BigTv News
April 21, 2025
Breaking News, Crime, ಆಂಧ್ರ ಪ್ರದೇಶ
ಕಳೆದ ತಿಂಗಳು ಸಂಸ್ಥೆಯ ಆಂತರಿಕ ಲೆಕ್ಕ ಪರಿಶೋಧನೆಯ ವೇಳೆ, ಎಂಜಿನ್‌ಗಳು ಕಾಣೆಯಾಗಿರುವುದು ತಿಳಿದು ಬಂದಿತ್ತು. ಕಿಯಾ ಮೋಟಾರ್ಸ್ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಈ ಸಂಬಂಧ ಅಧಿಕೃತ ದೂರು ನೀಡಿದ್ದರು. ಪ್ರಕರಣ ಕುರಿತು ತನಿಖೆ ನಡೆಸಿದ ಆಂಧ್ರಪ್ರದೇಶ ಪೊಲೀಸರು ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಕದ್ದ ಎಂಜಿನ್‌ಗಳನ್ನು ದೇಶದ ಅನೇಕ ರಾಜ್ಯಗಳಿಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಆಂಧ್ರಪ್ರದೇಶದ ಗಡಿಯಲ್ಲಿ ಎಂಜಿನ್ ಕಳ್ಳಸಾಗಣೆಯ ಅಕ್ರಮ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿಗಳನ್ನು …
Read More »
BigTv News
April 21, 2025
Breaking News, Crime, ದೆಹಲಿ
ಬಾಲಕನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಹಿಳೆಗೆ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಸುದೀರ್ಘ ವಿಚಾರಣೆ ಬಳಿಕೆ ಕೋರ್ಟ್ ಇಂದು ತೀರ್ಪು ನೀಡಿದೆ. ಬಾಲಕನಿಗೆ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಬಾಲಕನ ತಾಯಿ ನೀಡಿದ್ದ ದೂರಿನಡಿ ಆರೋಪಿತ ಮಹಿಳೆಯನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಅರೆಸ್ಟ್ ಮಾಡಿದ್ದರು. ಕೋರ್ಟ್, ಆರೋಪ ಸಾಬೀತಾಗಿದ್ದರಿಂದ 30 ವರ್ಷದ ಮಹಿಳೆಗೆ 20 ವರ್ಷಗಳ …
Read More »
BigTv News
April 21, 2025
Breaking News
ಕನ್ನಡ ಕಿರುತೆರೆಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ ಸೀಸನ್ 15’ರ ಸ್ಪರ್ಧಿಯಾಗಿ ಮತ್ತು ಆ ಬಳಿಕ ಕಿರುತೆರೆಯ ಕೆಲವು ಧಾರಾವಾಹಿಗಳ ಹಾಡಿನ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಪೃಥ್ವಿ ಭಟ್ ಅವರು ಅಪ್ಪ ಅಮ್ಮನ ವಿರೋಧವನ್ನೂ ಲೆಕ್ಕಿಸದೆ ಮನೆ ತೊರೆದು ಪ್ರೀತಿಸಿದವನ ಜತೆ ಮದುವೆಯಾಗಿದ್ದಾರೆ. ಇದರಿಂದ ಮನನೊಂದ ಅಪ್ಪ ಸುದೀರ್ಘ ಆಡಿಯೊ ಮಾಡಿ ನೋವು ತೋಡಿಕೊಂಡಿದ್ದಾರೆ. ಅಭಿಷೇಕ್ ಎನ್ನುವ ಯುವಕನೊಂದಿಗೆ ಪೃಥ್ವಿ ಭಟ್ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ. …
Read More »
BigTv News
April 21, 2025
Breaking News, Crime
ಕಮೀಷನ್ ಆಸೆ ತೋರಿಸಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಸೈಬರ್ ಅಪರಾಧಕ್ಕೆ ಬಳಕೆ ಮಾಡುತ್ತಿದ್ದ ಅಂತರ್ ರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಸಿಇಎನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಮೂವರು ಆರೋಪಿಗಳು ಆಂಧ್ರಪ್ರದೇಶದವರಾಗಿದ್ದು, ಬಂಧಿತರಿಂದ 137 ವಿವಿಧ ಬ್ಯಾಂಕ್ ಗಳ ಎಟಿಎಂ ಕಾರ್ಡ್‌ಗಳು, 21 ಬ್ಯಾಂಕ್ ಪಾಸ್ ಬುಕ್ ಗಳು, 10 ಚೆಕ್ ಬುಕ್ ಗಳು 3 ಸಿಮ್ ಕಾರ್ಡ್‌ಗಳು ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ್ದ ಮೂರು ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು …
Read More »
BigTv News
April 21, 2025
Breaking News, Crime, ಭೋಪಾಲ್
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪೊಲೀಸ್ ಪೇದೆ ಮೇಲೆ ಸೇನಾಧಿಕಾರಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಮಹಿಳಾ ಪೊಲೀಸ್ ಪೇದೆ ನೀಡಿದ ದೂರಿನ ಆಧಾರದ ಮೇಲೆ ಸೇನಾಧಿಕಾರಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 69 ಮತ್ತು 351 (2) ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದು, ಆತ ಕರ್ತವ್ಯ ನಿರ್ವಹಿಸುತ್ತಿರುವ ಸೇನಾ ಘಟಕಕ್ಕೆ ಅತ್ಯಾಚಾರ ಕುರಿತು ಮಾಹಿತಿ ನೀಡಿದ್ದೇವೆ. ಅವರು ವಿಚಾರಣೆಗೆ ಬಂದರೆ ಒಳ್ಳೆಯದು , ಇಲ್ಲದಿದ್ದರೆ …
Read More »
BigTv News
April 21, 2025
Breaking News
ಅರೇಬಿಯಾದ ಅಲ್-ಬದ್ರ್ ನಿಂದ ಮದೀನಾಗೆ ತೆರಳುತ್ತಿದ್ದ ಉಮ್ರಾ ಯಾತ್ರಿಕರ ಬಸ್ ಅಪಘಾತಕ್ಕಿಡಾಗಿ ಐದು ಪಾಕಿಸ್ತಾನಿ ಯಾತ್ರಿಕರು ಮೃತಪಟ್ಟಿದ್ದಾರೆ.ಮೃತರಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ವೃದ್ಧರು ಸೇರಿದ್ದಾರೆ.ಅನೇಕರು ಗಾಯಗೊಂಡಿದ್ದು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Read More »
BigTv News
April 21, 2025
Breaking News, Crime, ಉತ್ತರ ಪ್ರದೇಶ
ಮದುವೆಗೆ ಬಂದ ಅತಿಥಿಗಳನ್ನು ಕರೆತರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಮೃತರಲ್ಲಿ ನಾರಾಯಣಪುರ ಚಾರ್ಗಾಂವ್ ನಿವಾಸಿಗಳಾದ ಹರೇಂದ್ರ, ಯೋಗೇಂದ್ರ, ಓಂಪ್ರಕಾಶ್, ರಾಜಕಿಶೋರ್, ರಂಜೀತ್ ಮತ್ತು ಮುಖೇಶ್ ಸೇರಿದ್ದಾರೆ. ಗಾಯಗೊಂಡ ರಾಜ್‌ಕಿಶೋರ್ ಹಾಗೂ ಬಜರಂಗಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತರ ಗುರುತು ಪತ್ತೆಹಚ್ಚಿದ್ದು, ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
Read More »
BigTv News
April 21, 2025
Breaking News, Crime
ಹಜೋಂಗ್ ಮತ್ತು ಅವನ ಕುಟುಂಬದ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ನೆರೆಹೊರೆಯವರು ಹೇಳಿದ್ದಾರೆ. ರಾತ್ರಿ ಇಬ್ಬರ ನಡುವೆ ಜಗಳ ಆರಂಭವಾಯಿತು. ಇಬ್ಬರ ನಡುವಿನ ಮಾತುಕತೆ ಹೆಚ್ಚಾಯಿತು. ಕೊನೆಗೆ, ಕೋಪದಿಂದ, ಬಿಟಿಶ್ ಹರಿತವಾದ ಆಯುಧವನ್ನು ತೆಗೆದುಕೊಂಡು ತನ್ನ ಹೆಂಡತಿ ಬೈಜಂತಿಯ ಶಿರಚ್ಛೇದ ಮಾಡಿದನು. ನಂತರ ಅವನು ತನ್ನ ಸೈಕಲ್‌ನ ಬುಟ್ಟಿಯಲ್ಲಿ ತಲೆಯನ್ನು ಇಟ್ಟು ನೇರವಾಗಿ ಪೊಲೀಸ್ ಠಾಣೆಗೆ ಹೋದನು. ಅವನು ತನ್ನ ಅಪರಾಧವನ್ನು ಪೊಲೀಸರಿಗೆ ಒಪ್ಪಿಕೊಂಡು ಶರಣಾದನು. ಪೊಲೀಸರು ಆರೋಪಿಯನ್ನು …
Read More »
BigTv News
April 21, 2025
Breaking News, ಬೀದರ್
ಭಾನುವಾರ ಮಧ್ಯಾಹ್ನ ಐವರು ಸ್ನೇಹಿತರು ಗ್ರಾಮದ ಸಮೀಪದಲ್ಲಿದ್ದ ಬಾವಿಯೊಂದರಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ಈಜು ಬಾರದ ಓರ್ವ ಬಾಲಕ ಬಾವಿಗೆ ಇಳಿದಿದ್ದು, ಆತನನ್ನು ರಕ್ಷಿಸಲು ಹೋದ ಮತ್ತೊಬ್ಬ ಕೂಡ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮುಚಳಂಬ ಗ್ರಾಮದ ಅವಿನಾಶ ಶರಣಪ್ಪ ಮಚಕೂರೆ, ಭಾಲ್ಕಿ ತಾಲೂಕಿನ ಕೋಟಗೇರಾ ಗ್ರಾಮದ ಬಾಗೇಶ ಕಮಲಾಕರ ಮಾನೆ ಮೃತಪಟ್ಟ ಬಾಲಕರು.
Read More »
BigTv News
April 21, 2025
Breaking News, ಚಿಕ್ಕಮಗಳೂರು
ತರೀಕೆರೆಯ ಶಿವಪುರ ರೈಲ್ವೆ ಲೆವೆಲ್ ಕ್ರಾಸಿಂಗ್ ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಟಿಪ್ಪರ್ ಹೊತ್ತಿ ಉರಿದಿದ್ದು, ಬಿಹಾರ ಮೂಲದ ಚಾಲಕ ಬೆಂಕಿ ತಗುಲಿ ಸಾವನ್ನಪ್ಪಿದ್ದಾರೆ.ರೈಲ್ವೆ ಹಳಿಯ ಮೇಲೆ ಟಿಪ್ಪರ್ ನಿಂತ ಕಾರಣ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ನಿಂತಿದ್ದ ರೈಲಿನಲ್ಲಿ ವೃದ್ಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಟಿಪ್ಪರ್ ಗೆ ಬೆಂಕಿ ಹತ್ತಿಕೊಂಡ ಪರಿಣಾಮ ರೈಲು ಸಂಚಾರಕ್ಕಾಗಿ ಅಳವಡಿಸಿದ್ದ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿವೆ. ಇದರಿಂದಾಗಿ ಶಿವಮೊಗ್ಗದಿಂದ ಯಶವಂತಪುರಕ್ಕೆ ತೆರಳುತ್ತಿದ್ದ ಜನ ಶತಾಬ್ದಿ ಮತ್ತು …
Read More »