admin
September 12, 2019
ಕರ್ನಾಟಕ, ಸುದ್ದಿ
ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರು ಮಧ್ಯೆ ಭೀಕರ ಅಪಘಾತ ಸಂಭವಿಸಿ ಮೂವರು ಮೃತಪಟ್ಟ ಘಟನೆ ದಕ್ಷಿಣ ಕನ್ನಡದ ಸುಳ್ಯದಲ್ಲಿ ನಡೆದಿದೆ.ಕಾರಿನಲ್ಲಿದ್ದ ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಕೋಲೂರು ಮುದುಗೆರೆ ನಿವಾಸಿ ಮಂಜುಳಾ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟರು. ಇನ್ನು ಗಂಭೀರ ಗಾಯಗೊಂಡಿದ್ದ ಸೋಮಣ್ಣ ಮತ್ತು ನಾಗೇಂದ್ರ ಎಂಬುವವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುಳ್ಯ ಸಮೀಪದ ಅರಂಬೂರು ಬಳಿ ರಿಕ್ಷಾವನ್ನು ಹಿಂದಿಕ್ಕುವ ಯತ್ನದಲ್ಲಿದ್ದ ಕಾರು ಹಾಗೂ ಬಸ್ಸು ಢಿಕ್ಕಿಯಾಗಿದೆ. ಮಂಗಳೂರಿನಿಂದ ಮಡಿಕೇರಿ …
Read More »
admin
September 12, 2019
ಕರ್ನಾಟಕ, ಸುದ್ದಿ
ಆನೇಕಲ್: ಯುವಕನೊಬ್ಬ ಮೊಬೈಲ್ ನಲ್ಲಿ ಮಾತನಾಡುವಾಗ ಮೊಬೈಲ್ ಸ್ಪೋಟಗೊಂಡು ಯುವಕ ಗಾಯಗೊಂಡಿರುವ ಘಟನೆ ಆನೇಕಲ್ ಗಡಿಗೆ ಹೊಂದಿಕೊಂಡಿರುವ ಕುರುಬರಪಲ್ಲಿ ಸಮೀಪ ನಡೆದಿದೆ. ಆರ್ಮುಗ ಗಾಯಾಗೊಂಡ ಯುವಕ. ಸಂಬಂದಿ ಮನೆಗೆ ಹೋಗುವಾಗ ಅಡ್ರೆಸ್ ತಿಳಿಯಲು ಕಾಲ್ ಮಾಡಿ ಮಾತಾಡುವಾಗ ವಿವೋ ಕಂಪನಿ ಮೊಬೈಲ್ ಸ್ಪೋಟಗೊಂಡಿದೆ. ಸ್ಥಳೀಯರು ಯುವಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಗಳೂರು: ರಾಜ್ಯದ ಸಮ್ಮಿಶ್ರ ಸರಕಾರದ ಭವಿಷ್ಯ ತೂಗುಯ್ಯಲೆಯಲ್ಲಿದೆ .ಈ ಮದ್ಯೆ ಸಚಿವ ಎಚ್ ಡಿ ರೇವಣ್ಣನವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೆಂಪಲ್ ರನ್ ಆರಂಭಿಸಿದ್ದಾರೆ .ಇಂದು ರಾತ್ರಿ ಕಟೀಲ್ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಧರ್ಮಸ್ಥಳ ದಲ್ಲಿ ಮಂಜುನಾಥ ಸ್ವಾಮಿ ದರ್ಶನ ಪಡೆದಿದ್ದಾರೆ.ಕಟೀಲ್ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಡಳಿತ ಮಂಡಳಿ ಪರವಾಗಿ ಕಟೀಲ್ ಅನಂತ್ ಅಸ್ರಣ್ಣ ಹಾಗೂ ಹರಿ ನಾರಾಯಣ ಅಸ್ರಣ್ಣ ಸ್ವಾಗತಿಸಿದರು .ಸರಕಾರದ ಉಳಿವಿಗಾಗಿ ಎಚ್ ಡಿ ರೇವಣ್ಣ ಉಡುಪಿ ಹಾಗೂ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜಿಲ್ಲೆ ಕುಪ್ಪಹಳ್ಳಿ ಗ್ರಾಮದಲ್ಲಿಂದು ಶ್ರೀರಾಮತಾರಕ ಹೋಮ ಯಶಸ್ವಿಯಾಗಿ ನಡೆಯಿತು. ಸೀತಾರಾಮಕಲ್ಯಾಣ, ಶ್ರೀ ರಾಮೋತ್ಸವ, ಶ್ರೀರಾಮತಾರಕ ಹೋಮ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ನಡೆದವು…ಶ್ರೀ ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ಕೆ.ಪ್ರಕಾಶ್ ಮಾತನಾಡಿ ದಾನಿಗಳು ಹಾಗೂ ಗ್ರಾಮಸ್ಥರ ನೆರವಿನಿಂದ 65ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತವಾದ ಶ್ರೀ ರಾಮಮಂದಿರವನ್ನು ನಿರ್ಮಿಸಿದ್ದೇವೆ. ನಾಲ್ಕು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲು ಸಹಕರಿಸಿದ ಗ್ರಾಮಸ್ಥರಿಗೆ ಧನ್ಯವಾದಗಳನ್ನು ಅರ್ಪಿಸಿದರುಕಾರ್ಯಕ್ರಮದಲ್ಲಿ ಮುಖ್ಯ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ನವದೆಹಲಿಯಲ್ಲಿ ನಡೆಯುತ್ತಿರುವ ಕೃಷಿ ಸಂಶೋಧನಾ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ ಮಂಡ್ಯ ಪಟ್ಟಣದ ರೈತವಿಜ್ಞಾನಿ ರೋಬೋ ಮಂಜೇಗೌಡ ಅವರಿಗೆ ಇಂದು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ನವದೆಹಲಿಯಲ್ಲಿ ಜುಲೈ17, 18,ಮತ್ತು 19ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ಕೃಷಿ ಸಂಶೋಧಕರ ಸಮ್ಮೇಳನದಲ್ಲಿ ಭಾಗವಹಿಸಲು ಕೃಷ್ಣರಾಜಪೇಟೆ ತಾಲ್ಲೂಕಿನಿಂದ ಹೊರಡುತ್ತಿರುವ ರೈತ ವಿಜ್ಞಾನಿ ರೋಬೋ ಮಂಜೇಗೌಡರನ್ನು ಹಿತೈಷಿಗಳು ಮತ್ತು ಪ್ರಗತಿಪರ ಸಂಘ ಸಂಸ್ಥೆಗಳ ಮುಖಂಡರು ಅಭಿನಂದಿಸಿ ಆತ್ಮೀಯವಾಗಿ ಬೀಳ್ಕೊಟ್ಟರು… ಮೂರು ದಿನಗಳ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಕಳೆದ ಕೆಲ ದಿನಗಳಿಂದ ರಾಜಕೀಯದಲ್ಲಿ ರಾಜೀನಾಮೆಯ ಹೈಡ್ರಾಮಾ ನಡೆದ ಹಿನ್ನೆಲೆಯಲ್ಲಿಮಂಡ್ಯ ಜಿಲ್ಲೆ ಶಾಸಕ ನಾರಾಯಣಗೌಡರ ವಿರುದ್ಧ ನಾರಾಯಣಗೌಡರ ಅಣಕು ಶವಯಾತ್ರೆ ನಡೆಸಿ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.ನಾರಾಯಣಗೌಡ ಅವರ ಪ್ರತಿಕೃತಿ ಸುಟ್ಟು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು .ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಮುಖಂಡ ಬಸ್ ಕೃಷ್ಣೇಗೌಡ, ಜಿ.ಪಂ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಬಿ.ಎಲ್.ದೇವರಾಜು, ಎಪಿಎಂಸಿ ಅಧ್ಯಕ್ಷ ನಾಗರಾಜೇಗೌಡ, ಎಂ.ಪಿ.ಲೋಕೇಶ್, ಅಂಬಿಗರಹಳ್ಳಿ ಶಿವರಾಮು, ಪುರಸಭೆಯ ಸದಸ್ಯ ಸಂತೋಷ್ ಕುಮಾರ್ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕೋಡಿ; ವಿದ್ಯುತ್ ತಂತಿ ತಗುಲಿ ರೈತ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಆಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಮುರಾರಿ ಬನ್ನೆ 60 ಮೃತ ದುರ್ದೈವಿ ರೈತ.ಜಮೀನಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಸಾವು ಸಂಭವಿಸಿದೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜಿಲ್ಲೆಯ ಅಕ್ಕಿಹೆಬ್ಬಾಳು ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಮಹಿಳಾ ನಾಯಕರಾದ ಜಯಮ್ಮ(72) ನಿವೃತ್ತ ಎಂಜಿನಿಯರ್ ನಂಜೇಗೌಡರ ಧರ್ಮಪತ್ನಿ ಅನಾರೋಗ್ಯದಿಂದ ನಿಧನರಾದರು. ಮೃತರ ನಿಧನಕ್ಕೆ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ಕೆಯುಐಡಿಎಫ್ ಸಿ ಮಾಜಿಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಎ.ಜೆ.ದಿವಾಕರ್, ರಾಮಸ್ವಾಮಿ, ಬಿ.ನಾಗೇಂದ್ರಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ:ಸಾಸ್ವೆಹಳ್ಳಿ ಏತ ನೀರಾವರಿ 2ನೇ ಹಂತ ಅನುಮೋದನೆಗೆ ಒತ್ತಾಯಿಸಿ ಚಿತ್ರದುರ್ಗದಲ್ಲಿಂದು ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಹೊಳಲ್ಕೆರೆ, ಚಿತ್ರದುರ್ಗ ತಾಲೂಕಿನ ನೂರಾರು ರೈತರು ಕನಕ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡರು. ನಗರದ ಗಾಂಧಿ ವೃತ್ತದಲ್ಲಿ ನೀರಿಗಾಗಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸುವ ಮೂಲಕ ಸರ್ಕಾರದ ವಿರುದ್ದ ರೈತರು ಆಕ್ರೋಶ ಹೊರಹಾಕಿದರು.
Read More »
admin
September 12, 2019
ಕರ್ನಾಟಕ, ಸುದ್ದಿ
ಕೋಲಾರ: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ಕಳ್ಳತನ ಹೆಚ್ಚಾಗಿದ್ದು, ಒಂದು ತಿಂಗಳಿನಿಂದ ನಡೆಯುತ್ತಿರುವ ಸರಣಿ ಕಳ್ಳತನದಿಂದ ನಗರದ ಜನರು ಬೆಚ್ಚಿ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ನಿವಾರ ರಾತ್ರಿ ಮತ್ತೆ ನಾಲ್ಕು ಮನೆಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಚೋರರು ನಗರದ ಕಾರಂಜಿಕಟ್ಟೆ ಮತ್ತು ಮುನೇಶ್ವರ ನಗರದ ಶಿಕ್ಷಕ ಸತೀಶ್, ವಕೀಲ ಶ್ರೀನಿವಾಸ್, ಚಾಲಕ ಹನುಮೇಶ್, ಸೌಮ್ಯ ಬಾರ್ ಮಾಲೀಕ ಗೋವರ್ಧನ ಎಂಬುವವರ ಮನೆಗಳನ್ನು ಟಾರ್ಗೆಟ್ ಮಾಡಿ ಮನೆಗಳ ಬಾಗಿಲನ್ನು ಮೀಟಿ …
Read More »