admin
December 28, 2021
Breaking News, ಕರ್ನಾಟಕ, ದೆಹಲಿ, ಬೆಂಗಳೂರು, ರಾಜಕೀಯ ಸುದ್ದಿ, ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಸತತ 10 ವರ್ಷಗಳ ನಂತರ ಉತ್ತರ ಕರ್ನಾಟಕದ ಹೆಬ್ಬಾಗಿಲು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿಗೆ ಸಜ್ಜುಗೊಂಡಿದ್ದು, ಕಮಲ ಪಡೆಯ ನಾಯಕರ ಆಗಮನಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಇಂದು ಮತ್ತು ನಾಳೆ ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ಸಭೆಗೆ ಸಕಲ ಸಿದ್ಧತೆ ನಡೆದಿದ್ದು, ಇಡೀ ನಗರ ಕೇಸರೀಮಯವಾಗಿ ರಾರಾಜಿಸುತ್ತಿದೆ. ಸತತ 10 ವರ್ಷಗಳ ನಂತರ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಲು ಬಿಜೆಪಿ …
Read More »
admin
December 27, 2021
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು- ಬೆಂಗಾವಲು ವಾಹನ ಸಿಬ್ಬಂದಿಯ ಎಡವಟ್ಟಿನಿಂದಾಗಿ ಕೋವಿಡ್ ಮೃತರಿಗೆ ಪರಿಹಾರ ಕಾರ್ಯಕ್ರಮಕ್ಕೆ ತೆರಳಬೇಕಿದ್ದ ಸಿಎಂ ಬೊಮ್ಮಾಯಿ ಅವರು ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂಗೆ ವಿಳಂಬವಾಗಿ ತಲುಪಿದ ಪ್ರಸಂಗ ನಡೆಯಿತು. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿನ ಕಾರ್ಯಕ್ರಮಕ್ಕೆ ಹೋಗುವಾಗ ದಾರಿ ತಪ್ಪಿದ ಮುಖ್ಯಮಂತ್ರಿಗಳ ವಾಹನವು ಸುತ್ತು ಹಾಕಿಕೊಂಡು ತೆರಳಿತು. ಬೆಂಗಾವಲು ವಾಹನ ಸಿಬ್ಬಂದಿ ಮುಖ್ಯಮಂತ್ರಿಗಳು ತೆರಳಬೇಕಾದ ಮಾರ್ಗ ನಕ್ಷೆಯಲ್ಲಿ ಗೊಂದಲ ಮಾಡಿಕೊಂಡಿರುವುದು ಈ ಗೊಂದಲಕ್ಕೆ ಕಾರಣವಾಗಿದೆ. ಕಾಪೆರ್ರೇಷನ್ ಸರ್ಕಲ್‍ನಿಂದ ಬಸವನಗುಡಿಗೆ ಬರಬೇಕಿದ್ದ …
Read More »
admin
December 27, 2021
Breaking News, ಕರ್ನಾಟಕ, ಬೆಂಗಳೂರು, ರಾಜಕೀಯ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಇಂದು ಪರಿಹಾರ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಜನ ಬಸ್‍ಗಳ ಮೂಲಕ ಗುಂಪು, ಗುಂಪಾಗಿ ಆಗಮಿಸಿದ್ದು, ಕೊರೊನಾ ನಿಯಮವನ್ನು ಉಲ್ಲಂಘನೆ ಮಾಡಲಾಗಿದೆ. ಬಸವಗುಡಿ ಮೈದಾನದಲ್ಲಿ ಇಂದು ಬೆಳಗ್ಗೆ 11:30ಕ್ಕೆ ಸರ್ಕಾರ ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ನೂರಾರು ಮಂದಿ ಬಸ್ ಏರಿ ಬಂದಿದ್ದರು. ಅಲ್ಲದೇ ಈ ವೇಳೆ ಎಲ್ಲರೂ ಮಾಸ್ಕ್ …
Read More »
admin
December 27, 2021
Breaking News, ಕರ್ನಾಟಕ, ದೆಹಲಿ, ದೇಶ-ವಿದೇಶ, ಬೆಂಗಳೂರು, ರಾಜಕೀಯ ಸುದ್ದಿ, ಸುದ್ದಿ
ನವದೆಹಲಿ:ಜನತಾ ದಳ (ಯುನೈಟೆಡ್) ನ ರಾಜ್ಯಸಭಾ ಸಂಸದ ಮತ್ತು ಕೈಗಾರಿಕೋದ್ಯಮಿ ಮಹೇಂದ್ರ ಪ್ರಸಾದ್ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 81 ವರ್ಷದ ಪ್ರಸಾದ್ ಭಾನುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಸಂಸತ್ತಿನ ಶ್ರೀಮಂತ ಸದಸ್ಯರಲ್ಲಿ ಒಬ್ಬರು ಎಂದು ಅಂದಾಜಿಸಲಾಗಿದೆ. ಬಿಹಾರದಿಂದ ಏಳು ಬಾರಿ ರಾಜ್ಯಸಭಾ ಸಂಸದರಾಗಿದ್ದರು ಮತ್ತು ಒಮ್ಮೆ ಲೋಕಸಭೆಗೆ ಚುನಾಯಿತರಾಗಿದ್ದರು.ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. …
Read More »
admin
December 27, 2021
Breaking News, ಕರ್ನಾಟಕ, ಚಿಕ್ಕಮಗಳೂರು, ಬೆಂಗಳೂರು, ರಾಜಕೀಯ ಸುದ್ದಿ
ಚಿಕ್ಕಮಗಳೂರು: ರಾಜ್ಯ ಸರ್ಕಾರ ನಾಳೆಯಿಂದ ಜಾರಿಗೊಳಿಸುತ್ತಿರುವಂತ ನೈಟ್ ಕರ್ಪ್ಯೂ ಆದೇಶದ ಬಗ್ಗೆ ಹೋಟೆಲ್ ಮಾಲೀಕರು, ಚಿತ್ರಮಂದಿರದ ಮಾಲೀಕರು ಸೇರಿದಂತೆ ಅನೇಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಇತ್ತ ಬಿಜೆಪಿ ಸರ್ಕಾರದ ಈ ಆದೇಶ ವಿರುದ್ಧವೇ ಸ್ವಪಕ್ಷೀಯ ನಾಯಕ ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ಓಮಿಕ್ರಾನ್ ವೈರಸ್ ಬಗ್ಗೆ ಭಯಪಡಬೇಡಿ ಎಂಬುದಾಗಿ ವಿಜ್ಞಾನಿಗಳೇ ತಿಳಿಸಿದ್ದಾರೆ. ಅಲ್ಲದೇ ಮೂಗು …
Read More »
admin
December 27, 2021
Breaking News, ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಒಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ನಾಳೆಯಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ಡಿಸೆಂಬರ್ 28ರ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದ್ದು, ಕರ್ಫ್ಯೂ ಸಂದರ್ಭದಲ್ಲಿ ಯಾರೂ ಹೊರಗಡೆ ಅನಗತ್ಯವಾಗಿ ಓಡಾಟ ನಡೆಸುವಂತಿಲ್ಲ. ಎಲ್ಲೆಡೆ ನಾಕಾಬಂದಿ ಹಾಕಿ ನಿರ್ಬಂಧ ವಿಧಿಸಲಾಗುತ್ತಿದೆ ಎಂದರು. ಬಸ್, ಕ್ಯಾಬ್ ಸೇವೆ ಇರಲಿದೆ. …
Read More »
admin
December 27, 2021
Breaking News, ಕರ್ನಾಟಕ, ಬೆಂಗಳೂರು, ವಿಶೇಷ ಸುದ್ದಿ, ಸಿನಿಮಾ
ಬೆಂಗಳೂರು: ಚಂದನವನದ ಸಿಂಪಲ್ ಬ್ಯೂಟಿ ಶ್ವೇತಾ ಶ್ರೀವಾತ್ಸವ್ ಕ್ರಿಸ್‍ಮಸ್ ದಿನ ಬಹಳ ಅರ್ಥ ಪೂರ್ಣವಾಗಿ ಕಳೆದಿದ್ದು, ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಶ್ವೇತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ಅವರು ಮಾಡುವ ವರ್ಕೌಟ್ ಮತ್ತು ದಿನನಿತ್ಯದ ವಿಶೇಷ ಭಾಗವನ್ನು ಫೋಟೋ ಅಥವಾ ವೀಡಿಯೋ ಮೂಲಕ ಅಭಿಮಾನಿಗಳಿಗೆ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ಇಂದು ಅವರು ವಿಶೇಷ ವೀಡಿಯೋವನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದು, ಕ್ರಿಸ್ಮಸ್ ಸಮಯವನ್ನು ನಾನು ಚೆನ್ನಾಗಿ ಕಳೆದಿದ್ದೇನೆ. ಈ …
Read More »
admin
December 27, 2021
Breaking News, ಕರ್ನಾಟಕ, ದೆಹಲಿ, ದೇಶ-ವಿದೇಶ, ಬೆಂಗಳೂರು, ರಾಜಕೀಯ ಸುದ್ದಿ
ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದರೆ, ಆಲ್‌ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಹಿಂದೂಗಳ ಜನಿವಾರವನ್ನು ಧರಿಸುತ್ತಾರೆ ಎಂದು ಯುಪಿಯ ಪಂಚಾಯತ್‌ರಾಜ್ ಸಚಿವ ಭೂಪೇಂದ್ರ ಸಿಂಗ್ ಚೌಧರಿ ಹೇಳಿದ್ದಾರೆ. ಚೌಧರಿ ಅವರು ಶಾಮ್ಲಿಯಲ್ಲಿ ನಡೆದ ಯುವಜನರ ಸಮಾವೇಶದಲ್ಲಿ ಯೋಗಿ ಆದಿತ್ಯನಾಥನ್ ಮತ್ತೆ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್ ಓವೈಸಿ ಜನಿವಾರ ಧರಿಸುತ್ತಾರೆ ಮತ್ತು ಭಗವಾನ್ ರಾಮನ ಹೆಸರನ್ನು ಜಪಿಸುತ್ತಾರೆ ಎಂದಿದ್ದಾರೆ.ಬಿಜೆಪಿಯ ಸಿದ್ಧಾಂತವನ್ನು ಬಲಪಡಿಸುವ ಮಧ್ಯೆ, …
Read More »
admin
December 27, 2021
Breaking News, ಕರ್ನಾಟಕ, ದೆಹಲಿ, ದೇಶ-ವಿದೇಶ, ಬೆಂಗಳೂರು, ರಾಜಕೀಯ ಸುದ್ದಿ
ಕಾಬೂಲ್: ಅಫ್ಗಾನಿಸ್ತಾನದಲ್ಲಿ ಅಧಿಕಾರದಲ್ಲಿರುವ ತಾಲಿಬಾನ್ ಸರ್ಕಾರವು, ಅಲ್ಲಿನ ಚುನಾವಣಾ ಆಯೋಗಗಳು ಹಾಗೂ ಶಾಂತಿ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯವನ್ನು ವಿಸರ್ಜಿಸಿದೆ. ದೇಶದ ಸ್ವತಂತ್ರ ಚುನಾವಣಾ ಆಯೋಗ, ಚುನಾವಣಾ ದೂರು ಆಯೋಗ ಹಾಗೂ ಶಾಂತಿ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯವನ್ನು ವಿಸರ್ಜಿಸಲಾಗಿದೆ ಎಂದು ಸರ್ಕಾರದ ಉಪ ವಕ್ತಾರ ಬಿಲಾಲ್ ಕರೀಮಿ ತಿಳಿಸಿದ್ದಾರೆ. ‘ಅಫ್ಗಾನಿಸ್ತಾನದ ಸದ್ಯದ ಸನ್ನಿವೇಶಕ್ಕೆ ಅವು ಅನಗತ್ಯ ಸಂಸ್ಥೆಗಳಾಗಿವೆ’ ಎಂದು ಹೇಳಿರುವ ಕರೀಮಿ, ಭವಿಷ್ಯದಲ್ಲಿ ಅವುಗಳ ಅಗತ್ಯವಿದೆ ಎನಿಸಿದರೆ, ತಾಲಿಬಾನ್ ಸರ್ಕಾರ …
Read More »
admin
December 27, 2021
Breaking News, ಕರ್ನಾಟಕ, ದೆಹಲಿ, ದೇಶ-ವಿದೇಶ, ಬೆಂಗಳೂರು, ರಾಜಕೀಯ ಸುದ್ದಿ, ಸುದ್ದಿ
ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ತಮ್ಮ ಮಗಳ ನಿಶ್ಚತಾರ್ಥದ ಫೋಟೋವನ್ನು ಡಿಸೆಂಬರ್ 25ರಂದು ಇನ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಪುತ್ರಿ ಶಾನೆಲ್ಲೆ ಇರಾನಿ ನಿಶ್ಚಿತಾರ್ಥಕ್ಕೆ ಶುಭಕೋರಿದ್ದಾರೆ. ಸ್ಮೃತಿ ಇರಾನಿ ಹಂಚಿಕೊಂಡಿರುವ ಮೊದಲ ಫೋಟೋದಲ್ಲಿ ಶಾನೆಲ್ಲೆಗೆ ಅರ್ಜುನ್ ಮೊಣ ಕಾಲಿನ ಮೇಲೆ ಕುಳಿತು ಪ್ರೀತಿಯ ನಿವೇದನೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಎರಡನೇ ಚಿತ್ರದಲ್ಲಿ ಅರ್ಜುನ್ ಭಲ್ಲಾ ಮತ್ತು ಶಾನೆಲ್ಲೆ ನಿಶ್ಚಿತಾರ್ಥದ ಬಳಿಕ ತೆಗೆದುಕೊಂಡಿರುವ ಸೆಲ್ಫಿ ಫೋಟೋ ಕಾಣಬಹುದಾಗಿದೆ. ಫೋಟೋ ಶೇರ್ ಮಾಡುವುದರೊಂದಿಗೆ …
Read More »