Breaking News

ಸುದ್ದಿ

ಐಷಾರಾಮಿ ಕಾರುಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಕಳ್ಳನ ಬಂದನ….

ಮೈಸೂರು: ನಗರದ ವಿವಿ ಪುರಂ ಪೊಲೀಸರ ನಿದ್ದೆಗೆಡಿಸಿದ್ದ ಐಷಾರಾಮಿ ಕಾರುಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಕಳ್ಳತನ ಪ್ರಕರಣವನ್ನು ಇದೀಗ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಬೆಂಗಳೂರು ಮೂಲದ ಕುಖ್ಯಾತ ವೃತ್ತಿಪರ ಖದೀಮನನ್ನು ಬಂಧಿಸಿದ್ದು, ಈತ ಒಬ್ಬನೇ ಕಾರು ಕಳ್ಳತನದ ಜೊತೆಗೆ ಮನೆಗಳ್ಳತನ ಸಹ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಐಷಾರಾಮಿ ಕಾರುಗಳ ಸರಣಿ ಕಳ್ಳತನ ಮಾಡುತ್ತಿದ್ದ ಈತ, ಮೈಸೂರಿನಲ್ಲೇ 2-3 ಐಷರಾಮಿ ಕಾರುಗಳನ್ನು ಕದ್ದು ಬೇರೆಯವರಿಗೆ ಮಾರಾಟ …

Read More »

ಗಾಯಗೊಂಡಿದ್ದರೂ ಐಪಿಎಲ್​ ಟೂರ್ನಿಯನ್ನು ಮಾತ್ರ ತಪ್ಪಿಸಿಕೊಳ್ಳುವುದಿಲ್ಲ ಯಾಕೆ?:ಕಪಿಲ್​ ದೇವ್

ನವದೆಹಲಿ:ಅಷ್ಟೇನೂ ಶಕ್ತವಲ್ಲದ ವೆಸ್ಟ್​ ಇಂಡೀಸ್​ ವಿರುದ್ಧ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ಸೋಲು ಕಂಡಿದ್ದು, ಕ್ರಿಕೆಟ್​ ಅಭಿಮಾನಿಗಳ, ವಿಶ್ಲೇಷಕರ ಕೆಂಗಣ್ಣಿಗೆ ಗುರಿಯಾಗಿದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದರ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ. ಏಕದಿನ ಕ್ರಿಕೆಟ್​ ವಿಶ್ವಕಪ್​ ಮುಂದಿಟ್ಟುಕೊಂಡು ಇನ್ನೂ ಪ್ರಯೋಗ ನಡೆಸುತ್ತಿರುವ ತಂಡದ ಆಡಳಿತ ಮಂಡಳಿ ಮತ್ತು ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗರು ಹರಿಹಾಯ್ದಿದ್ದಾರೆ. 1983ರ ವಿಶ್ವಕಪ್​ ವಿಜೇತ ನಾಯಕ, ಮಾಜಿ ಕ್ರಿಕೆಟಿಗ ಕಪಿಲ್​ ದೇವ್​ ಭಾರತ ಕ್ರಿಕೆಟ್​ …

Read More »

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ’ಗೃಹಜ್ಯೋತಿ’ ನಾಳೆಯಿಂದ ಜಾರಿ…

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ’ಗೃಹಜ್ಯೋತಿ’ ಜಾರಿಗೆ ಸಕಲ ಸಿದ್ಧತೆ ನಡೆದಿದ್ದು ಅನುಷ್ಠಾನಕ್ಕೆ ಒಂದು ದಿನ ಮಾತ್ರ ಬಾಕಿ ಇದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯಂತೆ ಪಂಚಖಾತ್ರಿ ಯೋಜನೆಗಳ ಪೈಕಿ ಅತಿ ದೊಡ್ಡ ಯೋಜನೆಯಾಗಿರುವ ಗೃಹಜ್ಯೋತಿ ಆಗಸ್ಟ್ 1ರಿಂದ ಅನುಷ್ಠಾನಗೊಳ್ಳಲಿದೆ. ನಾಳೆಯಿಂದ ಅರ್ಹ ಗ್ರಾಹಕರಿಗೆ ಶುಲ್ಕ ವಿನಾಯಿತಿ ವಿದ್ಯುತ್ ಬಿಲ್‌ಗಳು ಸಿಗಲಿವೆ. 2 ಕೋಟಿಗೂ ಅಧಿಕ ಫಲಾನುಭವಿಗಳು ಯೋಜನೆಗೆ ಈಗಾಗಲೇ ನೋಂದಣಿ ಪ್ರಕ್ರಿಯೆಗಳು …

Read More »

ಶೀತ, ಜ್ವರದಂತಹ ವೈರಾಣುಗಳಿಂದ ಮುಕ್ತರಾಗಬೇಕೆ!? – ಈ ಆಯಿಲ್ ಬಳಸಿದ್ರೆ 100% ರಿಸಲ್ಟ್

ಚರ್ಮಕ್ಕೆ ತುಂಬಾ ಉತ್ತಮ ಎಸೆನ್ಷಿಯಲ್ ಆಯಿಲ್. ಈ ಎಸೆನ್ಷಿಯಲ್ ಆಯಿಲ್ ಅನ್ನು ಬಳಸಿ ಮನೆಯನ್ನು ಕೂಡ ಸ್ವಚ್ಛಗೊಳಿಸಬಹುದು.ಟೀ ಟ್ರೀ ಆಯಿಲ್ ಬ್ಯಾಕ್ಟೀರಿಯಾ ವಿರೋಧಿ, ಆಯಂಟಿ ವೈರಲ್ ಮತ್ತು ಶೀಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ ಇದರಿಂದ ಮನೆಯನ್ನು ಸ್ವಚ್ಛಗೊಳಿಸಿದರೆ ಶೀತ, ಜ್ವರದಂತಹ ವೈರಾಣುಗಳಿಂದ ಮುಕ್ತರಾಗಬಹುದು. ಲ್ಯಾವೆಂಡರ್ ಆಯಿಲ್ ಇದು ಶಾಂತವಾದ ಪರಿಮಳವನ್ನು ಹೊಂದಿದ್ದು, ಇದು ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಇದನ್ನು ಬಟ್ಟೆ ಮತ್ತು ಮನೆಯನ್ನು ಸ್ವಚ್ಛಗೊಳಸಲು ಬಳಸಬಹುದು. ಪೆಪ್ಪರ್ …

Read More »

ಆಧಾರ್ ಮಾಡಿಸಿ 10 ವರ್ಷ ಆಯ್ತಾ: Update ಮಾಡಿಲ್ಲವೆಂದರೇ ನಿಷ್ಕ್ರೀಯ ಖಚಿತ.

ಆಧಾರ್ ಕಾರ್ಡ್ ಪಡೆದು 10 ವರ್ಷ ಮೇಲ್ಪಟ್ಟ ಹಾಗೂ ಇಲ್ಲಿಯವರೆಗೂ ಆಧಾರ್ ಕಾರ್ಡ್ ನವೀಕರಿಸದೇ ಇರುವವರು ತಮ್ಮ ವೈಯಕ್ತಿಕ ಗುರುತಿನ ದಾಖಲೆ ಹಾಗೂ ವಿಳಾಸದ ದಾಖಲೆಗಳೊಂದಿಗೆ ಹತ್ತಿರದ ಆಧಾರ ನೋಂದಣಿ ಕೇಂದ್ರದಲ್ಲಿ ಯ.ಐ.ಡಿ.ಎ.ಐ ಸಂಸ್ಥೆ ಅಭಿವೃದ್ಧಿಪಡಿಸಿರುವ ಹೊಸ ವೈಶಿಷ್ಟ ದಾಖಲಾತಿ ನವೀಕರಣ ತಂತ್ರಾಂಶದಲ್ಲಿ ನವೀಕರಣ ಮಾಡಿಸುವಂತೆ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದ್ದಾರೆ. ಅದೇ ರೀತಿ 5 ವರ್ಷ ಮೇಲ್ಪಟ್ಟು 7 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೇಟ್ರಿಕ್ …

Read More »

ವಿದ್ಯುತ್ ಶಾರ್ಟಸರ್ಕ್ಯೂಟ ಮನೆಗೆ ಬೆಂಕಿ…

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಬಸ್ತಿಕೇರಿಯಲ್ಲಿ ವಿದ್ಯುತ್ ಶಾರ್ಟಸರ್ಕ್ಯೂಟದಿಂದ ಮನೆಗೆ ಬೆಂಕಿ ಬಿದ್ದು ಟಿವಿ,ಮೊಬೈಲ್ ಸೇರಿದಂತೆ ಅನೇಕ ಮನೆಯ ಸಾಮಗ್ರಿಗಳು ಹಾನಿಗೊಳಗಾದ ಘಟನೆ ಜರುಗಿದೆ.ಬಸ್ತಿಕೇರಿಯ ನಿವಾಸಿಯಾದ ಪರಮೇಶ್ವರಪ್ಪ ಮಹಾರುದ್ರಪ್ಪ ಯರ್ಲಗಟ್ಟಿಯವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಮನೆಗೆ ಬೆಂಕಿ ಬಿದ್ದಿದ್ದು ನಂತರ ಅಕ್ಕಪಕ್ಕದ ಮನೆಯವರು ಬಂದು ಬೆಂಕಿ ನಿಂದಿಸಿದ್ದಾರೆ‌.ಯಾವುದೇ ಪ್ರಾಣಹಾನಿಯಾಗಿಲ್ಲ.

Read More »

ಟಿ. ಬಿ. ಜಯಚಂದ್ರ ಅವರಿಗೆ ಕಾನೂನಾತ್ಮಕವಾಗಿ ಏನು ಬೇಕು ಅದನ್ನ ಕೊಡುತ್ತೇವೆ: ಎಚ್ ಕೆ ಪಾಟೀಲ್

ಹುಬ್ಬಳ್ಳಿ: ಶಾಸಕರ ಅಸಮಾಧಾನ ತಣಿಸಲು ಆಗಸ್ಟ್ 2ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ಕರೆದ ಕುರಿತು ಪ್ರತಿಕ್ರಿಯೆ ನೀಡಿದ ಹೆಚ್ ಕೆ ಪಾಟೀಲ್ ದೆಹಲಿಯಲ್ಲಿ ಕರೆದ ಸಭೆಗೂ ಶಾಸಕರ ಅಸಮಾಧಾನಕ್ಕೂ ಸಂಬಂಧ ಬೇಡ ಎಂದರು. ರಾಹುಲ್ ಗಾಂಧಿಯವರು ಸಭೆ ಕರೆದಿದ್ದು ಪಕ್ಷದ ಸಂಘಟನೆ ಸಲುವಾಗಿ ಆಡಳಿತದಲ್ಲಿ ಏನೆಲ್ಲಾ ಸುಧಾರಣೆ ತರಬೇಕೆಂಬ ನಿಟ್ಟಿನಲ್ಲಿ ಚರ್ಚೆ ಮಾಡುವ ಸಲುವಾಗಿ ಎಂದರು. ಈ ಎರಡು ಸಭೆ ಸಹ ಅನಿವಾರ್ಯ ಕಾರಣದಿಂದ ಮುಂದೂಡಲಾಗಿತ್ತು …

Read More »

ಧಾರವಾಡದ ಒಂದು ಕುಟುಂಬ ಹಿಂದೂಗಳೊಂದಿಗೆ ಹಿಂದುವಾಗಿ ಮುಸ್ಲಿಂರೊಂದಿಗೆ ಮುಸ್ಲಿಂರಾಗಿ ಬದುಕುತ್ತಿದೆ..

ಧಾರವಾಡ : ಇತ್ತೀಚಿನ ದಿನಗಳಲ್ಲಿ ಹಿಂದೂ ಮುಸ್ಲಿಂ ಗಲಾಟೆಗಳೇ ಹೆಚ್ಚಾಗುತ್ತಿವೆ. ಇಂತಹ ಸ್ಥಿತಿಯಲ್ಲಿ ಇಲ್ಲೊಂದು ಕುಟುಂಬ ಹಿಂದೂಗಳೊಂದಿಗೆ ಹಿಂದುವಾಗಿ ಮುಸ್ಲಿಂರೊಂದಿಗೆ ಮುಸ್ಲಿಂರಾಗಿ ಬದುಕುತ್ತಿದೆ.ಹೌದು, ಹೀಗೆ ಹಣೆಯಲ್ಲಿ ಹಿಂದೂವಾಗಿ ಕುಂಕುಮ. ತಲೆ ಮೇಲೆ ತಾಜ್ ಹಾಕಿಕೊಂಡು ಮುಸ್ಲಿಂನಾಗಿರುವ ಇವರು ಸುಧೀರ್ ಮುಧೋಳ. ಇವರೊಬ್ಬ ಹಿಂದೂ ಆದರೂ ತಮ್ಮ ಮನೆಯಲ್ಲಿ ಕಳೆದ 40 ವರ್ಷಗಳಿಂದ ಮೊಹರಂ ಹಬ್ಬದಂದು ದಾವಲ್ ಮಲ್ಲೀಕ್ ಪಾಂಜಾಗಳ ಪ್ರತಿಷ್ಠಾಪನೆ ಮಾಡುತ್ತ ಬಂದಿದ್ದಾರೆ. ಮೊಹರಂ ಹಬ್ಬ ಭಾವೈಕ್ಯತೆಯ ಸಂಕೇತ. ಈ …

Read More »

ನಿರಂತರ ಮಳೆ ಹಿನ್ನೆಲೆಯಲ್ಲಿ 8 ತಾಲೂಕುಗಳಲ್ಲಿ 198 ಮನೆಗಳಿಗೆ ಹಾನಿ..

ಧಾರವಾಡ: ಕಳೆದ ಕೆಲವು ದಿನಗಳಿಂದ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ಸದ್ಯ ಅಬ್ಬರ ಕೊಂಚ ಕಡಿಮೆಯಾಗಿದೆ. ಹಲವೆಡೆ ಮಳೆಯಿಂದಾಗಿ ಅಪಾರ ಆಸ್ತಿಪಾಸ್ತಿ ಹಾನಿ, ಸಾವು-ನೋವು ಸಂಭವಿಸಿದೆ. ಧಾರವಾಡ ಜಿಲ್ಲೆಯಲ್ಲಿ ಜುಲೈ 26ರ ಬೆಳಿಗ್ಗೆ 8 ಗಂಟೆಯಿಂದ 27ರ ಬೆಳಿಗ್ಗೆ 8 ಗಂಟೆಯವರೆಗೆ ವಿವಿಧ ತಾಲೂಕುಗಳಲ್ಲಿ ಸುಮಾರು 198 ಮನೆಗಳಿಗೆ ಹಾನಿಯಾಗಿದೆ. 8 ತಾಲೂಕುಗಳಲ್ಲಿ 198 ಮನೆಗಳಿಗೆ ಹಾನಿ: ನಿರಂತರ ಮಳೆ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನಲ್ಲಿ 87 ಮನೆಗಳು, …

Read More »

ಸತತ 9 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಸಯಾಮಿ ಮಕ್ಕಳನ್ನು ಯಶಸ್ವಿಯಾಗಿ ಬೇರ್ಪಡಿಸಿದ ವೈದ್ಯರು…

ನವದೆಹಲಿ :ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್​- AIIMS) ತಜ್ಞ ವೈದ್ಯರು ಸತತ 9 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಒಂದು ವರ್ಷದ ಸಯಾಮಿ ಮಕ್ಕಳನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿ ಮೂಲದ ದೀಪಿಕಾ ಮತ್ತು ಅಂಕುರ್ ಗುಪ್ತಾ ದಂಪತಿಗೆ ರಿದ್ಧಿ ಮತ್ತು ಸಿದ್ಧಿ ಎಂಬ ಅವಳಿ ಹೆಣ್ಣು ಮಕ್ಕಳು ಜನಿಸಿದ್ದರು. ಈ ಮಕ್ಕಳ ಎದೆ ಮತ್ತು ಹೊಟ್ಟೆ ಭಾಗಗಳು ಕೂಡಿಕೊಂಡಿದ್ದವು.ರಿದ್ಧಿ ಮತ್ತು ಸಿದ್ಧಿ ಸುಮಾರು …

Read More »