Breaking News

ಕರ್ನಾಟಕ

ಯಡಿಯೂರಪ್ಪ ಅವರಿಗೆ ಶುಭಕೋರಿ ವಿಶೇಷ ಪೂಜೆ

ಮಂಡ್ಯ: ನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಮಂಡ್ಯ ಜಿಲ್ಲೆಯ ಹೆಮ್ಮೆಯ ಪುತ್ರ ಮಂಡ್ಯ ಜಿಲ್ಲೆ ಪಟ್ಟಣದ ಬೂಕನಕೆರೆ ಗ್ರಾಮದ ಬಿ.ಎಸ್.ಯಡಿಯೂರಪ್ಪನವರಿಗೆ ಶುಭಕೋರಿ ಶ್ರೀ ಭೂವರಹಾನಾಥಸ್ವಾಮಿಗೆ 58 ವಿವಿಧ ಬಗೆಯ ವಿಶೇಷ ಹೂವುಗಳಿಂದ ಪುಷ್ಪಾಭಿಷೇಕ ಮಾಡಲಾಯಿತು. ‌ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಮಂಡ್ಯ ಜಿಲ್ಲೆ ಮಂಡ್ಯ ವರಹನಾಥಕಲ್ಲಹಳ್ಳಿಯ ಶ್ರೀ ಭೂದೇವಿ ಸಮೇತನಾದ ಭೂವರಹಾನಾಥಸ್ವಾಮಿಗೆ ರೇವತಿ ವಿಶೇಷಪೂಜೆ, ಪುಷ್ಪಾಭಿಷೇಕದ ನೆರವೇರಿಸಲಾಯಿತು. 58ಬಗೆಯ ವಿವಿಧ ಪುಷ್ಪಗಳು, ಹಾಲು, ಎಳನೀರಿನ ಅಭಿಷೇಕವನ್ನು ಭಕ್ತರು ಕಣ್ತುಂಬಿಕೊಂಡರು. ಲೋಕಕಲ್ಯಾಣವಾಗಲಿ, ನೂತನವಾಗಿ …

Read More »

ಇಂದಿನ ದಿನ ಭವಿಷ್ಯ

ಮೇಷ:ನಿಮ್ಮ ನಿಜವಾದ ಮೌಲ್ಯವೇನೆಂದು ನೀವು ಪ್ರದರ್ಶಿಸಲು ಇಂದು ಸೂಕ್ತವಾದ ದಿನದಂತೆ ಕಾಣುತ್ತದೆ. ಕೆಲಸದ ವಿಷಯದಲ್ಲಿ, ಮಹತ್ತರ ಪ್ರಸ್ತಾವನೆಗಳು ಮತ್ತು ಸೃಜನಶೀಲ ಆಲೋಚೆಗಳಿಂದ ನೀವು ಅತ್ಯಂತ ಉತ್ಸುಕರಾಗಿರುತ್ತೀರಿ. ವಿಷಯಗಳು ಸರಾಗವಾಗಿ ಮುನ್ನಡೆಯದ ತಾತ್ಕಾಲಿಕ ಹಂತವಿರಬಹುದು, ಆದರೆ ಅದರಿಂದ ನೀವು ಭರವಸೆ ಕಳೆದುಕೊಳ್ಳಬೇಕೆಂದು ಅರ್ಥವಲ್ಲ. ನಿಮ್ಮ ಜೀವನದಲ್ಲಿ ಪ್ರವೇಶಿಸುವ ಋಣಾತ್ಮಕತೆಯನ್ನು ಹೊರದೂಡುವಲ್ಲಿ ನೀವು ಯಶಸ್ವಿಯಾದರೆ ನಿರಾಶೆ ಶಾಶ್ವತ ಅತಿಥಿಯಲ್ಲ.ವೃಷಭ:ಇಂದು ನಿಮ್ಮ ಹಣೆಬರಹ ಏನು ತರುತ್ತದೋ ಅದಕ್ಕೆ ನೀವು ಶರಣಾಗಬೇಕಾದ ದಿನವಾಗಬಹುದು. ಹಾಗೆ ಮಾಡುವಲ್ಲಿ, …

Read More »

ಪ್ರಯಾಣಿಕರಿಂದ ದಿಡೀರ ಪ್ರತಿಭಟನೆ

ಬೆಳಗಾವಿ: ಬೈಲಹೊಂಗಲಕ್ಕೆ ೨ ಗಂಟೆಗಳಿಂದ ಬಸ್ ಬಿಡದೇ ಇರುವದನ್ನು ವಿರೋಧಿಸಿ ಆ ಭಾಗದ ಪ್ರಯಾಣಿಕರು ದಿಡೀರಣೆ ಪ್ರತಿಭಟನೆಗೀಳಿದು ರಸ್ತೆ ತಡೆ ನಡೆಸಿದರು. ಸುಮಾರು ಅರ್ಧ ಘಂಟೆಗೂ ಅಧಿಕ ಡಿಪೋದಿಂದ ಹೊರಗಡೆ ಯಾವದೇ ಬಸ್ಗಳು ಹೊರಹೋಗದಂತೆ ತಡೆ ಹಿಡಿದರು. ನಂತರ ಡಿಪೋ ಅಧಿಕಾರಿಗಳು ಹಾಗೂ ಪೋಲಿಸ್ ಸಿಬ್ಬಂದಿ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಬಸ್ಸಿನ ವ್ಯವಸ್ಥೆ ಮಾಡಿದಾಗ ಪ್ರತಿಭಟನೆಯ ನ್ನು ಹಿಂದಕ್ಕೆ ಪಡೆದರು. ಕಳೆದ ಒಂದು ವಾರದಿಂದ ರಾತ್ರಿ ೭ ಗಂಟೆಯಿಂದ ೯.೩೦ರವರೆಗೆ …

Read More »

ಶಾಲಾ ಬಸ್ ಪಲ್ಟಿ 14 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಚಿತ್ರದುರ್ಗ: ಶಾಲಾ ಬಸ್ ಪಲ್ಟಿಯಾಗಿ 14 ವಿದ್ಯಾರ್ಥಿಗಳಿಗೆ ಗಾಯಗೊಂಡು ನಾಲ್ವರ ಸ್ಥಿತಿ ಗಂಭೀರವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸ ದುರ್ಗ ತಾಲ್ಲೂಕಿನ ಬಾಗೂರೂ ಗ್ರಾಮದ ಬಳಿ ನಡೆದಿದೆ. ವಿದ್ಯಾವಾಹಿನಿ ಶಾಲೆಯ ವಿದ್ಯಾರ್ಥಿಗಳಿದ್ದ ಬಸನ ಆಕ್ಸಲ್ ಬ್ಲೇಡ್ ತುಂಡಾಗಿ ಘಟನೆಸಂಭವಿಸಿತು . ಬಸ್ಸಿನಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು,ಬಾಗೂರು,ಹೊಸಕುಂದೂರು,ಆನಿವಾಳ ಸೇರಿದಂತೆ ವಿವಿದ ಗ್ರಾಮಗಳ ವಿದ್ಯಾರ್ಥಿಗಳು ಇದ್ದರು. ಗಾಯಾಳುಗಳನ್ನು ವಿದ್ಯಾರ್ಥಿಗಳು ಹೊಸದುರ್ಗ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಾಳು ವಿದ್ಯಾರ್ಥಿಗಳು ಶಿವಮೊಗ್ಗ ಆಸ್ಪತ್ರೆಗೆ …

Read More »

ಗಣಿತ , ವಿಜ್ಞಾನ ವಿಷಯ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ

ಮಂಡ್ಯ: ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಪಟ್ಟಣದ ಆಶೀರ್ವಾದ ಪ್ರೌಢಶಾಲೆಯ ಆವರಣದಲ್ಲಿ ತಾಲ್ಲೂಕಿನ ಪ್ರೌಢಶಾಲೆಯ ಗಣಿತ ಮತ್ತು ವಿಜ್ಞಾನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.ವಿಜ್ಞಾನ ಮತ್ತು ಗಣಿತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಎನ್.ಟಿ.ಎಸ್.ಇ ಮತ್ತು ಎನ್.ಎಂ.ಎಂ.ಎಸ್ ಕಾರ್ಯಾಗಾರದಲ್ಲಿ ಗಣಿತ-ವಿಜ್ಞಾನ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ತರಬೇತಿ ಸಂಸ್ಥೆ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ NTSE ಮತ್ತು …

Read More »

ವಿಕಲಚೇತನರಿಗೆ ಸೌಲಭ್ಯಗಳನ್ನು ಒದಗಿಸುವಂತೆ ಕನ್ನಡ ಸೇನೆ ಆಗ್ರಹ

ಬಳ್ಳಾರಿ: ತಾಲೂಕಿನ ಬಹುತೇಕ ವಿಕಲಚೇತನರು ಸೌಲಭ್ಯಗಳಿಂದ ವಂಚಿತರಾಗಿದ್ದು.ಇದಕ್ಕೆ ಸಂಬಂಧಿಸಿದ ಇಲಾಖಾಧಿಕಾರಿಗಳ ನಿಲ೯ಕ್ಷ್ಯ ಕಾರಣವಾಗಿದ್ದು ಅವರ ವಿರುದ್ಧ ಸಂಬಂಧಿಸಿದ ಉನ್ನತಾಧಿಕಾರಿಗಳಲ್ಲಿ ದೂರು ಸಲ್ಲಿಸಲಾಗುವುದೆಂದು ಕನ್ನಡ ಸೇನೆ ರಾಜ್ಯ ಉಪಾಧ್ಯಕ್ಷ ಎಲ್.ಎಸ್.ಬಷೀರ್ ಅಹಮ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಮಟ್ಟದ ಇಲಾಖಾಧಿಕಾರಿಗಳು ಪರಿಶೀಲಿಸಿ ಶೀಘ೯ವೇ ವಿಕಲ ಚೇತನರಿಗೆ ಸೌಲಭಂಯಗಳನ್ನು ಸಮಪ೯ಕವಾಗಿ ಒದಗಿಸಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.ಅವರು ತಮ್ಮಲ್ಲಿಗೆ ನೆರವು ಕೋರಿಬಂದಿದ್ದ ಕೂಡ್ಲಿಗಿ ತಾಲೂಕಿನ ನಿಂಬಳ ಗೇರೆ ಗ್ರಾಮದ ವಿಕಲ ಚೇತನ ಇಸ್ಮಾಯಿಲ್ ರನ್ನೇ ನಿದಶ೯ನವನ್ನಾಗಿಸಿ ಮಾತನಾಡಿ ತಾಲೂಕಿನ …

Read More »

ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೈತ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣು

ಮಂಡ್ಯ: ಜಿಲ್ಲೆಯ ಬಂಡಬೋಯಿನಹಳ್ಳಿ ಗ್ರಾಮದಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೈತನೊಬ್ಬ ಗ್ರಾಮದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ರಾಮದ ಮೊಗಣ್ಣಗೌಡ ಅವರ ಪುತ್ರ ರಾಜಣ್ಣ(49)ಮೃತ ದುರ್ದೈವಿಯಾಗಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿನ್ನೆ ರಾತ್ರಿ 10ಗಂಟೆ ಸಮಯದಲ್ಲಿ ಗ್ರಾಮದ ಕಪಿಲೆಬಾವಿಗೆ ಬಿದ್ದುದನ್ನು ಗಮನಿಸಿದ ಪತ್ನಿ ಸವಿತ ಕೂಡಲೇ ಅಗ್ನಿಶಾಮಕ ಠಾಣೆಗೆ ವಿಚಾರ ಮುಟ್ಟಿಸಿದರು. 50 ಅಡಿಗಳಷ್ಟು ಆಳವಿರುವ ಬಾವಿಯಿಂದ ರಾಜಣ್ಣ ಅವರ ದೇಹವನ್ನು …

Read More »

ಶ್ರೀರಾಮುಲು ಮುಂದಿನ ಡಿಸಿಎಂ ಮಾಡಲು ಅಭಿಮಾನಿಗಳ ಒತ್ತಾಯ

ಚಿತ್ರದುರ್ಗ: ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಕುಂಟುತ್ತಾ ಆಡಳಿತ ನಡೆಸಿದ್ದ ದೋಸ್ತಿ ಸರ್ಕಾರ ಪತನವಾಗುತ್ತಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಈಗಾಗಲೇ ಪೈಪೋಟಿ ಶುರುವಾಗಿದೆ.‌ ಇದರ ಬೆನ್ನಲ್ಲೇ ಬಿಜೆಪಿ ಪಕ್ಷದ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಮುಂದಿನ ಡಿಸಿಎಂ ಎಂದು ಬಿಂಬಿಸುವ ಫೋಸ್ಟ್ ನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಾಟ್ಸಪ್ ಪೇಸ್ ಬುಕ್ ನಲ್ಲಿ ಶ್ರೀರಾಮುಲು ಡಿಸಿಎಂ ಮಾಡಬೇಕು. ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಿ ಎಂದು ಅಭಿಮಾನಿಗಳು ಒತ್ತಾಯಪಡಿಸುತ್ತಿದ್ದಾರೆ. …

Read More »

ಪೋಲೀಸ್ ಪೇದೆ ದುಗ್ಗೇಶ ಅವರಿಗೆ ಒಲಿದ ಚಿನ್ನದ ಪದಕ

ದಾವಣಗೆರೆ : ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ೬೨ ನೇ ರಾಷ್ಟ್ರ ಮಟ್ಟದ ಪೋಲಿಸ್ ಕರ್ತವ್ಯ ಕ್ರೀಡಾಕೂಟದಲ್ಲಿ ಪೋಲಿಸ್ ಫೋಟೋಗ್ರಫಿ ವಿಭಾಗದಲ್ಲಿ ದಾವಣಗೆರೆ ಪೋಲಿಸ್ ಪೇದೆ ದುಗ್ಗೇಶ್ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿಉತ್ತರಪ್ರದೇಶ ಡಿಜಿಪಿ ಒ.ಪಿ.ಸಿಂಗ್ ರಿಂದ ದುಗ್ಗೇಶ್ ಅವರು ಪ್ರಶಸ್ತಿ ಸ್ವೀಕರಿಸಿದರು.

Read More »

ಅತ್ಯಾಚಾರ ಪ್ರಕರಣ ಪ್ರೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಉಪ್ಪಿನಂಗಡಿಯಲ್ಲಿ ನಡೆದ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆಐವರ ಬಂಧಿಸಲಾಗಿದೆ. 5 ಮಂದಿಯನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರುಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.ಚಂದ್ರಾಕ್ಷ, ಸಂದೀಪ್ ಕುಮಾರ್, ಹರ್ಷ ಯಾನೆ ರವಿ, ಲವ ಕುಮಾರ್ ಯಾನೆ ಲವ ಹಾಗೂ ಲಕ್ಷ್ಮೀಶ ಯಾನೆ ಚರಣ್ ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬಂಧಿಸಿ ಚಂದ್ರಾಕ್ಷ ಎಂಬಾತನ ಮೇಲೆ ಬಾಲಕಿಯ ಅಪಹರಣ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದರೆ, ಉಳಿದ ಆರೋಪಿಗಳ ಮೇಲೆ ಪೋಕ್ಸೊ ಪ್ರಕರಣ …

Read More »