Breaking News

ಕರ್ನಾಟಕ

ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ ಜಾಗೃತಿ ಜಾಥಾ.

ಮಂಡ್ಯ: ಆಡಳಿತ, ಪ್ರಗತಿ ಪ್ರೌಢಶಾಲೆ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿಂದುಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕೆ.ಅರ್.ಪೇಟೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆಯ ಅಂಗವಾಗಿ ಜಾಗೃತಿ ಜಾಥಾ ನಡೆಯಿತು.ತಹಶಿಲ್ದಾರ ಎಂ. ಶಿವಮೂರ್ತಿ ಹಸಿರು ನಿಶಾನೆಯ ಬಾವುಟವನ್ನು ಪ್ರದರ್ಶಿಸುವ ಮೂಲಕ ಜಾಥಕ್ಕೆ ಚಾಲನೆ ನೀಡಿದರು, ಬಳಿಕ ಮಾತನಾಡಿದ ಅವರು, 2020ಕ್ಕೆ ನಮ್ಮ ಕರ್ನಾಟಕ ರಾಜ್ಯವನ್ನು ಮಲೇರಿಯಾ ರೋಗದಿಂದ ಮುಕ್ತಗೊಳಿಸುವ ಗುರಿಯನ್ನು ಹೊಂದಲಾಗಿದೆ. 2018ನೇ ಸಾಲಿನಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಒಂದೇ ಒಂದು ಮಲೇರಿಯಾ ಪ್ರಕರಣವು ಕೂಡಾ …

Read More »

ಪ್ರಭಾವಿ ನಾಯಕರ ಪಾಲಾಗುತ್ತಿರುವ ಬಡವರ ಆಶ್ರಯ ಮನೆಗಳು.

ಬೆಳಗಾವಿ: ರಾಜ್ಯದಲ್ಲಿ ವಸತಿ ರಹಿತ ಕುಟುಂಬಗಳಿಗೆ ಸೇರಬೇಕಾದ ಆಶ್ರಯ ಮನೆಗಳು ಪ್ರಭಾವಿ ನಾಯಕರ ಪಾಲಾಗುತ್ತಿವೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪಾ ಗಡಾದ ಆರೋಪಿಸಿದ್ದಾರೆ.ರಾಜ್ಯದಲ್ಲಿ ಬಡತನ ರೇಖೆಗಳಿಗಿಂತ ಕೆಳಗಿರುವ ವಸತಿ ರಹಿತ ಕುಟುಂಬಗಳಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಸ್ಥಾಪನೆ ಮಾಡಿದ ರಾಜೀವ ಗಾಂಧಿ ವಸತಿ ನಿಗಮದಿಂದ 2000 ದಿಂದ 2001 ಹಾಗೂ 2017-18ರವಗೆ 39,34,517ಮನೆಗಳು ಹಂಚಿಕೆಯಾಗಿವೆ. ಸರಕಾರದ ಬೊಕ್ಕಸದಿಂದ 21682 ಕೋಟಿ 89 ಲಕ್ಷ 90ಸಾವಿರ ರೂಗಳು ವೆಚ್ಚವಾಗಿರುವುದು ಮಾಹಿತಿ …

Read More »

ಅಮಾಯಕರನ್ನು ಬಲಿ ಪಡೆದ ಭೀಕರ ರಸ್ತೆ ಅಪಘಾತ

ಚಿಕ್ಕಬಳ್ಳಾಪುರ: ಬಸ್ ಮತ್ತು ಟಾಟಾ ಮ್ಯಾಜಿಕ್ ನಡುವೆ ಭೀಕರ ಅಪಘಾತ ನಡೆದು ಟಾಟಾ ಮ್ಯಾಜಿಕ್ ನಲ್ಲಿದ್ದ ಹನ್ನೆರಡು ಜನರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಬಾರ್ಲಹಳ್ಳಿ ಗೇಟ್ ಬಳಿ ನಡೆದಿದೆ. ‌ಎಸ್ ಕೆ ಎಸ್ ಬಸ್ ಮುರಗಮಲ್ಲ ದಿಂದ ಚಿಂತಾಮಣಿಗೆ ಹೊಗುತ್ತಿದ್ದ ವೇಳೆ ಘಟನೆ ನಡೆದಿದ್ದು,ಅಪಘಾತದಲ್ಲಿ ಹನ್ನೆರಡು ಜನರ ದಾರುಣ ಸಾವನ್ನಪ್ಪಿದ್ದಾರೆ. ಎಂಟು ಜನ ಗಂಡಸರು ಹಾಗೂ ನಾಲ್ಕು ಜನ ಹೆಂಗಸರು ಸೇರಿದಂತೆ ಹನ್ನೆರಡು ಜನ ಮಾರಣಹೋಮ …

Read More »

ಮಲೇರಿಯಾ ವಿರೋಧಿ ಮಾಸಾಚರಣೆ

ಮಂಡ್ಯ : ಜಿಲ್ಲೆಯ ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿಂದು ಮಲೇರಿಯಾ ವಿರೋಧಿ ಮಾಸಾಚರಣೆಯ ಅಂಗವಾಗಿ ಆರೋಗ್ಯ, ಆಶಾ ಕಾರ್ಯಕರ್ತೆಯರಿಗೆ ಮಲೇರಿಯ ರೋಗ ನಿಯಂತ್ರಣದ ಬಗ್ಗೆ ಮಾಹಿತಿ ಹಾಗೂ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು. ‌ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್ ಮಾತನಾಡಿ ಅನಾಫಿಲೀಸ್ ಎಂಬ ಸೊಳ್ಳೆಯು ಕಚ್ಚುವುದರಿಂದ ಮಲೇರಿಯಾ ರೋಗವು ಹರಡುತ್ತದೆ. ತಾಲ್ಲೂಕನ್ನು ಮಲೇರಿಯಾ ರೋಗದಿಂದ ಮುಕ್ತಗೊಳಿಸಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಸಹಾಯಕ …

Read More »

ಪ್ರೀತಿಸಿದ ತಪ್ಪಿಗೆ ಕೊಲೆಯಾದ ಪ್ರೇಮಿ.

ರಾಮನಗರ: ಮಗಳನ್ನು ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಪ್ರಕರಣನಡು ರಸ್ತೆಯಲ್ಲಿ ಯುವಕನಿಗೆ ಥಳಿಸುತ್ತಿರುವ ವೀಡಿಯೋ ವೈರಲ್ ಆಗಿದೆ.ನಿನ್ನೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ರಸ್ತೆಯ ಆನೆಹಳ್ಳ ಬಳಿ ಘಟನೆ ನಡೆದಿತ್ತು ಮಾನಗಲ್ ನಿವಾಸಿ ರವಿ ಎಂಬಾತನನ್ನ ಕೊಚ್ಚಿ ಕೊಲೆ ಮಾಡಲಾಗಿದೆ.ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಾನಗಲ್ ಗ್ರಾಮದ‌ ನಿವಾಸಿ ಕೊಲೆಯಾದ ರವಿ ತನ್ನ ಹತ್ತಿರದ ಸಂಬಂಧಿಯನ್ನೇ ಪ್ರೀತಿಸುತ್ತಿದ್ದಪ್ರೀತಿಗೆ ಹುಡುಗಿ ಮನೆಯವರ ವಿರೋಧವಿತ್ತುಬುದ್ದಿ ಮಾತು ಹೇಳದೆ ಹೀನಾಯವಾಗಿ ಕೊಚ್ಚಿ ಕೊಲೆ‌ ಮಾಡಲಾಗಿತ್ತುಈ ಸಂಬಂದ ಮಾಗಡಿ …

Read More »

ಎಸಿಬಿ ಬಲೆಗೆ ಬಿದ್ದ ಕೆಜಿಎಫ್ ಗ್ರಾಮಲೆಕ್ಕಾಧಿಕಾರಿ.

ಕೋಲಾರ: ಗ್ರಾಮ ಲೆಕ್ಕಾಧಿಕಾರಿಯೊಬ್ಬ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೆಜಿಎಫ್ ನಗರದ ಭೂಮಿ ಕೇಂದ್ರದ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಬಲೆಗೆ ಬಿದ್ದ ನೌಕರ. ಕೋಡಿಗೇಪಲ್ಲಿಯ ಹಸನ್ ಬಳಿ ಖಾತ ಬದಲಾಯಿಸಲು 5 ಸಾವಿರ ರುಪಾಯಿ ಲಂಚ ಪಡೆವಾಗ ಹಣದ ಸಹಿತ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

Read More »

ರಮೇಶ ಜಾರಕಿಹೊಳಿ ರಾಜೀನಾಮೆಯಲ್ಲಿ ಬಿಜೆಪಿ ಹಸ್ತಕ್ಷೇಪವಿಲ್ಲ.‌

ಬೆಳಗಾವಿ: ರಮೇಶ ಜಾರಕಿಹೊಳಿ ರಾಜೀನಾಮೆಯಲ್ಲಿ ಬಿಜೆಪಿಯ ಇನ್ವಾಲ್ವಮೆಂಟ್ ಎನೂ ಇಲ್ಲ. ಆದರೆ ಅವರು ಬಿಜೆಪಿಗೆ ಬಂದರೆ ನನ್ನ ಸಪೋರ್ಟ ಇದೆ ಎಂದು ಅರೆಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆನಂದ್ ಸಿಂಗ್ ರಾಜೀನಾಮೆ ಕುರಿತು ನಾನು ಮಾಧ್ಯಮಗಳಿಂದ ತಿಳಿದೆ ಜಿಂದಾಲ್ ವಿಷಯಕ್ಕೆ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ ಎಂದರು.ಇನ್ನು ರಮೇಶ ಜಾಕಿಹೊಳಿ ರಾಜೀನಾಮೆ ಕುರಿತು ಮಾತನಾಡಿ, ಅವರು ನನ್ನ ಸಂಪರ್ಕದಲ್ಲಿಲ್ಲ ರಾಜೀನಾಮೆ ಕಾರಣದ …

Read More »

ಅತ್ಯಾಚಾರ ಪ್ರಕರಣ ಕಿರುತೆರೆ ನಟ ಅಂದರ್.

ಚಿಕ್ಕಬಳ್ಳಾಪುರ: ಮದುವೆಯಾಗುವದಾಗಿ ನಂಬಿಸಿ ಅತ್ಯಾಚಾರ ಎಸಗಿರುವದಾಗಿ ಕಿರುತೆರೆ ನಟನ ಮೇಲೆ ಕಿರುತೆರೆ ನಟಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.ಮೈಸೂರು ಮೂಲದ ಕಿರುತೆರೆ ನಟ ತೇಜಸ್ ಅಭಿಷೇಕ್ (27) ಮೇಲೆ ಕಿರಿತೆರೆ ನಟಿ ಐಶ್ವರ್ಯ ‌ ನಾಯರ (25) ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದಾರೆ.2012 ರಲ್ಲಿ ಪಿಜಿಯಲ್ಲಿದ್ದಾಗ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಹಲವಾರು ಬಾರಿ ತನ್ನ ಅತ್ಯಾಚಾರ ಮಾಡಿರುವುದಾಗಿ ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.‌376 ಅಡಿಯಲ್ಲಿ ರೇಪ್‌ ಕೇಸ್ …

Read More »

ಬೃಹತ್ ಗಾತ್ರದ ಮೊಸಳೆ‌ ಸೆರೆ ಹಿಡಿದ ಗ್ರಾಮಸ್ಥರು.

ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ದರ್ಗಾ ಬಳಿ ಆಹಾರ ಅರಸಿ ನದಿ ತೋಟದ ವಸತಿಗೆ ನುಗ್ಗಿದ ಬೃಹತ್ ಮೊಸಳೆಯನ್ನುಸೆರೆ ಹಿಡಿಯುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.ಬೃಹತ್ ಗಾತ್ರದ ೭ ಅಡಿ ಉದ್ದದ ಮೊಸಳೆಯು ಇತ್ತೀಚೆಗೆ ಕಂಡು ಬಂದಿದ್ದು, ಆಹಾರ ಅರಸಿ ಕೆಲ‌ ದಿನಗಳ ಹಿಂದೆಯೇ ಮೊಸಳೆ ಹೊರ ಬಂದಿರುವ ಶಂಕೆ ವ್ಯಕ್ತವಾಗಿದೆ.‌ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಅರಣ್ಯ ಇಲಾಖೆಯ ಸಹಾಯವಿಲ್ಲದೆ ತಾವೇ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ …

Read More »

ಬೀದಿ ನಾಯಿ ದಾಳಿಯಿಂದ ಅಸುನೀಗಿದ ಕುರಿಗಳು.

ಕೋಲಾರ: ಬೀದಿ ನಾಯಿಗಳು ಕುರಿ ದೊಡ್ಡಿಯ ಮೇಲೆ ದಾಳಿ ಮಾಡಿರುವ ಘಟನೆ ಕೋಲಾರದ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ. ‌ ಗ್ರಾಮದ ರೈತ ಮಹಿಳೆ ರುಕ್ಮಿಣಮ್ಮ ಎಂಬುವವರಿಗೆ ಸೇರಿದ ಐದು ಕುರಿಗಳು ನಾಯಿಗಳ ದಾಳಿಯಿಂದಾಗಿ‌ ಅಸುನೀಗಿವೆ. ಕಳೆದ ಒಂದು ತಿಂಗಳಿಂದ ೪ ಪ್ರತ್ಯೇಕ ಪ್ರಕರಣಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ೨೫ ಕುರಿಗಳು ಸಾವನ್ನಪ್ಪಿವೆ.‌ ಸೂಕ್ತ ಪರಿಹಾರ ನೀಡಿ ಹಾಗೂ ನಾಯಿಗಳನ್ನು ಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ.

Read More »