Breaking News

Breaking News

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ ಸೋಮವಾರ ಸಂಜೆ ನಡೆದಿದೆ. ಹಳೆಯ ತಾಲೂಕು ಹೊಸೂರು ಗ್ರಾಮದ ವಿಠ್ಠಲ್ ಪೋಡೆಕರ್ ಮೃತ ವ್ಯಕ್ತಿ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಎದುರಿಗೆ ಬಂದ ಟೆಂಪು ಡಿಕ್ಕಿ ಹೊಡೆದಿದೆ. ಸ್ಥಳೀಯರು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಅಧಿಕಾರಿ ಸೋಗಿನಲ್ಲಿ 7 ಲಕ್ಷ ರೂ ವಂಚನೆ!!!

ಹುಬ್ಬಳ್ಳಿಯಲ್ಲಿ ಮಹಿಳೆಯೊಬ್ಬರಿಗೆ ಹೂಡಾ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ವಂಚಕರು ಕೂಡ ದಿಂದ ನಗರದಲ್ಲಿ ಸೈಟ್ ಕೊಡಿಸುವುದಾಗಿ ನಂಬಿಸಿ ಏಳು ಲಕ್ಷ ವರ್ಗಾಯಿಸಿ ಕೊಂಡು ವಂಚಿಸಿದ ಪ್ರಕರಣ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕೇಶಾಪುರದ ನಾಗಶೆಟ್ಟಿ ಕೊಪ್ಪದ ನಿವಾಸಿ ಶಿವಾನಿ ಪಾಟೀಲ್ ವಂಚನೆಗೆ ಒಳಗಾದ ಮಹಿಳೆ ಕಡಿಮೆ ಬೆಳಗ್ಗೆ ಫ್ಲಾಟ್ ಕೊಡಿಸುವುದಾಗಿ ಹೇಳಿದ್ದಾರೆ. ಬಳಿಕ ಅಕೌಂಟ್ ಹೆಡ್ ವಿಶ್ವನಾಥ್ ಎಂಬುವರ ಹೆಸರಲ್ಲಿ ಕರೆ ಮಾಡಿ ಹಂತ ಹಂತವಾಗಿ ಹಣ …

Read More »

ಕುಂದಗೋಳ ಕ್ರಾಸ್ ನಲ್ಲಿ ಹಿಟ್ ಅಂಡ್ ರನ್ ಮಹಿಳೆ ಸಾವು.!

ಮಹಿಳೆ ಒಬ್ಬರಿಗೆ ವಾಹನ ಒಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಕುಂದಗೋಳ್ ಕ್ರಾಸ್ ನಲ್ಲಿ ನಡೆದಿದೆ. ಅಪರಿಚಿತ ವಾಹನ ಮಹಿಳೆಗೆ ಡಿಕ್ಕಿ ಹೊಡೆದಿದೆ ಇದರಿಂದ ಮಹಿಳೆ ತಲೆ ಭಾಗ ಚಿದ್ರವಾಗಿದೆ. ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ನಗರದ ಕೆಎಂಸಿಆರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಹುಬ್ಬಳ್ಳಿಯಲ್ಲಿ ಕರ್ತವ್ಯ ಪ್ರಜ್ಞೆ ಮೆರೆದ ಕಾನ್ಸ್ಟೇಬಲ್.

ಮಹಿಳೆ ಬಳಿ ಹಣವಿದ್ದ ಬ್ಯಾಕ್ ಇಟ್ಟುಕೊಂಡು ಪರಾರಿಯಾಗಲು ಯತ್ನಿಸಿದ ಕಳ್ಳನನ್ನು ಸಂಚಾರಿ ಠಾಣೆ ಕಾನ್ಸ್ಟೇಬಲ್ ಬೆನ್ನು ಹತ್ತಿ ಬ್ಯಾಂಕ್ ಕಸೆದುಕೊಂಡು ಕರ್ತವ್ಯ ಪ್ರಜ್ಞೆ ಬರೆದ ಘಟನೆ ನಗರದ ಹಳೆ ಬಸ್ ನಿಲ್ದಾಣ ಬಳಿ ನಡೆದಿದ್ದೆ. ಈ ವೇಳೆ ಕಳ್ಳ ತಪ್ಪಿಸಿಕೊಂಡಿದ್ದಾನೆ. ಬೇಲೂರು ಗ್ರಾಮದ ಮಹಿಳೆಯನ್ನು ಬೆನ್ನತ್ತಿದ ಕಳ್ಳನನ್ನು ಬ್ಯಾಗ್ ಕಸಿದು ಪರಾರಿಯಾಗಿದ್ದ ಗಾಬರಿಗೊಂಡ ಮಹಿಳೆ ಅಲ್ಲೇ ಇದ್ದ ಸಂದರ್ಭ ಬಿ.ಬಿ ನಾಟಿಕಲ್ ಅವರಿಗೆ ತಿಳಿಸಿದರು ಕಳ್ಳನನ್ನು ಬೆನ್ನಟ್ಟಿದ ಪೊಲೀಸ್ ಆತನನಿಂದ …

Read More »

ಮತ್ತೇ ಸದ್ದು ಮಾಡಿದ ಪೊಲೀಸ್ ಗನ್: ರೌಡಿಶೀಟರ್ ಕಾಲಿಗೆ ಫೈರಿಂಗ್..!

ರಿವಾಲ್ವಾರ್ ಸೌಂಡ್ ಡಂಡಂ: ಹುಬ್ಬಳ್ಳಿಯ ರೌಡಿಗಳ ಎದೆಯಲ್ಲಿ ಜುಮ್ಮ..ಜುಮ್ಮ ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸ್ ಗನ್ ಸದ್ದು ಮಾಡಿದೆ. ರೌಡಿ ಶಿಟರ್ ಕಾಲಿಗೆ ಗುಂಡು ಹಾರಿಸಿದ ಘಟನೆ ಆನಂದನಗರದ ಹೊರ ವಲಯದಲ್ಲಿ ನಡೆದಿದೆ.ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್ ಗೆ ಗುಂಡೇಟಿನ ರುಚಿ ತೋರಿಸಲಾಗಿದೆ. ರೌಡಿಶೀಟರ್ ಶಿಟರ್ ಮಲಿಕ್ ಆಧೋನಿ ಕಾಲಿಗೆ ಗುಂಡು ಹಾರಿಸಲಾಗಿದೆ. ಆನಂದನಗರದ ಹೊರವಲಯದಲ್ಲಿ ನಡೆದ ಗ್ಯಾಂಗ್‌ವಾರ್ ಪ್ರಕರಣದ ವಿಚಾರಣೆ ವೇಳೆ ಪೊಲೀಸ್ ಅಧಿಕಾರಿ ಮತ್ತು …

Read More »

ಯತ್ನಾಳ್​ಗೆ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ.

ಉಚ್ಛಾಟನೆ ಬೆನ್ನಲ್ಲೇ ಮತ್ತಷ್ಟು ಆ್ಯಕ್ಟೀವ್ ಆಗಿರುವ ಯತ್ನಾಳ್​ ಎಲ್ಲೆಡೆ ಪ್ರವಾಸ ಕೈಗೊಂಡಿದ್ದಾರೆ. ಅದರಂತೆ ಇಂದು ಉತ್ತರ ಕರ್ನಾಟಕದ ಶಕ್ತಿದೇವಿ ಬೆಳಗಾವಿಯ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಯತ್ನಾಳ್ ಗೆ ಯಡಿಯೂರಪ್ಪ ಅವರು ಯಲ್ಲಮ್ಮನ ದರ್ಶನ ಮಾಡಿಸಿದರು. ಯಡಿಯೂರಪ್ಪ ಅಂದ್ರೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅಲ್ಲ. ದೇವಸ್ಥಾನದ ಅರ್ಚಕ ಯಡಿಯೂರಪ್ಪ ಅವರು ವಿಶೇಷ ಪೂಜೆ ಮಾಡಿ ಯತ್ನಾಳ್​​ಗೆ ಆಶೀರ್ವಾದ ಮಾಡಿದರು.

Read More »

KAA POST:13 ಕೆಎಎಸ್‌ ಅಧಿಕಾರಿಗಳ ವರ್ಗ, ಕುಂದಾಪುರ, ಇಂಡಿಗೆ ಹೊಸ ಎಸಿ ನೇಮಕ.

ಕರ್ನಾಟಕ ಸರ್ಕಾರವು ಹದಿಮೂರು ಮಂದಿ ಕೆಎಎಸ್‌ ಅಧಿಕಾರಿಗಳನ್ನು ವರ್ಗ ಮಾಡಿ ಆದೇಶ ಹೊರಡಿಸಿದೆ. ಇದರಲ್ಲಿ ಇಂಡಿ, ಕುಂದಾಪುರಕ್ಕೆ ಹೊಸ ಎಸಿಗಳನ್ನು ನೇಮಿಸಲಾಗಿದೆ.ಕರ್ನಾಟಕ ಐದನೇ ಹಣಕಾಸು ಆಯೋಗದ ಅಪರ ಕಾರ್ಯದರ್ಶಿಯಾಗಿದ್ದ ಕೆ.ಅನ್ನಪೂರ್ಣ ಅವರನ್ನು ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಕೌಶಲ್ಯಾಭಿವೃದ್ದಿ ಇಲಾಖೆಯ ಸಂಜೀವಿನಿ ಕರ್ನಾಟಕದ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಈ ಹುದ್ದೆಗೆ ಹಿಂದೆ ಐಎಎಸ್‌ ಅಧಿಕಾರಿ ಕೆ.ಎಂ.ಗಾಯತ್ರಿ. ಸ್ಥಳ ನಿರೀಕ್ಷೆಣೆಯಲ್ಲಿದ್ದ ಜಿ.ಡಿ.ಶೇಖರ್‌ ಅವರನ್ನು ರಾಮನಗರ ಜಿಲ್ಲಾ ನಗರಾಭಿವೃದ್ದಿ ಕೋಶದ …

Read More »

ಸಿಗ್ನಲ್ ಜಂಪ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ!!

ಬೈಕ್ ಸವಾರ ಸಿಗ್ನಲ್ ಜಂಪ್ ಮಾಡಲು ಹೋಗಿ ಎದುರಿಗೆ ಬರುತ್ತಿದ್ದ ಟಾಟಾ ಏಸ್‍ಗೆ ಡಿಕ್ಕಿ ಹೊಡೆದಿದ್ದಾನೆ.ಇದರ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಘಟನೆಯಲ್ಲಿ ಬೈಕ್ ನಲ್ಲಿದ್ದ ಹಿಂಬದಿಯ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More »

ಪತಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತ್ನಿ ಆತ್ಮಹತ್ಯೆಗೆ ಶರಣು.!!

ಆತ ಬೇರೆ ಯುವತಿ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ಬಗ್ಗೆ ಅಸ್ಮಾ ಜೊತೆ ಸಾಕಷ್ಟು ಬಾರಿ ಗಲಾಟೆಯಾಗಿದೆ.ಇದರಿಂದ ಬೇಸತ್ತ ಅಸ್ಮಾ ನೇಣಿಗೆ ಶರಣಾಗಿದ್ದಾರೆ. ಆದ್ರೆ ಮಹಿಳೆ ಕುಟುಂಬಸ್ಥರು ಅಸ್ಮಾಳನ್ನು ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಆರೋಪಿಸಿದೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಸದ್ಯ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Read More »

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ನೀಚ ಶಿಕ್ಷಕ!

14 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಕಾಮುಕ ಅತಿಥಿ ಶಿಕ್ಷಕ ಶಿವರಾಜ್ ಅತ್ಯಾಚಾರ ಎಸಗಿದ್ದಾನೆ.ಶಿವರಾಜ್ ಅದೇ ಗ್ರಾಮದ ಶಾಲೆಯಲ್ಲಿ ಹಲವು ದಿನಗಳಿಂದ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ವಿದ್ಯಾರ್ಥಿನಿಯ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡ ನೀಚ ಶಿಕ್ಷಕ ಆಕೆಯ ಮನೆಯನ್ನು ಹೊಕ್ಕು ಅತ್ಯಾಚಾರ ಎಸಗಿದ್ದಾನೆ. ಇದೀಗ ಮಾದನಹಿಪ್ಪರಗಾ ಪೊಲೀಸರು ಶಿವರಾಜ್‌ನನ್ನು ಬಂಧಿಸಿ, ಪೋಕ್ಸೋ ಕೇಸ್‌ ದಾಖಲಿಸಿಕೊಂಡಿದ್ದಾರೆ.

Read More »