BigTv News
August 25, 2026
Breaking News
ಕಾಸರಗೋಡು: ಬದಿಯಡ್ಕದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರನ್ನು ಸುಮಾರು 25 ಮಂದಿಯ ತಂಡ ಹಿಂಬಾಲಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಧ್ವನೀಶ್ ಶೆಟ್ಟಿ (18) ಹಾಗೂ ಯಶ್ವಂತ್ (19) ಗಾಯಗೊಂಡಿದ್ದಾರೆ. ಬದಿಯಡ್ಕ ಸರ್ಕಲ್ ಬಳಿ ಜಗಳಕ್ಕೆ ಮುಂದಾದ ತಂಡ, ಬಳಿಕ ಎರಡು ಕಾರು ಹಾಗೂ ಮೂರು ಸ್ಕೂಟರ್‌ಗಳಲ್ಲಿ ಹಿಂಬಾಲಿಸಿ ಮನೆ ಮುಂದೆ ಯುವಕರನ್ನು ತಡೆದಿದೆ ಎನ್ನಲಾಗಿದೆ. ಬಳಿಕ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿರುವುದಾಗಿ ಧ್ವನೀಶ್ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ …
Read More »
BigTv News
August 25, 2026
Breaking News
ಉಡುಪಿ: ಮಲ್ಪೆ ಪಡುಕೆರೆ ದಕ್ಕೆಯಲ್ಲಿ ಬೋಟಿನಲ್ಲಿ ನಡೆದ ಗಲಾಟೆ ವೇಳೆ ಅಭಿಷೇಕ್ ಎಂಬಾತನನ್ನು ಕೊಲೆ ಮಾಡಲಾಗಿದೆ. ಸೋಮವಾರ ರಾತ್ರಿ ಗೋವಿಂದ ಮತ್ತು ಅಭಿಷೇಕ್ ನಡುವೆ ಗಲಾಟೆ ನಡೆದಿದ್ದು, ಮಂಗಳವಾರ ಬೆಳಗಿನ ಜಾವ ಗೋವಿಂದ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮಾಹಿತಿ ಪಡೆದ ಮಲ್ಪೆ ಪೊಲೀಸರು ಕಾರ್ಯಾಚರಣೆ ನಡೆಸಿ ಉಡುಪಿ ರೈಲು ನಿಲ್ದಾಣದ ಬಳಿ ಗೋವಿಂದನನ್ನು ವಶಕ್ಕೆ ಪಡೆದಿದ್ದಾರೆ. ಆತ ಹೈದರಾಬಾದ್ ಅಥವಾ ಮುಂಬೈಗೆ ತೆರಳಲು ಮುಂದಾಗಿದ್ದ ಎನ್ನಲಾಗಿದೆ. ಗೋವಿಂದ ಸುಮಾರು …
Read More »
BigTv News
August 25, 2026
Breaking News
ಬೆಂಗಳೂರು: ಯಲಹಂಕದ ಕಟ್ಟಿಗೆನಹಳ್ಳಿಯಲ್ಲಿ ಖಾಸಗಿ ಕಂಪನಿ ಉದ್ಯೋಗಿ ಚಂದ್ರಮೌಳಿ ಮನೆಯಲ್ಲಿ ಸುಮಾರು 1 ಕೆಜಿ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳಿ ಗ್ಯಾಂಗ್‌ನ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಧೀರೇಂದ್ರ ಪ್ರೇಮ್, ಅಭಿಷೇಕ್, ಅಂಬರೆ ಧಮೈ ಹಾಗೂ ದೀಪಕ್ ಶಾಹಿ ಬಂಧಿತರು. ಮನೆಯಲ್ಲೇ ಕೆಲಸ ಮಾಡುತ್ತಿದ್ದ ಸಂಜಯ್ ಹಾಗೂ ಆತನ ಪತ್ನಿ 6 ತಿಂಗಳಿಂದ ಕಳ್ಳತನಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಆಗಸ್ಟ್ 16ರಂದು ಕುಟುಂಬಸ್ಥರು ತಿಥಿಗೆ ತೆರಳಿದ್ದ ವೇಳೆ ಮನೆಗೆ …
Read More »
BigTv News
August 25, 2026
Breaking News
ಉಡುಪಿ: ಮಲ್ಪೆ ಬಂದರಿನಲ್ಲಿ ಕುಡಿದ ಮತ್ತಿನಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ಮೀನುಗಾರಿಕಾ ಬೋಟ್ ಕಾರ್ಮಿಕನೊಬ್ಬ ಚೂರಿ ಇರಿತಕ್ಕೆ ಬಲಿಯಾಗಿದ್ದಾನೆ. ಚಿಕ್ಕಮಗಳೂರು ಮೂಲದ 24 ವರ್ಷದ ಅಭಿಷೇಕ್ ಮೃತಪಟ್ಟ ಯುವಕ. ‘ಶ್ರೀ ಮಹಾಕಾಳಿ’ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್‌ಗೆ ರಾಯಚೂರು ಮೂಲದ ಗೋವಿಂದ ರಾಜು ಚೂರಿಯಿಂದ ಇರಿದಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಅಭಿಷೇಕ್ ಮೃತಪಟ್ಟಿದ್ದು, ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಘಟನೆ ಬಳಿಕ ಕಾರ್ಯಾಚರಣೆ ನಡೆಸಿದ ಮಲ್ಪೆ ಪೊಲೀಸರು ಗೋವಿಂದ ರಾಜುನನ್ನು …
Read More »
BigTv News
August 25, 2026
Breaking News
ಶಿವಮೊಗ್ಗ: ಪ್ರೀತಿ-ಪ್ರೇಮದ ಹೆಸರಲ್ಲಿ ಅಪ್ರಾಪ್ತೆಗೆ ಯುವಕನೊಬ್ಬ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ. ಫೋಟೋ, ವಿಡಿಯೋ ಇದೆ ಎಂದು ಬೆದರಿಸಿ ಪದೇಪದೆ ಕರೆದೊಯ್ಯುತ್ತಿದ್ದ ಎನ್ನಲಾಗಿದ್ದು, ಕಿರುಕುಳ ತಾಳಲಾರದೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆಗಸ್ಟ್ 18ರಂದು ಕಳೆನಾಶಕ ಸೇವಿಸಿದ್ದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಹಾಗೂ ಮಣಿಪಾಲ್‌ಗೆ ಕರೆದೊಯ್ದರೂ, ಆಗಸ್ಟ್ 24ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. …
Read More »
BigTv News
August 25, 2026
Breaking News
ಮಂಡ್ಯ: ಜೈಲಿನಲ್ಲಿರಬೇಕಿದ್ದ ಭೂ ದಾಖಲೆ ಪ್ರಕರಣದ ಆರೋಪಿ ಮೊಹಮ್ಮದ್ ಹುಸೇನ್ ಮಿಮ್ಸ್ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಯುವತಿಯೊಂದಿಗೆ ಪತ್ತೆಯಾಗಿರುವ ಘಟನೆ ಜಿಲ್ಲಾ ನ್ಯಾಯಾಧೀಶರ ದಿಢೀರ್ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ನಕಲಿ ದಾಖಲೆ ಸೃಷ್ಟಿಸಿ ಭೂಮಿ ವರ್ಗಾವಣೆ ಮಾಡಿದ ಆರೋಪದಲ್ಲಿ ಲೋಕಾಯುಕ್ತರಿಂದ ಬಂಧಿತನಾಗಿದ್ದ ಹುಸೇನ್ ಜೈಲಿನಲ್ಲಿರಬೇಕಿತ್ತು. ಆದರೆ ಗಂಭೀರ ಕಾಯಿಲೆ ಇಲ್ಲದಿದ್ದರೂ ಆಸ್ಪತ್ರೆಯಲ್ಲಿ ದಾಖಲಾಗಿರುವುದು ಪತ್ತೆಯಾಗಿದ್ದು, ಜೊತೆಗೆ ಯುವತಿಯೊಬ್ಬಳು ಆತನೊಂದಿಗೆ ಇರುವುದನ್ನು ಕಂಡು ನ್ಯಾಯಾಧೀಶರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಸ್ಪತ್ರೆಗೆ …
Read More »
BigTv News
August 25, 2026
Breaking News
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಸಾರ್ವಜನಿಕರು ಓಡಾಡಲು ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಲಹಂಕದ ಅಟ್ಟೂರು ಲೇಔಟ್‌ನಲ್ಲಿ ಭಾನುವಾರ ತಡರಾತ್ರಿ ಫುಡ್ ಡೆಲಿವರಿಗೆ ಬಂದಿದ್ದ ಯುವಕನ ಮೇಲೆ ಐದಾರು ಮಂದಿ ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಒಂದೇ ಬೈಕ್‌ನಲ್ಲಿ ಬಂದ ನಾಲ್ಕೈದು ಮಂದಿ, ಡೆಲಿವರಿ ಬಾಯ್‌ನನ್ನು ಅಡ್ಡಗಟ್ಟಿ ಮನಬಂದಂತೆ ಥಳಿಸಿದ್ದಾರೆ. ಸಾರ್ವಜನಿಕರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಈ ಭಾಗದಲ್ಲಿ ದಾರಿಹೋಕರನ್ನು ತಡೆದು ಹಲ್ಲೆ …
Read More »
BigTv News
August 25, 2026
Breaking News
ಕೋಲಾರ: ಕುರಿ ಸಾವಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆ ವೇಳೆ 65 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪಚ್ಚಾರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ವೆಂಕಟಲಕ್ಷ್ಮಮ್ಮ ಎಂದು ಗುರುತಿಸಲಾಗಿದೆ. ಕುರಿ ಸಾವಿನ ವಿಚಾರವಾಗಿ ವೆಂಕಟಲಕ್ಷ್ಮಮ್ಮ ಹಾಗೂ ಆಂಜಪ್ಪ ಕುಟುಂಬದ ನಡುವೆ ಜಗಳ ನಡೆದಿದ್ದು, ಬಳಿಕ ವೇಮಗಲ್ ಠಾಣೆಯಲ್ಲಿ ರಾಜಿ ಪಂಚಾಯ್ತಿ ನಡೆದಿತ್ತು. ಇದೇ ವೇಳೆ ದೂರು ನೀಡಿದ್ದ ಗಂಗರಾಜು ಎಂಬ ಯುವಕನಿಗೆ ಪೊಲೀಸರು …
Read More »
BigTv News
August 25, 2026
Breaking News
ಮುದಗಲ್‌ನಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಟಿಪ್ಪರ್ ಮಾಲೀಕ ಬಸವರಾಜಗೆ ₹45,400 ದಂಡ ವಿಧಿಸಲಾಗಿದೆ. ಅಧಿಕಾರಿ ಸನೀತ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಅಕ್ರಮ ಸಾಗಣೆ ಕುರಿತು ಆರ್‌ಟಿಒ ಅಧಿಕಾರಿಗಳ ಗಮನಕ್ಕೂ ತರಲಾಗುವುದು ಎಂದು ತಿಳಿಸಿದ್ದಾರೆ. ಪಟ್ಟಣದ ಮೂಲಕ ನೆರೆ ಜಿಲ್ಲೆಗಳಿಗೆ ಕಲ್ಲು ಅಕ್ರಮವಾಗಿ ಸಾಗಿಸುವುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಅಕ್ರಮ ಮರಳು …
Read More »
BigTv News
August 25, 2026
Breaking News
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದೊಡ್ಡೇರಿ ಗ್ರಾಮದ ಬಳಿ ಪೊಲೀಸರಿಂದ ಪರಾರಿಯಾಗಿದ್ದ ರೌಡಿಶೀಟರ್ ಜಯಂತ್ ಶವ ಕೆರೆಯಲ್ಲಿ ಪತ್ತೆಯಾಗಿದೆ. 22 ಪ್ರಕರಣಗಳಲ್ಲಿ ಬೇಕಾಗಿದ್ದ ಜಯಂತ್ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಎರಡು ದಿನಗಳ ಹಿಂದೆ ಕುಲುವನಹಳ್ಳಿಯಲ್ಲಿ ವೃದ್ಧೆಯ ಮಾಂಗಲ್ಯ ಸರ ಕಸಿದು ಪರಾರಿಯಾಗುತ್ತಿದ್ದ ಜಯಂತ್ ಹಾಗೂ ಯತೀಶ್‌ನನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಇಬ್ಬರು ಪ್ರಜ್ಞೆ ತಪ್ಪಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದಾಗ ಆಂಬುಲೆನ್ಸ್ ಚಾಲಕನನ್ನು ತಳ್ಳಿ …
Read More »