Breaking News

ಸುದ್ದಿ

ವಿದ್ಯಾರ್ಥಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಪ್ರಾಂಶುಪಾಲ ಹಾಗೂ ಉಪನ್ಯಾಸಕ

ಮಂಡ್ಯ: ಜಿಲ್ಲೆಯ ಶೀಳನೆರೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಗುರುಲಿಂಗೇಗೌಡ ಮತ್ತು ಉಪನ್ಯಾಸಕ ಕತ್ತರಘಟ್ಟ ವಾಸು ಅವರು ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಹಾಗೂ ದೌರ್ಜನ್ಯ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳನ್ನು ವಿಂಗಡಿಸಿ ಬೇಧಭಾವ ಮಾಡಿ ಮಾನಸಿಕ ಕಿರುಕುಳ ನೀಡುತ್ತಾ ಹಿಂಸೆ ನೀಡುತ್ತಿರುವ ಪ್ರಾಂಶುಪಾಲ ಮತ್ತು ಉಪನ್ಯಾಸಕರ ವಿರುದ್ಧ ವಿದ್ಯಾರ್ಥಿಗಳು ತಿರುಗಿ ಬಿದ್ದಿದ್ದಾರೆ. ಬಡವರು ಶ್ರೀಮಂತರು ಮತ್ತು ಪ್ರಭಾವಿಗಳ ಮಕ್ಕಳೆಂದು ತಾರತಮ್ಯ ಮಾಡುವ ಪ್ರಾಂಶುಪಾಲರ ವಿರುದ್ಧ ಕಾನೂನು ಕ್ರಮ ಕೈಗೊಂಡು …

Read More »

ಅಭಿಮಾನಿಗಳಿಂದ ಅರ್ಥಪೂರ್ಣವಾಗಿ ಶಾಸಕ ಡಾ.ನಾರಾಯಣಗೌಡರ ಜನ್ಮದಿನ ಆಚರಣೆ

ಮಂಡ್ಯ: ಶಾಸಕ ಡಾ. ನಾರಾಯಣಗೌಡ ಅವರ 57 ನೇ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳುಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಸಂಭ್ರಮಿಸಿದರು.ಶಾಸಕ ನಾರಾಯಣಗೌಡರ ಅಭಿಮಾನಿಗಳ ಬಳಗದ ಅಧ್ಯಕ್ಷ ಚಂದ್ರಮೋಹನ್ ನೇತೃತ್ವದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಶಾಸಕರ ಮನೆಯ ಮುಂಭಾಗದಲ್ಲಿ ಕೇಕ್ ಕತ್ತರಿಸಿ ಶಾಸಕರಿಗೆ ಶುಭಕೋರಿದರು. ಮೆಚ್ಚಿನ ಶಾಸಕನ ಹುಟ್ಟು ಹಬ್ಬದ ಕಾರಣ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ …

Read More »

ಬಿಜೆಪಿಯಿಂದ ಆಪರೇಷನ್ ಕಮಲಕ್ಕಾಗಿ ಐದು ಕೋಟಿ ಆಮಿಷ

ಕೋಲಾರ: ಬಿಜೆಪಿಯ ಮೂವರು ಮುಖಂಡರು ಆಪರೇಷನ್ ಕಮಲ ಬಾಬತ್ತು ಐದು ಕೋಟಿ ಆಮಿಷ ಒಡ್ಡಿದ್ದು ನಿಜ.ಎಸಿಬಿ ಅಧಿಕಾರಿಗಳ ಒತ್ತಡದಿಂದ ಬಿಜೆಪಿ ವಿರುದ್ದದ ಆಮಿಷ ಆರೋಪವನ್ನು ನಿರಾಕರಿಸಿದ್ದೇನೆ ಎಂದು ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು. ‌ ಕೋಲಾರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡರು ಐದು ಕೋಟಿ ರುಪಾಯಿ ಆಮಿಷ ಒಡ್ಡಿದ್ದರು. ಇದೀಗ ಸದನದಲ್ಲಿ ಸರ್ಕಾರಕ್ಕೆ ತೊಂದರೆ ಆದಾಗ ನೋಡಿಕೊಂಡಿರಲು ಸಾಧ್ಯವಿಲ್ಲ. ಎಸಿಬಿ ಅಧಿಕಾರಿಗಳ ಬಲವಂತದಿಂದ ನಾನು ದೂರನ್ನು ನಿರಾಕರಿಸದ್ದೇನೆ. ನನ್ನ …

Read More »

ಅಧಿಕಾರಕ್ಕಾಗಿ ಬಿಜೆಪಿ ಶಾಸಕರ ಟೆಂಪಲ್ ರನ್

ಕೋಲಾರ: ಸೋಮವಾರ ವಿಶ್ವಾಸ ಮತ ಯಾಚನೆ ಬಳಿಕ ರಾಜ್ಯ ರಾಜಕೀಯ ಭವಿಷ್ಯ ನಿರ್ಧಾರವಾಗಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಶಾಸಕರು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.-ಕೋಲಾರದ ಕುರುಡುಮಲೆಯ ವಿನಾಯಕನ ದೇವಸ್ಥಾನಕ್ಕೆ ಬಿಜೆಪಿಯ ಈಶ್ವರಪ್ಪ ಅವರ ನೇತೃತ್ವದಲ್ಲಿ ಶಾಸಕರು ಹಾಗೂ ಸಂಸದರು ಭೇಟಿ ನೀಡಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿ ಎಂದು ಪ್ರಾರ್ಥಿಸಿದರು.ಇದೇ ವೇಳೆ ಬಿಜೆಪಿ ಹೆಸರಲ್ಲಿ ದೇವರಿಗೆ ಅರ್ಚನೆ ಮಾಡಿಸಲಾಯಿತು. ‌

Read More »

ಕಾಯಿಮೊಟ್ಟೆಯೊಳಗೆ ಅವಿತಿದ್ದ ನಾಗರಹಾವಿನ ಸುರಕ್ಷಿತ ಬಂಧನ

ಮಂಡ್ಯ : ಇಲ್ಲಿನ ಉದ್ಯಮಿ ಎನ್.ನಂಜರಾಜು ಅವರ ಮನೆಯ ಮುಂಭಾಗದಲ್ಲಿ ಹಾಕಿದ್ದ ಕಾಯಿಮೊಟ್ಟೆಯೊಳಗೆ ಅವಿತಿದ್ದ ನಾಗರಹಾವನ್ನು ಉರಗತಜ್ಞ ಸ್ನೇಕ್ ಮುನ್ನಾ ಅವರು ಸುರಕ್ಷಿತವಾಗಿ ಹಿಡಿದು ನಾಗರಹಾವನ್ನು ಕಂಡು ಭಯಬೀತರಾಗಿದ್ದ ಮನೆಯ ಜನರ ಭೀತಿಯನ್ನು ಹೋಗಲಾಡಿಸಿದ್ದಾರೆ.ಬುಸುಗುಡುತ್ತಾ ಹೆಡೆಯೆತ್ತಿಕೊಂಡು ಕಚ್ಚಲು ಬರುತ್ತಿದ್ದ ನಾಗರಹಾವನ್ನು ಜಾಣ್ಮೆಯಿಂದ ಹಿಡಿದು ಪ್ಲಾಸ್ಟಿಕ್ ಬಾಟಲಿನೊಳಗೆ ಬಂಧಿಸಿದ ಮುನ್ನಾ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವುದಾಗಿ ತಿಳಿಸಿದ್ದಾರೆ.

Read More »

ಭಾವಸಾರ ಕ್ಷತ್ರಿಯ ನೂತನ ಪದಾಧಿಕಾರಿಗಳ ಆಯ್ಕೆ

ಯಾದಗಿರಿ:ಗುರುಮಠಕಲ್ ದ ಪಟ್ಟಣದಲ್ಲಿ ಭಾವಸಾರ ಕ್ಷತ್ರಿಯ ಪದಾಧಿಕಾರಿಗಳು ನೂತನವಾಗಿ ಮುಖೇಶ ಪತಂಗೆ ಅವರನ್ನು ಅಧ್ಯಕ್ಷರಾಗಿ ಮಾಡಿದರು.ನಂತರ ಪತಂಗೆ ಅವರ ಮನೆಯಲ್ಲಿ ಮಾತನಾಡಿದರು, ಭಾವಸಾರ ಕ್ಷೇತ್ರಿಯ ಸಮಾಜ ಬಂಧುಗಳು ಇಂದು ಸಂಘಟಿತರಾಗಿ ಸಂಘಟನೆಯ ಶಕ್ತಿ ತುಂಬುವ ಮೂಲಕ ಮೂಲ ಸೌಕರ್ಯಗಳನ್ನು ಪಡೆದುಕೊಳ್ಳಬೇಕು. ಈ ನಿಟ್ಟನಲ್ಲಿ ಸಮಾಜದಲ್ಲಿ ಮುಖ್ಯವಾಹಿನಿ ಬರಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸುಶಾಂತ ಢಗೆ, ಕಾರ್ಯದರ್ಶಿ ಸತೀಶ ಢಗೆ, ಸಂಘಟನೆ ಕಾರ್ಯದರ್ಶಿ ನಾಗೇಶ ಮಾಳದಕರ್ ಕೋಟಗೇರ, ಖಜಂಚಿ ರಾಜು ಬೋಡಕೆ, …

Read More »

ಮಂಡ್ಯ ಜಿಲ್ಲೆಯ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಕಾಂಗ್ರೆಸ್ ಯುವಮುಖಂಡ ಕಬ್ಬಲಗೆರೆ ಪುಟ್ಟಸ್ವಾಮಿಗೌಡ ಅವಿರೋಧ ಆಯ್ಕೆ

ಮಂಡ್ಯ: ಪಟ್ಟಣದ ಕೆ ಆರ್.ಪೇಟೆಯಲ್ಲಿ ಪಿಎಲ್ ಡಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಯುವಮುಖಂಡ ಕಬ್ಬಲಗೆರೆ ಪುಟ್ಟಸ್ವಾಮಿಗೌಡ ಅವಿರೋಧವಾಗಿ ಆಯ್ಕೆಯಾದರು.ಅಧ್ಯಕ್ಷ ಸ್ಥಾನಕ್ಕೆ ಪುಟ್ಟಸ್ವಾಮಿಗೌಡ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರವನ್ನು ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ಕೆಯುಐಡಿಎಫ್ ಸಿ ಮಾಜಿಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ಪಿ.ಎಲ್.ಡಿ ಬ್ಯಾಂಕ್ ಮಾಜಿಅಧ್ಯಕ್ಷ ವಿಶ್ವನಾಥ, ಕೆ.ಬಿ.ರವಿಕುಮಾರ್, ಪುರಸಭೆ ಹಿರಿಯ ಸದಸ್ಯ ಡಿ.ಪ್ರೇಮಕುಮಾರ್, ಕೆ.ಸಿ.ಮಂಜುನಾಥ ಮತ್ತಿತರರು ಅಭಿನಂದಿಸಿದ್ದಾರೆ.

Read More »

ಡೆಂಗ್ಯೂ ತಡೆಗೆ ಬೃಹತ್ ಆಂದೋಲನ

ಮಂಗಳೂರು: ಡೆಂಗ್ಯು ರೋಗ ನಿಯಂತ್ರಣ ಅಂಗವಾಗಿ ಇಂದು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಾನಗರಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಬೃಹತ್ ಆಂದೋಲನ ನಡೆಯಿತು. ಡೆಂಗ್ಯು ವ್ಯಾಪಕವಾಗಿ ಕಂಡುಬಂದಿರುವ ಗುಜ್ಜರಕೆರೆ, ಬೋಳಾರ, ಎಮ್ಮೆಕೆರೆ, ಮಹಾಕಾಲಿಪಡ್ಪು, ಮಂಗಳಾದೇವಿ ಈ. ಪ್ರದೇಶಗಳನ್ನು *ಗ್ರಿಡ್ 1* ಎಂದು ಪರಿಗಣಿಸಿ ವ್ಯವಸ್ಥಿತವಾಗಿ ಇಂದು ಈ ಪ್ರದೇಶಗಳಲ್ಲಿ ತೀವ್ರ ಪರಿಶೀಲನೆ, ತಪಾಸಣಾ ಚಟುವಟಿಕೆ ನಡೆಸಲಾಯಿತು.ಸುಮಾರು 250 ಕ್ಕೂ ಅಧಿಕ ಸಿಬ್ಬಂದಿಗಳು, ಸ್ವಯಂ ಸೇವಕರು, ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು.ಈ ಪ್ರದೇಶಗಳ ಮನೆ, ಉದ್ದಿಮೆ, …

Read More »

ಮಂಡ್ಯ ಜಿಲ್ಲೆಗೆ ಗೊರೂರು ಜಲಾಶಯದಿಂದ ನೀರು ಹರಿಸಲು ಒತ್ತಾಯ

ಮಂಡ್ಯ: ಜಿಲ್ಲೆಯಲ್ಲಿ ಒಣಗುತ್ತಿರುವಬೆಳೆಗಳನ್ನು ಉಳಿಸಲುಗೊರೂರು ಜಲಾಶಯದಿಂದ ನೀರು ಹರಿಸಿ ಸಂಕಷ್ಠದಲ್ಲಿರುವ ರೈತರನ್ನು ಕಾಪಾಡಬೇಕು ಎಂದು ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಒತ್ತಾಯಿಸಿದ್ದಾರೆ.ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಂದ್ರಶೇಖರ್ ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ನೀರನ್ನು ಹರಿಸಿದ ಮಾದರಿಯಲ್ಲಿಯೇ ಗೊರೂರು ಜಲಾಶಯದಿಂದ ನೀರನ್ನು ಹರಿಸಿ ರೈತರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಕೆ.ಆರ್.ಪೇಟೆ ಪಟ್ಟಣದ ಪುರಸಭೆಯ ಕುಡಿಯುವ ನೀರಿನ ಯೋಜನೆ ಹಾಗೂ ಒಳಚರಂಡಿ ಯೋಜನೆ ಸಂಪೂರ್ಣಗೊಳ್ಳಲು 50ಕೋಟಿ ರೂ ವಿಶೇಷವಾದ ಅನುದಾನ ಬಿಡುಗಡೆ …

Read More »

ಪುಸ್ತಕ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭ

ಮಂಡ್ಯ: ಇಲ್ಲಿನ ನುಡಿಭಾರತಿ ಸಮುದಾಯ ಭವನದಲ್ಲಿ ನಡೆದ ವೃತ್ತಿಯಲ್ಲಿ ಉಪನೋಂದಣಾಧಿಕಾರಿಯಾದರೂ ಪ್ರವೃತ್ತಿಯಲ್ಲಿ ಸಾಹಿತಿಯಾಗಿರುವ ಚಲುವರಾಜ್ ಕೋಲೂರು ಅವರ ‘ಮಾತನಾಡದ ಮೌನ’ ಕವನ ಸಂಕಲನ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ‌ ಈ ಸಮಾರಂಭದಲ್ಲಿ ಪ್ರಜಾವಾಣಿ ವರದಿಗಾರರಾದ ಯೋಗೇಶ್ ಮಾರೇನಹಳ್ಳಿ, ಚಲನಚಿತ್ರ ನಿರ್ದೇಶಕರಾದ ಡಾ.ಕೆ. ಗುರುದತ್, ಪ್ರಾಧ್ಯಾಪಕರಾದ ಡಾ.ವಿ.ಡಿ. ಸುವರ್ಣ, ಶಿಕ್ಷಣೋದ್ಯಮಿ ಅನಂತೇಗೌಡ, ಸಿಓಡಿ ಡಿವೈಎಸ್ಪಿ ಕೆ. ದೇವರಾಜ್, ಜಂಟಿ ಆಯುಕ್ತರಾದ ಸಂತೋಷ್ ಕುಮಾರ್, ರಂಗಕರ್ಮಿ ಡಾ. ಜನಾರ್ಧನ್ ಕೊಂಡ್ಲಿ, …

Read More »