಣನ ಆರ್ಭಟ ಮತ್ತಷ್ಟು ಹೆಚ್ಚಾಗುವ ಸಂಭವ ಇರುವುದರಿಂದ ಕರ್ನಾಟಕ ಕರಾ ವಳಿ ಭಾಗದ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮಂಗಳೂರು, ಶೃಂಗೇರಿ, ಕೊಪ್ಪ, ಕಳಸ, ಸೋಮವಾರಪೇಟೆ, ರಾಯಚೂರು, ಕೊಪ್ಪಳ, ಯಾದಗಿರಿ, ಬೀದರ್, ಬೆಳಗಾವಿ, ದಾವಣಗೆರೆ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಿರಿ: ಕರಾವಳಿಯ ಕೆಲವು ಪ್ರದೇಶಗಳಲ್ಲಿ ಮಳೆಯ ಜೊತೆಗೆ ಗಾಳಿಯ ವೇಗವೂ …

Read More »

ಹನಿಟ್ರ್ಯಾಪ್ ಮಾಡಿ ಪರಾರಿಯಾಗಿದ್ದ ಯುವತಿ! ಯುವಕರ ಬಂದನ.

ಮನೆಯಲ್ಲಿ ನಾನೊಬ್ಬಳೇ ಇದ್ದೇನೆ ಎಂದು ಬಟ್ಟೆ ಅಂಗಡಿ ಮಾಲೀಕನನ್ನು ಮನೆಗೆ ಕರೆಸಿ ಹನಿಟ್ರ್ಯಾಪ್ ಮಾಡಿ ಪರಾರಿಯಾಗಿದ್ದ ಯುವತಿ ಹಾಗೂ ಆತನ ಸ್ನೇಹಿತನನ್ನು ಬಂಧಿಸುವಲ್ಲಿ ಬೈಲಕುಪ್ಪೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿದ್ದ ಕವನ ಹಾಗೂ ಸೈಫ್ ಬಂಧಿತರು.

Read More »

ರೈಲು ಚಲಿಸುತ್ತಿದ್ದಾಗಲೇ ಬ್ರಿಡ್ಜ್ ಕುಸಿತ!!

ಕಾಂಗ್ರಾ ಜಿಲ್ಲೆಯ ಧಂಗು ಬಳಿಯ ಚಕ್ಕಿ ನದಿಯ ಮೇಲಿನ ರೈಲ್ವೆ ಸೇತುವೆಯ ತಡೆಗೋಡೆ ಸೋಮವಾರ ನಿರಂತರ ಮಳೆಯಿಂದಾಗಿ ಕುಸಿದು ಬಿದ್ದಾಗ ರೈಲಿನ ಪ್ರಯಾಣಿಕರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.ನೂರ್ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಶೋಕ್ ರತನ್, “ಈ ಪ್ರದೇಶದಲ್ಲಿ ಅತಿಯಾದ ಮಳೆಯಿಂದಾಗಿ ತಡೆಗೋಡೆ ಕುಸಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ನಾವು ಇದೀಗ ಪಕ್ಕದ ಧಂಗು ರಸ್ತೆಯನ್ನು ಮುಚ್ಚಿದ್ದೇವೆ ಮತ್ತು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ” ಎಂದು ಹೇಳಿದರು.

Read More »

ಕಾಲುವೆಗೆ ಬಿದ್ದ ಕಾರು: ಹುಬ್ಬಳ್ಳಿಯ‌ ಯುವಕ ಸಾವು!

ಮಂತ್ರಾಲಯಕ್ಕೆ ಬಂದು ಹುಬ್ಬಳ್ಳಿಗೆ ಮರಳುವಾಗ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆ ಕೌತಾಳಂ ಮಂಡಳದ ಎರಗೇರಿ ಗ್ರಾಮದ ಬಳಿ ತುಂಗಭದ್ರಾ ಕಾಲುವೆಗೆ ಕಾರು ಉರುಳಿ ಒಬ್ಬರು ಮೃತಪಟ್ಟಿದ್ದಾರೆ. ಇನ್ನೊಬ್ಬರು ನಾಪತ್ತೆಯಾಗಿದ್ದಾರೆ. ಹುಬ್ಬಳ್ಳಿಯ ಸುನೀಲ್‌ (21) ಮೃತರು.ಮಣಿಕಂಠ (22) ಅವರು ಮುಳುಗಿರುವ ಶಂಕೆ ಇದೆ. ಅಭಿಷೇಕ, ಅಂಪಾಯ, ಹೈದರ್ ಹಾಗೂ ಮಂಜುನಾಥ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕೌತಾಳಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

‘ಹಾಸ್ಟೆಲ್’ ನಲ್ಲಿ ದೆವ್ವ ಇದೆ ಎಂದು ತಮಾಷೆ ಮಾಡಿದ್ದಕ್ಕೆ ವಿದ್ಯಾರ್ಥಿಗೆ ಅಮಾನುಷವಾಗಿ ಥಳಿಸಿದ ವಾರ್ಡನ್.!

ಹಾಸ್ಟೆಲ್ ನಲ್ಲಿ ದೆವ್ವ ಇದೆ ಎಂದು ತಮಾಷೆ ಮಾಡಿದ್ದಕ್ಕೆ ವಾರ್ಡನ್ ವಿದ್ಯಾರ್ಥಿಗೆ ಅಮಾನುಷವಾಗಿ ಥಳಿಸಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬಾಳಸಂದ್ರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.

Read More »

ರ‍್ಯಾಗಿಂಗ್‌ಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ, ವಿಡಿಯೋ ಮಾಡಿ ಟಾಪರ್ ಸಾವು!!

ಕಾಲೇಜುಗಳಲ್ಲಿ ಎಷ್ಟೇ ಹೇಳಿದರೂ ಸಹ, ಅದೆಷ್ಟೇ ಕಠಿಣ ನಿಯಮಗಳನ್ನ ಜಾರಿಗೆ ತಂದರೂ ಸಹ ರ‍್ಯಾಗಿಂಗ್‌ ಮಾತ್ರ ಕಡಿಮೆ ಆಗುತ್ತಿಲ್ಲ. ಈ ರ‍್ಯಾಗಿಂಗ್‌ಗೆ ಹೆದರಿ ಈಗಾಗಲೇ ಅನೇಕ ಜನರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಇದೀಗ ಅದೇ ರೀತಿಯ ಪ್ರಕರಣವೊಂದು ನಡೆದಿದ್ದು, ನೆಲಮಂಗಲದ ನಂದರಾಮಯ್ಯನ ಪಾಳ್ಯದಲ್ಲಿ ರ‍್ಯಾಗಿಂಗ್‌ಗೆ ಹೆದರಿ ಆರ್ಕಿಟೆಕ್ಚರ್ ವಿದ್ಯಾರ್ಥಿ ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.ಅರುಣ್ ಆರ್ಕಿಟೆಕ್ಚರ್ ವಿದ್ಯಾರ್ಥಿಯಾಗಿದ್ದು, ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ,.ಕಾಲೇಜಿನಲ್ಲಿ …

Read More »

ಹುಬ್ಬಳ್ಳಿ ನಿಲ್ಲದ ಕಳ್ಳರ ಹಾವಳಿ, ಪೊಲೀಸ್ ಕ್ವಾಟಾರ್ಸ್ ಗಳೇ ಟಾರ್ಗೆಟ್…!!

ಕಳ್ಳರ ಹಿಡುವ ಪೊಲೀಸರ ಮನೆ ಕಳ್ಳತನ… ಮನೆ-ಮನೆಗೆ ಪೊಲೀಸರು.. ಆದ್ರೆ ಪೊಲೀಸರ ಮನೆಗೆ ರಕ್ಷಣೆ ಕೊಡುವವರು ಯಾರು…??? ಖಡಕ್ ಆಫಿಸರ್ ಮುಂದಿದೆ ತಮ್ಮ ಇಲಾಖೆಯ ಪೊಲೀಸರ ಸಂರಕ್ಷಣೆ ಪ್ರಶ್ನೆ!! ಹುಬ್ಬಳ್ಳಿಯಲ್ಲಿ ಪೊಲೀಸರಿಗೆ ತಲೆ ನೋವಾದ ಕಳ್ಳರು. ಹೌದು, ಹುಬ್ಬಳ್ಳಿಯಲ್ಲಿ ಕಳ್ಳರ ಹಾವಳಿಯಿಂದ ಪೊಲೀಸರು ಬೇಸತ್ತು ಹೋಗಿದ್ದಾರೆ. ಹುಬ್ಬಳ್ಳಿಯ ಖತರ್ನಾಕ್ ಕಳ್ಳರಿಗೆ ಪೊಲೀಸ್ ಕ್ವಾಟ್ರಸ್ ಗಳೇ ಟಾರ್ಗೆಟ್ ಗಳಾಗಿವೆ. ಪೊಲೀಸ್ ಕ್ವಾರ್ಟರ್ಸ್ ನಲ್ಲಿರುವ ಸುಮಾರು 3, 4 ಮನೆಗಳಲ್ಲಿ ಕಳ್ಳತನ ಆಗಿದ್ದು, …

Read More »