Breaking News

ಕರ್ನಾಟಕ

ಕಾಸರಗೋಡು : ರೈಲಿಗೆ ಕಲ್ಲೆಸೆದ ಆರೋಪಿ, ಗಂಟೆಗಳ ಅವಧಿಯಲ್ಲಿ ಬಂಧನ.!

ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಮಲಬಾರ್ ಎಕ್ಸ್ ಪ್ರೆಸ್ ರೈಲಿಗೆ ಈತ ಕಲ್ಲೆಸೆದಿದ್ದನು.ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈತ ಇದೇ ರೈಲಿನಲ್ಲಿದ್ದ ಯುವತಿಗೆ ಕಿರುಕುಳ ನೀಡಲೆತ್ನಿಸಿದ್ದು, ಇದನ್ನು ಯುವತಿ ಜೊತೆ ಇದ್ದ ಯುವಕ ಪ್ರಶ್ನಿಸಿದ್ದಾನೆ.ಈ ಸಂದರ್ಭ ದಲ್ಲಿ ಈತ ಹಲ್ಲೆಗೆ ಮುಂದಾಗಿದ್ದಾನೆ. ರೈಲಿಗೆ ಕಲ್ಲೆಸೆ ದಿದ್ದನು. ಈ ಬಗ್ಗೆ ಲಭಿಸಿದ ದೂರಿನಂತೆ ತನಿಖೆ ನಡೆಸಿದ ರೈಲ್ವೆ ಪೊಲೀಸರು ಸಿ ಸಿ ಟಿ ವಿ ದೃಶ್ಯ ಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಆರೋಪಿಯನ್ನು ಪೊಯಿನಾಚಿ ಬಂಧಿಸುವಲ್ಲಿ …

Read More »

ಪುತ್ತೂರು : ಬ್ಯಾಂಕ್ ಉದ್ಯೋಗಿ ಜತೆ ಅಸಭ್ಯ ವರ್ತನೆ.

ರಸ್ತೆಯೊಂದರ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬ್ಯಾಂಕ್ ಉದ್ಯೋಗಿ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ್ದ.ಪ್ರಕರಣ ದಾಖಲಿಸಿಕೊಂಡು ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪುತ್ತೂರಿನ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಕಿರಿಯ ವಿಭಾಗದ ನ್ಯಾಯಾಧೀಶೆ ಅರ್ಚನಾ ಉನ್ನಿತ್ತಾನ್ ಅವರು, 3 ತಿಂಗಳ ಕಠಿಣ ಶಿಕ್ಷೆ, ₹ 6 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ 3 ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ. ಸರ್ಕಾರದ …

Read More »

ಬೆಂಗಳೂರು : ಡಿಕೆಶಿ ಸಂವಿಧಾನ ಬದಲಾವಣೆ ಹೇಳಿಕೆ ಖಂಡಿಸಿ 28ರಂದು ರಾಜ್ಯಾದ್ಯಂತ ಜೆಡಿಎಸ್‌‍ ಪ್ರತಿಭಟನೆ.

ಸಂವಿಧಾನ ಬದಲಾವಣೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆ ನೀಡಿರುವುದನ್ನು ಖಂಡಿಸಿ ಮಾ.28ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್‌‍ ಪರಿಶಿಷ್ಟ ವಿಭಾಗದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್‌ ಪ್ರತಿಮೆ ಬಳಿ ಮಾ.28ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

Read More »

ಕೊಬ್ಬರಿಗೆ ಬಂಪರ್ ಬೆಲೆ, ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ.

ಕೊಬ್ಬರಿ ಕ್ವಿಂಟಾಲ್‌ಗೆ 19 ಸಾವಿರ ರೂ. ದಾಟುವ ಮೂಲಕ ದಾಖಲೆ ಸೃಷ್ಟಿಸಿದೆ. ಕಳೆದ ಕೆಲ ದಿನಗಳಿಂದ ದಿನದಿಂದ ದಿನಕ್ಕೆ ನಿಧಾನವಾಗಿ ಕೊಬ್ಬರಿ ಬೆಲೆ ಏರುತ್ತಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ.ಬಿರುಬೇಸಿಗೆಯಿಂದ ಎಳನೀರಿಗೆ ಭಾರೀ ಬೇಡಿಕೆಯಿದ್ದು, ಸಾಕಷ್ಟು ರೈತರು ಎಳನೀರನ್ನೇ ಮಾರಾಟ ಮಾಡುತ್ತಿರುವುದರಿಂದ ತೆಂಗಿನಕಾಯಿ ಅಷ್ಟಾಗಿ ಲಭ್ಯವಾಗುತ್ತಿಲ್ಲ. ತೆಂಗು ಬೆಳೆಯುತ್ತಿದ್ದ ಪ್ರದೇಶದಲ್ಲಿ ಅಡಿಕೆ ಬೆಳೆ ಆವರಿಸಿದ್ದು, ರೈತರು ಹೆಚ್ಚಾಗಿ ಅಡಿಕೆಗೆ ಒತ್ತು ನೀಡುತ್ತಿದ್ದು, ತೆಂಗಿನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದಿರುವುದರಿಂದ ಉತ್ಪಾದನೆ ಕುಂಠಿತವಾಗುತ್ತಿದೆ.ತೆಂಗಿನಕಾಯಿಯೂ …

Read More »

ನವಜಾತ ಶಿಶುವಿನ ಮೃತದೇಹ ಪತ್ತೆ

ತಿಪ್ಪೆಗೊಂಡೆಯಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತ ಪ್ರಕರಣ ಸಂಬಂಧಿಸಿದಂತೆ ಪ್ರೇಮಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸಿಮ್ರಾನ್ ಮಾನಿಕಾಬಾಯಿ ಹಾಗೂ ಮಹಾಬಲೇಶ್ ಕಾಮೂಜಿ ಬಂದಿತ ಆರೋಪಿಗಳು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಮನೆಯ ಪಕ್ಕದ ತಿಪ್ಪೆ ಗೊಂಡಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು. ಕಿತ್ತೂರಿನ ಪೊಲೀಸರ ಪ್ರಕರಣ ದಾಖಲೆ ಮಾಡಿದ್ದಾರೆ.

Read More »

ಹುಬ್ಬಳ್ಳಿ : ಗಡಿ ಪಾರು ರೌಡಿ ಶಿಟ್ಟರ್ ಬಂಧನ.

ರೌಡಿಶೀಟರ್ ಪೊಡಾಟಿಕೆಗೆ ಕುರಿತು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಇಂದು ಹುಬ್ಬಳ್ಳಿ ಧಾರವಾಡ ಜಿಲ್ಲೆಯಿಂದ ವಿಜಯಕುಮಾರ್ ಎಂಬಾತ ರೌಡಿಶೀಟರ್ ನನ್ನು ಗಡಿಪಾರು ಆದೇಶ ಮಾಡಲಾಗಿತ್ತು. ಆದರೂ ಸಹ ಸಿಟಿಗೆ ಬಂದು ಪುಂಡಾಟಿಕೆಯಿಂದ ಮೆರೆದಿದ್ದ ಈಗ ಆತನ ವಿರುದ್ಧ ಪ್ರಕರಣ ದಾಖಲೆ ಮಾಡಿ ಕ್ರಮ ಕೈಗೊಳ್ಳುವುದು ಎಂದು ಹೇಳಿದ್ದಾರೆ. ಇನ್ನು ಯಾರಾದರೂ ಈ ರೀತಿ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Read More »

IPL 2025 : ಮೊದಲ ಪಂದ್ಯದಲ್ಲಿ ಗೆದ್ದು ಬಿಗಿದ ಆರ್‌ಸಿಬಿ

ಐಪಿಎಲ್ 2025ರ ಭಾಗವಾಗಿ ಆರ್ ಸಿ ಬಿ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 174 ರನ್ನಗಳಿಸಿತು. ಗುರಿ ಬೆನ್ನಟ್ಟಿದ ಆರ್ ಸಿ ಬಿ 16. 2 ಓವರ್ ಗಳಲ್ಲಿ ಗೆಲುವಿನ ದಡ ಸೇರಿತು.

Read More »

ಕೆ ಎ ಎಸ್ ಮುಖ್ಯ ಪರೀಕ್ಷೆ ಮುಂದಕ್ಕೆ.

ಕರ್ನಾಟಕ ಲೋಕಸೇವಾ ಆಯೋಗ ಸೂಚಿಸಿದ್ದ 2023-24ನೇ ಸಾಲಿನ ಗೆಜೆಟೆಡ್ ಪ್ರಬೆಷ್ಯನ ಗ್ರೂಪ್ ಎ ಗ್ರೂಪ್ ಬಿ ವೃಂದದ ವಟ್ಟು 384 ಹುದ್ದೆಗಳಿಗೆ ಸಂಬಂಧಿಸಿದ ನಿಗದಿಪಡಿಸಿದ್ದ ಮುಖ್ಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಕಾಣುತ್ತಾದಿಂದ ಪರೀಕ್ಷೆ ಸಮಯವನ್ನು ಮುಂದೂಡಲಾಗಿದ್ದು ಹೊಸ ದಿನಾಂಕವನ್ನು ಶೀಘ್ರವಾಗಿ ನಿಗದಿಪಡಿಸಲಾಗುತ್ತದ ಎಂದು ಆಯೋಗದ ಕಾರ್ಯದರ್ಶಿ ತಿಳಿಸಿದ್ದಾರೆ.

Read More »

ಕೇರಳದ ಕಣ್ಣೂರಿನ ಮಾಡಾಯಿ ಕಾವು ದೇವಸ್ಥಾನಕ್ಕೆ ದರ್ಶನ್ ಸರ್ ಭೇಟಿ.

ನಟ ದರ್ಶನ್ ಸರ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀತ್ ಮತ್ತು ದನ್ವೀರ್ ಗೌಡ ಜೊತೆಯಲ್ಲಿ ಕೇಳದ ಪ್ರಸಿದ್ಧ ಕಣ್ಣೂರಿನ ಮಾಡಾಯಿ ಕಾವು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇಗುಲದಲ್ಲಿ ಶತ್ರು ಸಂಹಾರ ಪೂಜೆ ಮಾಡಿಸಿದ್ದಾರೆಂದು ಹೇಳಲಾಗುತ್ತಿದೆ . ಶತ್ರು ಸಂಹಾರ ಪೂಜೆಗೆ ಪ್ರಸಿದ್ಧವಾದ ಕೇರಳ ದೇವಸ್ಥಾನ ಇದಾಗಿದೆ.

Read More »

ದೇಶದ ಶ್ರೀಮಂತ ಶಾಸಕರ ಪೈಕಿ ಡಿಕೆಶಿಗೆ ಟಾಪ್ ಎರಡನೇ ಸ್ಥಾನ

ದೇಶದ ಶ್ರೀಮಂತ ನಾಯಕರ ಪಟ್ಟಿಯಲ್ಲಿ ಕರ್ನಾಟಕದ ಡಿ ಸಿ ಎಂ ಡಿ ಕೆ ಶಿವಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ಈ ರಿಫಾರ್ಮರ್ಸ್ ಬಿಡುಗಡೆ ಮಾಡಿದ ಟಾಪ್ 10ನೇ ಶಾಸಕರ ಪೈಕಿ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ ಮುಂಬೈನ ಬಿಜೆಪಿ ಪರಾಕ್ 3.383 ರೂಪಾಯಿ ಕೋಟಿ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಮತ್ತೆ ಡಿಕೆ ಶಿವಕುಮಾರ್ 1.413 ಕೋಟಿ ಆಸ್ತಿಯೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಕರ್ನಾಟಕದವರೇ ಆದ …

Read More »