BigTv News
March 28, 2025
Breaking News, Crime, Rajasthan
ಪತ್ನಿಯ ನಡುವೆ ನಡೆದಿರುವ ಜಗಳದಲ್ಲಿ ಗಂಡ ನಾಲಿಗೆಯನ್ನೇ ಕಳೆದುಕೊಳ್ಳಬೇಕಾಗಿ ಬಂದಿದೆ!.ಕೋಪದ ರಭಸದಲ್ಲಿ ಗಂಡನ ಮೇಲೆ ಇಷ್ಟು ವರ್ಷಗಳವರೆಗೆ ಇದ್ದ ಸೇಡನ್ನೆಲ್ಲಾ ಒಟ್ಟಿಗೇ ತೀರಿಸಿಕೊಂಡವಳಂತೆ ಹೆಂಡತಿ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡು ಮಾಡಿ ಹಾಕಿದ್ದಾಳೆ. ದಂಪತಿ ಯಾವುದೋ ವಿಷಯಕ್ಕೆ ಜಗಳವಾಡಿದ್ದರು. ಈ ಜಗಳ ತಾರಕಕ್ಕೇರಿ ಈ ಘಟನೆಯಾಗಿದೆ ಎಂದಿದ್ದಾರೆ. ಸದ್ಯ ಗಂಡನ ನಾಲಿಗೆ ಕಚ್ಚಿದ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Read More »
BigTv News
March 28, 2025
Breaking News, Crime, ಬೆಂಗಳೂರು
ಒಂದು ವರ್ಷದಿಂದ ಬೆಂಗಳೂರಿನ ದೊಡ್ಡ ಕನ್ನಹಳ್ಳಿಯ ಮನೆಯಲ್ಲಿ ವಾಸವಿದ್ದ ಮಹಾರಾಷ್ಟ್ರ ಮೂಲದ ರಾಕೇಶ್ ಹಾಗೂ ಗೌರಿ ಅನಿಲ್ ಸಾಂಬೆಕರ್ ದಂಪತಿಗಳಿಬ್ಬರೂ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ವರ್ಕ್ ಫ್ರಂ ಹೋಂ ಆಯ್ಕೆ ಮಾಡಿಕೊಂಡಿದ್ದ ಇಬ್ಬರೂ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಹುಳಿಮಾವು ಪೊಲೀಸರು ಇವರ ಮನೆಗೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.ಪತ್ನಿಯನ್ನು ಕೊಂದು ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ …
Read More »
BigTv News
March 27, 2025
Breaking News, ಕರ್ನಾಟಕ
ಶ್ರೀಶೈಲ ಅವರ ತಂದೆ, ಅಲ್ಲಿಪುರ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಪ್ಪ ಮಂಗಳವಾರ ತಡರಾತ್ರಿ 11 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದರು.ಯರಗೋಳ ಪರೀಕ್ಷೆ ಕೇಂದ್ರಕ್ಕೆ ಶ್ರೀಶೈಲ ಬುಧವಾರ ತೆರಳಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಮುಗಿದ ನಂತರ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.
Read More »
BigTv News
March 27, 2025
Breaking News, ಬೆಂಗಳೂರು
ನಟ ರಕ್ಷಕ್ ಬುಲೆಟ್ ಇದೀಗ ನಾಡದೇವಿ ಚಾಮುಂಡೇಶ್ವರಿ ತಾಯಿ ಭಕ್ತರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದ ರಕ್ಷಕ್ ಬುಲೆಟ್ ಚಾಮುಂಡೇಶ್ವರಿ ತಾಯಿ ಬಗ್ಗೆ ಆಡಿದ್ದ ಮಾತೊಂದು ವಿವಾದಕ್ಕೆ ಕಾರಣವಾಗಿತ್ತು.ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್’ ಸೀಸನ್ 2ರ ಸ್ಪರ್ಧಿಯಾಗಿರುವ ರಕ್ಷಕ್, ಯುವತಿಯನ್ನು ಇಂಪ್ರೆಸ್ ಮಾಡುವ ವೇಳೆ ಚಾಮುಂಡಿದೇವಿ ಜೀನ್ಸ್ ಹಾಕಿ ಗೋವಾ ಟ್ರಿಪ್ಗೆ ಹೋದಂತಿದೆ ಎಂದೆಲ್ಲ ಮಾತನಾಡಿದ್ದರು. ರಕ್ಷಕ್ ಈ ಹೇಳಿಕೆ ಹಿಂದೂಪರ ಸಂಘಟನೆಗಳು ಮತ್ತು ಚಾಮುಂಡೇಶ್ವರಿ ತಾಯಿ …
Read More »
BigTv News
March 27, 2025
Breaking News, ಕುಂದಾಪುರ
ಅಭಿನಂದನ್ ಬೈಂದೂರಿನ ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಹೋಗಿದ್ದು, ಏತನ್ಮಧ್ಯೆ ಎರಡು ಬಾರಿ ಮನೆಗೆ ಫೋನ್ ಮಾಡಿದ್ದು, ನಂತರ ಮನೆಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.ನಂತರ ತಂದೆ ಮಹಾಬಲೇಶ್ವರ ಅವರು ನಿಟ್ಟೆ ಕಾಲೇಜಿಗೆ ಹೋಗಿ ಮಗನ ಕುರಿತು ವಿಚಾರಿಸಿದಾಗ, ಕಾಲೇಜಿಗೆ ರಜೆ ಹಾಕಿ ತೆರಳಿರುವುದಾಗಿ ತಿಳಿಸಿದ್ದರು. ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಮಗ ಕಾಣೆಯಾಗಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Read More »
BigTv News
March 27, 2025
Breaking News, Crime, ಹುಬ್ಬಳ್ಳಿ-ಧಾರವಾಡ
ಚಾಲಕ ದನದ ಮಾಂಸವನ್ನು ಧಾರವಾಡದ ಟೋಲನಾಕಾದಿಂದ ಆಟೋದಲ್ಲಿ ಜನ್ನತನಗರಕ್ಕೆ ಸಾಗಿಸುತ್ತಿದ್ದ.ಟೋಲನಾಕಾದಲ್ಲಿ ಹೆಸರಿಗೆ ಮಾತ್ರ ಚಿಕನ್ ಸೆಂಟರ್ ಎಂದು ಬೋರ್ಡ್ ಹಾಕಿಕೊಂಡು ಒಳಗಡೆ ದನದ ಮಾಂಸ ಮಾರಾಟ ಮಾಡಲಾಗುತ್ತಿದೆ. ಆ ಚಿಕನ್ ಸೆಂಟರ್ ಮೂಲಕವೇ ದನದ ಮಾಂಸ ಸಾಗಿಸಲಾಗುತ್ತಿತ್ತು ಎಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ. ಅಲ್ಲದೇ ಪಾಲಿಕೆ ಆಯುಕ್ತರು ನಿರ್ಲಕ್ಷ್ಯಕ್ಕೆ ಇದು ಸಾಕ್ಷಿಯಾಗಿದೆ ಎಂದು ದೂರಿದ್ದಾರೆ.ಸದ್ಯ ವಿದ್ಯಾಗಿರಿ ಠಾಣೆ ಪೊಲೀಸರು ಆಟೋ ಚಾಲಕನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ
Read More »
BigTv News
March 27, 2025
Breaking News, ವಿಜಯಪುರ
ಮೊದಲೇ ಈ ಕೆಲಸ ಆಗಬೇಕಿತ್ತು. ಕಳೆದ 10 ವರ್ಷಗಳಿಂದ ಪಕ್ಷವನ್ನು, ನಾಯಕರನ್ನು ಸುಸ್ತು ಮಾಡಿ, ಮುಜುಗರನ್ನು ಈಡುಮಾಡಿದ್ದರು. ಅವರ ಉಚ್ಚಾಟನೆಯಿಂದ ಪಕ್ಷಕ್ಕೆ ಯಾವುದೇ ಹಾನಿಯಾಗದು’ ಎಂದು ಹೇಳಿದರು.ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆಯನ್ನು ಸ್ವಾಗತಿಸಿ, ಅವರ ಸ್ವಕ್ಷೇತ್ರ ವಿಜಯಪುರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ನಗರದ ಶಿವಾಜಿ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಸಿದ್ದೇಶ್ವರ ಗುಡಿ ಸೇರಿದಂತೆ ವಿವಿಧೆಡೆ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಘೋಷಣೆ …
Read More »
BigTv News
March 27, 2025
Breaking News, Crime, ಹಾಸನ
ಹಾಸನ ತಾಲ್ಲೂಕಿನ ಕಂದಲಿ ಗ್ರಾಮದ ಚಂದ್ರಶೇಖರ್ ಅವರು ತಮ್ಮ ಬೈಕ್ ಕಳ್ಳತನವಾಗಿರುವ ಬಗ್ಗೆ ನಗರದ ಬಡಾವಣೆ ಠಾಣೆಯಲ್ಲಿ ದೂರು ನೀಡಿದ್ದರು. ಹಾಸನ ಉಪವಿಭಾಗದ ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ಬಡಾವಣೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಾಘವೇಂದ್ರ ಪ್ರಕಾಶ್, ಸಬ್ ಇನ್‌ಸ್ಪೆಕ್ಟರ್ ಗಿರಿಧರ್ ಹಾಗೂ ತಂಡ, ಮಾರ್ಚ್ 20ರಂದು ಕಾರ್ಯಾಚರಣೆ ನಡೆಸಿದ್ದು, ನಗರದ ಹೊಸ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿ ಗಗನ್ ಎಂಬಾತನನ್ನು ಬಂಧಿಸಿದೆ ಎಂದು ತಿಳಿಸಿದರು.ಒಟ್ಟು 26 ಬೈಕ್‌ಗಳನ್ನು …
Read More »
BigTv News
March 27, 2025
Breaking News, Crime
ಜಗದೀಪ್ ರೋಹ್ಟಕ್‌ನ ಬಾಬಾ ಮಸ್ತ್‌ನಾಥ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕನಾಗಿದ್ದು, ಮೂರು ವರ್ಷಗಳಿಂದ ಜನತಾ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದ್ದು, ಪೊಲೀಸರ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಪ್ರಮುಖ ಆರೋಪಿ ರಾಜ್‌ಕರನ್ , ಜಗದೀಪ್ ಫೋನ್‌ನಲ್ಲಿ ತನ್ನ ಪತ್ನಿಯ ಫೋಟೋ ನೋಡಿದ್ದಾನೆ.ಇದರಿಂದ ಕುಪಿತಗೊಂಡ ರಾಜ್‌ಕರನ್ ಮನಸ್ಸಲ್ಲಿ ತನ್ನ ಪತ್ನಿ ಹಾಗೂ ಜಗದೀಪ್ ಇಬ್ಬರ ಮಧ್ಯೆ ಅನೈತಿಕ ಸಂಬಂಧ ಇದೆ ಎಂಬ ಅನುಮಾನ ಮೂಡಿದೆ. ಈ ಹಿನ್ನಲೆ ರಾಜ್‌ಕರನ್ ಜಗದೀಪ್ ಅನ್ನು ಹತ್ಯೆಗೈಲು ಮುಂದಾಗಿದ್ದು, …
Read More »
BigTv News
March 27, 2025
Breaking News, ಬೀದರ್
ಹೆಚ್ಚಾಗಿ ಮೊಬೈಲ್ ಬಳಕೆ ಮಾಡಬೇಡ ಎಂದು ಆಕೆಯ ತಂದೆ ಸಂತೋಷ್ ಬುದ್ಧಿವಾದ ಹೇಳಿದ್ದರು.ಇದರಿಂದಾಗಿ ಮನನೊಂದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.ಈ ಘಟನೆಗೆ ಸಂಬಂಧಿಸಿದಂತೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »