Breaking News

ಕರ್ನಾಟಕ

ಇನ್ನು ಮುಂದೆ ಟ್ರಾಫಿಕ್ ಪೊಲೀಸರಿಗೆ ದಿನಕ್ಕೆ 8 ಗಂಟೆ ಅವಧಿ ಡ್ಯೂಟಿ, ವಾರದ ರಜೆ ಕಡ್ಡಾಯ..

ಬೆಂಗಳೂರು: ಸಿಬ್ಬಂದಿ ಕೊರತೆ, ಕೆಲಸದಲ್ಲಿ ತೀವ್ರ ಒತ್ತಡ, ವಾರದ ರಜೆ ಇಲ್ಲ ಎಂದು ಹೇಳುತ್ತಿದ್ದ ಟ್ರಾಫಿಕ್ ಪೊಲೀಸರಿಗೆ ಸ್ವಲ್ಪ ನಿರಾಳತೆ ನೀಡಲು ಸಂಚಾರಿ ಪೊಲೀಸ್ ಇಲಾಖೆ ನಿರ್ಧರಿಸಿದೆ. ಸಂಚಾರಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಸಂಚಾರಿ ಪೊಲೀಸ್ ಹೆಚ್ಚುವರಿ ಆಯುಕ್ತ ಆರ್ ಹಿತೇಂದ್ರ ಸಭೆ ನಡೆಸಿ ಕಾನ್ಸ್ಟೇಬಲ್ ಗಳಿಗೆ ವಾರದ ರಜೆ ನೀಡದೆ ದುಡಿಸಿಕೊಳ್ಳುವ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇನ್ನು ಮುಂದೆ ವಾರಕ್ಕೆ ಒಂದು ಕಡ್ಡಾಯವಾಗಿ ರಜೆ ನೀಡಬೇಕೆಂದು …

Read More »

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮತ್ತೋರ್ವ ಎಸ್ಐಟಿ ವಶಕ್ಕೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಎಸ್ಐಟಿ ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ.  ಬೆಳಗಾವಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಎಸ್ಐಟಿ ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ.  ಬೆಳಗಾವಿಯ ಗಣೇಶಪುರದ ನಿವಾಸಿ ಸಾಗರ ಲಾಖೆ(30) ಎಂಬಾತನನ್ನು ಬುಧವಾರ ತಡರಾತ್ರಿ ಎಸ್ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಹತ್ಯೆ ಆರೋಪಿಗಳಿಗೆ ರೆಸಾರ್ಟ್’ನಲ್ಲಿ ಆಶ್ರಯ ನೀಡಿದ ಆರೋಪದ ಮೇಲೆ ಬೆಳಗಾವಿಯಲ್ಲಿ ಭರತ ಕರ್ನೆ ಎಂಬಾತನನ್ನು ಈ …

Read More »

ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಖಾಕಿ ಮಾಸ್ಟರ್ ಪ್ಲಾನ್..

ಅತ್ತ ರಾಪರ್ ಚಂದನ್ ಶೆಟ್ಟಿ ಗಾಂಜಾ ಸಾಂಗ್ ಹಾಡಿನ ರಾದ್ಧಾಂತ ಈಗ ತಣ್ಣಗಾಗಿದೆ. ಆದ್ರೇ, ಹುಬ್ಬಳ್ಳಿ-ಧಾರವಾಡದಲ್ಲೂ ಗಾಂಜಾ, ಡ್ರಗ್ಸ್ ಜಾಲ ಇರೋದೇನೂ ಸುಳ್ಳಲ್ಲ. ಏನೇ ಮುಂಜಾಗರೂಕತಾ ಕ್ರಮಕೈಗೊಂಡ್ರೂ ಯುವಕರೂ ಇದರ ಬಲೆಗೆ ಬೀಳೋದನ್ನ ತಪ್ಪಿಸೋದಕ್ಕಾಗ್ತಿಲ್ಲ. ಆದ್ರೀಗ ಹುಬ್ಬಳ್ಳಿ-ಧಾರವಾಡ ಪೊಲೀಸರು ಮಾದಕ ದ್ರವ್ಯ ಜಾಲಕ್ಕೆ ಕೊಳ್ಳಿ ಇಡೋಕೆ ಮುಂದಾಗಿದಾರೆ. ಧಮ್ ಮಾರೋ ಧಮ್.. ಅಂತ ಹಾಡು ಕೇಳೋಕೆ ಚೆಂದಗಿದ್ರೂ ಧಮ್ ಜಾಸ್ತಿ ಹೊಡೆದ್ರೇ ಹೊಗೆ ಹಾಕಿಸಿಕೊಳ್ಳೋದ್ ಗ್ಯಾರಂಟಿ. ಅರಿವಿನ ಕೊರತೆಯೋ ವ್ಯಸನದ …

Read More »

ಸ್ಥಳೀಯ ಸಂಸ್ಥೆ ಚುನಾವಣೆ: ನಾಳೆ ಸಾರ್ವತ್ರಿಕ ರಜೆ

ಆಯಾ ಮತ ಕ್ಷೇತ್ರಗಳ ಎಲ್ಲಾ ರಾಜ್ಯ ಸರ್ಕಾರಿ ಕಛೇರಿಗಳು, ಶಾಲಾ-ಕಾಲೇಜು, ಸರ್ಕಾರಿ ಸ್ವಾಮ್ಯದ ಅಂಗಸಂಸ್ಥೆಗಳಿಗೆ ಒಂದು ದಿನದ ಸಾರ್ವತ್ರಿಕ ರಜೆ. ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಆಗಸ್ಟ್ 31ರಂದು ಸಾರ್ವತ್ರಿಕ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ನಗರ ಸ್ಥಳೀಯ ಸಂಸ್ಥೆ ಹಾಗೂ ಮಹಾನಗರ ಪಾಲಿಕೆಗಳ ಚುನಾವಣೆ ಆ.31 ನಡೆಯಲಿದ್ದು, ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಮತ ಕ್ಷೇತ್ರಗಳ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಸರ್ಕಾರಿ …

Read More »

ಬೆಂಗಳೂರಿನ ಪಬ್, ಬಾರ್, ರೆಸ್ಟೋರೆಂಟ್ ಗಳು ಧೂಮಪಾನ ನಿಷೇಧಿತ ವಲಯ: ಬಿಬಿಎಂಪಿ ಸುತ್ತೋಲೆ

ಬೆಂಗಳೂರು: ಬೆಂಗಲೂರಿನ ಹೋಟೆಲ್ ಗಳು, ಕ್ಲಬ್, ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳು ಇನ್ನು ಮುಂದೆ ಧೂಮಪಾನ ಮುಕ್ತವಾಗಲಿದೆ. ಬೆಂಗಳೂರಿನ ಹೋಟೆಲ್, ರೆಸ್ಟೋರೆಂಟೆ, ಪಬ್ ಗಳನ್ನು “ಸಂಪೂರ್ಣ ಧೂಮಪಾನ ನಿಷೇಧಿತ ವಲಯ” ವನ್ನಾಗಿ ರೂಪಿಸಲು ಬೃಅಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತೀರ್ಮಾನಿಸಿದ್ದು ಇದಕ್ಕಾಗಿ ಸುತ್ತೋಲೆಯನ್ನು ಹೊರಡಿಸಿದೆ. ಮುಂದಿನ ದಿನಗಳಲ್ಲಿ ಈ ನಿಯಮವನ್ನು ಪಾಲಿಸದ ಹೋಟೆಲ್, ಪಬ್, ಬಾರ್ ಗಳ ಪರವಾನಗಿಯನ್ನು ರದ್ದು ಮಾಡುವುದಾಗಿ ಸಹ ಸುತ್ತೋಲೆಯ ಮೂಲಕ ಎಚ್ಚರಿಸಲಾಗಿದೆ. …

Read More »

ಸಮ್ಮಿಶ್ರ ಸರ್ಕಾರ ಯಾವುದೇ ಗೊಂದಲವಿಲ್ಲದೆ ಐದು ವರ್ಷ ಪೂರೈಸಲಿದೆ- ಪರಮೇಶ್ವರ್

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರಕಾರ ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಯಾವುದೇ ಗೊಂದಲವಿಲ್ಲದೇ ಐದು ವರ್ಷವನ್ನೂ ಪೂರ್ಣಗೊಳಿಸಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯವನಿಕಾದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸಮ್ಮಿಶ್ರ ಸರಕಾರ ಇಂಥ ಸಂವತ್ಸರದಲ್ಲೇ ಬೀಳಲಿದೆ ಎಂದು ವಿರೋಧ ಪಕ್ಷದವರು ಭವಿಷ್ಯ ನುಡಿದಿದ್ದರು. ಆದರೆ, ನಾವು 100 ದಿನಗಳನ್ನೇ ಪೂರೈಸಿದ್ದೀವಿ. ಈ ಸರಕಾರ ಸುಭದ್ರವಾಗಿದ್ದು ಐದು ವರ್ಷವನ್ನೂ ಪೂರ್ಣಗೊಳಿಸಲಿದೆ ಎಂದರು. ನೂರು …

Read More »

ಆಕಸ್ಮಿಕವಾಗಿ ಸಿಎಂ ಹೆಚ್‌ಡಿಕೆ ಭೇಟಿಯಾದ ಈ ಬಾಲಕಿಯ ಸಂಭ್ರಮಕ್ಕೆ ಕಾರಣ ಏನು ಗೊತ್ತಾ?

ಮಂಡ್ಯ: ‘ಕರುಣಾಳು ಬಾ ಬೆಳಕೇ, ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು..’ ಎಂಬ ಕವಿತೆಯಂತೆ ಮನ ಕರಗಿಸುವ ಘಟನೆಯೊಂದು ಬುಧವಾರ(ಆ.29) ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಶ್ರೀರಂಗಪಟ್ಟಣದ ಬಳಿ ತೆರಳುವಾಗ ನಡೆದಿದೆ. ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರನ್ನು ಆಕಸ್ಮಿಕವಾಗಿ ಭೇಟಿಯಾದ ಈ ಹುಡುಗಿ ಸಂಭ್ರಮದಲ್ಲಿ ಮುಳುಗಲು ಕಾರಣ ಏನು ಗೊತ್ತಾ? ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೃಷ್ಣರಾಜಸಾಗರದಲ್ಲಿ ಕರಯಕ್ರಮಗಳನ್ನು ಮುಗಿಸಿ ರಾಮನಗರ-ಕನಕಪುರದಲ್ಲಿ ಜನರ ಅಹವಾಲುಗಳನ್ನು ಕೇಳಲು ಹೊರಟಿದ್ದರು. ಅವರ ಕಾರು ಶ್ರೀರಂಗಪಟ್ಟಣ ದಾಟುತ್ತಿತ್ತು. ಆ …

Read More »

ಸಮಾಜದ ಅಭಿವೃದ್ಧಿಗೆ ಕಾರ್ಪೋರೇಟ್ ಕಂಪನಿಗಳ ಸಹಕಾರ ಅಗತ್ಯ

ಬೆಂಗಳೂರು: ಕಾರ್ಪೋರೇಟ್ ಕಂಪನಿಗಳು ಸಮಾಜದ ಅಭಿವೃದ್ಧಿಗಾಗಿ ತಮ್ಮ‌ ಲಾಭದಲ್ಲಿ ಇಂತಿಷ್ಟ ಹಣವನ್ನು‌ ಮೀಸಲಿಡುವ ಮೂಲಕ ಸಮಾಜ ಮುಖಿಯಾಗಬೇಕು‌ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ವೈಟ್‌ಫೀಲ್ಡ್‌ನ ಇಪಿಐಪಿ ಆವರಣದಲ್ಲಿ ಎನ್/ಡಬ್ಲ್ಯೂ ನೆಟ್ ಆ್ಯಪ್ ಕಂಪನಿ ಸಹಯೋಗದಲ್ಲಿ ನಿರ್ಮಿಸಿರುವ ಅಗ್ನಿಶಾಮಕ ಠಾಣ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎನ್/ಡಬ್ಲ್ಯೂ ನೆಟ್ ಆ್ಯಪ್ ಕಂಪನಿಯು ಅಗ್ನಿಶಾಮಕ ದಳದ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರೂ. ಸಹಕಾರ ನೀಡುವ ಮೂಲಕ ಎಲ್ಲಾ ಕಾರ್ಪೋರೇಟ್ ಕಂಪನಿಗಳಿಗೂ …

Read More »

ಶೌಚಾಲಯ ಬಳಕೆಗೆ ವಿಶೇಷ ಜಾಗೃತಿ ಆಂದೋಲನ ರೂಪಿಸಿ- ಸಚಿವ ಕೃಷ್ಣ ಭೈರೇಗೌಡ

ಧಾರವಾಡ: ಸ್ವಚ್ಛ ಭಾರತ ಮಿಷನ್ ಅಡಿ ನಿರ್ಮಿಸಲಾಗಿರುವ ಶೌಚಾಲಯಗಳನ್ನು ಬಳಸಲು ಆಂದೋಲನದ ಮಾದರಿಯಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಾರ್ವಜನಿಕರಲ್ಲಿ ಈ ಕುರಿತು ಇರುವ ಮನೋಭಾವ, ರೂಢಿಗಳನ್ನು ಬದಲಾಯಿಸಲು ಮಾಹಿತಿ, ಶಿಕ್ಷಣ ಹಾಗೂ ಸಂವಹನ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತರಾಜ್ ಹಾಗೂ ಕಾನೂನು ಸಚಿವರಾದ ಕೃಷ್ಣ ಭೈರೇಗೌಡ ಹೇಳಿದರು. ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆ.29ರಂದು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗ್ರಾಮೀಣ ಕುಡಿಯುವ ನೀರು …

Read More »

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮನುಷ್ಯನೇ ಅಲ್ಲ: ಸಿದ್ದರಾಮಯ್ಯ

ಬಾಗಲಕೋಟೆ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಓರ್ವ ಮಾನಸಿಕ ಅಸ್ವಸ್ಥ. ಆತ ಮನುಷ್ಯನೇ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನ ಪರಿಷತ್ ಚುನಾವಣಾ ಪ್ರಚಾರಾರ್ಥ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಕನಿಷ್ಠ ಸಂಸ್ಕಾರ ಎಂಬುದಿಲ್ಲ. ಕೇಂದ್ರ ಸಚಿವ ಸ್ಥಾನದಲ್ಲಿದ್ದುಕೊಂಡು ಮಾನಸಿಕ ಅಸ್ವಸ್ಥನಂತೆ ಮಾತನಾಡುತ್ತಾರೆ. ಇಂಥವರನ್ನು ಸಂಪುಟದಲ್ಲಿಟ್ಟುಕೊಂದಿರುವ ಪ್ರಧಾನಿ ಮೋದಿ ಅವರಿಗೂ ನಾಚಿಕೆಯಾಗಬೇಕು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.  …

Read More »