Breaking News

ಕರ್ನಾಟಕ

ಲಾರಿ-ಬೊಲೆರೋ ಅಪಘಾತದಲ್ಲಿ ಐವರು ಸಾವು, ಇಬ್ಬರಿಗೆ ಗಂಭೀರ ಗಾಯ

ವಿಜಯಪುರ: ಬಬಲೇಶ್ವರದ ಹೊನಗನಹಳ್ಳಿ ಹೊರವಲಯದಲ್ಲಿ ಸಂಭವಿಸಿದ ಅಪಘಾತದಲ್ಲಿ ಐವರು ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಕಳೆದ ತಡರಾತ್ರಿ ನಡೆದಿದೆ.ಏಳು ಮಂದಿ ದಿನಗೂಲಿ ನೌಕರರನ್ನು ಹೊತ್ತು ಸಾಗುತ್ತಿದ್ದ ಬೊಲೆರೋ ಪಿಕ್ಅಪ್ ವಾಹನ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ. ಲಾರಿ ಚಾಲಕ ಮತ್ತು ಕ್ಲೀನರ್ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಎಲ್ಲಾ ಏಳು ಮಂದಿ ದಿನಗೂಲಿ ನೌಕರರು ಪುಣೆಗೆ ಸೇರಿದವರಾಗಿದ್ದಾರೆ.ಇವರು ವಿಜಯಪುರ ಮತ್ತು ಬಾಗಲಕೋಟೆ ಮಧ್ಯೆ ರಾಷ್ಟ್ರೀಯ …

Read More »

ಸಕ್ಕರೆ ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷರಿಗೆ ಕನ್ನಡದಲ್ಲಿ ಮಾತಾಡಿ ಎಂದು ಎಚ್ಚರಿಸಿದ ಸಿಎಂ..

ಬೆಂಗಳೂರು: ಕಬ್ಬು ಬೆಳೆಗಾರರ ತೀವ್ರ ಪ್ರತಿಭಟನೆ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸುತ್ತಿದ್ದ ವೇಳೆ ಕನ್ನಡ ಭಾಷೆ ಮೇಲಿನ ಪ್ರೀತಿ ತೋರಿಸಿ ಗಮನ ಸೆಳೆದರು.ಕಳೆದ ಎರಡು ದಿನಗಳಿಂದ ಕಬ್ಬು ಬೆಳೆಗಾರರ ತೀವ್ರ ಆಕ್ರೋಶಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಗುರಿಯಾಗಿದ್ದರು. ಈ ಹಿನ್ನಲೆಯಲ್ಲಿ ನಿನ್ನೆ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜತೆ ಸಭೆ ನಡೆಸಿದರು. ಸಭೆ ವೇಳೆ ಸಕ್ಕರೆ ಕಾರ್ಖಾನೆ ಮಾಲಿಕರ ಸಂಘದ ಅಧ್ಯಕ್ಷ ವಿಜಯ್​ ರೆಡ್ಡಿಯವರನ್ನು ರೈತರಿಗೆ ಕೊಡಲು ಎಷ್ಟು …

Read More »

ಕಬ್ಬು ಬೆಳೆಗಾರರಿಗೆ ಕೋಟಿ ಕೋಟಿ ಹಣ ನೀಡಬೇಕಿರುವ 26 ಸಕ್ಕರೆ ಕಾರ್ಖಾನೆಗಳು ಇವೇ!

ಬೆಳಗಾವಿ: ಕಬ್ಬು ಬೆಳೆಗಾರರ ಬಾಕಿ ಹಣವನ್ನು ಸಕ್ಕರೆ ಕಾರ್ಖಾನೆಗಳು ನೀಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಮೂರು ದಿನಗಳಿಂದ ಕಬ್ಬು ಬೆಳೆಗಾರರು ತೀವ್ರ ಹೋರಾಟ ನಡೆಸಿದ್ದಾರೆ. ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ಪಡೆದುಕೊಂಡು ಬೆಳಗಾವಿಯಿಂದ ಬೆಂಗಳೂರಿನ ಫ್ರೀಡಂಫಾರ್ಕ್​​​ವರಗೆ ರೈತರು ಹೋರಾಟ ನಡೆಸಿ, ಕಬ್ಬು ಬೆಳೆ ಬಾಕಿ ಹಣ ವಾಪಸ್ಸು ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.ಇನ್ನ, ರೈತರಿಗೆ ಯಾವ ಯಾವ ಸಕ್ಕರೆ ಕಾರ್ಖಾನೆಯಿಂದ ಎಷ್ಟು ಹಣ ಬಾಕಿ ಇದೆ. ಕಾರ್ಖಾನೆ ಯಾರಿಗೆ ಸೇರಿದ್ದು …

Read More »

ಟೆಲಿಕಾಂ ಟವರ್‌ ಅಳವಡಿಕೆಗೆ ಇನ್ಮುಂದೆ ಹೊಸ ನಿಯಮ ಅನ್ವಯ-ಡಿಸಿಎಂ ಡಾ.ಜಿ. ಪರಮೇಶ್ವರ್ ..

ಬೆಂಗಳೂರು: ರಾಜ್ಯಾದ್ಯಂತ ಹಾಕಿರುವ ಎಲ್ಲ ಬಗೆಯ ಟವರ್‌ಗಳಿಗೆ ಆಯಾ ಕಂಪನಿಗಳು ಮೂರು ತಿಂಗಳೊಳಗಾಗಿ ಲೈಸನ್ಸ್‌ ಪಡೆಯುವುದು ಕಡ್ಡಾಯ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.ಮೊಬೈಲ್‌‌ ಟವರ್ ಅಳವಡಿಕೆ ಸಂಬಂಧ ಸೋಮವಾರ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಇನ್ಸಾಲೇಷನ್‌ ಆಫ್ ನ್ಯೂ ಟೆಲಿ ಕಮ್ಯುನಿಕೇಷನ್ ಇನ್‌ಫ್ರಾಸ್ಟ್ರಕ್ಚರ್ ಕಾಯಿದೆಗೆ‌ ಹೊಸದಾಗಿ ಕೆಲ‌ ನಿಯಮಗಳನ್ನು ಅಳವಡಿಸಲಾಗಿದೆ.‌ ಇದುವರೆಗೂ ಟವರ್‌ ಅಳವಡಿಕೆಗೆ ಯಾವುದೇ ರೀತಿಯ ನಿಯಮವಾಗಲಿ ಲೈಸನ್ಸ್‌ ಆಗಲಿ …

Read More »

ಕೆಪಿಎಸ್​ಸಿ ನೇಮಕಾತಿ ಗೊಂದಲಕ್ಕೆ ತೆರೆ ಎಳೆದ ಸರ್ಕಾರ..

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್​ಸಿ) ನೇಮಕಾತಿ ಮೀಸಲಾತಿ ಕುರಿತ ಗೊಂದಲಕ್ಕೆ ತೆರೆ ಎಳೆದಿರುವ ಸರ್ಕಾರ ಹಳೇ ನಿಯಮವನ್ನೇ ಅಂದರೆ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು ಮೆರಿಟ್ ಆಧಾರದಲ್ಲಿ ಸಾಮಾನ್ಯ ವರ್ಗದಡಿ ಪ್ರವೇಶ ಪಡೆಯಲು ಇರುವ ಅವಕಾಶವನ್ನು ಮುಂದುವರಿಸಲು ನಿರ್ಧರಿಸಿದೆ.ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸೋಮವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಕೆಪಿಎಸ್‌ಸಿ ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ ಕುರಿತು ಪ್ರಸ್ತಾಪವಾದ ವಿಷಯ ತೀವ್ರ …

Read More »

ಗೌರಿಹತ್ಯೆ ಪ್ರಕರಣದ 2ನೇ ಮಧ್ಯಂತರ ಚಾರ್ಜ್‌ಶೀಟ್ ರೆಡಿ..

ಬೆಂಗಳೂರು: ವಿಚಾರವಾದಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ನ್ಯಾಯಾಲಯ 2 ನೇ ಮಧ್ಯಂತರ ಚಾರ್ಜ್‌ಶೀಟ್‌ ಸಲ್ಲಿಸಲು ಮುಂದಾಗಿದೆ. ಚಾರ್ಜ್‌ಶೀಟ್‌ ಸಲ್ಲಿಸಲು ನ್ಯಾಯಾಲಯದಿಂದ ಎಸ್‌ಐಟಿ 180 ದಿನ ಗಡುವು ತೆಗೆದುಕೊಂಡಿತ್ತು. ಸದ್ಯ ಚಾರ್ಜ್​ಶೀಟ್​ ರೆಡಿ ಮಾಡುತ್ತಿರುವ ಎಸ್​ಐಟಿ ಇದೇ ತಿಂಗಳ 27 ನೇ ತಾರೀಖಿನ ಒಳಗೆ ಚಾರ್ಜ್‌ಶೀಟ್ ಸಲ್ಲಿಸಲಿದೆ. 16 ಆರೋಪಿಗಳ ವಿರುದ್ಧ ಬರೋಬ್ಬರಿ 400 ಕ್ಕೂ ಹೆಚ್ಚು ಮಂದಿಯ ಸಾಕ್ಷಿ ಸಂಗ್ರಹ ಮಾಡಿರುವ ಎಸ್​ಐಟಿ ಇದೇ …

Read More »

‘ಈ ಬಾರಿ ಬಿಜೆಪಿ ಸೋಲೋದು ಗ್ಯಾರಂಟಿ, ರಾಹುಲ್ ಪ್ರಧಾನಿ ಆಗೋದೂ ಗ್ಯಾರಂಟಿ’

ಗದಗ: ನರೇಂದ್ರ ಮೋದಿ ಸೋಲಿನ ಕೌಂಟ್ ಡೌನ್ ಈಗಿನಿಂದಲೇ ಆರಂಭವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲೋದೋ ಗ್ಯಾರಂಟಿ. ರಾಹುಲ್ ಗಾಂಧಿ ಪ್ರಧಾನಿ ಆಗೋದು ಗ್ಯಾರಂಟಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.ನಗರದಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಅವರು, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್‌ ಬೆಲೆ ದುಬಾರಿಯಾಗಿದೆ ಇದೆನಾ ಅಚ್ಛೆದಿನ್ ಎಂದು ಕಿಡಿಕಾರಿದರು. ಅತೀ ಹೆಚ್ಚು ಸುಳ್ಳು ಹೇಳೋ ಪ್ರಧಾನಿ ಅಂದ್ರೆ ಅದು ಮಿಸ್ಟರ್ ಮೋದಿ. ನರೇಂದ್ರ ಮೋದಿ ಹಠಾವೋ ದೇಶ …

Read More »

ಕಬ್ಬು ಬೆಳೆಗಾರರ ಪ್ರತಿಭಟನೆ ಬಗ್ಗೆ ಸಿಎಂ ಏನಂದ್ರು?

ಬೆಂಗಳೂರು: ನಾನು ಹಿಂದಿನಿಂದಲೂ ರೈತರ ಪಕ್ಷಪಾತಿಯಾಗಿದ್ದವನು. ಇದರಲ್ಲಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಎಂಬ ಭೇದವಿಲ್ಲ ಎಂದು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ನಡೆಸುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರೈತರು ಸುವರ್ಣ ವಿಧಾನಸೌಧಕ್ಕೆ ಕಬ್ಬಿನ ಲಾರಿಯನ್ನು ನುಗ್ಗಿಸಿದ್ದಾರೆ. ಈ ಸಂಬಂಧ 50ಕ್ಕೂ ಹೆಚ್ಚು ರೈತರನ್ನು ಬಂಧಿಸಲಾಗಿದ್ದು, 10 ರೈತರ ವಿರುದ್ಧ ಎಫ್‌ಐಆರ್ ದಾಖಲು …

Read More »

ರೈತರಿಂದ ಮುತ್ತಿಗೆ ಸಾಧ್ಯತೆ: ವಿಧಾನಸೌಧಕ್ಕೆ ಬಿಗಿ ಭದ್ರತೆ..

ಬೆಂಗಳೂರು: ಕಬ್ಬು ಸೇರಿದಂತೆ ವಿವಿಧ ಬೆಳೆಗಳ ಬೆಂಬಲ ಬೆಲೆಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು ರಾಜಧಾನಿ ತಲುಪಿದೆ. ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆಗೆ ಕರೆ ನೀಡಿರುವುದರಿಂದ ವಿವಿಧ ಜಿಲ್ಲೆಗಳಿಂದ ರೈತರು ನಗರದತ್ತ ಆಗಮಿಸುತ್ತಿದ್ದಾರೆ. ವಿಧಾನಸೌಧಕ್ಕೆ ರೈತರ ಮುತ್ತಿಗೆ ಸಾಧ್ಯತೆ ಹಿನ್ನೆಲೆಯಲ್ಲಿ, ಶಕ್ತಿಸೌಧ ವಿಧಾನಸೌಧಕ್ಕೆ ಬಿಗಿ ಪೊಲೀಸ್​ ಭದ್ರತೆ ಏರ್ಪಡಿಸಲಾಗಿದೆ. ವಿಧಾನಸೌಧ ಸುತ್ತಮುತ್ತ ಭಾರೀ …

Read More »

ಆರೋಪಿ ಮುಂದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡ್ಯಾನ್ಸ್‌…!

ಕೋಲಾರ: ಸಬ್ ಇನ್ಸ್’ಪೆಕ್ಟರ್ ಒಬ್ಬರು ತೆಲುಗು ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದಲ್ಲದೆ, ಆರೋಪಿಗೂ ಡ್ಯಾನ್ ಮಾಡುವಂತೆ ಒತ್ತಾಯಿಸಿದ ವಿಚಿತ್ರ ಘಟನೆ ಕೆಜಿಎಫ್‌ ಸಮೀಪದ ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ನಡೆದಿದೆ.ಕೋಲಾರ ಜಿಲ್ಲೆ ಕೆಜಿಎಫ್​ ತಾಲೂಕು ಬೇತಮಂಗಲ ಪೊಲೀಸ್​ ಠಾಣೆಯ ಸಬ್ ಇನ್ಸ್’ಪೆಕ್ಟರ್ ಈ ರೀತಿ ಡ್ಯಾನ್ಸ್ ಮಾಡಿದ್ದಾರೆ. ಪ್ರಕರಣವೊಂದರ ಕುರಿತು ಆರೋಪಿಗಳನ್ನು ವಿಚಾರಣೆ ನಡೆಸುವ ಸಂದರ್ಭದಲ್ಲಿ ಆರೋಪಿಗಳಿಗೆ ಡ್ಯಾನ್ಸ್ಕೋಲಾರ ಜಿಲ್ಲೆ ಕೆಜಿಎಫ್​ ತಾಲೂಕು ಬೇತಮಂಗಲ ಪೊಲೀಸ್​ ಠಾಣೆಯ ಸಬ್ ಇನ್ಸ್’ಪೆಕ್ಟರ್ ಈ ರೀತಿ …

Read More »