Breaking News

ಸುದ್ದಿ

ಏಕಾಏಕಿ ಓಮಿನಿಗೆ ಬೆಂಕಿ ತಪ್ಪಿದ ಭಾರೀ ಅನಾಹುತ

ಚಿಕ್ಕೋಡಿ :ಚಲಿಸುತ್ತಿದ್ದ ಒಮಿನಿ ವಾಹನದಲ್ಲಿ ದಿಡೀರ್ ಬೆಂಕಿ ಕಾಣಿಸಿಕೊಂಡಿರುವ ಘಟನೆ ಸದಲಗಾ ಪಟ್ಟಣದಲ್ಲಿ ನಡೆದಿದೆ. ನೋಡ-ನೊಡುತ್ತಿದ್ದಂತೆಯೆ ಓಮಿನಿ ವಾಹನ ಹೊತ್ತಿ ಉರಿದಿದ್ದು, ಪ್ರಯಾಣಿಕರು ಬೆಂಕಿ ಹತ್ತುತ್ತಿದ್ದಂತೆಯೆ ಹೊರಬಂದು ಬಚಾವ್ ಆಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ‌ಸುತ್ತಲೂ ಜನ ನಿಂತು ನೊಡುವಾಗಲೇ ವಾಹನದ ಗ್ಯಾಸ್ ಸಿಲಿಂಡರ್ ಬ್ಲಾಸ್ಟ ಆಗಿದೆ.

Read More »

ಪ್ರತ್ಯೇಕ ಪ್ರಕರಣದಲ್ಲಿ ಎರಡು ಗಾಂಜಾ ಮಾರಾಟ ಜಾಲ ವಶ

ಬೆಳಗಾವಿ: ನಗರದಲ್ಲಿ ಪ್ರತಿಷ್ಠಿತ ಕಾಲೇಜ್ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ೨ ಪ್ರತ್ಯೆಕ ಜಾಲವನ್ನು ಪತ್ತೆ ಹಚ್ಚುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದು, ೮ ಜನರನ್ನು ಇಂದು ಬಂಧಿಸಿದ್ದಾರೆ. ಟ್ರಕ್ ಚಾಲಕ ಅಖಿಲಅಹ್ಮದ್ ಕುತಬುದ್ದೀನ್ ಮುನವಳ್ಳಿ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರಗಳಿಂದ ಮಾದಕ ದ್ರವ್ಯ ತರುತ್ತಿದ್ದ. ಆತೀಪ್ ನಜೀರ್ ಅಹಮ್ಮದ್ ಚಚಡಿ ಹಾಗೂ ಸಲ್ಮಾನ್ ಪತ್ತೆ ಖಾನ್ ಮಾರಾಟ ಮಾಡುತ್ತಿದ್ದರು. ಸೂರಜ್ ಕಲ್ಲಪ್ಪ ಅಗಸರ್ ಹಾಗೂ ಅಮೀರ್ ಅಬ್ದುಲ್ ಲತೀಫ್ ಬೇಗ್ …

Read More »

ಮಳೆಯಿಂದಾಗಿ ಮನೆ ಕುಸಿದು ವ್ಯಕ್ತಿ ಗಂಭೀರ ಗಾಯ

ಹುಬ್ಬಳ್ಳಿ: ನಗರದಲ್ಲಿ ಸುರಿದ ಮಳೆಗೆ ಮನೆ ಕುಸಿದ ಪರಿಣಾಮ ಓರ್ವನಿಗೆ ಗಂಭೀರ ಗಾಯವಾಗಿದ್ದು, ಅಪಾರ ಪ್ರಮಾಣದ ವಸ್ತುಗಳು ಹಾನಿಯಾದ ಘಟನೆ ಹೆಗ್ಗೇರಿಯ ಜೆಪಿನಗರದಲ್ಲಿ ನಡೆದಿದೆ.ಕಾಟವೆ ಎಂಬುವರಿಗೆ ಸೇರಿದ್ದ ಮನೆ ಇದ್ದಾಗಿದ್ದು, ನಗರದಲ್ಲಿ ಎರಡು ದಿನಗಳ‌ ಹಿಂದೆ ಸುರಿದ ಮಳೆಗೆ ಮನೆಯ ಗೋಡೆಗಳೆಲ್ಲಾ ಏಕಾಏಕಿ ಕುಸಿದಿವೆ. ಆ ಸಮಯದಲ್ಲಿ ಮನೆಯಲ್ಲಿದ್ದ ಪುಂಡಲೀಕ ಕಾಟವೆ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಮನೆಯ ಕುಸಿತದಿಂದ ಮನೆಯಲ್ಲಿದ್ದ ವಸ್ತುಗಳೆಲ್ಲಾ ನಜ್ಜುಗುಜ್ಜಾಗಿವೆ. ಇದರಿಂದ ಅಪಾರ …

Read More »

ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ, 3100 ದಂಡ

ಹುಬ್ಬಳ್ಳಿ:- ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೋಲಿಸ ಇಲಾಖೆ ಸಹಯೋಗದೊಂದಿಗೆ ಹಳೇ ಹುಬ್ಬಳ್ಳಿ ಪೋಲಿಸ ಠಾಣಾ ವ್ಯಾಪ್ತಿಯ ತಂಬಾಕು ಉತ್ಪನ್ನಗಳ ಅಂಗಡಿಗಳ ಮೇಲೆ ದಾಳಿ ನಡೆಸಿ ಒಟ್ಟು 20 ಪ್ರಕರಣಗಳನ್ನು ದಾಖಲಿಸಿ 3200 ರೂ ದಂಡ ವಿಧಿಸಿದ್ದಾರೆ.ಸದರಿ ದಾಳಿಯು ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಆದೇಶದ ಮಾಡಿದ್ದು, ಹಳೇಹುಬ್ಬಳ್ಳಿ ಪೋಲಿಸ್ ಠಾಣೆಯ ವ್ಯಾಪ್ತಿಯ ಪ್ರದೇಶಗಳಲ್ಲಿನ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಮೇಲೆ …

Read More »

ಯೂರಿಯಾ ಗೊಬ್ಬರ ಸೇವಿಸಿ ಜೊಡೆತ್ತುಗಳ ದುರಂತ ಸಾವು

ದಾವಣಗೆರೆ : ಬಸವಣ್ಣ ರೈತನ ಕೃಷಿ ಕಾರ್ಯ ಚಟುವಟಿಕೆಯ ಶ್ರಮಿಕ ಜೀವಿ, ರೈತನ ಸ್ನೇಹಿ ಈ ಅನ್ನದಾತ ಎತ್ತುಗಳು, ಹಳ್ಳಿಗಳಲ್ಲಿ ಎತ್ತುಗಳಿಂದಲೇ ಕೃಷಿ ಕೆಲಸ ಪ್ರಾರಂಭವಾಗುತ್ತದೆ, ಹೀಗಾಗಿ ರೈತರು ತಮ್ಮ ಎತ್ತುಗಳನ್ನು ಕಾಳಜಿಯಿಂದ ಸಾಕುತ್ತಾರೆ, ಅದೇ ರೀತಿ ಇಲ್ಲೊಬ್ಬ ರೈತ ತನ್ನ ಜೋಡೆತ್ತನ್ನು ಪ್ರೀತಿಯಿಂದ ಸಾಕಿದ್ದ, ಆದರೆ ದುರಾದೃಷ್ಟವಶಾತ್ ಎರಡು ಎತ್ತುಗಳು ಸಾವನ್ನಪ್ಪಿದ್ದು, ರೈತ ಕಣ್ಣೀರು ಹಿಡುವಂತಾಗಿದೆ..ಹೌದು.. ದಾವಣಗೆರೆ ತಾಲ್ಲೂಕಿನ ಮಲ್ಲಾಪುರದಲ್ಲಿ ರೈತ ಅಣ್ಣಪ್ಪ ’ಮಂಜ-ನಾಗ’ ಎಂಬ ಜೋಡೆತ್ತು ಪ್ರೀತಿಯಿಂದ …

Read More »

ಗೆಳೆಯನ ಮನೆಗೆ ಧಿಡೀರ ಸ್ಪೀಕರ್ ಭೇಟಿ

ಕೋಲಾರ : ನಗರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಧೀಡೀರನೆ ಪ್ರತ್ಯಕ್ಷ ನೀಡಿದ್ದಾರೆ.‌-ಶ್ರೀನಿವಾಸಪುರದ ಸ್ಪೀಕರ್ ಸ್ವಗ್ರಾಮ ಅಡ್ಡಗಲ್ ನಿಂದ ಕೋಲಾರದ ಗೆಳೆಯನ ಮನೆಗೆ ರಮೇಶ ಕುಮಾರ ಇಂದು ಆಗಮಿಸಿದ್ದಾರೆ.‌ಹದಿನೈದು ಶಾಸಕರ ರಾಜಿನಾಮೆ ವಿಚಾರವಾಗಿ ಇಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗುವ ಹಿನ್ನಲೆಯಲ್ಲಿ ಎಲ್ಲರ ಚಿತ್ತ ರಮೇಶ್ ಕುಮಾರ್ ಕಡೆಗೆ ನೆಟ್ಟಿದೆ.ಸ್ಪೀಕರ್ ರಮೇಶ್ ಕುಮಾರ್ ಮುಂದಿನ ನಡೆಯ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ‌ಸುಪ್ರೀಂ ತೀರ್ಪಿನ ನಂತರ ಬೆಂಗಳೂರು ಕಡೆಗೆ ಸ್ಪೀಕರ್ …

Read More »

ಉರಗ ತಜ್ಞ ಮುನ್ನಾ ಅವರಿಂದ ಹಾವುಗಳ ಪ್ರದರ್ಶನ

ಮಂಡ್ಯ: ಮಣಿಗನಹಳ್ಳಿಯ ಶ್ರೀ ಚಾಮುಂಡೇಶ್ವರಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಉರಗತಜ್ಞ ಸ್ನೇಕ್ ಮುನ್ನಾ ಅವರಿಂದ ಹಾವುಗಳ ಪ್ರದರ್ಶನ ಮಾಡಲಾಯಿತು. ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕೆ.ಆರ್. ಪೇಟೆಯಲ್ಲಿ ಪ್ರಕೃತಿಯ ಸಮತೋಲನದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಹಾವುಗಳು ರೈತನ ಮಿತ್ರನಾಗಿವೆ. ರೈತ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಹಾಳುಮಾಡುವ ತೋಡಗಳು, ಇಲಿಗಳು ಮತ್ತು ಕ್ರಿಮಿಕೀಟಗಳನ್ನು ತಿಂದುಹಾಕುವ ಹಾವುಗಳನ್ನು ಹೊಡೆದು ಸಾಯಿಸದೇ ಅವುಗಳ ಪಾಡಿಗೆ ಅವು ಜೀವನ ನಡೆಸಲು ಅನುವು ಮಾಡಿಕೊಡಬೇಕು. ಹಾವುಗಳನ್ನು ಹೊಡೆದು …

Read More »

ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ

ಚಿತ್ರದುರ್ಗ: ಹಿರಿಯೂರು ನಗರಸಭೆ ಸಿಬ್ಬಂದಿಗಳು ಇಂದು ಬೆಳ್ಳಂಬೆಳಗೆ ಏಕಾಏಕಿ ಅನಧಿಕೃತ ಗೂಡಂಗಡಿಗಳ ತೆರವು ಕಾರ‍್ಯಾಚರಣೆ ನಡೆಸಿದರು. ‌ಸುಗಮ ಟ್ರಾಪಿಕ್ ವ್ಯವಸ್ಥೆಗಾಗಿ ನಗರಸಭೆ ಸಿಬ್ಭಂದಿ ಇಲ್ಲಿನ ಹಿರಿಯೂರಿನ ಚಳ್ಳಕೆರೆರಸ್ತೆಯಲ್ಲಿನ ಅನದೀಕೃತ ಗೂಡಂಗಡಿಗಳನ್ನು ಜೆಸಿಬಿ ಬಳಸಿ ಕಾರ‍್ಯಾಚರಣೆಗಿಳಿದಿದ್ದಾರೆ.ಕಾರ್ಯಾಚರಣೆಗೆ ಸ್ಥಳೀಯರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ಥ ನೀಡಲಾಯಿತು. ‌

Read More »

ಮಧ್ಯಾಹ್ನದ ಬಿಸಿಯೂಟದಲ್ಲಿ ಹಲ್ಲಿ 50 ವಿದ್ಯಾರ್ಥಿಗಳು ಅಸ್ವಸ್ಥ

ಬೆಳಗಾವಿ : ಹಲ್ಲಿ ಬಿದ್ದಿರುವ ಮದ್ಯಾಹ್ನದ ಬಿಸಿಯೂಟ ಸೇವಿಸಿ ಸುಮಾರು 50 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿರುವ ಸರಕಾರಿ ಶಾಲೆಯಲ್ಲಿ ಹಲ್ಲಿ ಬಿದ್ದ ಮದ್ಯಾಹ್ನದ ಬಿಸಿಯೂಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ವಿದ್ಯಾರ್ಥಿಗಳು ಊಟ ಮಾಡುವಾಗ ತಟ್ಟೆಯಲ್ಲಿ ಹಲ್ಲಿಯ ದೇಹದ ತುಂಡು ಕಾಣಿಸಿಕೊಳ್ಳುತ್ತಿದ್ದಂತೆಯೇ ಶಿಕ್ಷಕರಿಗೆ ತಿಳಿಸಿದ್ದಾರೆ ತಕ್ಷಣ ಆಹಾರ ಪಾತ್ರೆಯನ್ನು ಪರಿಶೀಲಿಸಿದಾಗ …

Read More »

ವಿಶ್ವಾಸ ಮತದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದ ಖಾದರ್

ಮಂಗಳೂರು: ನಮ್ಮದು ಒಂದೇ ಸರ್ಕಾರ, ಅದುವೇ ಮೈತ್ರಿ ಸರ್ಕಾರ. ನಾಳೆ ನಾವು ವಿಶ್ವಾಸ ಮತ ಯಾಚಿಸುತ್ತೇವೆ. ವಿಶ್ವಾಸ ಮತದಲ್ಲಿ ನಾವು ಗೆಲ್ಲುತ್ತೇವೆ.‌ನಾವು ವಿಶ್ವಾಸ ಗೆಲ್ಲುವ ‘ವಿಶ್ವಾಸ’ ಇದೆ ಎಂದು ಸಚಿವ ಯು.ಟಿ. ಖಾದರ ವಿಶ್ವಾಸ ವ್ಯಕ್ತಪಡಿಸಿದರು.ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಡುವೆ ಕಾಂಗ್ರೆಸ್, ಜೆಡಿಎಸ್ ಎಂಬ ಭಿನ್ನತೆ ಇಲ್ಲ.ನಾವೆಲ್ಲಾ ಅಣ್ಣ ತಮ್ಮಂದಿರು.‌ಉತ್ತಮ ಕುಟುಂಬದಲ್ಲಿ ಒಮ್ಮೊಮ್ಮೆ ಭಿನ್ನತೆ ಕಾಣುತ್ತದೆ ಎಂದು ತಿಳಿಸಿದರು. ‌ವಿಶ್ವಾಸ ಮತ ಯಾಚನೆ ವೇಳೆ ಹಲವರಿಗೆ ಮಾತನಾಡುವ …

Read More »