Breaking News

Breaking News

ಮೊಹರಂ ಆಚರಣೆ ವೇಳೆ ಘೋರ ದುರಂತ, ಬೆಂಕಿಗೆ ಬಿದ್ದು ಯುವಕ ಸಾವು!

ಮೊಹರಂ ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ದೊಡ್ಡ ಅಗ್ನಿಕುಂಡ ಸಿದ್ಧಪಡಿಸಿದ್ದು, ಅದನ್ನು ಹಾಯ್ದು ಹೋಗುವಾಗ ಕಟ್ಟಿಗೆಯಲ್ಲಿ ಕಾಲು ಸಿಲುಕಿಕೊಂಡು ದುರ್ಘಟನೆ ಸಂಭವಿಸಿದೆ. ಗಾಯಾಳುವನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ತೀವ್ರತರದ ಸುಟ್ಟ ಗಾಯಾಗಳಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗೆ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಲಿಂಗಸುಗೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.ಅಲಾಯಿ ಕುಣಿಗಳ ಹಾದು ಹೋಗುವಾಗ ಈ ದುರ್ಘಟನೆ ನಡೆದಿದೆ.

Read More »

ಟೆಕ್ಸಾಸ್ ಪ್ರವಾಹ: ಸಾವಿನ ಸಂಖ್ಯೆ 51ಕ್ಕೆ ಏರಿಕೆ!!

ಟೆಕ್ಸಾಸ್ನ ವಿನಾಶಕಾರಿ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಶನಿವಾರ ರಾತ್ರಿಯ ವೇಳೆಗೆ 51 ಕ್ಕೆ ಏರಿದೆ, ರಕ್ಷಣಾ ಕಾರ್ಯಕರ್ತರು ಬದುಕುಳಿದವರಿಗಾಗಿ ಹತಾಶ ಶೋಧವನ್ನು ಮುಂದುವರಿಸಿದ್ದಾರೆ, ವೇಗವಾಗಿ ಉಬ್ಬಿದ ಗ್ವಾಡಲುಪೆ ನದಿಯ ದಡದಲ್ಲಿರುವ ಬೇಸಿಗೆ ಶಿಬಿರವಾದ ಕ್ಯಾಂಪ್ ಮಿಸ್ಟಿಕ್ನಿಂದ ಕಾಣೆಯಾದ 27 ಹುಡುಗಿಯರು ಸೇರಿದಂತೆ ಹಲವರನ್ನು ಹುಡುಕುತ್ತಿದ್ದಾರೆ.ಕಾಣೆಯಾದ 27 ಮಕ್ಕಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳನ್ನು ಉಲ್ಲೇಖಿಸಿ ಯುಎಸ್ ಮಾಧ್ಯಮಗಳು ವರದಿ ಮಾಡಿವೆ. ಶಿಬಿರವು ಅಸ್ತವ್ಯಸ್ತವಾಗಿತ್ತು, ಛಿದ್ರಗೊಂಡ ಕಿಟಕಿಗಳು, ಮಣ್ಣಿನಲ್ಲಿ ಹೂತುಹೋದ …

Read More »

ಸರಕು ಸಾಗಾಟದ ಲಾರಿಗೆ ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ವಾಹನ..!

ಹುಬ್ಬಳ್ಳಿ: ಸರಕು ಸಾಗಾಟದ ಲಾರಿಯೊಂದು ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯ ನೇಕಾರನಗರದ ಬಳಿಯಲ್ಲಿ ನಡೆದಿದೆ.ದೊಡ್ಡ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿದ್ದು, ಬೆಂಕಿ ಕಿನ್ನಾಲಿಗೆ ಆಕಾಶಕ್ಕೆ ಚಾಚಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಅಲ್ಲದೇ ವಾಹನದ ಬಗ್ಗೆ ಹಾಗೂ ಬೆಂಕಿ ತಗುಲಿದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.ಇನ್ನೂ ರಸ್ತೆಯಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿರುವ ಪರಿಣಾಮ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿದೆ.

Read More »

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ನಿಂದ ರೂಟ್ ಮಾರ್ಚ್..!

ಹುಬ್ಬಳ್ಳಿ: ಮೊಹರಮ್ ಹಬ್ಬದ ಪ್ರಯುಕ್ತವಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ ಹಳೇ ಹುಬ್ಬಳ್ಳಿಯ ಭಾಗದಲ್ಲಿ ರೂಟ್ ಮಾರ್ಚ್ ನಡೆಸಲಾಯಿತು. ಹುಬ್ಬಳ್ಳಿಯ ಸಿದ್ಧಾರೂಢರ ಮಠದಿಂದ ಆರಂಭಗೊಂಡ ಪೊಲೀಸ್ ರೂಟ್ ಮಾರ್ಚ್ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೌಹಾರ್ದತೆಯಿಂದ ಮೊಹರಮ್ ಹಬ್ಬ ಆಚರಣೆ ಮಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.ಇನ್ನೂ ಪೊಲೀಸ್ ರೂಟ್ ಮಾರ್ಚ್ ನಲ್ಲಿ ನೂರಾರು ಜನ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಭಾಗವಹಿಸಿದ್ದು, ಎಲ್ಲೆಡೆಯೂ …

Read More »

ಬೆಂಗಳೂರಿನ ಹೆಲ್ಮೆಟ್​ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ: 50 ಸಾವಿರ ರೂ. ದಂಡ!

ಅಧಿಕಾರಿಗಳು ನಗರದ ಸಿದ್ಧಯ್ಯ ರಸ್ತೆ, ಕಲಾಸಿಪಾಳ್ಯ ರಸ್ತೆ, ಲಾಲ್ ಬಾಗ್ ರಸ್ತೆ, ಮಾಗಡಿ ರಸ್ತೆ, ಸುಮನಹಳ್ಳಿ, ವಿಜಯನಗರ, ಅಗ್ರಹಾರ ದಾಸರಹಳ್ಳಿ, ನಾಗರಭಾವಿ, ಔಟರ್ ರಿಂಗ್ ರಸ್ತೆ ಸೇರಿದಂತೆ ಒಟ್ಟು 19 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು.ಕಳಪೆ ಗುಣಮಟ್ಟದ ಮತ್ತು ಅರ್ಧ ಹೆಲ್ಮೆಟ್​ ಮಾಡುತ್ತಿದ್ದ ಆರು ಅಂಗಡಿಗಳಿಗೆ ಮಾಪನ ಇಲಾಖೆ 50 ಸಾವಿರ ರೂ. ದಂಡ ವಿಧಿಸಿದೆ. ಜೊತೆಗೆ, ದಿ ಲೀಗಲ್ ಮೆಟ್ರಾಲಜಿ ಕಾಯ್ದೆ (ಮಾಪನಶಾಸ್ತ್ರ ಕಾಯ್ದೆ) ಅಡಿ ನೋಟಿಸ್ …

Read More »

ಗಂಡನ ಅನುಮಾನಕ್ಕೆ ಕೊಲೆಗೀಡಾದ ಎರಡೂವರೆ ತಿಂಗಳ ಗರ್ಭಿಣಿ ಪತ್ನಿ!

ಡೊಳ್ಳಿಪುರದಲ್ಲಿ ನಡೆದ ಒಂದು ದಾರುಣ ಘಟನೆಯಲ್ಲಿ, ಅನುಮಾನದ ಭೂತಕ್ಕೆ ಬಲಿಯಾದ ಗಂಡನೊಬ್ಬ ತನ್ನ ಎರಡೂವರೆ ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಯಾದ ಮಹೇಶ್ ತನ್ನ ಪತ್ನಿ ಶುಭಾಳನ್ನು ಕಬ್ಬಿಣದ ಹಾರೆಯಿಂದ ಹೊಡೆದು ಕೊಂದು, ತಾನೇ ಕಥೆಕಟ್ಟಿ ಇತರರ ಮೇಲೆ ಆರೋಪ ಹೊರಿಸಲು ಯತ್ನಿಸಿದ್ದಾನೆ.ಘಟನೆಯ ಬಗ್ಗೆ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು …

Read More »

ಹಿಂದೂ ಯುವತಿಯನ್ನು ವಿವಾಹದ ಆಮಿಷವೊಡ್ಡಿ ಬಲಾತ್ಕಾರ ಮಾಡಿದ ನಬಿ ಆಲಂಗೆ ಜೀವಾವಧಿ ಶಿಕ್ಷೆ!!

ವಿವಾಹದ ಸುಳ್ಳು ಆಮಿಷವೊಡ್ಡಿ ಹಿಂದೂ ಯುವತಿ ಮೇಲೆ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ನಬಿ ಆಲಂ ಎಂಬಾತನಿಗೆ ಇಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ, 5 ಸಾವಿರ ರೂಪಾಯಿಗಳ ದಂಡವನ್ನೂ ವಿಧಿಸಲಾಗಿದೆ.ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಆರೋಪಿಯು ಸಂತ್ರಸ್ತೆಯ ಜಾತಿ ಮತ್ತು ಆಕೆಯ ಸಾಮಾಜಿಕ ಪರಿಸ್ಥಿತಿಯ ದುರ್ಲಾಭ ಪಡೆದು ಈ ಗಂಭೀರ ಅಪರಾಧ ಎಸಗಿದ್ದಾನೆ. ಆದ್ದರಿಂದ ಈ ಪ್ರಕರಣದಲ್ಲಿ ಯಾವುದೇ ಮೃದುತ್ವ ಅಥವಾ ಸೌಲಭ್ಯ …

Read More »

ಚಿತ್ರದುರ್ಗ : ಪೊಕ್ಸೋ ಪ್ರಕರಣ, ಆರೋಪಿಗೆ 20 ವರ್ಷ ಶಿಕ್ಷೆ!

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ) ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ ರೂ. 25000 ದಂಡ ವಿಧಿಸಿ ಆದೇಶ ಹೊರಡಿಸಿದೆ.

Read More »

ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವು : ಹೊತ್ತಿ ಉರಿದ ಬಸ್, ಪ್ರಯಾಣಿಕರು ಪಾರು!

ಬೈಕ್ ಗೆ ಡಿಕ್ಕಿಯಾಗಿ ಖಾಸಗಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಒಂದು ಖಾಸಗಿ ಬಸ್ ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿತ್ತು ಅಪಘಾತ ಕುರಿತಂತೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ಕರ್ನಾಟಕ-ಗೋವಾ ರಾಷ್ಟ್ರೀಯ ಹೆದ್ದಾರಿ ಕುಸಿತ!!

ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಹಲವೆಡೆ ಭೂಕುಸಿತ, ಗುಡ್ದ ಕುಸಿತ ಸಂಭವಿಸಿದೆ.ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿದಿದೆ. ರಸ್ತೆ ಮಾರ್ಗದಲ್ಲಿಯೂ ಬಿರುಕುವುಂಟಾಗಿದೆ. ನಿಧಾನಗತಿಯಲ್ಲಿ ವಾಹನಗಳು ತೆರಳಲು ಅನುವು ಮಾಡಿಕೊಡಲಾಗಿದೆ. ವಾಹನ ಸವಾರರು ಈ ಭಾಗದಲ್ಲಿ ಆತಂಕದಲ್ಲಿಯೇ ಸಂಚರಿಸುವ ಸ್ಥಿತಿ ಎದುರಾಗಿದೆ.ಕರ್ನಾಟಕ ಹಾಗೂ ಗೋವಾ ಪೊಲೀಸರು ಸ್ಥಳಕ್ಕೆ ಭೇತಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »