Breaking News

ವಾಹನಗಳಲ್ಲಿ ಹಿಂಬಾಲಿಸಿ ಹಲ್ಲೆ

ಕಾಸರಗೋಡು: ಬದಿಯಡ್ಕದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರನ್ನು ಸುಮಾರು 25 ಮಂದಿಯ ತಂಡ ಹಿಂಬಾಲಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಧ್ವನೀಶ್ ಶೆಟ್ಟಿ (18) ಹಾಗೂ ಯಶ್ವಂತ್ (19) ಗಾಯಗೊಂಡಿದ್ದಾರೆ. ಬದಿಯಡ್ಕ ಸರ್ಕಲ್ ಬಳಿ ಜಗಳಕ್ಕೆ ಮುಂದಾದ ತಂಡ, ಬಳಿಕ ಎರಡು ಕಾರು ಹಾಗೂ ಮೂರು ಸ್ಕೂಟರ್‌ಗಳಲ್ಲಿ ಹಿಂಬಾಲಿಸಿ ಮನೆ ಮುಂದೆ ಯುವಕರನ್ನು ತಡೆದಿದೆ ಎನ್ನಲಾಗಿದೆ. ಬಳಿಕ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿರುವುದಾಗಿ ಧ್ವನೀಶ್ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಶುಹೈಬ್ (26), ಹಸನ್ ಶಹಲ್ (18) ಸೇರಿದಂತೆ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *