BigTv News
January 1, 2024
ಮುಂಬೈ, ಸುದ್ದಿ
ಮುಂಬೈ: ಇದು ದೇಶದ ಅತೀ ಉದ್ದದ ಸಮುದ್ರ ಸೇತುವೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹಾಗಾದರೆ ಈ ಸೇತುವೆ ಎಲ್ಲಿದೆ ಹಾಗೂ ಉದ್ಘಾಟನೆ ದಿನಾಂಕ, ವೆಚ್ಚ ಹಾಗೂ ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಯಿರಿ.ದೇಶದಲ್ಲಿ ಅತಿ ಉದ್ದದ ಸಮುದ್ರ ಸೇತುವೆಯಾದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಅನ್ನು ಜನವರಿ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ …
Read More »
BigTv News
December 30, 2023
ಕರ್ನಾಟಕ, ಧಾರವಾಡ, ಸುದ್ದಿ
ಧಾರವಾಡ : ಧಾರವಾಡದ ವಿವಿಧ ಸ್ಲಂಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಧಾರವಾಡ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜನ್ನತನಗರದ ಸಾದಿಕ್ ಕಬಾಡಿ ಹಾಗೂ ಹಾಸ್ಮಿನಗರದ ನಾಜಿಮ್ ಶೇಖ್ ಎಂಬುವವರೇ ಬಂಧಿತ ಆರೋಪಿಗಳು. ಇವರು ಸ್ಲಂ ಏರಿಯಾಗಳಲ್ಲಿನ ಗಾರೆ ಕೆಲಸದವರನ್ನೇ ಟಾರ್ಗೆಟ್ ಮಾಡಿ ಅವರಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. ಇದೀಗ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು 200 ಗ್ರಾಂ ನಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ.
Read More »
BigTv News
December 30, 2023
ಕರ್ನಾಟಕ, ಧಾರವಾಡ, ಸುದ್ದಿ
ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಆಂಗ್ಲ ನಾಮಫಲಕಗಳ ಕನ್ನಡೀಕರಣ ವಾಗಬೇಕು ಕರುನಾಡ ರಕ್ಷಣಾ ವೇದಿಕೆ ಮನವಿ.ಕರ್ನಾಟಕ ರಾಜ್ಯಾದ್ಯoತ ವ್ಯಾಪಾರ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕಗಳು ಕಡ್ಡಾಯವಿರಬೇಕೆಂದು ಸರ್ಕಾರದ ಆದೇಶವಾಗಿದೆ.ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಈಗಾಗಲೇ ಕನ್ನಡ ಜಾಗೃತಿ ಸಮಿತಿ ಹಾಗೂ ಕನ್ನಡ ಕಾಯಕ ಪಡೆಯ “ಶುದ್ಧ ಕನ್ನಡ ನಾಮಫಲಕ ಜಾಗೃತಿ ಅಭಿಯಾನ” ಎಲ್ಲರ ಗಮನಕ್ಕೆ ಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆಯೂ ಕೂಡ ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿದೆ. …
Read More »
BigTv News
December 30, 2023
ತಮಿಳುನಾಡು, ಸಿನಿಮಾ, ಸುದ್ದಿ
ಜನಪ್ರಿಯ ನಾಯಕ ಮತ್ತು ರಾಜಕಾರಣಿ ಕ್ಯಾಪ್ಟನ್ ವಿಜಯಕಾಂತ್ ಅವರ ಅಗಲಿಕೆ ಇಡೀ ಚಿತ್ರರಂಗ ಮತ್ತು ತಮಿಳುನಾಡಿನ ರಾಜಕೀಯಕ್ಕೆ ಒಂದು ತುಂಬಲಾರದ ನಷ್ಟ. ನಟನಿಗೆ ಶ್ರದ್ಧಾಂಜಲಿ ಅರ್ಪಿಸಲು ಶುಕ್ರವಾರ ಚೆನ್ನೈನ ಮರೀನಾ ಬೀಚ್ ಬಳಿಯ ಐಲ್ಯಾಂಡ್ ಮೈದಾನದಲ್ಲಿ ಅಭಿಮಾನಿಗಳ ಸಾಗರವೇ ನೆರೆದಿತ್ತು. ವಿಜಯಕಾಂತ್ ಅವರು ಪತ್ನಿ ಪ್ರೇಮಲತಾ, ಪುತ್ರರಾದ ವಿಜಯ ಪ್ರಭಾಕರನ್ ಮತ್ತು ಷಣ್ಮುಗ ಪಾಂಡಿಯನ್ ಅವರನ್ನು ಅಗಲಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್, ವಿಜಯ್, ಕಮಲ್ ಹಾಸನ್, ಮನ್ಸೂರ್ ಅಲಿ ಖಾನ್ ಸೇರಿದಂತೆ …
Read More »
BigTv News
December 30, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಸಿಎಂ ವಿರುದ್ಧ ಮಾತನಾಡಿದರೆ ವಿಶೇಷ ಸ್ಥಾನಮಾನ ಸಿಗುತ್ತೆ ಅಂತ ಖಾತ್ರಿ ಆಯ್ತು. ಬಿ.ಆರ್.ಪಾಟೀಲ್, ಬಸವರಾಜ ರಾಯರೆಡ್ಡಿ ಮತ್ತು ಆರ್ ವಿ ದೇಶಪಾಂಡೆಗೆ ನೀಡಿದ್ದಾರೆ. ಮುಂದೆ ಯಾರ್ಯಾರಿಗೆ ಏನೇನು ಸ್ಥಾನಮಾನ ಕೊಡ್ತಾರೋ ನೋಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು. ಶ್ರೀರಾಮನ ಬಗ್ಗೆ ಹಾಗೂ ಶ್ರೀರಾಮನ ಅಸ್ತಿತ್ವದ ಬಗ್ಗೆ ಪ್ರಶ್ನಿಸುವ ಕ್ಷುಲ್ಲಕ ಕಾರ್ಯವನ್ನು ಮಾಡುವ ಮೂಲಕ ಕಾಂಗ್ರೆಸ್ ತುಷ್ಟಿಕರಣದ ರಾಜಕಾರಣ ಮಾಡುತ್ತಿದೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದರು. …
Read More »
BigTv News
December 30, 2023
ಕರ್ನಾಟಕ, ಬೆಂಗಳೂರು, ಸಿನಿಮಾ, ಸುದ್ದಿ
ಕಾಲವನ್ನು ತಡೆಯೋರು ಯಾರೂ ಇಲ್ಲ ಅನ್ನೋ ಸಾಲು ಹೊಂದಿರುವ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರ ಹಾಡು ನಿಜವಾಗುತ್ತಲೇ ಇರುತ್ತೆ. ಈಗ ಸಿನಿಮಾ ಮಂದಿಗೂ ಈ ಹಾಡಿನ ಸಾಲು ಅನ್ವಯ ಆಗುತ್ತಿದೆ. ಅದರಲ್ಲೂ ‘ಕನಸಿನ ರಾಣಿ’ ಮಾಲಾಶ್ರೀ ಅವರ ಬದುಕಿನಲ್ಲಿ, ಈ ಹಾಡು ಮತ್ತೆ ಮತ್ತೆ ನಿಜವಾಗುತ್ತಿದೆ. ಒಂದು ಕಾಲದಲ್ಲಿ ಮಾಲಾಶ್ರೀ ಹೀರೋಯಿನ್ ಆಗಿದ್ರು ಹಾಗೂ ನೂರಾರು ಸಿನಿಮಾದಲ್ಲಿ ಮಿಂಚಿದ್ದರು. ಇದೀಗ ಮಗಳು ಕೂಡ, ಅಮ್ಮನ ಹಿರಿಮೆ ಮುಂದುವರಿಸಿದ್ದಾರೆ. ಆರಾಧನಾ ರಾಮ್ …
Read More »
BigTv News
December 30, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನವನ್ನ ಗೆಲ್ಲುವ ಗುರಿ ಹಾಕಿಕೊಂಡಿರುವ ಕಾಂಗ್ರೆಸ್ ನಿಮಗ ಮಂಡಳಿ ನೇಮಕದ ಕುರಿತು ಹೈಕಮಾಂಡ್ ಗೆ ಫೈನಲ್ ಲಿಸ್ಟ್ ನೀಡಿದೆ. ಮೊದಲ ನಿಗಮ ಮಂಡಳಿ ಪಟ್ಟಿಯಲ್ಲಿ ಕೇವಲ ಶಾಸಕರಿಗೆ ಅವಕಾಶ ನೀಡಿದ್ದಾರೆ ಎಂಬ ಮಾತುಗಳಿಗೆ ವಿರೋಧ ಕೇಳಿ ಬಂದಿತ್ತು. ನಿಗಮ ಮಂಡಳಿ ನೇಮಕದ ಕುರಿತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ನಿಗಮ ಮಂಡಳಿಗಳಲ್ಲಿ ಶಾಸಕರಷ್ಟೇ ಸಂಖ್ಯೆಯಲ್ಲಿ …
Read More »
BigTv News
December 29, 2023
ಕರ್ನಾಟಕ, ಧಾರವಾಡ, ಸುದ್ದಿ
ಧಾರವಾಡ ಕೇಂದ್ರ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ನೂತನ ಸಂಸತ್ ಮೇಲೆ ದಾಳಿ ನಡೆಸಿದ್ದನ್ನು ನೂತನ ಸಂಸತ್ ಮೇಲೆ ದಾಳಿ ನಡೆಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಪ್ರತಿಪಕ್ಷಗಳ ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಕೇಂದ್ರ ಸರ್ಕಾರದ ಕ್ರಮ ಪ್ರಜಾಪ್ರಭುತ್ವ ವಿರೋಧಿ ಹಾಗೂ ಅಸಂವಿಧಾನಿಕ ಕ್ರಮವಾಗಿದೆ ಎಂದು …
Read More »
BigTv News
December 29, 2023
ಕರ್ನಾಟಕ, ಗದಗ, ಸುದ್ದಿ
ರೋಣ: ರಾಜ್ಯಾದ್ಯಂತ ಚಾಲಿಂಗ್ ಸ್ಟಾರ್ ದರ್ಶನ ಅಭಿನಯಿಸಿದ ಬಹುನೀಕ್ಷಿತ ಕಾಟೇರ ಚಲನಚಿತ್ರವು ಬಿಡುಗಡೆಯಾಗಿದ್ದು,ಮೊದಲ ದಿನವೇ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.ದರ್ಶನ ಅಭಿಮಾನಿಗಳು ಪಟಾಕಿ ಸಿಡಿಸಿ ಕಟೌಟ್ ಗಳಿಗೆ ಹೂವಿನ ಮಾಲೆ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು. ಪಟ್ಟಣದ ಶ್ರೀ ರೇಣುಕಾ ಚಿತ್ರಮಂದಿರದಲ್ಲಿ ಕಾಟೇರ ಚಲನಚಿತ್ರ ಮೊದಲನೇ ದಿನವು ಬಿಡುಗಡೆಯಾಗಿದ್ದು,ಮೊದಲ ದಿನವೇ ಚಿತ್ರಮಂದಿರ ಮುಂಬಾಗದಲ್ಲಿ ಚಾಲಿಂಗ್ ಸ್ಟಾರ್ ದರ್ಶನ ಅವರ ಕಟೌಟ್ ಗಳು ರಾರಾಜಿಸುತ್ತಿದ್ದು, ಅಭಿಮಾನಿಗಳು ದರ್ಶನ ಕಟೌಟ್ ಗೆ ಹೂವಿನ ಹಾರ ಹಾಕಿ …
Read More »
BigTv News
December 29, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ವಿದ್ಯಾನಗರದ ಹೃದಯಬಾಗದಲ್ಲಿರುವಂತ ಲೋಕಪ್ಪನಹಕ್ಕಲ ಆ ಭಾಗದ ಯುವಕರು ಸೇರಿ ಒಗ್ಗಟ್ಟಿನಿಂದ ಆ ಯುವ ಶಕ್ತಿ ಸದ್ಭಾಳಿಕೆ ಆಗಬೇಕು, ಸದುಪಯೋಗ ಆಗಬೇಕು ಎಂದು ಒಂದು ಸಂಘಟನೆ ಹುಟ್ಟು ಹಾಕಿದ್ದಾರೆ. ಅದು ನಮ್ಮೆಲ್ಲರ ಅಭಿಮಾನದ ಸಂಕೇತ ನಮ್ಮ ದೇಶ ವಿಶ್ವ ಮೆಚ್ಚುವಂತಹ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಒಂದು ಸೇವಾ ಸಂಘ ವನ್ನು ಪ್ರೀತಿ, ಅಭಿಮಾನದಿಂದ ಉದ್ಘಾಟನೆ ಮಾಡಿದ್ದೇವೆ. ಅದರ ಉದ್ದೇಶ ಯುವಕರು ಹೇಳಿದ ಹಾಗೆ ಸಮಾಜಕ್ಕೆ …
Read More »