admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜಿಲ್ಲೆಯ ತೆಂಡೇಕೆರೆ ಗ್ರಾಮದಲ್ಲಿ ಸಮಗ್ರ ಕೃಷಿ ಅಭಿಯಾನದ ಅಂಗವಾಗಿ ಕೃಷಿ ವಸ್ತು ಪ್ರದರ್ಶನ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು.ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣ ತೆಂಡೇಕೆರೆಜಿಲ್ಲಾ ಪಂಚಾಯತಿ ಕೃಷಿ ಕೈಗಾರಿಕೆ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು ಮಾತನಾಡಿ, ರೈತರು ವೈಜ್ಞಾನಿಕವಾಗಿ ಬೇಸಾಯ ಮಾಡಿ ಹೆಚ್ಚಿನ ಇಳುವರಿಯನ್ನು ಪಡೆಯಬೇಕು.ಏಕ ಬೆಳೆ ಪದ್ಧತಿಯನ್ನು ಅನುಸರಿಸದೇ ಮಿಶ್ರಬೆಳೆ ಪದ್ದತಿಯನ್ನು ಅನುಸರಿಸಿ ಹೆಚ್ಚಿನ ಲಾಭಗಳಿಸುವ ಮೂಲಕ ಕೃಷಿಯನ್ನು ಲಾಭದಾಯಕ ಉಧ್ಯಮವನ್ನಾಗಿಸಿಕೊಳ್ಳಬೇಕು ಎಂದು ಮಂಜು ಕರೆ ನೀಡಿದರು.ತಾ.ಪಂ ಸದಸ್ಯೆ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಾಮರಾಜನಗರ: ಜಿಲ್ಲೆಯಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತದ ಬಳಿ ಕತ್ತು ಕೊಯ್ದು ಗೃಹಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಭರಚುಕ್ಕಿ ಜಲಪಾತ ಬಳಿಯ ಮಯೂರ ಪ್ರವಾಸಿ ಮಂದಿರದ ಕಾವೇರಿ ನದಿ ದಂಡೆ ಮೇಲೆ ಗೃಹಿಣಿಯ ಕೊಲೆ ಮಾಡಲಾಗಿದೆ. ಬಂಡೆ ಮೇಲೆ ಕತ್ತು ಸೀಳಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದ್ದು, ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದರು. ಶವದ ಪಕ್ಕದಲ್ಲಿ ಪುರುಷನ ಪ್ಯಾಂಟ್, ಗೃಹಿಣಿಯ ಚಪ್ಪಲಿ, ಜ್ಯೂಸ್ ಬಾಟಲಿ, ಬಟ್ಟೆಸೋಪು ಮತ್ತು …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕಬಳ್ಳಾಪುರ: ಭ್ರಷ್ಟ ನಗರಸಭೆ ಆಯುಕ್ತ ಚಲಪತಿ ವಿರುದ್ದ ಹಿಡಿ ಶಾಪ ಹಾಕುತ್ತಾ, ಸಾರ್ವಜನಿಕರು ನಗರಸಭೆ ಮುಂದೆ ಬಿಂದಿಗೆಗಳನ್ನು ಹಿಡಿದು ಪ್ರತಿಭಟನೆ ಮಾಡುತ್ತಿರುವ ದೃಶ್ಯ ಆಂದ್ರ ಪ್ರದೇಶದ ಗಡಿ ಜಿಲ್ಲೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿಂದು ಕಂಡು ಬಂದಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು ಪುರಸಭೆಯಿಂದ ಮೇಲ್ದರ್ಜೆಗೆ ಏರಿ ಕೇವಲ ಎರಡು ಮೂರು ವರ್ಷಗಳು ಕಳೆದಿವೆ ಇಲ್ಲಿ ಇದುವರೆಗೂ ನಾಲ್ಕೈದು ನಗರಸಭೆ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದಾರೆ , ಇದೇ ನಗರಸಭೆಯಲ್ಲಿ ಆರ್ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಾಮರಾಜನಗರ: ಎಸ್.ಡಿ.ಪಿ.ಐ ಹಾಗೂ ಪಿ.ಎಫ್ ಐ ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಬಿ ಜೆ ಪಿ ಕಾರ್ಯಕರ್ತರು ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಜಿಲ್ಲಾಡಳಿತ ಭವನದ ಮುಂಭಾಗ ಕೆಲಕಾಲ ಧರಣಿ ನಡೆಸಿದರು.ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ.ಮಲ್ಲಿಕಾರ್ಜುನಪ್ಪ, ಎಸ್ ಡಿ ಪಿ ಐ ಹಾಗೂ ಪಿ ಎಫ್ ಐ ಸಂಘಟನೆಗಳು ನಮ್ಮ ಪಕ್ಷವನ್ನು ಬಹಳ ಕೀಳು ಮಟ್ಟದಿಂದ ಕಂಡು ಸಮಾಜದಲ್ಲಿ …
Read More »
admin
September 12, 2019
ಕರ್ನಾಟಕ, ಸುದ್ದಿ
ರಾಮನಗರ: ಇಂದು ವಿಶ್ವಾದ್ಯಂತಕ್ರಿಕೆಟ್ ಜ್ವರ ಹಬ್ಬಿಸಿರುವ ವಿಶ್ವಕಪ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಟೀಂ ಇಂಡಿಯಾಗೆ ನಾಲ್ಕನೇ ಭಾರಿ ಫೈನಲ್ ಗೇರುವ ಹಂಬಲದಲ್ಲಿದೆ. ಕ್ರಿಕೆಟ್ ಅಭಿಮಾನಿಗಳನ್ನ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿರುವ ಎರಡು ತಂಡಗಳ ನಡುವಿನ ಕದನಕ್ಕೆ ಓಲ್ಡ್ ಟ್ರಾಫರ್ಡ್ ಮೈದಾನ ಸಜ್ಜಾಗಿದೆ. ಟೀಂ ಇಂಡಿಯಾ ಗೆದ್ದುಬರಲಿ ಎಂದು ರೇಷ್ಮೆನಗರಿ ರಾಮನಗರ ಜಿಲ್ಲೆಯ ಕ್ರಿಕೆಟ್ ಅಭಿಮಾನಿಗಳು ಹಾರೈಸಿದ್ದಾರೆ. ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ತರಬೇತಿ ಪಡೆಯುತ್ತಿರುವ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನಲೆ ೬ ಸೇತುವೆಗಳು ಹಾಗೂ ದೇವಸ್ತಾನಗಳು ಮುಳುಗಡೆ ಹೊಂದಿದೆ. ಕೃಷ್ಣಾ ನದಿಗೆ ಸುಮಾರು 25000 ಕ್ಯಸಕ್ಸ ನೀರು ಹರಿದು ಬರುತ್ತಿರುವದರಿಂದ ಸುಪ್ರಸಿದ್ದ ಕೊಲ್ಲಾಪುರ ಜಿಲ್ಲೆಯ ನರಸಿಂಹನ ದೇವಸ್ತಾನ, ಯಕ್ಸಂಬಾ ಪಟ್ಟದ ಹೊರವಲಯದ ದಾದಪೀರ ಮಸಿದಿ ಮುಳುಗಡೆಯಾಗಿವೆ.ಕಲ್ಲೋಳ_ ಯಡೂರ, ಕಾರದಗಾ_ ಭೋಜ, ಭೊಜವಾಡಿ_ ಕುಣ್ಣುರ, ಸಿದನಾಳ , ಜತರಾಟ_ ಭಿವಶಿ, ಮಲಿಕವಾಡ_ ದತ್ತವಾಡ ಸೇತುವೆ ಮುಳುಗಡೆಗೊಂಡಿವೆ.ದೇವಸ್ತಾನಕ್ಕೆ ಬರುವ ಭಕ್ತರಿಗೆ ಹಾಗೂ ಸೇತುವೆ ಮೂಲಕ ಹಾಯ್ದು ಹೋಗುವ …
Read More »
admin
September 12, 2019
ಕರ್ನಾಟಕ, ಸುದ್ದಿ
ದಾವಣಗೆರೆ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಕ್ಕೆ ದಿನಗಣನೆ ಆರಂಭಗೊಂಡಿರುವ ಹಿನ್ನಲೆಯಲ್ಲಿದಾವಣಗೆರೆಯಲ್ಲಿ ಜೆಡಿಎಸ್ ಮುಖಂಡ ಅಮಾನುಲ್ಲ ಖಾನ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಉರುಳು ಸೇವೆ ಮಾಡುವ ಮೂಲಕ ಸರ್ಕಾರವನ್ನು ಉಳಿಸುವಂತೆ ದಾವಣಗೆರೆ ನಗರ ದೇವತೆ ದುರ್ಗಾಂಭ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ಸರ್ಕಾರ ಸುಭದ್ರವಾಗಿರಲಿ, ಕುಮಾರಸ್ವಾಮಿಯೆ ಸಿಎಂ ಆಗಿ ಮುಂದುವರಿಯಲು ಎಂದು ಪ್ರಾರ್ಥನೆ ಸಲ್ಲಿಸಿದರು. ಸಮ್ಮಿಶ್ರ ಸರ್ಕಾರಕ್ಕೆ ಬಂದ ಸಂಕಷ್ಟ ದೂರಾಗಲಿ, ವಿರೋಧಿಗಳ ಕುತಂತ್ರ ಫಲಿಸದಂತೆ ಕಾರ್ಯಕರ್ತರು ದೇವಿಗೆ ಬೇಡಿಕೊಂಡರು.
Read More »
admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ: ಬಿಜೆಪಿ ನಾಯಕರು ಶಾಸಕರ ಖರೀದಿ ಮಾಡುತ್ತಿದ್ದಾರೆ. ಹಾಗೂ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಆರೋಪಿಸಿಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು. ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಕಾರ್ಯಕರ್ತರು ಪ್ರಜಾಪ್ರಭುತ್ವ ಕಗ್ಗೊಲೆ ಮಾಡುತ್ತಿರುವ ಬಿಜೆಪಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
Read More »
admin
September 12, 2019
ಕರ್ನಾಟಕ, ಸುದ್ದಿ
ಆನೇಕಲ್:ಬೆಳ್ಳಂಬೆಳ್ಳಿಗೆ ಶಾಲಾ ಬಸ್ ಹಾಗು ಗಾರ್ಮೆಂಟ್ಸ್ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಶಾಲಾ ಮಕ್ಕಳು ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗೊಂಡಿರುವಂತಹ ಘಟನೆ ಬೆಂಗಳೂರು ಹೊರವಲಯ ಬನ್ನೇರುಘಟ್ಟ ರಸ್ತೆಯ ಜಂಗಲ್ ಪಾಳ್ಯ ರಸ್ತೆಯಲ್ಲಿ ನಡೆದಿದೆ.ಹೌದು ಇಂದು ಬೆಳಿಗ್ಗೆ 8.30 ರ ಸುಮಾರಿಗೆ ಬನ್ನೇರುಘಟ್ಟ ಜಂಗಲ್ ಪಾಳ್ಯ ರಸ್ತೆಯಲ್ಲಿ ರಾಯಲ್ ಇಂಟರ್ ನ್ಯಾಷನಲ್ ಶಾಲಾ ಬಸ್ ಹಾಗು ಖಾಸಗಿ ಗಾರ್ಮೆಂಟ್ಸ್ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ನಾಲ್ವರು …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಗಳೂರು: ನಿನ್ನೆ ಪಂಪ್ ವೆಲ್ ನಲ್ಲಿ ಗೂಡ್ಸ್ ಟೆಂಪೋ ಚಾಲಕನ ಮೇಲೆ ಹಲ್ಲೆ ಮಾಡಿದ ರೌಡಿ ಶೀಟರ್ ಮೇಲೆ ಪೊಲೀಸ್ ಗುಂಡಿನ ದಾಳಿ ನಡೆಸಿದ್ದಾರೆ.ಹಲ್ಲೆ ಕೇಸಲ್ಲಿ ಭವಿತ್ ರಾಜ್ ಭಾಗಿಯಾಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕಂಕನಾಡಿ ಪೊಲೀಸರು ಬಂಧಿಸಲು ಹೋದಾಗ ಆರೋಪಿ ಭವಿತ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.ಹೀಗಾಗಿ ಪೊಲೀಸರು ಸ್ವರಕ್ಷಣೆಗಾಗಿ ರೌಡಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Read More »