Breaking News

Breaking News

ಬೆಂಗಳೂರು: ಬಂಧಿತ ಆರೋಪಿಗಳಿಗೆ ಬೆದರಿಸಿ ಹಣ ವಸೂಲಿ ಆರೋಪ, ಮೂವರು ಪೊಲೀಸರು ವಶಕ್ಕೆ!

ಚಿಕ್ಕಜಾಲ ಠಾಣೆಯ ಇಬ್ಬರು ಹೆಡ್‍ಕಾನ್‍ಸ್ಟೇಬಲ್ ಹಾಗೂ ಒಬ್ಬರು ಕಾನ್‍ಸ್ಟೇಬಲ್ ಸೇರಿ ಮೂವರನ್ನು ವಶಕ್ಕೆ ಪಡೆದಿರುವ ಬಾಗಲೂರು ಠಾಣೆಯ ಪೊಲೀಸರು ವಿಚಾರಣೆಗೊಳಪಡಿಸಿರುವುದಾಗಿ ತಿಳಿದುಬಂದಿದೆ.ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಣ ದ್ವಿಗುಣಗೊಳಿಸುವ ದಂಧೆಗೆ ಸಂಬಂಧಪಟ್ಟಂತೆ ಖಚಿತ ಮಾಹಿತಿ ಪಡೆದು ಪ್ರತಿಷ್ಠಿತ ಹೋಟೆಲ್‍ವೊಂದಕ್ಕೆ ದಾಳಿ ನಡೆಸಿದ ಚಿಕ್ಕಜಾಲ ಠಾಣೆಯ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ, ಅನಂತರ ಅವರನ್ನು ಬೆದರಿಸಿ ಆರು ಲಕ್ಷ ರೂ. ಪಡೆದುಕೊಂಡು ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ …

Read More »

ನೆಲ್ಯಾಡಿ: ಚಾಕುವಿನಿಂದ ಇರಿದು ಯುವಕನ ಕೊಲೆ!!

ಚಾಕುವಿನಿಂದ ಇರಿದು ಯುವಕನೋರ್ವನನ್ನು ಹತ್ಯೆ ಮಾಡಿದ ಘಟನೆ ಶುಕ್ರವಾರ ರಾತ್ರಿ ನೆಲ್ಯಾಡಿ ಹೊರ ಠಾಣೆ ವ್ಯಾಪ್ತಿಯ ಮಾದೇರಿ ಸಮೀಪ ನಡೆದಿದೆ.ಮನೆಯ ಅಂಗಳದಲ್ಲಿ ಶರತ್ ನನ್ನು ಚಾಕುವಿನಿಂದ ಇರಿದು ಕೊಲೆಗೈಯಲಾಗಿದ್ದು, ಕೌಟುಂಬಿಕ ಕಲಹ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತ ಯುವಕನನ್ನು ಮಾದೇರಿ ನಿವಾಸಿ ಶರತ್ ಎಂದು ಗುರುತಿಸಲಾಗಿದೆ.

Read More »

ಬೆಂಗಳೂರು : ತಾಜ್ ಹೋಟೆಲ್‌ನಲ್ಲಿ ಕಳ್ಳತನ!!

ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ನುಗ್ಗಿದ ಕಳ್ಳ ಅಡುಗೆ ಮನೆಯಲ್ಲಿ ಲ್ಯಾಪ್‌ಟಾಪ್ ಮತ್ತು ಮೇಕಪ್ ಕಿಟ್‌ನ್ನು ಕದ್ದು ಪರಾರಿಯಾಗಿದ್ದಾನೆ.ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ಸೆಕ್ಯೂರಿಟಿ ವ್ಯವಸ್ಥಾಪಕ ತಿಮ್ಮೇಗೌಡ, ಈ ಕುರಿತು ಹೈಗ್ರೌಂಡ್ಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.ಈಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೇ 4ರ ಬೆಳಗ್ಗೆ 8.15ರಲ್ಲಿ ಅಪರಿಚಿತ ವ್ಯಕ್ತಿ, ಹೋಟೆಲ್‌ನ ಮುಖ್ಯದ್ವಾರದಿಂದ ಒಳ ಪ್ರವೇಶ ಮಾಡಿ ಕೇಟರಿಂಗ್ ಸೇಲ್ಸ್ ವಿಭಾಗಕ್ಕೆ ಹೋಗಿ …

Read More »

ಕುಂದಾಪುರ : ಯುವಕ ಹೊಳೆಗೆ ಹಾರಿ ಆತ್ಮಹತ್ಯೆ!!

ಸಣ್ಣ ಪುಟ್ಟ ವಿಚಾರಕ್ಕೆ ಕೋಪ ಮಾಡಿಕೊಳ್ಳುವ ಸ್ವಭಾವದವರಾಗಿದ್ದ ಅವರು ಮಾನಸಿಕ ಖನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಅಜ್ಜಿ ತಾಯಿಗೆ ಎಳನೀರು ಕೊಟ್ಟು ಬರುವಂತೆ ಹೇಳಿದಾಗ ಕೋಪಿಸಿಕೊಂಡು ಸೈಕಲ್‌ ತೆಗೆದುಕೊಂಡು ಹೋದ ಮೊಮ್ಮಗ ಮರಳಿ ಮನೆಗೆ ಬಂದಿರಲಿಲ್ಲ.ಮೃತದೇಹ ವಾರಾಹಿ ಹೊಳೆಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಅಜ್ಜ ಗಣಪತಿ ನೀಡಿದ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಳ್ಕೂರು ಗ್ರಾಮದ ಸ್ವಸ್ತಿಕ್‌ (21) ಅವರು ಬಳ್ಕೂರು ಕಳುವಿನಬಾಗಿಲು ವಾರಾಹಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Read More »

ಶ್ರೀನಗರ : ಭೀಕರ ಶೆಲ್ ದಾಳಿಯಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಸಾವು!!

ಜಮ್ಮು ಮತ್ತು ಕಾಶ್ಮೀರದ ಗಡಿ ಪಟ್ಟಣ ಪೂಂಚ್‌ನಲ್ಲಿ ಇತ್ತೀಚೆಗೆ ನಡೆದ ಭೀಕರ ಶೆಲ್ ದಾಳಿಯಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಸಾವನ್ನಪ್ಪಿದ್ದಾರೆ.ಈ ದುರಂತ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮೃತರ ಚಿಕ್ಕಮ್ಮ ಶಹೀನ್ ಖಾನ್ ಅವರು, ದಿ ಕ್ವಿಂಟ್‌ಗೆ ನೀಡಿದ ತಮ್ಮ ಹೇಳಿಕೆಯಲ್ಲಿ, ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸಿದ್ದಾರೆ.ಈ ದಾಳಿಯಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ. 57 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಲವಾರು ಮನೆಗಳು, ಅಂಗಡಿಗಳು, ಧಾರ್ಮಿಕ ಸ್ಥಳಗಳು ಮತ್ತು ಸಾರ್ವಜನಿಕ …

Read More »
Featured Video Play Icon

ಪೊಲೀಸರೇ ನಡೆಸ್ತಿದ್ದಾರಾ ಮೀಟರ್ ಬಡ್ಡಿ.. ದಂಧೆ..?

ಅವಳಿನಗರದ ಜನತೆ ಹುಷಾರ!!! ಬಡವರ ರಕ್ತ ಹಿರುವ ಬಡ್ಡಿ ಗ್ಯಾಂಗ್!! ಜನನ ರಕ್ಷಣೆ ಮಾಡುವವರೇ ಬಡ್ಡಿ ದಂಧೆಯಲ್ಲಿ ಭಾಗಿ ಜನಸ್ನೇಹಿ ಮುಖವಾಡದ ಅಸಲಿ ಕಹಾನಿ..? ಬಡ್ಡಿ ಕೊಡುವದು ತಡವಾದರೆ ಗಾಡಿಗಳನ್ನ ಎಳೆ ತರುವ ಪಾಪಿಗಳು.. ಸರ್ಕಾರಿ ನೌಕರಿ ಇದ್ರು ರಾಜಾರೋಷವಾಗಿ ಬಡ್ಡಿ ಧಂದೆ… ಬಡವರ ರಕ್ತ ಹಿರುವ ಈ ರಾಕ್ಷಸರ ಆಡಿಯೋ ವಿಡಿಯೋ ನೋಡಿದ್ರೆ ತಬ್ಬಿಬ್ಬು ಆಗ್ತಿರಿ!! ಪೊಲಿಸ್ ಅನ್ನೊ ಹುದ್ದೆಯೆ ಬಡ್ಡಿ ಗ್ಯಾಂಗನ ಪ್ರಮುಖ ಅಸ್ತ್ರ....? ಅನಕ್ಷರಸ್ಥ ಆಟೋ …

Read More »

ಪಾಕ್ ವಿರುದ್ಧ ಭಾರತದ ಪ್ರತೀಕಾರ ಸಮರ: ಶೆಲ್ ದಾಳಿಗೆ ಆಂಧ್ರಪ್ರದೇಶದ ಸೈನಿಕ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಪಾಕಿಸ್ತಾನ ಸೇನೆ ನಡೆಸಿದ ಭಾರೀ ಶೆಲ್ ದಾಳಿಯಲ್ಲಿ ಆಂಧ್ರಪ್ರದೇಶದ ಸೈನಿಕನೊಬ್ಬ ಸಾವನ್ನಪ್ಪಿದ್ದಾರೆ.ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಕಲ್ಲಿತಾಂಡ ಗ್ರಾಮದ ಯೋಧ ಮುರಳಿ ನಾಯ್ಕ್ ಪಾಕಿಸ್ತಾನದ ಸೇನೆಯೊಂದಿಗಿನ ಸಂಘರ್ಷದ ವೇಳೆ ಹುತಾತ್ಮರಾಗಿದ್ದಾರೆ. ಮುರಳಿ ನಾಯ್ಕ್ ಅವರ ಪಾರ್ಥಿವ ಶರೀರ ಮೇ 10ರ ವೇಳೆಗೆ ಸ್ವಗ್ರಾಮಕ್ಕೆ ತಲುಪುವ ನಿರೀಕ್ಷೆಯಿದೆ.ಗುರುವಾರ ರಾತ್ರಿ ಭಾರತದ ವಿರುದ್ಧ ಪಾಕಿಸ್ತಾನ ಸೇನೆ ಜಮ್ಮು ಕಾಶ್ಮೀರ ಗಡಿಯಲ್ಲಿ ಗುಂಡಿನ ದಾಳಿ ನಡೆಸಿತು. …

Read More »

ಮೈಸೂರು :ಕಡಿಮೆ ಖರ್ಚಿನಲ್ಲಿ ಪ್ರವಾಸ ಆಮಿಷ, ಇಬ್ಬರು ಮಹಿಳೆಯರಿಗೆ 18.50 ಲಕ್ಷ ವಂಚನೆ!!

ಕಡಿಮೆ ಖರ್ಚಿನಲ್ಲಿ ಉತ್ತರಪ್ರದೇಶ ಹಾಗೂ ದೆಹಲಿ ಪ್ರವಾಸ ಮಾಡಿಸುವುದಾಗಿ ನಂಬಿಸಿ ಮೈಸೂರಿನ ಇಬ್ಬರು ಮಹಿಳೆಯರಿಗೆ ಒಟ್ಟು 18.50 ಲಕ್ಷ ವಂಚಿಸಿದ್ದಾರೆ.ಈ ಸಂಬಂಧ ಇಬ್ಬರು ಮಹಿಳೆಯರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಸಿದ್ದಾರ್ಥನಗರದ ಸುವರ್ಣ ಎಂಬುವರು 5.96 ಲಕ್ಷ ಹಾಗೂ ಗಾಯಿತ್ರಿಪುರಂ ನ ಪಂಕಜ ಎಂಬುವರು 12.61 ಲಕ್ಷ ಹಣ ಕಳೆದುಕೊಂಡಿದ್ದಾರೆ.ಆನ್ ಲೈನ್ ನಲ್ಲಿ ಕಡಿಮೆ ಖರ್ಚಿನಲ್ಲಿ ದೆಹಲಿ ಹಾಗೂ ಉತ್ತರಪ್ರದೇಶ ಪ್ರವಾಸ ಮಾಡಿಸುವುದಾಗಿ ಜಾಹಿರಾತು ಪ್ರಕಟವಾಗಿದೆ.ಆಸಕ್ತಿಯಿಂದ ಮೊಬೈಲ್ ನಂಬರ್ ಗೆ …

Read More »

ಬೆಂಗಳೂರು: ಅಪಾರ್ಟ್​ಮೆಂಟ್​ನಲ್ಲಿ 3 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆ!!

ಅಪಾರ್ಟ್​ಮೆಂಟ್​ವೊಂದರಲ್ಲಿ 3 ಕೋಟಿ ಮೌಲ್ಯದ 100 ಕೆಜಿ ಗಾಂಜಾ ಪತ್ತೆಯಾಗಿದೆ. ಗಾಂಜಾ ಸಂಗ್ರಹಿಸಿದ್ದ ಕೇರಳ ಮೂಲದ ಆರೋಪಿ ಸಚಿನ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಆರೋಪಿಗಳು ಹೊರರಾಜ್ಯಗಳಿಂದ ಗಾಂಜಾ ತರಿಸಿ, ಅಪಾರ್ಟ್ಮೆಂಟ್​ನಲ್ಲಿ ಸಣ್ಣ ಸಣ್ಣ ಪ್ಯಾಕೆಟ್​ಗಳಲ್ಲಿ ಪ್ಯಾಕ್ ಮಾಡುತ್ತಿದ್ದರು. ಬಳಿಕ ಆರೋಪಿಗಳು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಇದ್ದ ಕೊಠಡಿಯಲ್ಲಿ ವೇಯಿಂಗ್ ಸ್ಕೇಲ್, ಪ್ಯಾಕಿಂಗ್ ಟೇಪ್, ರಾಶಿ ರಾಶಿ ಗಾಂಜಾ ಪಾಕೇಟ್ಗಳು ಪತ್ತೆಯಾಗಿವೆ.ಗ್ಯಾಮ್ಲಿಂಗ್ ಸಂಬಂಧ 55 ಕೇಸ್ ದಾಖಲಿಸಿಕೊಂಡು 205 ಆರೋಪಿಗಳನ್ನು ಬಂಧಿಸಿದ್ದಾರೆ. …

Read More »

ತ್ರಿಬಲ್ ರೈಡಿಂಗ್ ವೇಳೆ ಮರಕ್ಕೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವು!

ದೊಡ್ಡಬಳ್ಳಾಪುರದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ತ್ರಿಬಲ್​​ ರೈಡ್​ ಮಾಡುತ್ತಿದ್ದ ಬೈಕ್​ ಅಪಘಾತಗೊಂಡು ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಂಡಮಗೆರೆ ಕ್ರಾಸ್ ಸಮೀಪದ ನೆಲ್ಲುಕುಂಟೆ ಸರ್ಕಲ್ ಬಳಿ ತಡರಾತ್ರಿ ನಡೆದಿದೆ.ಮೃತರನ್ನು ಗುಂಡಮಗೆರೆ ಗ್ರಾಮದ ವೆಂಕಟೇಶ್ (45), ಶಿವಪುರ ಗ್ರಾಮದ ರಕ್ಷಿತ್ (25) ಮೃತ ದುರ್ದೈವಿಗಳು. ಮುತ್ತೂರು ಗ್ರಾಮದ ವೆಂಕಟೇಶ್ (45)ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯರಾತ್ರಿ ಒಂದೇ ಬೈಕಿನಲ್ಲಿ ಮೂವರು ಗುಂಡಮಗೆರೆ ಕ್ರಾಸ್​ನಿಂದ ನೆಲ್ಲುಕುಂಟೆ ಕಡೆ ಹೋಗುವಾಗ ಆಯತಪ್ಪಿ …

Read More »