Breaking News

ಹುಬ್ಬಳ್ಳಿ

ವಕ್ಸ್ ಆಸ್ತಿ ಬಗ್ಗೆ ನೋಟಿಸ್‌ ಕೊಟ್ಟಿದ್ದು ರಾಜ್ಯ ಸರ್ಕಾರ ಆಡಳಿತ ವೈಫಲ್ಯ: ಶೆಟ್ಟರ್

ಹುಬ್ಬಳ್ಳಿ : ರಾಜ್ಯಾದ್ಯಂತ ವಕ್ಸ್ ಗೊಂದಲ ವಿಚಾರ, ಇದು ರಾಜ್ಯ ಸರ್ಕಾರದ ಮಿಸ್ ಮ್ಯಾನೇಜೆಂಟ್. ಸರ್ಕಾರದ ಅವ್ಯವಸ್ಥೆಗೆ ಇದು ಸ್ಪಷ್ಟ ಉದಾಹರಣೆ. ವಕ್ಸ್ ಆಸ್ತಿ ಬಗ್ಗೆ ನೋಟಿಸ್‌ ಕೊಟ್ಟಿದ್ದು ರಾಜ್ಯ ಸರ್ಕಾರ ಆಡಳಿತ ವೈಫಲ್ಯ. ಇದನ್ನು ಯಾರು ಕೇಳದಿದ್ದೆ ಅದು ವಕ್ಸ್ ಬೋರ್ಡ್ ಆಸ್ತಿ ಆಗುತ್ತಿತ್ತು.ಬೋರ್ಡ್ ಗೆ ಆಸ್ತಿ ನೀಡುವ ಮೂಲಕ ಅಲ್ಪಸಂಖ್ಯಾತರ ತುಷ್ಟಿಕರಣ ಹೀನ ಮಟ್ಟಕ್ಕಿಳಿದಿದೆ ಎಂದು ಸಂಸದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ …

Read More »

ನಾವೇನು ಅಲ್ಲಾನ ವಿರುದ್ಧ ಇಲ್ಲಾ‌: ಜೋಶಿ

ಹುಬ್ಬಳ್ಳಿ : ಅಲ್ಲಾಗೆ ಆಸ್ತಿ ಮಾಡೋದೊಂದೇ ಕೆಲಸ ಇತ್ತಾ? ಅಲ್ಲಾ ಹೆಸರು ಹೇಳೋದೆಲ್ಲ ಬೋಗಸ್ ಇವರು ಬೇಕಂತಲೇ ಹೇಳ್ತಾರೆ, ನಾವೇನು ಅಲ್ಲಾನ ವಿರುದ್ಧ ಇಲ್ಲಾ, ಅಲ್ಲಾನ ವಿರುದ್ಧ ಭದ್ಮಶ್ ಗಿರಿ ಮಾಡೋರ ವಿರುದ್ಧ ನಾವಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಷ ಬೋರ್ಡ್ ಆಸ್ತಿ ವಿಚಾರವಾಗಿ ಮಾತನಾಡಿದ ಜೋಶಿ, ಕಾಂಗ್ರೆಸ್ ನವರು ಅಳ್ಳಾವರದಲ್ಲಿ ಪೊಲೀಸ್‌ ಠಾಣೆ ಕಾಪೌಂಡ್ ಹಾಕಿಕ್ಕೋಳೋಕೆ ಬಿಟ್ಟಿಲ್ಲ. ಪೊಲೀಸರು …

Read More »

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಜೋಶಿ

ಹುಬ್ಬಳ್ಳಿ: ವಕ್ಷ ಬೋರ್ಡ್‌ ನವರು ಮುಂಬರುವ ಅಧಿಕಾರ ಕಡಿಮೆ ಆಗುತ್ತೆ ಅನ್ನೋ ಭಯದಿಂದ, ಇರುವ ಆಸ್ತಿಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಕ್ರಿಮಿನಲ್‌ ತರಾತುರಿಯಲ್ಲಿದ್ದಾರೆ. ಬಿಜೆಪಿಯ ಗಟ್ಟಿ ಹೇಳಿಕೆ ಬರದೇ ಹೋಗಿದ್ರೆ, ಉಪಚುನಾವಣೆ ಇರದೇ ಹೋಗಿದ್ರೆ, ರಾಜ್ಯ ಸರ್ಕಾರ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಈಗ ಹಿಂದೆ ತೆಗೆದುಕೊಳ್ಳುತ್ತೇವೆ ಅಂತ ಹೇಳ್ತಿದ್ದಾರೆ. ಕೊಡಲಿಕೆ ಇವರ್ಯಾರು? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಾರವಾಗಿ ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 40-50 …

Read More »

ಯುವಕನನ್ನು ಕಲ್ಲಿನಿಂದ ಚಚ್ಚಿ ಕೊಲೆ

ಕುಮಟಾ: ಹುಬ್ಬಳ್ಳಿಯಿಂದ ಗಾರೆ ಕೆಲಸಕ್ಕೆ ಬಂದಿದ್ದ ಯುವಕನನ್ನು ಕಲ್ಲಿನಿಂದ ಚಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸರಕಾರಿ ಆಸ್ಪತ್ರೆ ಕ್ವಾರ್ಟಸ್‌್ರ ಬಳಿ ನಡೆದಿದೆ. ಹುಬ್ಬಳ್ಳಿ ಮೂಲದ ಇಮ್ಮಿಯಾಝ್ (25) ಕೊಲೆಯಾದ ಯುವಕ. ಗಾರೆ ಕೆಲಸಕ್ಕಾಗಿ ಕಳೆದ ಒಂದು ತಿಂಗಳಿನಿಂದ ಕುಮಟಾ ಸರಕಾರಿ ಆಸ್ಪತ್ರೆ ಕ್ವಾರ್ಟಸ್‌್ರನಲ್ಲಿ ತಂಗಿದ್ದ. ಈತನ ಜೊತೆ ಹುಬ್ಬಳ್ಳಿ ಮೂಲದ ಮೊಯುದ್ದೀನ್, ಮೌನೇಶ್ ಹಾಗೂ ಸಾದಿಕ್ ಕೂಡ ಇದ್ದರು. ಇಮ್ಮಿಯಾಝ್ ಕೊಲೆಯ ಬಳಿಕ ಜೊತೆಗಿದ್ದ …

Read More »

ಮೂರು ಜನ ಮನೆ ಕಳ್ಳರ ಬಂಧನ ಮಾಡಿದ ಹಳೇ ಹುಬ್ಬಳ್ಳಿ ಪೋಲಿಸರು

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಪೊಲೀಸರಿಂದ ಮೂರು ಜನ ಮನೆ ಕಳ್ಳರ ಬಂಧನ ಮಾಡುವುಲ್ಲಿ ಯಶಸ್ವಿಯಾಗಿದ್ದಾರೆ. 05 ಗ್ರಾಂ ಚಿನ್ನ, 200 ಗ್ರಾಂ ಬೆಳ್ಳಿ, ಒಂದು ಮೊಬೈಲ ಪೋನ ಹಾಗೂ ನಗದು ಹಣ ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಯುನುಸ್ ಅಬ್ದುಲ ಖಾದರ ಖಾಜಿ,ಸಿದ್ದಪ್ಪ ಯಮನಪ್ಪ ವಾಲ್ಮೀಕಿ, ಉಮೇಶ ಲಕ್ಷ್ಮಣ ಕೂಲಿ ನಾಗರಾಜ ಬಾಚಣಕಿ ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇತ್ತೀಚೆಗೆ ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯ ಆನಂದನಗರ ಘೋಡ್ಡೆ ಪ್ಲಾಟ ಮತ್ತು …

Read More »

ಕೆಲಸ ಮಾಡುತ್ತಿದ್ದ ಹೋಟೆಲ್ ಗೆ ಕನ್ನ ಹಾಕಿದ ಭೂಪ

ಹುಬ್ಬಳ್ಳಿ: ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಡುಗೆಯಾಳು, ಹೋಟೆಲ್ ನಲ್ಲಿನ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಶಾಂತಿನಗರದ ಟೇಸ್ಟಿ ಟಿಫಿನ್ಸ್ ನಲ್ಲಿ ಕಳ್ಳತನವಾಗಿದ್ದು, ಅಡುಗೆಯಾಳು ಶಂಭು ಮುದ್ದೆಗೌಡ‌ರ್ (28) ಎಂಬಾತನೇ ಚೋರ ಶಿಖಾಮಣಿ. ಇನ್ನು ಕಳೆದ ಒಂದು ವಾರದಿಂದ ಹೋಟೆಲ್ ನ್ನು ಬಂದ್ ಮಾಡಲಾಗಿತ್ತು. ಈ ವೇಳೆ ಅಡುಗೆಯಾಳು ಶಂಭು, ಹೋಟೆಲ್ ನಲ್ಲಿದ್ದ ಕುಕ್ಕರ್, ಗ್ಯಾಸ್, ಫ್ರಿಡ್ಜ್, ಹೆಂಚು, ಹೀಟ‌ರ್ …

Read More »

ಹುಬ್ಬಳ್ಳಿ ಧಾರವಾಡ ಕಮಿಷನ‌ರ್ ಎನ್ ಶಶಿಕುಮಾರ್ ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ: ಅವಳಿ ನಗರದ ಪೊಲೀಸ್ ಕಮಿಷನ‌ರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ ಶಶಿಕುಮಾರ್ ಅವರ ಆರೋಗ್ಯದಲ್ಲಿ ಧಿಡೀರ್ ಏರುಪೇರಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಕಳೆದ ಮೂರು ತಿಂಗಳಿಂದ ಅವಳಿ ನಗರದ ಕಮಿಷನ‌ರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಮಿಷನ‌ರ್ ಎನ್ ಶಶಿಕುಮಾ‌ರ್ ಅವಳಿ ನಗರದಲ್ಲಿರುವ ಎಲ್ಲ ಪ್ರದೇಶಗಳಿಗೂ ಕೂಡಾ ಕಾಲ್ನಡಿಗೆಯಲ್ಲಿ ಪ್ರತಿದಿನ ನಾಲ್ಕರಿಂದ ಐದು ಕಿ.ಲೋ ಮೀಟ‌ರ್ ಓಡಾಡಿ …

Read More »

ಕಳ್ಳತನದ ಪ್ರಕರಣ : ಆರೋಪಿಯನ್ನು ಬಂಧಿಸಿದ ಪೋಲಿಸರು

ಹುಬ್ಬಳ್ಳಿ: ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿಯ ಕೃಷ್ಣಾ ನಗರ ನಿವಾಸಿ ಹುಸೇನ್ ಹಸನಪ್ಪಾ ಅಂಚಟಗೇರಿ ಎಂಬಾತನನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ತಾರಿಹಾಳದದಲ್ಲಿ ಬಂಧಿಸಿದ್ದಾರೆ. ಬಂಧಿತ ಕಳ್ಳನಿಂದ 70 ಸಾವಿರ ರೂಪಾಯಿ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಳೇ ಹುಬ್ಬಳ್ಳಿ ಠಾಣೆ ಪಿಎಸ್‌ಐ ಬೆಳಗಾಂವಕರ, ಎಎಸ್‌ಐ ಹೊನ್ನಪ್ಪನವರ, ಮುಖ್ಯಪೇದೆ ಚಂದ್ರು, ಪೇದೆಗಳಾದ ಮದ್ದೀನ, ಗಿರೀಶ ಹಾಗೂ ಚನ್ನಪ್ಪ ಕಳ್ಳನನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Read More »

ಅವಳಿ ನಗರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ. 37 ಹಾಗೂ 47 ರಲ್ಲಿ ಸದಸ್ಯತಾ ಅಭಿಯಾನ ನಡೆಸಿ, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸಲು ಶಾಸಕ ಮಹೇಶ್ ಟೆಂಗಿನಕಾಯಿ ಅವರು ಮಾರ್ಗದರ್ಶನ ಮಾಡಿದರು. ಇದೆ ವೇಳೆಯಲ್ಲಿ ಪಕ್ಷ ಸಂಘಟನೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಉಮೇಶಗೌಡ ಕೌಜಗೇರಿ, ಶ್ರೀಮತಿ ರೂಪಾ ಶೆಟ್ಟಿ, ಪಕ್ಷದ ಪದಾಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Read More »

ರಾಜೀನಾಮೆ ನೀಡಲು ಹುಬ್ಬಳ್ಳಿಗೆ ಆಗಮಿಸಿದ ಸಿಪಿ ಯೋಗೇಶ್ವರ

ಹುಬ್ಬಳ್ಳಿ: ಚನ್ನಪಟ್ಟಣ ಎನ್ ಡಿಎ ಟಿಕೆಟ್ ಗೊಂದಲ ತೀವ್ರಗೊಂಡಿದೆ. ಈ ನಡುವೆ ವಿಧಾನ ಪರಿಷತ್‌ ಸದಸ್ಯ ಸಿಪಿ ಯೋಗೇಶ್ವರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಹೀಗಾಗಿ ಸಿಪಿ ಯೋಗೇಶ್ವರ ಇಂದು ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

Read More »