Breaking News

Breaking News

ಬೆಂಗಳೂರು ಉದ್ಯಮಿ ರವಿಪ್ರಕಾಶ್‌ ನಾಪತ್ತೆ ಕೇಸ್‌ಗೆ ಬಿಗ್‌ ಟ್ವಿಸ್ಟ್‌.. ಮೈದುಕೂರು MLA ಸೇರಿ ಮೂವರ ವಿರುದ್ಧ FIR

ಬೆಂಗಳೂರು: ಆರ್.ಆರ್.ನಗರದ 14 ಎಕರೆ ಜಮೀನು ವಿಚಾರವಾಗಿ ಮೈದುಕೂರು ಶಾಸಕ ಪುಟ್ಟ ಸುಧಾಕರ್ ಯಾದವ್ ಹಾಗೂ ಉದ್ಯಮಿ ರವಿಪ್ರಕಾಶ್ ನಡುವೆ ನಡೆಯುತ್ತಿದ್ದ ವಿವಾದ ಇದೀಗ ಕಿಡ್ನಾಪ್ ಪ್ರಕರಣದವರೆಗೆ ತಲುಪಿದೆ. ಆಂಧ್ರಪ್ರದೇಶದ ಮೈದುಕೂರು ಪೊಲೀಸರು ರವಿಪ್ರಕಾಶ್ ಅವರನ್ನು ಬೆಂಗಳೂರಿನಿಂದ ಕರೆದೊಯ್ದಿದ್ದು, ಕುಟುಂಬಸ್ಥರು ಅಪಹರಣದ ಆರೋಪ ಮಾಡಿದ್ದಾರೆ. ಆಗಸ್ಟ್ 30ರಂದು ಆರ್.ಆರ್.ನಗರದ ನಿವಾಸದ ಬಳಿ ರವಿಪ್ರಕಾಶ್ ಅವರನ್ನು ಕಾರಿನಿಂದ ಎಳೆದುಕೊಂಡು ಹೋಗಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮೈದುಕೂರು ಠಾಣೆಯಲ್ಲಿ ದಾಖಲಾಗಿರುವ ಕೊಲೆ ಯತ್ನ …

Read More »

ರಾಮನಗರದಲ್ಲಿ ಖೋಟಾ ನೋಟು ಜಾಲ ಪತ್ತೆ: ನಿರ್ಮಾಣ ಹಂತದ ಮನೆಯಲ್ಲಿ ನಡೆಯುತ್ತಿದ್ದ ದಂಧೆ

ರಾಮನಗರದ ಶಾಂತಿಲಾಲ್ ಲೇಔಟ್‌ನ ನಿರ್ಮಾಣ ಹಂತದ ಮನೆಯೊಂದರಲ್ಲಿ ಅಕ್ರಮವಾಗಿ ಖೋಟಾ ನೋಟು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಐಜೂರು ಪೊಲೀಸರು ಭೇದಿಸಿದ್ದಾರೆ. ದಾಳಿ ವೇಳೆ ನಕಲಿ ನೋಟು ತಯಾರಿಸಲು ಬಳಸುತ್ತಿದ್ದ ಕಾಗದ, ಕೆಮಿಕಲ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಶೇಷ ಕಾಗದಕ್ಕೆ ಕೆಮಿಕಲ್ ಬಳಸಿ ₹200 ಹಾಗೂ ₹500 ಮುಖಬೆಲೆಯ ನಕಲಿ ನೋಟುಗಳನ್ನು ತಯಾರಿಸಲಾಗುತ್ತಿತ್ತು. ಬಳಿಕ ಅವುಗಳನ್ನು ಕತ್ತರಿಸಿ ಬಂಡಲ್‌ಗಳಾಗಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ …

Read More »

ಎರಡು ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟುಹಾಕಿದ ಭಗ್ನಪ್ರೇಮಿ

ಶಿವಮೊಗ್ಗದ ವೆಂಕಟೇಶನಗರದ 5ನೇ ಕ್ರಾಸ್‌ನಲ್ಲಿ ಭಗ್ನಪ್ರೇಮಿಯೊಬ್ಬ ಎರಡು ಬೈಕ್‌ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಮಣಿ ಎಂಬ ಯುವಕ ಈ ಕೃತ್ಯ ಎಸಗಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಣಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ದುಶ್ಚಟಗಳಿಗೆ ದಾಸನಾಗಿದ್ದ ಕಾರಣ ಯುವತಿ ಆತನನ್ನು ನಿರ್ಲಕ್ಷಿಸಿದ್ದಳು. ಇತ್ತೀಚೆಗೆ ಯುವತಿಗೆ ಅಂಥೋಣಿದಾಸ್ ಎಂಬಾತನೊಂದಿಗೆ ನಿಶ್ಚಿತಾರ್ಥವಾಗಿದ್ದರಿಂದ ಕೋಪಗೊಂಡ ಮಣಿ, ಅಂಥೋಣಿದಾಸ್ ಹಾಗೂ ಯುವತಿಯ ಸಹೋದರನ ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾನೆ. ಘಟನೆ ಸಂಬಂಧ ದೊಡ್ಡಪೇಟೆ …

Read More »

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ ಕಿರಾತಕ ಪತ್ನಿ, ಮೂವರು ಅರೆಸ್ಟ್!

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೊಣೆಹಳ್ಳಿ ಹೊಸೂರು ಗ್ರಾಮದ ಬಸವರಾಜ್ (37) ಅವರನ್ನು ಪತ್ನಿ ಸುನೀತಾ ತನ್ನ ಪ್ರಿಯಕರ ತಿಪ್ಪೇಸ್ವಾಮಿ ಜೊತೆ ಸೇರಿ ಸುಪಾರಿ ನೀಡಿ ಕೊಲೆ ಮಾಡಿಸಿದ ಆರೋಪ ಕೇಳಿಬಂದಿದೆ. ಬಳಿಕ ಪತಿ ನಾಪತ್ತೆಯಾಗಿದ್ದಾನೆಂದು ಸುನೀತಾ ಪೊಲೀಸರಿಗೆ ದೂರು ನೀಡಿದ್ದಳು. ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದರಿಂದ ₹2 ಲಕ್ಷಕ್ಕೆ ಕೊಲೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಸಾಲ ಕೊಡಿಸುವುದಾಗಿ ನಂಬಿಸಿ ಬಸವರಾಜ್‌ನನ್ನು ಕಾರಿನಲ್ಲಿ ಕರೆದೊಯ್ದು ಮಾರ್ಗಮಧ್ಯೆ ಹತ್ಯೆ ಮಾಡಲಾಗಿದೆ. …

Read More »

ಮಂಗಳೂರು : ಮಾರಾಟದ ಉದ್ದೇಶದಿಂದ ಸಂಗ್ರಹಿಸಿದ್ದ 11 ಕೆ.ಜಿ. ದನದ ಮಾಂಸ ವಶ

ಬಂಟ್ವಾಳ : ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಎನ್ನಲಾದ ಸುಮಾರು 11 ಕೆ.ಜಿ. ದನದ ಮಾಂಸವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡ ಘಟನೆ ಕಾವಳಪಡೂರು ಗ್ರಾಮದ ಗುಂಪುಕಲ್ಲು ಎಂಬಲ್ಲಿ ನಡೆದಿದೆ. ಆ.29ರಂದು ಮಧ್ಯಾಹ್ನ 3.20ರ ಸುಮಾರಿಗೆ ದೊರೆತ ಮಾಹಿತಿಯ ಆಧಾರದಲ್ಲಿ ಪೊಲೀಸರು ಗುಂಪುಕಲ್ಲು ನಿವಾಸಿ ಸಿರಾಜ್ ಅವರ ಮನೆಯ ಹಿಂಬದಿಯ ಶೆಡ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಫ್ರಿಡ್ಜ್’ನ ಮೇಲ್ಬಾಗದಲ್ಲಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ಮಾಂಸ ಪತ್ತೆಯಾಗಿದೆ. ತಲಾ ಒಂದು ಕೆ.ಜಿ.ಯಂತೆ 10 …

Read More »

ಚಾಕುವಿನಿಂದ ಇರಿದು ಅಣ್ಣನ ಕೊಲೆ ಮಾಡಿದ ತಮ್ಮ!

ಮಂಗಳೂರಿನ ಬಿಜೈ ಕೊಟ್ಟಾರ ಕ್ರಾಸ್ ಬಳಿ ಮೊಬೈಲ್ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬರು ತಮ್ಮನಿಂದಲೇ ಚಾಕುವಿನಿಂದ ಇರಿದು ಕೊಲೆಯಾಗಿದ್ದಾರೆ. ಮೃತರನ್ನು ಅಡಿವೆಪ್ಪ (40) ಎಂದು ಗುರುತಿಸಲಾಗಿದ್ದು, ಆರೋಪಿ ತಮ್ಮ ರಾಜು (36) ಎಂದು ತಿಳಿದುಬಂದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಸಹೋದರರು ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದು, ವಿಪರೀತ ಕುಡಿತದ ಚಟ ಹೊಂದಿದ್ದರು ಎನ್ನಲಾಗಿದೆ. ಭಾನುವಾರ ರಾತ್ರಿ 10.30ರಿಂದ 11 ಗಂಟೆ …

Read More »

ಚಲಿಸುವ ಬಸ್‌ನಲ್ಲೇ ಹತ್ತನೇ ಕ್ಲಾಸ್‌ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಬೆಚ್ಚಿಬಿದ್ದ ದೆಹಲಿ!

ದೆಹಲಿಯ ನೋಯ್ಡಾದಲ್ಲಿ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವನಾಥ ಟ್ರಾವೆಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಚಾಲಕ ಕುಲದೀಪ್ ಮತ್ತು ಕಂಡಕ್ಟರ್ ಸಂದೀಪ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 4ರಂದು ಭಾರಿ ಮಳೆಯ ವೇಳೆ ಬಸ್‌ಗಾಗಿ ಕಾಯುತ್ತಿದ್ದ ಬಾಲಕಿಗೆ ಆರೋಪಿಗಳು ಸೆಕ್ಟರ್‌ 63 ಕಡೆಗೆ ಹೋಗುವುದಾಗಿ ಹೇಳಿ ಬಸ್‌ಗೆ ಹತ್ತಿಸಿಕೊಂಡಿದ್ದರು. ಇತರೆ ಪ್ರಯಾಣಿಕರು ಇಳಿದ ಬಳಿಕ ಬಸ್‌ನಲ್ಲಿ ಬಾಲಕಿ ಹಾಗೂ …

Read More »

ಕರ್ನಾಟಕ ಪೊಲೀಸರ ಲಂಚದ ಆಡಿಯೋ ವೈರಲ್ ಪ್ರಕರಣ; ಮೂವರು ಪಿಎಸ್‌ಐಗಳು ಅಮಾನತು!

ಉತ್ತರ ಕನ್ನಡದ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐಗಳ ಪೋಸ್ಟಿಂಗ್ ಹಾಗೂ ಲಂಚದ ವ್ಯವಹಾರದ ಕುರಿತು ಮಾತನಾಡಿರುವ ಆಡಿಯೋ ವೈರಲ್ ಆಗಿ ಭಾರೀ ಸಂಚಲನ ಸೃಷ್ಟಿಸಿತ್ತು. ಆಡಿಯೋದಲ್ಲಿ ಹಣದ ವ್ಯವಹಾರ, ಠಾಣೆ ಹಪ್ತಾ ಹಾಗೂ ‘ಮಂತ್ಲಿ’ ಮಾಮೂಲಿ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿತ್ತು. ಪ್ರಕರಣದ ತನಿಖೆಗೆ ಎಎಸ್‌ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತನಿಖೆಯಲ್ಲಿ ಅಕ್ರಮ ಹಾಗೂ ಕರ್ತವ್ಯಲೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಪಿಎಸ್‌ಐಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹಳಿಯಾಳ …

Read More »

IAS ಅಧಿಕಾರಿ ಜೊತೆ ಡೀಲ್, ಅಭ್ಯರ್ಥಿ ಟು ಕೋಟ್ಯಾಧಿಪತಿ: ಸಿಐಡಿ ಬಲೆಗೆ ಬಿದ್ದ ಬಸವರಾಜ್ ಕನ್ನಾಳೆಯ ಹಿನ್ನೆಲೆ ಇದು!

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಬಂಧಿತನಾಗಿರುವ ಬೀದರ್ ಜಿಲ್ಲೆಯ ಭಾಲ್ಕಿ ಮೂಲದ ಬಸವರಾಜ್ ಕನ್ನಾಳೆಯ ಹಿನ್ನೆಲೆ ಇದೀಗ ಹಲವು ರೋಚಕ ಸಂಗತಿಗಳನ್ನು ಬಯಲಿಗೆಳೆಯುತ್ತಿದೆ. ವರ್ಷಗಳ ಹಿಂದೆ ಸರ್ಕಾರಿ ಹುದ್ದೆ ಪಡೆಯಲು ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಬೆಂಗಳೂರಿಗೆ ಬಂದಿದ್ದ ಆತ, ಬಳಿಕ ಅಕ್ರಮದ ಮಧ್ಯವರ್ತಿಯಾಗಿ ಕೋಟ್ಯಂತರ ರೂ. ಆಸ್ತಿ ಗಳಿಸಿದ್ದಾನೆ ಎನ್ನಲಾಗಿದೆ. ಕೆಪಿಎಸ್‌ಸಿ ವ್ಯವಸ್ಥೆಯ ಲೋಪದೋಷಗಳನ್ನು ಅರಿತುಕೊಂಡ ಬಳಿಕ ಅಭ್ಯರ್ಥಿಗಳಿಂದ ಹಣ ಪಡೆದು ಹುದ್ದೆ ಕೊಡಿಸುವ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದಾನೆ ಎಂಬ …

Read More »

ಹಾಡಹಗಲೇ ಕಳವು: ಮನೆಯಿಂದ 1.42 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿ ಎಸ್ಕೇಪ್

ಶಿವಮೊಗ್ಗದಲ್ಲಿ ಹಾಡಹಗಲೇ ಪಿಡಿಒ ದಂಪತಿಯ ಬಾಡಿಗೆ ಮನೆಗೆ ಕನ್ನ ಹಾಕಿದ ಕಳ್ಳ, ಕೇವಲ 30 ನಿಮಿಷಗಳಲ್ಲಿ ₹1.42 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು ಹಾಗೂ ದುಬಾರಿ ವಾಚ್‌ಗಳನ್ನು ದೋಚಿ ಪರಾರಿಯಾಗಿದ್ದಾನೆ. ಆಗಸ್ಟ್ 28ರಂದು ವಿದ್ಯಾನಗರದ 4ನೇ ಕ್ರಾಸ್‌ನಲ್ಲಿ ಘಟನೆ ನಡೆದಿದೆ. ದಂಪತಿ ಕರ್ತವ್ಯಕ್ಕೆ ತೆರಳಿದ್ದ ವೇಳೆ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳ, 943 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಸ್ತುಗಳು, 15 ದುಬಾರಿ ವಾಚ್‌ಗಳು …

Read More »