Shaikh BigTv
April 7, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ಹಳೆ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಇಬ್ಬರು ಸ್ನೇಹಿತರು ದುಡ್ಡಿನ ವಿಷಯಕ್ಕಾಗಿ ಹೊಡೆದಾಡಿಕೊಂಡಿದ್ದಾರೆ. ಮಾತಿನ ಚಕಮಕಿಯಲ್ಲಿ ಶುರುವಾದ ಜಗಳ ಚಾಕು ಇರಿತಕ್ಕೆ ಕಾರಣವಾಗಿದೆ. ಎಂಬ ಸ್ನೇಹಿತನಿಗೆ ದುಡ್ಡಿನ ವಿಷಯಕ್ಕಾಗಿ ಚಾಕು ಇರಿದ ಸ್ನೇಹಿತ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸರು ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರಕರಣವು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Read More »
BigTv News
April 7, 2025
Breaking News, Crime, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ರೈಲ್ವೇ ಸ್ಟೇಷನ್ ಪಕ್ಕದಲ್ಲಿನ ಬಾರ್ ಎದುರು ಘಟನೆ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಟ ನಡೆದಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದೆ. ಯುವಕರಿಬ್ಬರ ನಡುವೆ ನಡೆದ ಮಾರಾಮಾರಿಯಾಗಿ ಬೆಲ್ಟ್ ನಿಂದ ಕುತ್ತಿಗೆಗೆ ಬಿಗಿದು ಹೊಡೆದಾಡಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ನಡೆದ ಹೊಡೆದಾಟದಿಂದ ಜನರಲ್ಲಿ ಆತಂಕ ಎದುರಾಗಿತ್ತು. ಯುವಕರ ಬಡೆದಾಟದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆ ಯಾಗಿದೆ. ಶಹರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Read More »
BigTv News
April 7, 2025
Breaking News, Crime, ಬೆಂಗಳೂರು
ಬಿಹಾರ ಮೂಲ ನಿವಾಸಿಯಾಗಿದ್ದ ಸಂತ್ರಸ್ತ ಯುವತಿ ಕೇರಳದಲ್ಲಿ ಕೆಲಸ ಮಾಡುತ್ತಿದ್ದಳು; ಆದರೆ ಅವಳಿಗೆ ಆ ಕೆಲಸ ಇಷ್ಟವಿಲ್ಲದ ಕಾರಣ ಬೆಂಗಳೂರಿನಲ್ಲಿ ತನ್ನ ಸಹೋದರನ ಬಳಿ ಹೋಗಲು ನಿರ್ಧರಿಸಿದ್ದಳು. ಕೇರಳದ ಎರ್ನಾಕುಲಂನಿಂದ ರೈಲು ಹತ್ತಿದ್ದ ಯುವತಿ ಈ ಬಗ್ಗೆ ತನ್ನ ಸಹೋದರನಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಳು.ಆರೋಪಿಗಳು ಯುವತಿಯ ಸಹೋದರನನ್ನ ಥಳಿಸಿ ಆತನನ್ನು ಗಾಯಗೊಳಿಸಿದರು ಮತ್ತು ಯುವತಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದರು. ಸಂತ್ರಸ್ತ …
Read More »
BigTv News
April 7, 2025
Breaking News, Crime
ಮಾಜಿ ಗಂಡನ ಸಹೋದರನನ್ನು ಮದುವೆಯಾಗಿದ್ದ ಮಹಿಳೆಯನ್ನು ಮಾಜಿ, ಹಾಲಿ ಗಂಡಂದಿರು ಸೇರಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದಿದೆ. ಸಮಾಧಿ ಮಾಡಿ ಒಂದೂವರೆ ವರ್ಷಗಳ ಬಳಿಕ ಇದೀಗ ಪ್ರಕರಣ ಬೆಳಕಿಗೆ ಬಂದಿದೆ.ಕೊನೆಯಲ್ಲಿ ಆಕೆಯ ಅವಶೇಷಗಳನ್ನು ಪೊಲೀಸರು ಪತ್ತೆ ಮಾಡಿದ್ದರು.ವಿಚಾರಣೆಯ ಸಮಯದಲ್ಲಿ, ಸಹೋದರರು ಆಶಿಫಾಳನ್ನು ಕತ್ತು ಹಿಸುಕಿ ಕೊಲೆ ಮಾಡಿ, ನೈವಾಲಾ-ಹಲ್ಲುಪುರ ರಸ್ತೆಯ ಕಸದ ರಾಶಿಯ ಬಳಿ ಹೂತುಹಾಕಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಪರಾಧಕ್ಕೆ ತಮ್ಮ ಚಿಕ್ಕಮ್ಮ ಸಹಾಯ ಮಾಡಿದ್ದಾರೆ ಎಂದು …
Read More »
BigTv News
April 7, 2025
Breaking News, Crime, ಬೆಂಗಳೂರು
ಬನಂಶಕರಿ 6ನೆ ಹಂತದ ರೆಸ್ಟೋರೆಂಟ್ ಸಮೀಪ ಈ ಯುವಕ ರಾತ್ರಿನಡೆದು ಹೋಗುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಹಾಕಿ ಏಕಾಏಕಿ ಮಾರಾಕಾಸ್ತ್ರಗಳಿಂದ ದಾಳಿ ಮಾಡಿ ತಲೆ, ಕೈ-ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಗಂಭೀರಗಾಯಗೊಂಡು ಈತ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಈ ಯುವಕ ಬಿಳಿ ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಸುದ್ದಿ ತಿಳಿದು ಕೆಂಗೇರಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿ, ಮೃತದೇಹವನ್ನು …
Read More »
BigTv News
April 7, 2025
Breaking News, Crime
ಮಾರ್ಚ್ 29 ರಂದು ತನ್ನನ್ನು ಸ್ನೇಹಿತೆಯೊಬ್ಬಳು ಪಿಶಾಚ್‌ಮೋಚನ್ ಪ್ರದೇಶದ ಹುಕ್ಕಾ ಬಾರ್‌ಗೆ ಕರೆದೊಯ್ದಿದ್ದಳು. ಅಲ್ಲಿ ಆಕೆಯೊಂದಿಗೆ ಇತರ ಪುರುಷರು ಕೂಡಾ ಸೇರಿಕೊಂಡಿದ್ದಾರೆ. ತನಗೆ ಅಮಲು ಪದಾರ್ಥ ಬೆರೆಸಿದ ತಂಪು ಪಾನೀಯವನ್ನು ನೀಡಿ, ನಂತರ ಸಿಗ್ರಾ ಪ್ರದೇಶದ ವಿವಿಧ ಹೋಟೆಲ್‌ಗಳಿಗೆ ಕರೆದೊಯ್ದು, ಅಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಉತ್ತರ ಪ್ರದೇಶ ಪೊಲೀಸರು 23 ಪುರುಷರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ, ಅವರಲ್ಲಿ 11 …
Read More »
BigTv News
April 7, 2025
Breaking News, ರಾಜಕೀಯ ಸುದ್ದಿ
ಏಪ್ರಿಲ್ 5ರಂದು ರಾಷ್ಟ್ರಪತಿಗಳು ಈ ವಕ್ಫ್ ಮಸೂದೆಗೆ ಒಪ್ಪಿಗೆ ನೀಡಿದ್ದು, ರಾಷ್ಟ್ರದಲ್ಲಿ ಹೊಸ ಕಾನೂನು ಜಾರಿಯಾಗಿದೆ.ವಕ್ಫ್ ಬಿಲ್ ಕಾನೂನು ಜಾರಿಯಾದರೆ ಮುಸ್ಲಿಮರಿಗೆ ಅನ್ಯಾಯ ಮಾಡದಂತೆ ಎಂದು ಕಾಂಗ್ರೆಸ್, ಎಎಪಿ, ಇಂಡಿಯಾ ಮೈತ್ರಿಕೂಟದ ನಾಯಕರು ವಿರೋಧಿಸಿದ್ದರು.ವಕ್ಫ್ ಮಂಡಳಿಯಿಂದ ಎಲ್ಲೆಂದರಲ್ಲಿ ಜಮೀನು, ಭೂಮಿ ಕಳಬಳಿಕೆಗೆ ಬ್ರೇಕ್ ಹಾಕಲು, ವಕ್ಫ್ ಬೋರ್ಡ್‌ಗೆ ಇದ್ದ ಪರಮಾಧಿಕಾರ ನಿಯಂತ್ರಿಸಲು ಹಾಗೂ ಮಂಡಳಿಯಲ್ಲಿ ಬಡವರು, ಮಧ್ಯಮ ವರ್ಗದವರಿಗೂ ಅವಕಾಶ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರ ಈ ಹೊಸ ವಕ್ಫ್ …
Read More »
BigTv News
April 7, 2025
Breaking News, ಚಿಕ್ಕಮಗಳೂರು
ಸ್ನೇಹಿತರ ಜೊತೆಗೆ ನದಿಯಲ್ಲೂ ಈಚಲು ತೆರಳಿದ್ದಾಗ ಈ ಒಂದು ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಈಗಾಗಲೇ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನಾಪತ್ತೆಯಾಗಿರುವ ಯುವಕನಿಗಾಗಿ ಇದೀಗ ಶೋಧ ಕಾರ್ಯ ಮುಂದುವರಿದಿದೆ.ತುಂಗಾ ನದಿಯಲ್ಲಿ ಮನೋಜ್ ನಾಪತ್ತೆಯಾಗಿರುವ ಯುವಕ ಎಂದು ತಿಳಿದು ಬಂದಿದೆ.
Read More »
BigTv News
April 7, 2025
Breaking News, Crime, ಮಂಗಳೂರು
ಕನ್ಯಾನದ ಸವಾದ್ ಬೆಂಗಳೂರಿನ ಬಟ್ಟೆ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ರಂಜಾನ್ ಹಬ್ಬಕ್ಕೆಂದು ಊರಿಗೆ ಬಂದಿದ್ದ. ಈ ಸಂದರ್ಭ ವಿಟ್ಲದ ಕಚೇರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿಯನ್ನು ನೋಡಿ ಮರುಳಾಗಿ ಆಕೆಯನ್ನು ಪಟಾಯಿಸಲು ಹೊಂಚು ಹಾಕಿದ್ದಾನೆ. ಗೂಗಲ್ ಪೇ ಮೂಲಕ ಉಪಾಯದಿಂದ ಯುವತಿಯ ನಂಬರ್ ಪಡೆಯಲು ಯತ್ನಿಸಿದ್ದಾನೆ. ಆ ಸಂದರ್ಭದಲ್ಲಿ ಯುವತಿ ತನ್ನ ಕಚೇರಿಯ ಸಹೋದ್ಯೋಗಿಯ ನಂಬರ್ ನೀಡಿ ಆತನನ್ನು ಸಾಗ ಹಾಕಿದ್ದರು. ಆದರೆ, ಅದು ಆ ಯುವತಿಯದ್ದೇ ಫೋನ್ ನಂಬರ್ ಎಂದು …
Read More »
BigTv News
April 7, 2025
Breaking News, Crime, ಮುಂಬೈ
ಬಿಹಾರ ಮೂಲದ ಬಾಲಕಿ ಕ್ಯಾನ್ಸರ್ ಚಿಕಿತ್ಸೆಗೆಂದು ಮಹಾರಾಷ್ಟ್ರಕ್ಕೆ ಬಂದಿದ್ದಳು. ಬಿಹಾರದ ಬಾಲಕಿಯ ಹಳ್ಲಿಯಿಂದಲೇ ಬಂದಿದ್ದ ಆರೋಪಿ ಆಕೆಗೆ ಸಹಾಯ ಮಾಡುವ ನೆಪದಲ್ಲಿ ಬದ್ಲಾಪುರದಲ್ಲಿ ಬಾಲಕಿ ಹಾಗೂ ಕುಟುಂಬ ವಾಸಿಸಲು ಒಂದು ಮನೆಯನ್ನು ಬಾಡಿಗೆ ಪಡೆದಿದ್ದ.ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆಕೆಯ ಮೇಲೆ ಮೂರು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬಾಲಕಿ ಮುಂಬೈ ಆಸ್ಪತ್ರೆಗೆ ದಾಖಲಾಗಿ, ಕಿಮೋ ಥೆರಪಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಬಾಲಕಿ ಗರ್ಭಿಣಿ ಎಂಬುದು ಗೊತ್ತಾಗಿದೆ. ಬಾಲಕಿ ಪೋಷಕರಿಗೆ ಮಾಅಹಿತಿ ನೀಡಲಾಗಿದ್ದು, ಸದ್ಯ …
Read More »