Breaking News

ಕರ್ನಾಟಕ

ನಾಳೆ ವರಮಹಾಲಕ್ಷ್ಮಿ ಹಬ್ಬ: ಭರ್ಜರಿ ವ್ಯಾಪಾರ

ಗದಗ: ನಾಳೆ ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ಗದಗ ನಗರದ ಮಾರುಕಟ್ಟೆಯಲ್ಲಿ ಜನರಿಂದ ತುಂಬಿ ತುಳುಕ್ಕುತ್ತಿದೆ. ಬಾಳೇಹಣ್ಣು, ಹೂವಿನ ದರ ಗಗನಕ್ಕೇರಿದೆ. ದುಬಾರಿಯಾದ್ರೂ ಪರವಾಗಿಲ್ಲ‌ ಹಬ್ಬ ಆಚರಣೆ ಮಾಡಲೇಬೇಕಲ್ಲ, ಅಂತಿರೋ ಜನರಿಂದ ಹೂ, ಹಣ್ಣು, ಬಾಳೆ ದಿಂಡು ಖರೀದಿಗೆ ಮುಗಿಬಿದ್ದಿದ್ದಾರೆ. ಇನ್ನೂ ಕೆಲವರು ಅವಶ್ಯಕತೆಗೆ ತಕ್ಕಷ್ಟೇ ಖರೀದಿ ಮಾಡ್ತಿದ್ದಾರೆ. ಭರ್ಜರಿ ವ್ಯಾಪಾರ ಮಾಡ್ತಿರೋ ವ್ಯಾಪಾರಿಗಳು ಫುಲ್‌ ಖುಷಿಯಾಗಿದ್ದಾರೆ. ಆ ಮೂಲಕ ಸಂಭ್ರಮದ ವರಮಹಾಲಕ್ಷ್ಮಿ‌ ಹಬ್ಬ ಆಚರಣೆಗೆ ಸಿಧ್ಧರಾಗಿದ್ದಾರೆ.

Read More »

ಇಂದಿರಾ ಗಾಂಧಿ ವಸತಿ ನಿಲಯಕ್ಕೆ ಶಾಸಕ ಎಂ.ಆರ್.ಪಾಟೀಲ್ ದಿಢೀರ್ ಭೇಟಿ….

ಕುಂದಗೋಳ: ಕುಂದಗೋಳ ಮತಕ್ಷೇತ್ರದ ಇಂದಿರಾ ಗಾಂಧಿ ವಸತಿ ನಿಲಯಕ್ಕೆ ಶಾಸಕ ಎಂ.ಆರ್.ಪಾಟೀಲ್ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿನೆ ನಡೆಸಿದ್ದಾರೆ. ಕುಂದಗೋಳ ಮತಕ್ಷೇತ್ರದ ಹಾಸ್ಟೇಲ್ ವ್ಯವಸ್ಥೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮೊನ್ನೆಯಷ್ಟೇ ಸಭೆ ನಡೆಸಿ ಸುವ್ಯವಸ್ಥಿತ ವಾತಾವರಣ ನಿರ್ಮಾಣ ಮಾಡಲು ಸಲಹೆ ನೀಡಿದ್ದ ಅವರು ಇಂದಿರಾ ಗಾಂಧಿ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಮಕ್ಕಳ ಜೊತೆ ಚರ್ಚಿಸಿ ವಿದ್ಯಾಭ್ಯಾಸ ಹಾಗೂ ಹಾಸ್ಟೆಲ್ ವ್ಯವಸ್ಥೆ ಬಗ್ಗೆ …

Read More »

ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲಿಳಿದು ಇತಿಹಾಸ ಬರೆದಿದೆ: ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು : ಚಂದ್ರಯಾನ-3 ಯಶಸ್ವಿಯಾಗಿದ್ದು, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲಿಳಿದು ಇತಿಹಾಸ ಬರೆದಿದೆ. ಇಸ್ರೋ ವಿಜ್ಞಾನಿಗಳ ಈ ಸಾಧನೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೊಂಡಾಡಿದ್ದಾರೆ. ಭಾರತ ವಿಕ್ರಮ ಸಾಧಿಸಿದೆ. ನಮೆಲ್ಲರ ಕನಸು ನನಸಾಗಿದೆ. 125 ಕೋಟಿ ಭಾರತೀಯರ ನಿರೀಕ್ಷೆ ನಿಜವಾಗಿದೆ. ಇಸ್ರೋ ನಮ್ಮ ಹೆಮ್ಮೆ. ಜಗತ್ತಿನಲ್ಲಿಯೇ ಪ್ರಥಮವಾಗಿ ರೋವರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಸುವ ಮೂಲಕ ಚಂದ್ರಯಾನ-3 ಮಹಾನ್ ಸಾಹಸವನ್ನು ಇಸ್ರೋ ಪೂರೈಸಿದೆ ಎಂದು …

Read More »

ನಟ ಪ್ರಕಾಶ್‌ ರೈ ಇಸ್ರೋವನ್ನು ಗೇಲಿ ಮಾಡುತ್ತಿದ್ದಾರೆ….

ಬೆಂಗಳೂರು: ಭಾರತದ ಇಸ್ರೋ ಸಾಧನೆಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ, ಆದರೆ ನಟ ಪ್ರಕಾಶ್‌ ರೈ ಇಸ್ರೋವನ್ನು ಗೇಲಿ ಮಾಡುತ್ತಿದ್ದಾರೆ. ಅಂಥವರು ಭಾರತದಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ, ಅವರು ಭಾರತ ಬಿಟ್ಟು ಹೋಗಲಿ ಎಂದು ಕೇಂದ್ರ ರೈತ, ಕೃಷಿ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.ಎಲ್ಲಿ ಹೋದ್ರು ನೀರು ಸಮುದ್ರ ಸೇರಬೇಕು, ಆ‌ ಸಮುದ್ರನೇ ಕಾಂಗ್ರೆಸ್ ಪಕ್ಷ: DKS ಟಾಂಗ್‌! ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕಾಶ್ ರೈ ಅವರು ಚಂದ್ರಯಾನದಂಥ …

Read More »

ಪೋಲಿಸ್ ಇಲಾಖೆಯ ಅಗಷ್ಟ 24 ರಂದು ಜೆ ಎಸ್ ಎಸ್ ಕಾಲೇಜಿನಲ್ಲಿ ಪೋಲಿಸ್ ದಿನ ಆಚರಣೆ

ಧಾರವಾಡ ಇಂದು ಧಾರವಾಡ ಜೆ ಎಸ್ ಎಸ್ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು .ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿದರು.ಇನ್ನು‌ ಸಾಮಾಜಿಕ ಜಾಲತಾಣಗಳಲ್ಲಿ ಮೋಸ್ ಮಾಡುವವರ ವಿರುದ್ದ ಹೇಗೆ ನಾವು ಹುಷಾರ ನಿಂದ‌ ಇರಬೇಕು, ಮತ್ತು ಇಂದಿನ ಯುವಕರು ಅತಿ‌ ಹೆಚ್ಚಾಗಿ ಕಾನೂನಿನ ಬಗ್ಗೆ‌ ತಿಳಿದುಕ್ಕೊಳ್ಳಬೇಕು. ಪೋಲಿಸರ ಜೊತೆ ಸಹಬಾಗಿತ್ವದಿಂದ ವಿದ್ಯಾರ್ಥಿಗಳು ಇರಬೇಕು.. ಸಮಾಜಕ್ಕೆ‌ ನಮ್ಮ‌ ನಿಮ್ಮೆಲ್ಲ‌ ಕೊಡುಗೆ …

Read More »

ಆಪರೇಷನ್ ಹಸ್ತಕ್ಕೆ ಸೋಮಶೇಖರ್ ಗ್ರೀನ್ ಸಿಗ್ನಲ್ ಕೊಡಲು ಸ್ಥಳಿಯ ಬಿಜೆಪಿ ನಾಯಕರು ಕಾರಣ….

ಬೆಂಗಳೂರು : ಶಾಸಕ ಎಸ್.ಟಿ.ಸೋಮಶೇಖರ್ ಹೆಸರು ಆಪರೇಷನ್ ಜೋರಾಗಿ ಕೇಳಿ ಬರುತ್ತಿದೆ. ಆದರೆ ಆಪರೇಷನ್ ಹಸ್ತಕ್ಕೆ ಸೋಮಶೇಖರ್ ಗ್ರೀನ್ ಸಿಗ್ನಲ್ ಕೊಡಲು ಸ್ಥಳಿಯ ಬಿಜೆಪಿ ನಾಯಕರು ಕಾರಣ ಎನ್ನಲಾಗುತ್ತಿದೆ. ಈ ಬೆಳವಣಿಗೆಗೆ ಅಮಿತ್ ಶಾ ಕಾರಣ ಎಂಬುದೇ ಈಗ ಬಂದಿರುವ ಅಚ್ಚರಿಯ ವಿಚಾರ. ಯಶವಂತಪುರ ಕ್ಷೇತ್ರದಲ್ಲಿ ಸ್ಥಳೀಯ ಬಿಜೆಪಿ ನಾಯಕರು ಒಳಗೊಳಗೆ ವಿರೋಧಿಸಲು ಎಸ್.ಟಿ.ಸೋಮಶೇಖರ್ ಹಾಗೂ ಅಮಿತ್ ಶಾ ನಡುವಿನ ಬಾಂಧವ್ಯ ಕಾರಣ ಎನ್ನಲಾಗಿದೆ. ಇಬ್ಬರು ಕೂಡ ಸಹಕಾರಿ ಕ್ಷೇತ್ರದಿಂದ …

Read More »

ಅಶುದ್ಧ ನೀರು ಕುಡಿದು ಸಾವು….

ಬೆಂಗಳೂರು: ಅಶುದ್ಧ ನೀರು ಕುಡಿದು ಸಾವನ್ನಪ್ಪುವ ಪ್ರಕರಣಗಳು ಭವಿಷ್ಯದಲ್ಲಿ ಮರುಕಳಿಸಿದರೆ ಜಿಲ್ಲಾ ಪಂಚಾಯಿತಿ ಸಿಇಒಗಳನ್ನು ನೇರವಾಗಿ ಹೊಣೆಗಾರರನ್ನಾಗಿಸಿ ಅಮಾನತು ಮಾಡಲಾಗುವುದು. ಅಲ್ಲದೇ ನಗರ ಸಭೆಗಳ ಆಯುಕ್ತರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ನೀರಿನ ಸಮಸ್ಯೆ ಕುರಿತಂತೆ ಗೃಹ ಕಚೇರಿ ಕೃಷ್ಣಾದಲ್ಲಿ ನಿನ್ನೆ (ಮಂಗಳವಾರ) ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಸಭೆರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಡವರು ವಾಸಿಸುವ ಕೊಳಗೇರಿಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾಗೂ …

Read More »

ನೆರೆಯಿಂದ ಸೇತುವೆ ಕೊಚ್ಚಿಹೋಗಿ ಮೂರು ವರ್ಷ…

ಕಾರವಾರ: ನೆರೆಯಿಂದ ಸೇತುವೆ ಕೊಚ್ಚಿಹೋಗಿ ಮೂರು ವರ್ಷಗಳೇ ಕಳೆದಿವೆ. ಸ್ಥಳಕ್ಕೆ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು ಭೇಟಿ ನೀಡಿ ತೆರಳಿದ್ದರೂ ಇದುವರೆಗೂ ಸೇತುವೆ ಮರು ನಿರ್ಮಾಣ ಮಾತ್ರ ಸಾಧ್ಯವಾಗಿಲ್ಲ. ಪರಿಣಾಮ ಗ್ರಾಮಸ್ಥರು ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ಸೇತುವೆಯಲ್ಲೇ ಜೀವ ಕೈಯಲ್ಲಿ ಹಿಡಿದು ನಿತ್ಯ ಓಡಾಟ ನಡೆಸುವಂತಾಗಿದೆ. ನೂತನ ಸೇತುವೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಜೀವ ಕೈಯಲ್ಲಿ ಹಿಡಿದು ನದಿ ದಾಟಬೇಕಾದ ದುಃಸ್ಥಿತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೆಗ್ಗಾರು, ಕಲ್ಲೇಶ್ವರ ಹಾಗೂ ಹಳವಳ್ಳಿ ಗ್ರಾಮಸ್ಥರದ್ದಾಗಿದೆ. …

Read More »

ಆಸ್ತಿ ವಿವಾದ ಸಂಬಂಧ ಗಲಾಟೆ ಗಾಳಿಯಲ್ಲಿ ಗುಂಡು….

ಧಾರವಾಡ: ಆಸ್ತಿ ವಿವಾದ ಸಂಬಂಧ ಎರಡು ಕಡೆಯವರ ನಡುವೆ ಗಲಾಟೆ ನಡೆದು, ಆತಂಕದಿಂದ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಇಲ್ಲಿನ ಅತ್ತಿಕೊಳ್ಳ ಬಡಾವಣೆಯಲ್ಲಿ ಬುಧವಾರ ನಡೆದಿದೆ. ಮುಂಬೈ ಮೂಲದ ಸುಶಾಂತ ಅಗರವಾಲ್‌ ಎಂಬಾತ ಗುಂಡು ಹಾರಿಸಿದ್ದು, ಮತ್ತೊಂದು ಕಡೆಯವರನ್ನು ಹೆದರಿಸಲು ಫೈರಿಂಗ್​ ಮಾಡಿರುವುದಾಗಿ ಪೊಲೀಸ್​ ವಿಚಾರಣೆಯಿಂದ ತಿಳಿದುಬಂದಿದೆ. ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಆರೋಪಿ ಸುಶಾಂತ ಮುಂಬೈನಲ್ಲಿದ್ದ ಎಂದು ತಿಳಿದುಬಂದಿದೆ. ನಿವೇಶನದ ಸಂಬಂಧ ಸುಶಾಂತ್​ ಹಾಗೂ ಪವನ …

Read More »

ಸಿನಿ ಗಣ್ಯರು ಚಂದ್ರಯಾನ 3ರ ಯಶಸ್ಸಿಗೆ ಶುಭ ಹಾರೈಸಿದ್ದಾರೆ….

ಚಂದ್ರಯಾನ 3ರ ಮೂಲಕ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದೆ. ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಸರಿಯಾಗಿ ವಿಕ್ರಮ್​ ಲ್ಯಾಂಡರ್​ ಚಂದ್ರನ ಮೇಲೆ ಇಳಿಯಲಿದೆ. ಯೋಜನೆಯಂತೆ ಎಲ್ಲವೂ ನಡೆಯಲಿದ್ದು, ದೇಶಾದ್ಯಂತ ಚಂದ್ರಯಾನ 3ರ ಯಶಸ್ಸಿಗೆ ಹೋಮ, ಹವನ, ಪೂಜೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಸಿನಿ ಗಣ್ಯರು ಮೈಕ್ರೋ ಬ್ಲಾಗಿಂಗ್​ ಸೈಟ್​ X (ಟ್ವಿಟರ್) ನಲ್ಲಿ ಚಂದ್ರಯಾನ 3ರ ಯಶಸ್ಸಿಗೆ ಶುಭ ಹಾರೈಸಿದ್ದಾರೆ. ಡಿವೈನ್​ ಸ್ಟಾರ್​ ರಿಷಬ್ ಶೆಟ್ಟಿ, ಹಿರಿಯ …

Read More »