BigTv News
July 27, 2023
ಕರ್ನಾಟಕ, ಧಾರವಾಡ, ಸುದ್ದಿ
ಧಾರವಾಡ: ಸಬ್ಸಿಡಿ ದರದಲ್ಲಿ ರೈತ ಉಪಕರಣಗಳ ಸಿಂಗಲ್ ವಿಂಡೋ ಪೂರೈಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ವಿಡಿಯೋ ಕಾನ್ಸರೆನ್ಸ್ ಮೂಲಕ ರೈತರೊಂದಿಗೆ ಶಾಸಕ ಅರವಿಂದ ಬೆಲ್ಲದ ವೀಕ್ಷಿಸಿದರು.ಧಾರವಾಡ ಎಪಿಎಂಸಿ ಮಾರುಕಟ್ಟೆಯ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರೊಂದಿಗೆ ಶಾಸಕ ಅರವಿಂದ ಬೆಲ್ಲದ ಕಾರ್ಯಕ್ರಮವನ್ನು ವಿಡಿಯೋ ಕಾನ್ಸರೆನ್ಸ್ ಮೂಲಕ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರೈತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ …
Read More »
BigTv News
July 27, 2023
ಕರ್ನಾಟಕ, ಧಾರವಾಡ, ಸುದ್ದಿ
ಧಾರವಾಡ: ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜ್ ನ ಶೌಚಾಲಯದಲ್ಲಿ ನಡೆದ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಹರಿಹಾಯ್ದರು.ಧಾರವಾಡ ನಗರದಲ್ಲಿ ಪಬ್ಲಿಕ್ ನೆಕ್ಸ್ ಜೊತೆ ಮಾತನಾಡಿದ ಅವರು, ಉಡುಪಿಯಲ್ಲಿ ಮೂವರು ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ವೀಡಿಯೊ ಮಾಡಿದ ಪ್ರಕರಣದಲ್ಲಿ ಈಗಾಗಲೇ ಸತ್ಯ ಬಯಲಾಗಿದೆ. ಮುಸ್ಲಿಂ ಯುವತಿಯರು, ಹಿಂದೂ ಯುವತಿಯರ ವೀಡಿಯೊ ಮಾಡಿದ್ದಾರೆ ಎಂದು ಸಚಿವರಿಗೆ ಗೊತ್ತಿದೆ. ಆದರೂ ಅವರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. …
Read More »
BigTv News
July 27, 2023
ದೆಹಲಿ, ಸುದ್ದಿ
ನವದೆಹಲಿ : ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಮೂರನೇ ಅವಧಿಯ ಭರವಸೆಗಳ ನೀಲನಕ್ಷೆಯನ್ನು ಪ್ರಸ್ತುತಪಡಿಸುವ ಸಂದರ್ಭದಲ್ಲಿ ಪ್ರಸ್ತುತಕ್ಕಿಂತ ವೇಗದ ಬೆಳವಣಿಗೆಯೊಂದಿಗೆ ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವನ್ನಾಗಿ ಮಾಡುವ ಭರವಸೆ ನೀಡಿದರು.ಪ್ರಧಾನಿ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರವು ಮುಂದಿನ ವರ್ಷದ ಮೇ ತಿಂಗಳಲ್ಲಿ ತನ್ನ 10 ವರ್ಷಗಳನ್ನು ಪೂರೈಸಲಿದೆ. ಅಭಿವೃದ್ಧಿ ವಿಚಾರದಲ್ಲಿ ಮೂರನೇ ಅವಧಿಗೆ ಚುನಾವಣೆ …
Read More »
BigTv News
July 27, 2023
News, ಸಿನಿಮಾ, ಸುದ್ದಿ
ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಹಾಗೂ ನಿರ್ದೇಶಕ ನಂದ ಕಿಶೋರ್ ಕಾಂಬಿನೇಷನ್ ನ ಪ್ಯಾನ್ ಇಂಡಿಯಾ ವೃಷಭ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಮೋಹಲ್ ಲಾಲ್ ಜೊತೆ ಕನ್ನಡದ ನಟಿ, ತುಪ್ಪದ ಹುಡುಗಿ ರಾಗಿಣಿ ನಟಿಸುತ್ತಿದ್ದು, ಚಿತ್ರತಂಡದ ಜೊತೆಗಿನ ಫೋಟೋವನ್ನ ರಾಗಿಣಿ ಹಂಚಿಕೊಂಡಿದ್ದಾರೆ. ವೃಷಭ ಸಿನಿಮಾದ ಚಿತ್ರೀಕರಣ ಕಳೆದ ಭಾನುವಾರದಿಂದ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. ಡಿಫರೆಂಟ್ ಆಗಿರೋ ಕಥೆಯನ್ನ ಹೇಳೋಕೆ ನಿರ್ದೇಶಕ ನಂದ ಕಿಶೋರ್ ಮುಂದಾಗಿದ್ದು, ‘ಕಾಂದಹಾರ್’ ಬಳಿಕ ಸೂಪರ್ …
Read More »
BigTv News
July 27, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರವು ಐದು ಚುನಾವಣಾ ಭರವಸೆಗಳ ಅನುಷ್ಠಾನ ಮಾಡಿರುವುದರಿಂದ ಆರ್ಥಿಕ ಅಡಚಣೆ ಉಂಟಾಗಿದೆ. ಹಾಗಾಗಿ, ಈ ವರ್ಷ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದೇ ವೇಳೆ, ಅನುದಾನ ಮತ್ತು ಅಭಿವೃದ್ಧಿ ವಿಚಾರವಾಗಿ ಕೆಲವು ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, “ಭಾರಿ ನಿರೀಕ್ಷೆಗಳನ್ನು ಹೊಂದಿರುವ ಪಕ್ಷದ ಶಾಸಕರು …
Read More »
BigTv News
July 27, 2023
News, ಕರ್ನಾಟಕ, ಜಿಲ್ಲೆ, ಸುದ್ದಿ
ಕಲ್ಬುರ್ಗಿ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಜಾಗಿಂಗ್ ಮಾಡುವ ರೀತಿಯಲ್ಲಿ ಬಂದು ಬಂಗಾರದ ಅಂಗಡಿ ಕಳ್ಳತನ ಮಾಡಿದ ಘಟನೆ ಜರುಗಿದೆ. ರಂದು ನಸುಕಿನ ಜಾವ 3.30 ರ ಸಮಯದಲ್ಲಿ ವಾಯು ವಿಹಾರಿಗಳ ಸೋಗಿನಲ್ಲಿ ಬಂದಿದ್ದ ಖದೀಮರು. ಪಟ್ಟಣದ ಸಂತೋಷ್ ಮಾಳಿ ಎಂಬುವವರ ಜ್ಯುವೆಲರ್ ಶಾಪ್ನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ …
Read More »
BigTv News
July 26, 2023
ಕರ್ನಾಟಕ, ಮಂಗಳೂರು, ಸುದ್ದಿ
ಮಂಗಳೂರು:ಮಂಗಳೂರಿನ ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯದಿಂದ ಗರ್ಭಿಣಿ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆಗೆ ಕುಟುಂಬಸ್ಥರು ಮತ್ತು ವಿಶ್ವಕರ್ಮ ಸಮುದಾಯದ ಮುಖಂಡರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಮೂಡಬಿದಿರೆ ಮೂಲದ ಶಿಲ್ಪಾ ಆಚಾರ್ಯ ಮೃತಪಟ್ಟ ಗರ್ಭಿಣಿ. ಜುಲೈ 2ರಂದು ಹೆರಿಗೆ ನೋವು ಹಿನ್ನೆಲೆ ಶಿಲ್ಪಾ ಆಸ್ಪತ್ರೆಗೆ ದಾಖಲಾಗಿದ್ದರು. ಶಿಲ್ಪಾ ಅವರನ್ನು ಪರೀಕ್ಷೆ ನಡೆಸುತ್ತಿದ್ದ ವೈದ್ಯರು ಭಾನುವಾರ ರಜೆ ಇದ್ದಿದ್ದರಿಂದ ಬೇರೊಬ್ಬರು ಹೆರಿಗೆ ಮಾಡಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹೀಗಾಗಿ ಮಹಿಳೆಗೆ ಬೇರೊಬ್ಬ …
Read More »
BigTv News
July 26, 2023
ದೆಹಲಿ, ಸುದ್ದಿ
ನವದೆಹಲಿ:ಹಿಂದು ದೇವಸ್ಥಾನದ ಮೇಲೆ ನಿರ್ಮಿಸಲಾದ ಜ್ಞಾನವಾಪಿ ಮಸೀದಿಯ ಸರ್ವೇಗೆ ತಡೆ ನೀಡಿದ್ದ ಸುಪ್ರೀಂಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ಕೋರಲಾಗಿದ್ದ ಅರ್ಜಿಯನ್ನು ಮರು ಸ್ಥಾಪಿಸಿ, ವಿಚಾರಣೆ ನಡೆಸಲು ಆದೇಶಿಸಿದೆ. ಜ್ಞಾನವಾಪಿ ಮಸೀದಿ ಸರ್ವೇ ನಡೆಸಬೇಕೆಂದು ಕೋರಿ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ವಾರಾಣಸಿ ಜಿಲ್ಲಾ ನ್ಯಾಯಾಲಯ, ಮಸೀದಿ ಸರ್ವೇಗೆ ಅನುಮತಿ ನೀಡಿತ್ತು. ಅದರಂತೆ ಸರ್ವೇ ಕಾರ್ಯ ಕೂಡ ಆರಂಭವಾಗಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಸಿದ ಜ್ಞಾನವಾಪಿ ಮಸೀದಿ …
Read More »
BigTv News
July 26, 2023
ಕರ್ನಾಟಕ, ಶಿವಮೊಗ್ಗ, ಸುದ್ದಿ
ಶಿವಮೊಗ್ಗ:ಕಬ್ಬಿಣದ ರಾಡ್, ಸುತ್ತಿಗೆ ಹಾಗು ಇತರೆ ಸಾಮಗ್ರಿ ಬಳಸಿ ಎಟಿಎಂ ಒಡೆದು ಹಣ ಕಳ್ಳತನ ಮಾಡಿರುವ ಪ್ರಕರಣಗಳನ್ನು ಕೇಳಿದ್ದೇವೆ. ಆದರೆ ಶಿವಮೊಗ್ಗದಲ್ಲೊಬ್ಬ ಚಾಲಾಕಿ ಕಳ್ಳ ಜೆಸಿಬಿ ಮಷಿನ್ ತೆಗೆದುಕೊಂಡು ಬಂದು ಎಟಿಎಂ ಕಳ್ಳತನಕ್ಕೆ ಬಂದಿದ್ದು, ಪೊಲೀಸರು ಬರುತ್ತಿರುವುದನ್ನು ಗಮನಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ವಿನೋಬನಗರ ನಗರದಲ್ಲಿನ ಆ್ಯಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಕಳ್ಳತನಕ್ಕೆ ಬಳಸಿದ ಜೆಸಿಬಿ ಶಿವಮೊಗ್ಗದ ವಿನೋಬನಗರ ನಗರದ ಮುಖ್ಯರಸ್ತೆಯ ಶಿವಾಲಯದ ಮುಂಭಾಗದ ಆ್ಯಕ್ಸಿಸ್ …
Read More »
BigTv News
July 26, 2023
ಕರ್ನಾಟಕ, ತುಮಕೂರು, ಸುದ್ದಿ
ತುಮಕೂರು : ಮೂಢನಂಬಿಕೆಗೆ ನವಜಾತ ಶಿಶುವೊಂದು ಮೃತಪಟ್ಟಿರುವ ಘಟನೆ ತುಮಕೂರು ತಾಲೂಕಿನ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಇಂದು ನಡೆದಿದೆ. ಕಾಡುಗೊಲ್ಲ ಸಮುದಾಯದ ಕಟ್ಟುಪಾಡಿನಂತೆ ಮಗು ಮತ್ತು ತಾಯಿಯನ್ನು ಊರ ಹೊರಗಡೆ ಇರುವ ಗುಡಿಸಲಿನಲ್ಲಿ ಇರಿಸಲಾಗಿತ್ತು. ಇವರ ಕಟ್ಟುಪಾಡಿಗೆ ವಸಂತ ಎಂಬವರ ಅವಳಿ ಮಕ್ಕಳಲ್ಲಿ 10 ದಿನಗಳ ಹೆಣ್ಣು ಮಗುವೊಂದು ಸಾವಿಗೀಡಾಗಿದೆ. ಕಾಡುಗೊಲ್ಲ ಸಮುದಾಯದವರು ಬಾಣಂತಿಯರನ್ನು ಗ್ರಾಮದ ಒಳಗೆ ಸೇರಿಸದೆ ಊರವರೆಗಿನ ಗುಡಿಸಲಿನಲ್ಲಿ ವಾಸ ಮಾಡಲು ಸೂಚಿಸುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು …
Read More »