Breaking News

Breaking News

ತುಮಕೂರು : ಲಾರಿ ಹರಿದು ಐದು ವರ್ಷದ ಬಾಲಕ ಸಾವು.!

ಮನೆಯ ಮುಂದೆ ವರುಣ್ ಆಟವಾಡುತ್ತಿದ್ದ. ಇದೇ ವೇಳೆ ಮಣ್ಣು ತುಂಬಿದ್ದ ಟ್ರ್ಯಾಕ್ಟರ್‌ ಬಂದಿದ್ದು, ಮಗುವಿನ ಮೇಲೆ ಹಾದು ಹೋಗಿದೆ. ಪರಿಣಾಮ ಮಗು ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿಮ್ಮನಹಳ್ಳಿಯಲ್ಲಿ ನಡೆದಿದೆ. ವೈಎನ್ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Read More »

ಬೆಳಗಾವಿ : ಎಸೆಸೆಲ್ಸಿ ಪರೀಕ್ಷೆ ಭಯದಿಂದ ನೇಣಿಗೆ ಶರಣಾದ ವಿದ್ಯಾರ್ಥಿನಿ.

ಬುಧವಾರ ದೀಪಿಕಾ ಎರಡನೇ ವಿಷಯದ ಪರೀಕ್ಷೆ ಬರೆದು ಬಂದಿದ್ದಳು.‌ ಪರೀಕ್ಷೆ ಬರೆದು ಬಂದಿದ್ದ ದೀಪಿಕಾ ಪರೀಕ್ಷೆಯಲ್ಲಿ ನಪಾಸಾಗುವ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಆದರೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಂಜೆ ಕುಟುಂಬಸ್ಥರು ಬಂದಾಗ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ನೋಡಿದವರ ಕರುಳು ಕರಗಿಸುವಂತಿತ್ತು. ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಫಾರೆಸ್ಟ್ ಕಾಲನಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ …

Read More »

ಕ್ರಿಕೆಟ್ ಬೆಟ್ಟಿಂಗ್ ಗೆ ಬಲಿ, ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ.!

ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಚೋಡವರಂ ಮಂಡಲದ ಭೋಗಪುರಂ ಗ್ರಾಮದ ರಮಣ ಮತ್ತು ಕನಕಮ್ಮ ದಂಪತಿ ಮಗ ಸೋಮೇಶ್ ಕುಮಾರ್ ಎಂಬಾತ ಆತ್ಮಹತ್ಯೆ ಮಾಡಿಕೊಮಡ ಯುವಕ ಕೊಂಪಲ್ಲಿ ಬಳಿಯ ಕಂಪನಿಯ ಗೋದಾಮಿನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ಆಯಪ್‌ನಲ್ಲಿ 1 ಲಕ್ಷ ರೂ.ಗಳ ಬೆಟ್ಟಿಂಗ್ ಇಟ್ಟಿದ್ದರು. ದುರದೃಷ್ಟವಶಾತ್, ಡೆಲ್ಲಿ ಪಂದ್ಯವನ್ನು ಗೆದ್ದ ನಂತರ, ಅವರು ರೂ. ರಾತ್ರಿಯಿಡೀ 1 ಲಕ್ಷ ರೂ. ಕಳೆದುಕೊಂಡಿದ್ದ ಬಗ್ಗೆ ಬೇಸರಗೊಂಡಿದ್ದ ಇದರಿಂದ ಬೇಸತ್ತು …

Read More »

ದೆಹಲಿ :ಐದು ವರ್ಷಗಳ ಕಾಲ ನರಳಿದ ನಂತರ ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ ಶಿಕ್ಷಕಿ ಅನ್ವಿತಾ ಶರ್ಮಾ.

ನನ್ನ ಗಂಡನಿಗೆ ಕೆಲಸವೂ ಇದ್ದ ಸುಂದರ, ಶ್ರಮಶೀಲ ಹೆಂಡತಿ ಬೇಕಾಗಿದ್ದಳು. ನಾನು ನನ್ನ ಕೈಲಾದಷ್ಟು ಮಾಡಿದ್ದೇನೆ, ಆದರೆ ಅದು ಎಂದಿಗೂ ಅವರಿಗೆ ತೃಪ್ತಿ ಆಗಲೇ ಇಲ್ಲ. ಅವರು ಅತ್ತೆ-ಮಾವನ ಮೇಲೆ ಮಾತ್ರ ಗಮನಹರಿಸುವ ವ್ಯಕ್ತಿಯನ್ನು ಬಯಸಿದ್ದರು, ಆದರೆ ನನ್ನ ಪೋಷಕರು ಮತ್ತು ಸಹೋದರ ನನಗೆ ಅಷ್ಟೇ ಮುಖ್ಯವಾಗಿದ್ದರು. ಕಳೆದ ಐದು ವರ್ಷಗಳಲ್ಲಿ ನನ್ನ ಪತಿ ಮತ್ತು ಅತ್ತೆ ಕೊಟ್ಟ ನೋವು ಯಾರೂ ಅನುಭವಿಸಿರಲು ಸಾಧ್ಯವಿಲ್ಲ. ನಾನು ಮಾಡಿದ ಎಲ್ಲದರಲ್ಲೂ ಅವರಿಗೆ …

Read More »

ಚಿಕ್ಕಮಂಗಳೂರ್ : ಪ್ಲಾಸ್ಟಿಕ್ ತಿಂದು ಪ್ರಾಣ ಬಿಟ್ಟ ಗೂಳಿ.

ಚಿಕ್ಕಮಂಗಳೂರು ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿ ಸುಮಾರು 25 ಕೆಜಿಗು ಹೆಚ್ಚು ತೂಕದ ಪ್ಲಾಸ್ಟಿಕ್ ಅನ್ನು ತಿಂದ 15 ವರ್ಷದ ಗೂಳಿಯೊಂದು ಮೃತಪಟ್ಟಿದೆ. ಗೂಳಿ ಹೊಟ್ಟೆ ಊದಿ ಮಲಗಿರುವುದನ್ನು ಕಂಡು ಹಲವರು ಚಿಕಿತ್ಸೆಗೆ ಮುಂದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಸರಕಾರಿ ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಗೂಳಿ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್ ಹೊರ ತೆಗೆದರು.

Read More »

ದೆಹಲಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ನೋಟುಗಳು ಪತ್ತೆ.

ನ್ಯಾಯಮೂರ್ತಿ ಯಶ್ವಂತ್ ವರ್ಮಾ ಅವರ ಮನೆ ಸಮೀಪ ಸುಟ್ಟ ಸ್ಥಿತಿಯಲ್ಲಿ ನೋಟುಗಳು ಪತ್ತೆಯಾಗಿದ್ದು ಹೊಸ ತಿರುವನ್ನು ನೀಡಿದೆ. ದೆಹಲಿ ಪಾಲಿಕೆ ಕಾರ್ಮಿಕರು ನ್ಯಾಯಾಂಗ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದ ವೇಳೆ ನ್ಯಾಯಮೂರ್ತಿ ಯಶವಂತ್ ವರ್ಮ ಅವರ ಮನೆ ಸಮೀಪದಲ್ಲಿ 500 ಮುಖಬೆಲೆಯ ಸಾವಿರ ನೋಟುಗಳು ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ನ್ಯಾಯಮೂರ್ತಿ ಮನೆಗೆ ಬೆಂಕಿ ಬಿದ್ದಿದ್ದ ಪ್ರಕರಣದಲ್ಲಿ ಮಾಹಿತಿ ಇಲ್ಲದ ಕಾರ್ಮಿಕರು ಸುಟ್ಟ ನೋಟುಗಳನ್ನು ಕಸದ ಬುಟ್ಟಿಯಲ್ಲಿ ತುಂಬಿಕೊಂಡು ಹೋಗಿದ್ದಾರೆ. …

Read More »

ಯುಗಾದಿ, ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳು.

ಯುಗಾದಿ ಹಾಗೂ ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ ಹಾಗೂ ಚೆನ್ನೈನ ರಾಮಚಂದ್ರನ್ ಸೆಂಟ್ರಲ್ ರೈಲ್ವೆ ನಿಲ್ದಾಣದ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆಗೆ ರೈಲ್ವೆ ಮಂಡಳಿಗೆ ಅನುಮೋದನೆ ನೀಡಲಾಗಿದೆ. ಬೆಂಗಳೂರು,ಚೆನ್ನೈ, ಕಲಬುರಗಿ ಕಾರವಾರಕ್ಕೆ ವಿಶೇಷ ರೈಲುಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.

Read More »

ಎಪ್ರಿ 30ರಂದು ಅಯೋಧ್ಯೆ ರಾಮ ಮಂದಿರಕ್ಕೆ ರಾಮ ದರ್ಬಾರ್ ವಿಗ್ರಹಗಳ ಪ್ರತಿಷ್ಠಾಪನೆ

ಅಯೋಧ್ಯೆಯ ರಾಮಮಂದಿರದ ಮೊದಲನೇ ಮಹಡಿ ಹಂತದ ನಿರ್ಮಾಣ ಅಂತಿಮ ಹಂತದಲ್ಲಿದ್ದು ಅಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗುವ ರಾಮ ದರ್ಬಾರ್ ವಿಗ್ರಹಗಳು ಏಪ್ರಿಲ್ 30 ರಂದು ಅಯೋಧ್ಯೆಗೆ ಪ್ರವೇಶಿಸಲಿವೆ ಎಂದು ರಾಮ ಮಂದಿರದ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ರಾಮಮಂದಿರದಲ್ಲಿ ಆಕರ್ಷಿಕ ಸ್ಥಳವಾಗಿ ರಾಮ್ ದರ್ಬಾರ್ ವಿಗ್ರಹಗಳನ್ನು ಇರಿಸಲಾಗುತ್ತಿದೆ, ಸೀತಾದೇವಿ, ರಾಮ,ಹನುಮಂತ,ಸಹೋದರ ಲಕ್ಷ್ಮಣ,ಭರತ ಮತ್ತು ಶತ್ರುಘ್ನರ ವಿಗ್ರಹಗಳನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ರಾಜಸ್ತಾನಿನ ಮಕ್ರಾನ ಮಾರ್ಬಲ್ ನಿಂದ ವಿಗ್ರಹಗಳನ್ನು ಕೆತ್ತಿಸಲಾಗಿದೆ. …

Read More »

ಹೈವೆಯಲ್ಲಿ ಟಾಟಾ ಏಸ್ ನಡುವೆ ಡಿಕ್ಕಿ ಸ್ಥಳದಲ್ಲೇ ಇಬ್ಬರು ಮೃತ್ಯು.

ಕೊಳ್ಳೇಗಾಲದಲ್ಲಿ ತಿಥಿ ಕಾರ್ಯಕ್ಕೆ ಬಂದು ವಾಪಾಸ್ ಆಗುವಾಗ ಕೆಎಸ್ ಆರ್ ಟಿಸಿ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರ ಸಾವು, ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ‌ ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ ಬಳಿ‌ ನಡೆದಿದೆ. ಪ್ರಕರಣ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More »

ಗುಜರಾತ್:ಸಂಬಂಧಿಕರ ಮನೆಗಳನ್ನು ನೆಲಸಮ ಮಾಡಿದ ಪ್ರಕರಣ.

ವಿವಾಹಿತ ಮಹಿಳೆಯೊಂದಿಗೆ ಪರಾರಿಯಾಗಿದ್ದಾನೆ ಎಂದು ಶಂಕಿಸಿ ವ್ಯಕ್ತಿ ಮತ್ತು ಆತನ ಸಂಬಂಧಿಕರ ಮನೆಗಳನ್ನು ನೆಲಸಮ ಮಾಡಿದ ಪ್ರಕರಣ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ.ವ್ಯಕ್ತಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಬುಲ್ಡೋಜರ್ ಚಾಲಕ ಸೇರಿದಂತೆ ಆರು ಮಂದಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

Read More »