admin
September 12, 2019
ಕರ್ನಾಟಕ, ಸುದ್ದಿ
ರಾಮನಗರ: ಮಗಳನ್ನು ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಪ್ರಕರಣನಡು ರಸ್ತೆಯಲ್ಲಿ ಯುವಕನಿಗೆ ಥಳಿಸುತ್ತಿರುವ ವೀಡಿಯೋ ವೈರಲ್ ಆಗಿದೆ.ನಿನ್ನೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ರಸ್ತೆಯ ಆನೆಹಳ್ಳ ಬಳಿ ಘಟನೆ ನಡೆದಿತ್ತು ಮಾನಗಲ್ ನಿವಾಸಿ ರವಿ ಎಂಬಾತನನ್ನ ಕೊಚ್ಚಿ ಕೊಲೆ ಮಾಡಲಾಗಿದೆ.ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಾನಗಲ್ ಗ್ರಾಮದ ನಿವಾಸಿ ಕೊಲೆಯಾದ ರವಿ ತನ್ನ ಹತ್ತಿರದ ಸಂಬಂಧಿಯನ್ನೇ ಪ್ರೀತಿಸುತ್ತಿದ್ದಪ್ರೀತಿಗೆ ಹುಡುಗಿ ಮನೆಯವರ ವಿರೋಧವಿತ್ತುಬುದ್ದಿ ಮಾತು ಹೇಳದೆ ಹೀನಾಯವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತುಈ ಸಂಬಂದ ಮಾಗಡಿ …
Read More »
admin
September 12, 2019
ಕರ್ನಾಟಕ, ಸುದ್ದಿ
ಕೋಲಾರ: ಗ್ರಾಮ ಲೆಕ್ಕಾಧಿಕಾರಿಯೊಬ್ಬ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೆಜಿಎಫ್ ನಗರದ ಭೂಮಿ ಕೇಂದ್ರದ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಬಲೆಗೆ ಬಿದ್ದ ನೌಕರ. ಕೋಡಿಗೇಪಲ್ಲಿಯ ಹಸನ್ ಬಳಿ ಖಾತ ಬದಲಾಯಿಸಲು 5 ಸಾವಿರ ರುಪಾಯಿ ಲಂಚ ಪಡೆವಾಗ ಹಣದ ಸಹಿತ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಬೆಳಗಾವಿ: ರಮೇಶ ಜಾರಕಿಹೊಳಿ ರಾಜೀನಾಮೆಯಲ್ಲಿ ಬಿಜೆಪಿಯ ಇನ್ವಾಲ್ವಮೆಂಟ್ ಎನೂ ಇಲ್ಲ. ಆದರೆ ಅವರು ಬಿಜೆಪಿಗೆ ಬಂದರೆ ನನ್ನ ಸಪೋರ್ಟ ಇದೆ ಎಂದು ಅರೆಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆನಂದ್ ಸಿಂಗ್ ರಾಜೀನಾಮೆ ಕುರಿತು ನಾನು ಮಾಧ್ಯಮಗಳಿಂದ ತಿಳಿದೆ ಜಿಂದಾಲ್ ವಿಷಯಕ್ಕೆ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ ಎಂದರು.ಇನ್ನು ರಮೇಶ ಜಾಕಿಹೊಳಿ ರಾಜೀನಾಮೆ ಕುರಿತು ಮಾತನಾಡಿ, ಅವರು ನನ್ನ ಸಂಪರ್ಕದಲ್ಲಿಲ್ಲ ರಾಜೀನಾಮೆ ಕಾರಣದ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಸಿದ್ಧಾರೂಢ ಮಠಕ್ಕೆ ಕರೆದುಕೊಂಡು ಹೋಗುವುದಾಗಿ ಸವದತ್ತಿ ಮೂಲದ ವ್ಯಕ್ತಿಯನ್ನು ನಂಬಿಸಿ ಆಟೋದಲ್ಲಿ ಗದಗ ರಸ್ತೆಯ ಹೊರ ವಲಯಕ್ಕೆ ಕರೆದುಕೊಂಡು ಹೋಗಿ ಹಲ್ಲೆಮಾಡಿ, ಹಣ, ಮೊಬೈಲ್ ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸವದತ್ತಿ ಮೂಲದ ಮೌಳೇಶ ದಿನ್ನಿಮನಿ ಹಣ ಕಳೆದುಕೊಂಡವರು. ಆಟೋ ಚಾಲಕ ರಮೇಶ ಪಾಂಚಾನ, ಲಕ್ಷ್ಮೀ, ಶಶಿಕಲಾ ಹಾಗೂ ರಾಜು ಬಂಧಿತರು.ಇಬ್ಬರು ಪುರುಷರು ಹಾಗೂ ಮಹಿಳೆಯರು ಸೇರಿ ಪ್ರಯಾಣಿಕರ ಸೋಗಿನಲ್ಲಿ ಸುಲಿಗೆ ಮಾಡಿದ್ದರು.ಕೂಡಲೇ ಜಾಗೃತರಾದ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕಬಳ್ಳಾಪುರ: ಮದುವೆಯಾಗುವದಾಗಿ ನಂಬಿಸಿ ಅತ್ಯಾಚಾರ ಎಸಗಿರುವದಾಗಿ ಕಿರುತೆರೆ ನಟನ ಮೇಲೆ ಕಿರುತೆರೆ ನಟಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.ಮೈಸೂರು ಮೂಲದ ಕಿರುತೆರೆ ನಟ ತೇಜಸ್ ಅಭಿಷೇಕ್ (27) ಮೇಲೆ ಕಿರಿತೆರೆ ನಟಿ ಐಶ್ವರ್ಯ ನಾಯರ (25) ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದಾರೆ.2012 ರಲ್ಲಿ ಪಿಜಿಯಲ್ಲಿದ್ದಾಗ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಹಲವಾರು ಬಾರಿ ತನ್ನ ಅತ್ಯಾಚಾರ ಮಾಡಿರುವುದಾಗಿ ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.376 ಅಡಿಯಲ್ಲಿ ರೇಪ್ ಕೇಸ್ …
Read More »
admin
September 12, 2019
ಕರ್ನಾಟಕ, ಸುದ್ದಿ
ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ದರ್ಗಾ ಬಳಿ ಆಹಾರ ಅರಸಿ ನದಿ ತೋಟದ ವಸತಿಗೆ ನುಗ್ಗಿದ ಬೃಹತ್ ಮೊಸಳೆಯನ್ನುಸೆರೆ ಹಿಡಿಯುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.ಬೃಹತ್ ಗಾತ್ರದ ೭ ಅಡಿ ಉದ್ದದ ಮೊಸಳೆಯು ಇತ್ತೀಚೆಗೆ ಕಂಡು ಬಂದಿದ್ದು, ಆಹಾರ ಅರಸಿ ಕೆಲ ದಿನಗಳ ಹಿಂದೆಯೇ ಮೊಸಳೆ ಹೊರ ಬಂದಿರುವ ಶಂಕೆ ವ್ಯಕ್ತವಾಗಿದೆ.ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಅರಣ್ಯ ಇಲಾಖೆಯ ಸಹಾಯವಿಲ್ಲದೆ ತಾವೇ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ …
Read More »
admin
September 12, 2019
ಕರ್ನಾಟಕ, ಸುದ್ದಿ
ಕೋಲಾರ: ಬೀದಿ ನಾಯಿಗಳು ಕುರಿ ದೊಡ್ಡಿಯ ಮೇಲೆ ದಾಳಿ ಮಾಡಿರುವ ಘಟನೆ ಕೋಲಾರದ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಮಹಿಳೆ ರುಕ್ಮಿಣಮ್ಮ ಎಂಬುವವರಿಗೆ ಸೇರಿದ ಐದು ಕುರಿಗಳು ನಾಯಿಗಳ ದಾಳಿಯಿಂದಾಗಿ ಅಸುನೀಗಿವೆ. ಕಳೆದ ಒಂದು ತಿಂಗಳಿಂದ ೪ ಪ್ರತ್ಯೇಕ ಪ್ರಕರಣಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ೨೫ ಕುರಿಗಳು ಸಾವನ್ನಪ್ಪಿವೆ. ಸೂಕ್ತ ಪರಿಹಾರ ನೀಡಿ ಹಾಗೂ ನಾಯಿಗಳನ್ನು ಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಬೆಳಗಾವಿ: ಜಾರ್ಖಂಡ್ ನಲ್ಲಿ ನಡೆದ ತಬ್ರೇಜ್ ಹತ್ಯಾಕಾಂಡ ಖಂಡಿಸಿ ಮಾಜಿ ಶಾಸಕ ಶಹಜಹಾನ್ ಡೊಂಗರ್ ಗಾಂವ್ ನೇತೃತ್ವದಲ್ಲಿ ಇಂದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ ಪ್ರತಿಭಟನೆ ನಡೆಸಲಾಯಿತು.ಮುಸ್ಲಿಂ ಸಮುದಾಯದವರು ನಗರದಾದ್ಯಂತ ಬೃಹತ್ ಮೆರವಣಿಗೆ ಮಾಡುವ ಹತ್ಯಾಕಾಂಡವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.ಹತ್ಯಾಕಾಂಡಕ್ಕೆ ಕಾರಣರಾದ ಅಪರಾಧಿಗಳಿಗೆ ನೇಣು ಕುಣಿಕೆಗೆ ಹಾಕಿ ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಹು- ಧಾ ಮಹಾನಗರ ಪಾಲಿಕೆಯ ತಾರತಮ್ಯ ನೀತಿ ಹಾಗೂ ಕಿರುಕುಳದಿಂದ ಬೇಸತ್ತು ಪೌರ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬೂಸಪೇಟೆಯಲ್ಲಿ ನಡೆದಿದೆ.ಕಲ್ಲಪ್ಪ ಶಿವಲಿಂಗಪ್ಪ ಅಣ್ಣಿಗೇರಿ (34) ಆತ್ಮಹತ್ಯೆ ಮಾಡಿಕೊಂಡ ಪೌರ ಕಾರ್ಮಿಕ.ಮೃತ ಕಲ್ಲಪ್ಪ ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.ನೇರ ವೇತನಕ್ಕಾಗಿ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಹ ನೇರ ವೇತನ ಜಾರಿಯಾಗಿರಲಿಲ್ಲ. ಕಳೆದ ವಾರ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕಬಳ್ಳಾಪುರ: ದಂಡಿಗಾನಹಳ್ಳಿ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿದ್ದ ಇಬ್ಬರು ವಿದ್ಯಾರ್ಥಿಗಳ ಶವಗಳು ಪತ್ತೆಯಾಗಿವೆ.ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ದಂಡಿಗಾನಹಳ್ಳಿಯ ಜಲಾಶಯದಲ್ಲಿ ನಿನ್ನೆ ಸಂಜೆ ಈಜಾಡಲು ಹೋಗಿ ಐವರಲ್ಲಿ ಇಬ್ಬರು ಮುಳುಗಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿಅಗ್ನಿಶಾಮಕದಳದ ಸಿಬ್ಬಂದಿ ಸತತವಾಗಿ ಬೆಳಿಗ್ಗೆಯಿಂದ ಶವಗಳಿಗಾಗಿ ಶೋಧ ನಡೆಸಿದ್ದರು. ಕೊನೆಗೂ ಕಾರ್ಯಾಚರಣೆ ಮಾಡಿ ಶವವನ್ನು ಹೊರತೆಗೆದಿದ್ದಾರೆ.ಬೆಂಗಳೂರು ಮೂಲದ ಸತೀಶ ಶಿವಕುಮಾರ್ (23), ಕೇರಳ ಮೂಲದ ಅಭಿಲಾಶ(23) ಎಂಬ ವಿದ್ಯಾರ್ಥಿಗಳ ಶವಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಂಚೇನಹಳ್ಳಿ ಪೊಲೀಸ್ ಠಾಣಾ …
Read More »