Breaking News

ಸುದ್ದಿ

ಗೆಳೆಯನ ಮನೆಗೆ ಧಿಡೀರ ಸ್ಪೀಕರ್ ಭೇಟಿ

ಕೋಲಾರ : ನಗರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಧೀಡೀರನೆ ಪ್ರತ್ಯಕ್ಷ ನೀಡಿದ್ದಾರೆ.‌-ಶ್ರೀನಿವಾಸಪುರದ ಸ್ಪೀಕರ್ ಸ್ವಗ್ರಾಮ ಅಡ್ಡಗಲ್ ನಿಂದ ಕೋಲಾರದ ಗೆಳೆಯನ ಮನೆಗೆ ರಮೇಶ ಕುಮಾರ ಇಂದು ಆಗಮಿಸಿದ್ದಾರೆ.‌ಹದಿನೈದು ಶಾಸಕರ ರಾಜಿನಾಮೆ ವಿಚಾರವಾಗಿ ಇಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗುವ ಹಿನ್ನಲೆಯಲ್ಲಿ ಎಲ್ಲರ ಚಿತ್ತ ರಮೇಶ್ ಕುಮಾರ್ ಕಡೆಗೆ ನೆಟ್ಟಿದೆ.ಸ್ಪೀಕರ್ ರಮೇಶ್ ಕುಮಾರ್ ಮುಂದಿನ ನಡೆಯ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ‌ಸುಪ್ರೀಂ ತೀರ್ಪಿನ ನಂತರ ಬೆಂಗಳೂರು ಕಡೆಗೆ ಸ್ಪೀಕರ್ …

Read More »

ಉರಗ ತಜ್ಞ ಮುನ್ನಾ ಅವರಿಂದ ಹಾವುಗಳ ಪ್ರದರ್ಶನ

ಮಂಡ್ಯ: ಮಣಿಗನಹಳ್ಳಿಯ ಶ್ರೀ ಚಾಮುಂಡೇಶ್ವರಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಉರಗತಜ್ಞ ಸ್ನೇಕ್ ಮುನ್ನಾ ಅವರಿಂದ ಹಾವುಗಳ ಪ್ರದರ್ಶನ ಮಾಡಲಾಯಿತು. ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕೆ.ಆರ್. ಪೇಟೆಯಲ್ಲಿ ಪ್ರಕೃತಿಯ ಸಮತೋಲನದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಹಾವುಗಳು ರೈತನ ಮಿತ್ರನಾಗಿವೆ. ರೈತ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಹಾಳುಮಾಡುವ ತೋಡಗಳು, ಇಲಿಗಳು ಮತ್ತು ಕ್ರಿಮಿಕೀಟಗಳನ್ನು ತಿಂದುಹಾಕುವ ಹಾವುಗಳನ್ನು ಹೊಡೆದು ಸಾಯಿಸದೇ ಅವುಗಳ ಪಾಡಿಗೆ ಅವು ಜೀವನ ನಡೆಸಲು ಅನುವು ಮಾಡಿಕೊಡಬೇಕು. ಹಾವುಗಳನ್ನು ಹೊಡೆದು …

Read More »

ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ

ಚಿತ್ರದುರ್ಗ: ಹಿರಿಯೂರು ನಗರಸಭೆ ಸಿಬ್ಬಂದಿಗಳು ಇಂದು ಬೆಳ್ಳಂಬೆಳಗೆ ಏಕಾಏಕಿ ಅನಧಿಕೃತ ಗೂಡಂಗಡಿಗಳ ತೆರವು ಕಾರ‍್ಯಾಚರಣೆ ನಡೆಸಿದರು. ‌ಸುಗಮ ಟ್ರಾಪಿಕ್ ವ್ಯವಸ್ಥೆಗಾಗಿ ನಗರಸಭೆ ಸಿಬ್ಭಂದಿ ಇಲ್ಲಿನ ಹಿರಿಯೂರಿನ ಚಳ್ಳಕೆರೆರಸ್ತೆಯಲ್ಲಿನ ಅನದೀಕೃತ ಗೂಡಂಗಡಿಗಳನ್ನು ಜೆಸಿಬಿ ಬಳಸಿ ಕಾರ‍್ಯಾಚರಣೆಗಿಳಿದಿದ್ದಾರೆ.ಕಾರ್ಯಾಚರಣೆಗೆ ಸ್ಥಳೀಯರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ಥ ನೀಡಲಾಯಿತು. ‌

Read More »

ಮಧ್ಯಾಹ್ನದ ಬಿಸಿಯೂಟದಲ್ಲಿ ಹಲ್ಲಿ 50 ವಿದ್ಯಾರ್ಥಿಗಳು ಅಸ್ವಸ್ಥ

ಬೆಳಗಾವಿ : ಹಲ್ಲಿ ಬಿದ್ದಿರುವ ಮದ್ಯಾಹ್ನದ ಬಿಸಿಯೂಟ ಸೇವಿಸಿ ಸುಮಾರು 50 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿರುವ ಸರಕಾರಿ ಶಾಲೆಯಲ್ಲಿ ಹಲ್ಲಿ ಬಿದ್ದ ಮದ್ಯಾಹ್ನದ ಬಿಸಿಯೂಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ವಿದ್ಯಾರ್ಥಿಗಳು ಊಟ ಮಾಡುವಾಗ ತಟ್ಟೆಯಲ್ಲಿ ಹಲ್ಲಿಯ ದೇಹದ ತುಂಡು ಕಾಣಿಸಿಕೊಳ್ಳುತ್ತಿದ್ದಂತೆಯೇ ಶಿಕ್ಷಕರಿಗೆ ತಿಳಿಸಿದ್ದಾರೆ ತಕ್ಷಣ ಆಹಾರ ಪಾತ್ರೆಯನ್ನು ಪರಿಶೀಲಿಸಿದಾಗ …

Read More »

ವಿಶ್ವಾಸ ಮತದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದ ಖಾದರ್

ಮಂಗಳೂರು: ನಮ್ಮದು ಒಂದೇ ಸರ್ಕಾರ, ಅದುವೇ ಮೈತ್ರಿ ಸರ್ಕಾರ. ನಾಳೆ ನಾವು ವಿಶ್ವಾಸ ಮತ ಯಾಚಿಸುತ್ತೇವೆ. ವಿಶ್ವಾಸ ಮತದಲ್ಲಿ ನಾವು ಗೆಲ್ಲುತ್ತೇವೆ.‌ನಾವು ವಿಶ್ವಾಸ ಗೆಲ್ಲುವ ‘ವಿಶ್ವಾಸ’ ಇದೆ ಎಂದು ಸಚಿವ ಯು.ಟಿ. ಖಾದರ ವಿಶ್ವಾಸ ವ್ಯಕ್ತಪಡಿಸಿದರು.ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಡುವೆ ಕಾಂಗ್ರೆಸ್, ಜೆಡಿಎಸ್ ಎಂಬ ಭಿನ್ನತೆ ಇಲ್ಲ.ನಾವೆಲ್ಲಾ ಅಣ್ಣ ತಮ್ಮಂದಿರು.‌ಉತ್ತಮ ಕುಟುಂಬದಲ್ಲಿ ಒಮ್ಮೊಮ್ಮೆ ಭಿನ್ನತೆ ಕಾಣುತ್ತದೆ ಎಂದು ತಿಳಿಸಿದರು. ‌ವಿಶ್ವಾಸ ಮತ ಯಾಚನೆ ವೇಳೆ ಹಲವರಿಗೆ ಮಾತನಾಡುವ …

Read More »

ನೆರವೇರದ ಚಾಮರಾಜೇಶ್ವರಿ ರಥೋತ್ಸವ ನವದಂಪತಿಗಳಿಗೆ ವಿರಹ ವೇದನೆ

ಚಾಮರಾಜನಗರ: ಪ್ರತಿವರ್ಷ ಆಷಾಢ ಬಂತೆಂದರೆ ಅದು ನವದಂಪತಿಗಳ ಪಾಲಿಗೆ ವಿರಹವೇದನೆ ಅನುಭವಿಸುವ ಕಾಲ. ಹೀಗೆ ಹೊಸದಾಗಿ ಮದುವೆಯಾದ ದಂಪತಿಗಳನ್ನು ಒಂದುಗೂಡಿಸುತ್ತಿದ್ದುದೇ ಚಾಮರಾಜನಗರದ ಚಾಮರಾಜೇಶ್ವರ ರಥೋತ್ಸವ. ದುರಾದೃಷ್ಟವಶಾತ್ ಕಳೆದ ವರ್ಷದಂತೆ ಇಂದೂ ಸಹ ತೇರು ಜರುಗದೇ, ನವದಂಪತಿಗಳು ನಿರಾಸೆ ಅನುಭವಿಸಿದರು. ಹಾಗಾದ್ರೆ ಆಷಾಢ ರಥೋತ್ಸವ ಯಾಕೆ ನಡೆಯಲಿಲ್ಲ ಅಂತೀರಾ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್…. ಚಾಮರಾಜೇಶ್ವರ ದೇವಸ್ಥಾನದ ಇತಿಹಾಸವೇ ಅಂತಾದ್ದು. 1836 ರಲ್ಲಿ ತಮ್ಮ ತಂದೆ ಚಾಮರಾಜ ಒಡೆಯರ್ ನೆನಪಿನಾರ್ಥ ಮುಮ್ಮಡಿ …

Read More »

ಸುಪ್ರೀಂ ವಿಶ್ವಾಸಕ್ಕೆ ಬದ್ದ: ರಮೇಶ ಕುಮಾರ

ಕೋಲಾರ: ಸಂವಿಧಾನ ಆಶಯಗಳಿಗೆ, ಸುಪ್ರಿಂ ವಿಶ್ವಾಸಕ್ಕೆ ಬದ್ದವಾಗಿ ನಡೆದುಕೊಳ್ಳುವೆ.ಸೂಕ್ತ ಸಮಯಕ್ಕೆ, ವಿಳಂಬವಿಲ್ಲದೆ ಕೆಲಸವನ್ನು ನಿರ್ವಹಿಸುತ್ತೇನೆ ಎಂದು ಸ್ಪೀಕರ್ ರಮೇಶ ಕುಮಾರ ಹೇಳಿದರು.ಸುಪ್ರೀಂ ತೀರ್ಪಿನ ಕುರಿತಾದ ಪ್ರತಿಕ್ರಿಯೆ ನೀಡಿದ ಅವರು, ಸುಪ್ರಿಂ ಮಾರ್ಮಿಕವಾಗಿ ಹೇಳಿರುವುದನ್ನು ಗೌರವಿಸಿ ನಡೆದುಕೊಳ್ಳುತ್ತೇನೆ. ಗುರುವಾರ ವಿಶ್ವಾಸ ಮತ ಯಾಚನೆಗೆ ಅಡ್ಡಿಯಿಲ್ಲ, ಅನುಮಾನ ಬೇಡ ಎಂದು ತಿಳಿಸಿದರು.

Read More »

ಭಕ್ತರ ಭಕ್ತಿಗೆ ಮೆಚ್ಚಿ ಮಾತಾ ಮಾಣಿಕೇಶ್ವರಿ ದಿವ್ಯ ದರ್ಶನ

ಯಾದಗಿರಿ: ಜಿಲ್ಲೆಯ ಗುರುಮಠಕಲ್ ಸಮೀಪದ ಯಾನಾಗುಂದಿ ಕೋಟ್ಯಾಂತರ ಭಕ್ತರ ನಿರಂತರ ಪ್ರಾರ್ಥನೆಯ ಫಲವಾಗಿ ಗುರುಪೂರ್ಣಿಮೆಯ ದಿನ ಮಾತಾ ಮಾಣಿಕೇಶ್ವರಿ ಅಮ್ಮನವರು ಮಾಣಿಕ್ಯಗಿರಿಯಲ್ಲಿ ಭಕ್ತರಿಗೆ ದಿವ್ಯ ದರ್ಶನ ನೀಡಿದ್ದಾರೆ.ಅನಾರೋಗ್ಯದ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದ ಮಾತಾ ಮಾಣಿಕೇಶ್ವರಿ ಅಮ್ಮನವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ಹಾಸಿಗೆಯಿಂದ ಹೊರಬಂದು ವ್ಹೀಲ್ ಚೇರ್ ಮೇಲೆ ಅಮ್ಮ ಭಕ್ತರಿಗೆ ದರ್ಶನ ನೀಡಿದ್ದಾರೆ.ತಾಲೂಕಿನ ಯಾನಾಗುಂದಿಯ ಮಾಣಿಕ್ಯಗಿರಿ ಬೆಟ್ಟದ ಹಿಂಬದಿಯಲ್ಲಿರುವ, ಗುಹೆಯ ಹೊರಭಾಗದ ಆಸನದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ …

Read More »

ನಿವೇಶನ ಖಾತೆ ಮಾಡದ್ದನ್ನು ವಿರೋಧಿಸಿ ಪ್ರತಿಭಟನೆ

ಚಿತ್ರದುರ್ಗ: ನಿವೇಶನ ಖಾತೆ ಮಾಡಿ ಕೊಟ್ಟಿಲ್ಲ ಎಂದು ಆರೋಪಿಸಿ ಇಂದು ಚಳ್ಳಕೆರೆ ತಾಲೂಕು ಪಂಚಾಯತಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.ಕಳೆದ ಇಪತ್ತು ವರ್ಷದ ಕೆಳಗೆ ಈರಣ್ಣ ಎನ್ನುವ ವ್ಯಕ್ತಿಗೆ ದೊಡ್ಡೇರಿ ಗೊಲ್ಲರಹಟ್ಟಿಯಲ್ಲಿ ಖಾಲಿ ನಿವೇಶನ ನೀಡಲಾಗಿತ್ತು.ಆದರೆ ಕಾರಣಾತರದಿಂದ ದೇವರ ಮರಿಕುಂಟೆ ಗ್ರಾಮದಲ್ಲಿ ನೆಲಸಿದ್ದು. ಕಳೆದ ಮೂರು ತಿಂಗಕೆಳಗೆ ಗ್ರಾಮಕ್ಕೆ ವಾಪಸ್ಸಾಗಿದ್ದು ತಮ್ಮ ನಿವೇಶನ ಖಾತೆ ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದಾದ ನಿವೇಶನ ಈರಣ್ಣನ ಹೆಸರಿನಲಿಲ್ಲ ಎಂದು ತಿಳಿದು ಬಂದ ಹಿನ್ನಲೆಯಲ್ಲಿ …

Read More »

ಬಸ್ ಓವರ್ ಟೇಕ್ ಮಾಡಲು ಹೋಗಿ ವ್ಯಕ್ತಿ ಸಾವು

ಆನೇಕಲ್ ;ಬಸ್ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆಬೆಂಗಳೂರು ಹೊರವಲಯ ವೀರಸಂದ್ರದ ಡಿ ಮಾರ್ಟ್ ಬಳಿ ನಡೆದಿದೆ.ಮೃತ ವ್ಯಕ್ತಿ ವಿವರ ತಿಳಿದುಬಂದಿಲ್ಲ.ಬಸ್ ಅನ್ನು ಓವರ್ ಟೇಕ್ ಮಾಡುವ ಬರದಲ್ಲಿ ಬಸ್ ನ ಚಕ್ರಕ್ಕೆ ಸಿಲುಕಿದ ವ್ಯಕ್ತಿ ಸಾವನ್ನಪ್ಪಿದ್ದಾನೆ.ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

Read More »