Breaking News

ಸುದ್ದಿ

ನಾಳೆಯಿಂದ ಫ್ರೀಡಂ ಪಾರ್ಕ್ ನಲ್ಲಿ ಮಹದಾಯಿಗಾಗಿ ಧರಣಿ

ಆಂಕರ್- ಮಹದಾಯಿ ಮಹಾ ತೀರ್ಪು ಅಗಸ್ಟ್ ಮೂರನೇವಾರದಲ್ಲಿ ಬರುವ ಹಿನ್ನೆಲೆಯಲ್ಲಿ ಮಹದಾಯಿ, ಕಳಸಾ ಮತ್ತು ಬಂಡೂರಿ ಹೋರಾಟಗಾರರು  ಬೆಂಗಳೂರು ಚೇಲೋ ಹಮ್ಮಿಕೊಂಡಿದ್ದು, ರೈತ ಹೋರಾಟಗಾರರು ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳಿಸಿದರು. ರೈತ ಸೇನಾ ಕರ್ನಾಟಕ ಸಂಘದ ಕೋಶಾಧ್ಯಕ್ಷ ಎಸ್ ಬಿ ಜೋಗಣ್ಣವರ ನೇತೃತ್ವದಲ್ಲಿ ಹುಬ್ಬಳ್ಳಿ ಬೆಂಗಳೂರ ಫಾಸ್ಟ ಪ್ಯಾಸೆಂಜರ್ ಟ್ರೇನ್ ಮೂಲಕ 30ಕ್ಕೂ ಹೆಚ್ಚು ರೈತರು ಬೆಂಗಳೂರಿನತ ಪ್ರಯಾಣ ಬೆಳೆಸಿದ್ದು, ನಾಳೆ ಅಗಸ್ಟ್ ೧೧ ರಿಂದ ಬೆಂಗಳೂರಿನ …

Read More »

ಆರು ರೂ. ಚಿಲ್ರೇಗಾಗಿ ರಾಡ್ ಕಂಡಕ್ಟರ್ ತಲೆ ಒಡೆದ ಪ್ರಯಾಣಿಕ..

ವಿಜಯಪುರ ಕೇವಲ ಆರು ರೂಪಾಯಿ  ಚಿಲ್ಲರೆ ಹಣಕ್ಕಾಗಿ ಜಗಳ ಇಂದು ಕಂಡಕ್ಟರ್ ಕಮ್ ಡ್ರೈವರ್ ಮೇಲೆ ರಾಡ್ ನಿಂದ ಮಾರಣಾಂತಿಕ ಹಲ್ಲೆ ತಲೆ ಹಾಗೂ ಮುಖಕ್ಕೆ ಗಾಯ  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾದಲ್ಲಿ ಘಟನೆ ಯೂನೂಸಸಾಬ್ ಉಸ್ಮಾನ ಸಾಬ್ ಬಡದಾ (41) ಹಲ್ಲೆಗೊಳಗಾದ ಕಂಡಕ್ಟರ್ ಸುಲೇಮಾನ್ ಬಂದಗಿಸಾಬ್  ಹಚ್ಯಾಳ್  ಎಂಬಾತನಿಂದ ಕಂಡಕ್ಟರ್ ಮೇಲೆ ಹಲ್ಲೆ ಗಾಯಾಳು ಕಂಡಕ್ಟರ್ ಇಂಡಿ ಸರ್ಕಾರಿ ತಾಲೂಕಾ  ಆಸ್ಪತ್ರೆಗೆ ದಾಖಲು ನಿನ್ನೆ ಬಸ್ ಟಿಕೆಟ್ …

Read More »

ಸೆಪ್ಟೆಂಬರ್ 1 ರಿಂದ ಈ ಸೇವೆಗೆ ಶುಲ್ಕ ವಿಧಿಸಲಿದೆ ರೈಲ್ವೆ ಇಲಾಖೆ

ನವದೆಹಲಿ: ಒಂದು ವೇಳೆ ನೀವು ಕೂಡ ರೈಲುಗಳಲ್ಲಿ ರಿಸರ್ವೇಶನ್ ಮಾಡಿ ಪ್ರಯಾಣ ಮಾಡುವವರಾಗಿದ್ದರೆ ಈ ಸುದ್ದಿ ನಿಮಗೆ ಮುಖ್ಯವಾಗಿದೆ. IRCTC ಯಿಂದ ಉಚಿತವಾಗಿ ಒದಗಿಸಲಾಗುತ್ತಿದ್ದ ಸೌಲಭ್ಯಕ್ಕಾಗಿ ಈಗ ನಿಗದಿತ ಶುಲ್ಕವನ್ನು ವಿಧಿಸಲಾಗುವುದು. ಹೀಗಾಗಿ ನೀವು ಮೊದಲು ಬುಕಿಂಗ್ ಮಾಡುವಾಗ ಪಾವತಿಸುತ್ತಿದ್ದ ಹಣಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ವಾಸ್ತವವಾಗಿ, ಸೆಪ್ಟೆಂಬರ್ 1 ರಿಂದ, ಇ-ಟಿಕೆಟ್ನಲ್ಲಿ ನೀಡಬೇಕಾದ ಉಚಿತ ಟ್ರಾವೆಲ್ ವಿಮೆ ಸೌಲಭ್ಯವನ್ನು IRCTC ಒದಗಿಸುವುದಿಲ್ಲ.  ಒಬ್ಬ ಪ್ರಯಾಣಿಕನು ವಿಮೆಯನ್ನು ತೆಗೆದುಕೊಳ್ಳಲು ಬಯಸಿದರೆ, …

Read More »

‘ಆಪರೇಷನ್ ಕಮಲ ಅರ್ಥ ಗೊತ್ತಾ?…. ದುಡ್ಡು ಕೊಟ್ಟು ಎಂಎಲ್ಎಗಳನ್ನ ಖರೀದಿಸೋದ್’- ಮಾಜಿ ಸಿಎಂ ಸಿದ್ದರಾಮಯ್ಯ

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ. ಆಪರೇಷನ್ ಕಮಲ ಮಾಡ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ. ಆಪರೇಷನ್ ಕಮಲ ಅಂದ್ರೆ ಏನು? ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ. ಆಪರೇಷನ್ ಕಮಲ ಅಂದ್ರೆ ದುಡ್ಡು ಕೊಟ್ಟು ಕೊಂಡುಕೊಳ್ಳುವುದು. ಕುರಿ, ದನಾ, ಎಮ್ಮೆ ಥರಾ ಮಾರಾಟದ ವಸ್ತುಗಳನ್ನು ಕೊಂಡುಕೊಳ್ಳುವುದು. 20, 25 ಕೋಟಿ ಕೊಟ್ಟು ಎಂ ಎಲ್ ಎ ಗಳನ್ನು ಖರೀದಿಸುವುದು. ಈ ಕೆಲಸವನ್ನು ಬಿಜೆಪಿಯ ಯಡಿಯೂರಪ್ಪ ಅವರು …

Read More »

ಹಿಡಕಲ್ ಡ್ಯಾಂ ಭರ್ತಿ, ಒವರ್ ಫ್ಲೋ

ಬೆಳಗಾವಿ ನಗರ ಸೇರಿದಂತೆ ಹಲವು ಪಟ್ಟಣಗಳಿಗೆ ನೀರು ಪೂರೈಸುವ ಹಿಡಕಲ ಜಲಾಶಯದ ಸಂಪೂರ್ಣ ಭರ್ತಿಯಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ  ಮಳೆಗೆ ಹೆಚ್ಚಿನ ಪ್ರಮಾಣದ ನೀರು ಒಳಹರಿವು ಬರುತ್ತಿದ್ದು ಇದೆ ಮೊದಲ ಬಾರಿಗೆ ಅಗಸ್ಟ್ ಮೊದಲ ವಾರದಲ್ಲೆ  ಜಲಾಶಯ ಭರ್ತಿಯಾಗಿದೆ. 51 ಟಿಎಂಸಿ ಸಾಮರ್ಥದ ಈ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆ 10 ಗೇಟಗಳ ಮೂಲಕ. 9 ಸಾವಿರ ಕ್ಯೂಸೇಕ್ ನಿರನ್ನ ಹೊರ ಬಿಡಲಾಗುತ್ತಿದೆ.. ಕಳೆದ 3 ವರ್ಷಗಳ ಬಳಿಕೆ ಈ ವರ್ಷ …

Read More »

ಮೈತ್ರಿ ಅನಿವಾರ್ಯತೆ ಇಲ್ಲ, ಸ್ಥಳೀಯ ನಾಯಕರಿಂದಲೇ ಈ ಬಗ್ಗೆ ನಿರ್ಧರ- ಮಾಜಿ ಸಿಎಂ ಸಿದ್ದರಾಮಯ್ಯ

Read More »

ಇನ್ಮೇಲೆ ಮಾಡು ಇಲ್ವೇ‌ ಮಡಿ ಚಳವಳಿ.. ಆ.೧೬ಕ್ಕೆ ಬೃಹತ್ ಸಮಾವೇಶ

ಉತ್ತರಕರ್ನಾಟಕದ ಮಂದಿ ಮಹದಾಯಿ ಕುಡಿಯೋ ನೀರಿನ ಯೋಜನೆಗಾಗಿ ಬಂದ್, ಧರಣಿ, ಸತ್ಯಾಗ್ರಹ, ಪಾದಯಾತ್ರೆ ಅಂತೆಲ್ಲ ಹೋರಾಡ್ತಿದಾರೆ. ದಯಾ ಮರಣವನ್ನೂ ಕೋರಿದ್ರು. ಆದ್ರೇ, ರಾಜಕೀಯ ಇಚ್ಛಾಶಕ್ತಿ ಇಲ್ಲದೇ ಈಗ ನ್ಯಾಯಾಧೀಕರಣದ ಅಂತಿಮ ತೀರ್ಪಿಗೆ ಕಾಯುವಂತಾಗಿದೆ. ತೀರ್ಪು ಪರ ಇಲ್ಲ ವಿರೋಧ ಬಂದ್ರೇ ಮುಂದಿನ ನಡೆ ಯಾವ ರೀತಿ ಇರ್ಬೇಕು ಅನ್ನೋದರ ಬಗ್ಗೆ ಚರ್ಚಿಸಲು ಹುಬ್ಬಳ್ಳಿಯಲ್ಲಿ ಹೋರಾಟಗಾರರು ಸಮಾವೇಶ ನಡೆಸಲು ನಿರ್ಧರಿಸಿದಾರೆ. ರಾಜಕಾರಣಿಗಳದ್ದು ದಪ್ಪ ಚರ್ಮ. ಉತ್ತರಕರ್ನಾಟಕದ ಮಂದಿ ಇದನ್ನ ಯಾವುದೇ ಅಳುಕಿಲ್ಲದೇ …

Read More »

‘ಬೆರಳ್ ಸರಿಯಿಲ್ವೆಂದು ಕೈ ಕುಯ್ದುಕೊಳ್ಳೋಕಾಗುತ್ತಾ’- ಸಚಿವ ಯು ಟಿ ಖಾದರ್..

ಅಖಂಡ ಕರ್ನಾಟಕದಲ್ಲಿ ದ್ಕೊಂಡು ರಾಜಕೀಯಕ್ಕಾಗಿ ಪ್ರತ್ಯೇಕ ರಾಜ್ಯ ಕೇಳಿದ್ರೇ ಅವರೆಲ್ಲ ಈ ರಾಜ್ಯದ ದ್ರೋಹಿಗಳು ಅಂತ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವ್ರು, ಬೆರಳು ಸರಿಯಿಲ್ಲ ಅಂದ್ರೇ ಕೈಯನ್ನ ಕತ್ತರಿಸೋದು ಸರಿಯಲ್ಲ. ಸಾಕಷ್ಟು ಮಂದಿ ಹೋರಾಟ ಮಾಡಿಕೊಂಡು ಅಖಂಡ ಕರ್ನಾಟಕವನ್ನ ಕಟ್ಟಿದಾರೆ. ಕನ್ನಡ, ಕರ್ನಾಟಕ ಹಾಗೂ ಕನ್ನಡಿಗರು ಒಂದೇ. ಅದು ಹಾಗೇ ಇರಬೇಕು ಅನ್ನೋದು ನಮ್ಮ ಆಶಯ. ಅಭಿವೃದ್ಧಿಯಲ್ಲಿ ಹಿನ್ನಡೆಯಾದ್ರೇ ಅದಕ್ಕಾಗಿ …

Read More »

ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ:

ದಾವಣಗೆರೆ: ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಅಡುಗೆ ಎಣ್ಣೆಯ ಟ್ಯಾಂಕರ್ ವೊಂದು ಪಲ್ಟಿಯಾಗಿದ್ದು, ಈ ವೇಳೆ ಟ್ಯಾಂಕರ್ ನಲ್ಲಿದ್ದ ಎಣ್ಣೆ ತೆಗೆದುಕೊಳ್ಳಲು ಮುಗಿಬಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದಾರೆ. ಇಂದು ಬೆಳಗಿನ ಜಾವ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಡುಗೆ ಎಣ್ಣೆಯ ಟ್ಯಾಂಕರ್ ಉರುಳಿ ಬಿದ್ದಿದೆ. ಅಡುಗೆ ಎಣ್ಣೆ ಟ್ಯಾಂಕರ್ ಉರುಳಿಬಿದ್ದ ಸುದ್ದಿ ತಿಳಿದ ಜನರು ಟ್ಯಾಂಕರ್ …

Read More »

ಹಿರಿಯ ಮುತ್ಸದ್ದಿ ರಾಜಕಾರಣಿಯ ಅಗಲಿಕೆ ರಾಷ್ಟ್ರ ರಾಜಕಾರಣಕ್ಕೂ ತುಂಬಲಾರದ ನಷ್ಟ- ಸಿದ್ದರಾಮಯ್ಯ

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ‌ ಆಡಳಿತಾವಧಿಯಲ್ಲಿ ತಮಿಳುನಾಡಿನ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ಹಿರಿಯ ಮುತ್ಸದ್ದಿ ರಾಜಕಾರಣಿಯ ಅಗಲಿಕೆ ಕೇವಲ ತಮಿಳುನಾಡಿಗಷ್ಟೇ ಅಲ್ಲದೆ, ರಾಷ್ಟ್ರ ರಾಜಕಾರಣಕ್ಕೂ ತುಂಬಲಾರದ ನಷ್ಟ ಎಂದು ಅವರು ತಿಳಿಸಿದ್ದಾರೆ. ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಎಂ.ಕರುಣಾನಿಧಿಯವರು ಇಂದು ಸಂಜೆ ದೈವಾದೀನರಾಗಿರುವುದು ಆಘಾತದ ಜೊತೆಗೆ ನೋವುಂಟು ಮಾಡಿದೆ, ಮೃತರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ …

Read More »