Breaking News

ಸುದ್ದಿ

ವಿವಿಧ ಬೇಡಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಆಟೋ ರೀಕ್ಷಾ ಚಾಲಕ ಪ್ರತಿಭಟನೆ

ಧಾರವಾಡ :ನಗರದ ಶಾಲಾ ವಾಹನ ತಪಾಸಣೆ ಹಾಗೂ ಜಿಲ್ಲಾ ಆಟೋ ರೀಕ್ಷಾ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಆಟೋ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘದ ನೂರಾರು ಚಾಲಕರು ಪ್ರತಿಭಟನೆ ನಡೆಸಿದರು.ಸುಮಾರು ವರ್ಷಗಳಿಂದ ನಗರದಲ್ಲಿ ಆಟೋ ರೀಕ್ಷಾ ಹಾಗೂ ವ್ಯಾನ ಚಾಲಕರು ಶಾಲಾ ಮಕ್ಕಳನ್ನು ಕರೆದೊಯ್ಯುವ ಕಾರ್ಯದಲ್ಲಿ ತಮ್ಮ ತಮ್ಮ ಕುಟುಂಬ ಸಲುಹುದು ಹಾಗೂ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ನಿಭಾಯಿಸಿ ತಮ್ಮ ಜೀವನವನ್ನು …

Read More »

ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಅಪಘಾತ ಧಾರವಾಡದ ಒಂದೇ ಕುಟುಂಬದ 6 ಜನ ಮೃತ

ಧಾರವಾಡ : ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿನ ಕಾಶೀಳ ಬಳಿ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬಳಿ ರಸ್ತೆ ಅಪಘಾತದಲ್ಲಿ ಧಾರವಾಡದ ಒಂದೇ ಕುಟುಂಬದ 6 ಜನರು ಮೃತಪಟ್ಟಿದ್ದು, ಇಬ್ವರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ನಸುಕಿನಲ್ಲಿ ನಡೆದಿದೆ.ಅಪಘಾತದಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಎರಡೂವರೆ ವರ್ಷದ ಒಬ್ಬ ಬಾಲಕ ಮತ್ತು 5 ವರ್ಷದ ಬಾಲಕಿ ಮೃತಪಟ್ಟಿದ್ದು, ಇವರು ಧಾರವಾಡದ ನಿಜಾಮೋದಿನ ಸೌದಾಗರ ಎಂಬ ಕುಟುಂಬದವರು ಎನ್ನಲಾಗಿದೆ.ಚಾಲಕನ‌ ನಿಯಂತ್ರಣ ತಪ್ಪಿ …

Read More »

ಸಂಭ್ರಮ ಸಡಗರದ ತೋಟದಮ್ಮನವರ ವಿಶೇಷ ಪೂಜೆ.

ಮಂಡ್ಯ: ಜಿಲ್ಲೆಯಲ್ಲಿಂದು ತೋಟದಮ್ಮನವರ ಹಬ್ಬದ ಸಂಭ್ರಮ ಮನೆ ಮಾಡಿತು.ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ಹೊರವಲಯದ ತೋಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದ ನಿವಾಸಿಗಳು ಮತ್ತು ಮಹಿಳೆಯರು ಪಟ್ಟಣದ ಮುಖ್ಯ ರಸ್ತೆಯಲ್ಲಿ ತೊಂಬಿಟ್ಟಿನಾರತಿಯ ಮಡೆಯನ್ನು ತಲೆಯ ಮೇಲೆ ಹೊತ್ತು ಮೆರವಣಿಗೆ ನಡೆಸಿದರೆ, ಮಕ್ಕಳು ಮತ್ತು ಯುವಜನರು ತಮಟೆಯ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿ ನೃತ್ಯಮಾಡಿ ಸಂಭ್ರಮಿಸಿದರು…ಪುರಸಭೆಯ ಸದಸ್ಯ ಡಿ.ಪ್ರೇಮಕುಮಾರ್, ಮುಖಂಡರಾದ ಬಾಲಕೃಷ್ಣ, ಉಮೇಶ್ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು… ತೋಟದಮ್ಮನವರ …

Read More »

ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ

ಚಿಕ್ಕೋಡಿ: ದಿನೇ ದಿನೇ ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ನದಿ ನೀರು 2 ಲಕ್ಷ ಕ್ಯೂಸೆಕ್ ನಷ್ಟು ಹೆಚ್ಚಾಗಿದೆ. ‌ ಇದರಿಂದ ಕೃಷ್ಣ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದನದಿ ತೀರದ ಜನರು ನದಿ ದಾಟಿ ಸುರಕ್ಷಿತ ಸ್ಥಳಕ್ಕೆ ಹೋಗುವ ವೇಳೆ ವ್ಯಕ್ತಿಯೊಬ್ಬ ಹಿನ್ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಗ್ರಾಮಸ್ಥರು ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆ …

Read More »

ರಾಶಿ ಭವಿಷ್ಯ

ಮೇಷ: ನಿಮ್ಮ ಜೀವನದ ಸರಿಯಾದ ಸಮಯ ನಿಮಗೆ ದೊರೆಯಲಿದೆ; ಅದೂ ನೀವು ಸರಿಯಾದ ಯೋಜನೆಗಳನ್ನು ಮಾಡಿದರೆ ಮಾತ್ರ. ಕೆಲಸದಲ್ಲಿ ಸಾಮಾನ್ಯವಾದ ಏರಿಳಿತಗಳಿರುತ್ತವೆ. ಆದರೆ, ಸಂಜೆಯನ್ನು ಚೆನ್ನಾಗಿ ಯೋಜಿಸಿ, ಮತ್ತು ನೀವು ನಿಮ್ಮನ್ನೇ ಆಶ್ಚರ್ಯಗೊಳಿಸಿಕೊಳ್ಳುತ್ತೀರಿ.ವೃಷಭ: ಇಂದು ಖಂಡಿತಾ ಅದು ಸಾಧ್ಯವಿದೆ, ನೀವು ಹೊಸ ಜಂಟಿ ಸಹಯೋಗಗಳ ಕುರಿತು ನಿರ್ಣಾಯಕ ಮತ್ತು ಬದ್ಧರಾಗಿರುತ್ತೀರಿ. ಮಧ್ಯಾಹ್ನದಲ್ಲಿ ಫಲಿತಾಂಶಗಳು ನಿಮ್ಮ ನಿರೀಕ್ಷೆಗಳಿಗಿಂತ ಕುಸಿಯಬಹುದು. ನಿಮ್ಮ ಪ್ರಿಯತಮೆಯೊಂದಿಗೆ ಕ್ಯಾಂಡಲ್ ಲೈಟ್ ಡಿನ್ನರ್ ಮೂಲಕ ಒತ್ತಡವನ್ನು ಹೊಡೆದೂಡಿ.ಮಿಥುನ: ನಿಮ್ಮ …

Read More »

ಆನೇಕಲ್ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅಮರೇಶ್ ಅವಿರೋಧ ಆಯ್ಕೆ

ಆನೇಕಲ್: ಆನೇಕಲ್ ನ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಮರು ಆಯ್ಕೆ ಮಾಡಿಲಾಗಿದ್ದು ನೂತನ ಅಧ್ಯಕ್ಷರಾಗಿ ಬಿ.ಟಿವಿ ವರದಿಗಾರರಾದ ಅಮರೇಶ್ ಅವಿರೋಧವಾಗಿ ಆಯ್ಕೆಯಾದರು, ಬೆಂಗಳೂರು ಹೊರವಲಯ ಆನೇಕಲ್ನ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಮರು ಆಯ್ಕೆ ನಡೆದಿದ್ದು 27 ಸದಸ್ಯರ ಸಮ್ಮುಖದಲ್ಲಿ ಅವಿರೋಧವಾಗಿ ಬಿ.ಟಿವಿ ವರದಿಗಾರ ಅಮರೇಶ್ ಅವರನ್ನು ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು,ಇನ್ನು ಪ್ರಮುಖವಾಗಿ ಸಭೆಯಲ್ಲಿ ಪ್ರತಿನಿತ್ಯ ಹಗಲು ರಾತ್ರಿ ಎನ್ನದೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಕೆಲಸ …

Read More »

ಅದ್ದೂರಿಯಾಗಿ ಜರುಗಿದ ಸಪ್ತಮಾತ್ರಿಕಾ ಹೋಮ, ದಯಾನಂದಪುರಿ ಮಹಾಸ್ವಾಮೀಜಿಗಳ ಬೆಳ್ಳಿ ಪಲ್ಲಕ್ಕಿ ಉತ್ಸವ

ಮಂಡ್ಯ: ಜಿಲ್ಲೆಯ ಕೊರಟಿಕೆರೆ ಗ್ರಾಮದಲ್ಲಿ ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ನೇತೃತ್ವದಲ್ಲಿ 4ನೇ ವರ್ಷದ ಭೀಮನ ಅಮವಾಸ್ಯೆ ಕಾರ್ಯಕ್ರಮದ ಅಂಗವಾಗಿ ಸಪ್ತಮಾತ್ರಿಕಾ ಹೋಮ, ದೇವಾಂಗ ಜಗದ್ಗುರುಗಳಾದ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮೀಜಿಗಳಿಗೆ ಗುರುವಂದನೆ, ಶ್ರೀಗಳ ಬೆಳ್ಳಿಪಲ್ಲಕಿ ಉತ್ಸವ, ಭಕ್ತಿ ಸುಧೆ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.ಕೊರಟಿಕೆರೆ ಗ್ರಾಮಕ್ಕೆ ಆಗಮಿಸಿದ ಶ್ರೀಗಳ ಮೇಲೆ ಪುಷ್ಪವೃಷ್ಠಿ ಮಾಡಿ, ಕ್ರೇನ್ ಮೂಲಕ ಭಾರೀ ಗಾತ್ರದ ಗುಲಾಬಿ ಹೂವಿನ ಹಾರವನ್ನು ಶ್ರೀಗಳಿಗೆ ಸಮರ್ಪಿಸಲಾಯಿತು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ …

Read More »

ಕೋಲಾರದಲ್ಲಿ ಖಾಸಗಿ ಫೈನಾನ್ಸ್ ಕಂಪನಿಯಿಂದ ಜನರಿಗೆ ಹಣ ವಂಚನೆ ಆರೋಪ. ಕೋರ್ಟಿನಲ್ಲಿ ಮುಂದುವರೆದ ವಿಚಾರಣೆ

ಕೋಲಾರ: ಬಂಗಾರಪೇಟೆ ಪಟ್ಟಣದ ಷಣ್ಮುಗ ಫೈನಾನ್ಸ್ ಹಾಗೂ ಚಿಟ್ ಫಂಡ್ ಖಾಸಗಿ ಕಂಪನಿಯಿಂದ ಸಾವಿರಾರು ಜನರಿಗೆ ಮೋಸ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಿಚಾರಣೆ ಪ್ರಾರಂಭವಾಗಿದೆ. ಒಂದು ವರ್ಷದ ಹಿಂದೆಯೇ ಈ ಕಂಪನಿ ವಂಚನೆಯ ಬಗ್ಗೆ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ. ‌ ಈ ಹಿನ್ನೆಲೆಯಲ್ಲಿ ಹೂಡಿಕೆಯ ಹಣ ವಾಪಸು ಕೊಡಿಸುವಂತೆ ಕೆಜಿಎಫ್ ಎಸ್ ಪಿ ಮೊಹಮ್ಮದ್ ಸುಜೀತ್ ಗೆ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರಿ ನೌಕರರು ಸೇರಿದಂತೆ ಸಾವಿರಾರು …

Read More »

ಸಾಲಬಾಧೆ ತಾಳಲಾರದೆ ವಿಷ ಕುಡಿದು ರೈತ ಆತ್ಮಹತ್ಯೆಗೆ ಶರಣು.

ಮಂಡ್ಯ: ಜಿಲ್ಲೆ ಮಂಡ್ಯ ಅಕ್ಕಿಹೆಬ್ಬಾಳು ಹೋಬಳಿಯಆಲೇನಹಳ್ಳಿ ಗ್ರಾಮದಲ್ಲಿ ಸಾಲದ ಬಾಧೆಯನ್ನು ತಾಳಲಾರದೆ ರೈತನೊಬ್ಬ ತನ್ನ ಜಮೀನಿನಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗ್ರಾಮದ ಪ್ರಗತಿಪರ ರೈತರಾದ ರಾಜೇಗೌಡ(60) ಅವರೇ ಮೃತ ದುರ್ದೈವಿಯಾಗಿದ್ದಾರೆ. ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ 3ಲಕ್ಷರೂ ಕೃಷಿ ಸಾಲ ಹಾಗೂ 2ಲಕ್ಷರೂ ಕೈಸಾಲ ಮಾಡಿ ಬೇಸಾಯ ಮಾಡಿದ್ದರು. ಬೋರ್ ವೆಲ್ ನಲ್ಲಿ ನೀರು ಬತ್ತಿಹೋಗಿ ಬೆಳೆಗಳು ಒಣಗಿದ ಹಿನ್ನೆಲೆಯಲ್ಲಿ ಮನನೊಂದ ರಾಜೇಗೌಡ ನಿನ್ನೆ ಸಂಜೆ ತನ್ನ ಜಮೀನಿನಲ್ಲಿ …

Read More »

ಮಳೆಯಿಂದ ಅಪಾಯದ ಮಟ್ಟ ತಲುಪಿ ಹರಿಯುತ್ತಿರುವ ಕೃಷ್ಣಾ ನದಿ ನೀರಿಗೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ

ಚಿಕ್ಕೋಡಿ: ಮಹರಾಷ್ಟ್ರದಲ್ಲಿ ನಿರಂತರ ರಕ್ಕಸ ಮಳೆ ನಿರಂತರ ಮಳೆಯಿಂದ ಕರ್ನಾಟಕದ ಧೂದಗಂಗಾ, ವೇದಗಂಗಾ,ಕೃಷ್ಣಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜನರಿಗೆ ನದಿ‌ ನೀರಿಗೆ ಇಳಿಯದಂತೆ ಈಗಾಗಲೇ ಜಿಲ್ಲಾಡಳಿತ ಸೂಚನೆ ನೀಡಿದೆ.ಆದರೆ ಇದನ್ನು ಲೆಕ್ಕಿಸದ ಜನ ಹರಿಯುವ ನದಿಯಲ್ಲಿ ಜೀವ ಕೈಲಿ ಹಿಡಿದು ದಾಟುವ ಗೋಜಿಗೆ ಹೋಗುತಿದ್ದು , ಚಿಕ್ಕೋಡಿ ತಾಲೂಕಿನ ಕಾರದಗಾ ಭೋಜ ಗ್ರಾಮಗಳ ಮಧ್ಯೆ ಹರಿದಿರು ಧೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ …

Read More »