Breaking News

ಜಿಲ್ಲೆ

ಅಕಾಲಿಕ ಮಳೆಗೆ ಮನ ಕುಸಿತ-ರಾತ್ರಿಯಿಡಿ ದೇವಸ್ಥಾನದಲ್ಲಿ ಮಲಗಿದ್ದರು

ಗದಗ :ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಊರಿನ ವಾರ್ಡ್ 1 ರ ಹನಮಂತಗೌಡ ಬಸವನಗೌಡ ಪಾಟೀಲ್ ಎಂಬುವವರ ಮನೆಯು ಸಂಪೂರ್ಣವಾಗಿ ಬಿದ್ದಿದ್ದು ಅಧಿಕಾರಿಗಳು ಆಗಲಿ ಗ್ರಾಮ ಪಂಚಾಯತಿಯವರು ಬಂದು ನೋಡಿಕೊಂಡು ಹೋಗುತ್ತಾರೆ ಹೋರತು ಯಾರು ಪರಿಹಾರ ನೀಡುತ್ತಿಲ್ಲ ಎಂದು ಕಣ್ಣೀರು ಹಾಕಿದ ಅಜ್ಜಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಸುಮಾರು 7 ತಿಂಗಳ ಹಿಂದೆಯೇ ಮಳೆಗೆ ಮನಿಯೊಂದು ಬಿದ್ದಿದ್ದು ಶಾಸಕರು ಬಂದು ನೋಡಿಕೊಂಡು ಹೋದರು ಇಲ್ಲಿವರೆಗೆ ಏನು ಮಾಡಿಲ್ಲ ಹಾಗೂ ಗ್ರಾಮ ಪಂಚಾಯತಿಯವರು …

Read More »

ಶೌಚಾಲಯಕ್ಕೆ ನೀರು ಪೂರೈಕೆಗೆ 1ನೆ ವಾರ್ಡನ ಮಹಿಳೆಯರು ಆಗ್ರಹ

ನರೇಗಲ್: ಮಹಿಳಾ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಸಮುದಾಯ ಶೌಚಾಲಯದ ಪಕ್ಕದ ಬಯಲು ಜಾಗೆಯಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಿಸುವಂತೆ ಆಗ್ರಹಿಸಿ ಮಜರೆ ಕೋಚಲಾಪುರ ಗ್ರಾಮದ ಮಹಿಳೆಯರು ಬುಧವಾರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಹನಮಂತ ಮಣ್ಣೋಡ್ಡರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಗ್ರಾಮದ ಮಹಿಳೆಯರು ಕೋಚಲಾಪುರ ಗ್ರಾಮದ ಅಗಸರ ಕೆರೆಯಲ್ಲಿ 10 ವರ್ಷಗಳ ಹಿಂದೆ ಮಹಿಳಾ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ ಕಳಪೆ ಕಾಮಗಾರಿಯಿಂದ ನೀರಿನ ಟ್ಯಾಂಕರ್ …

Read More »

ಮೈಸೂರಲ್ಲಿ ಬ್ರೇಕ್​ ಬದಲು ಎಕ್ಸಲೇಟರ್​ ಒತ್ತಿದ್ದಕ್ಕೆ ಮಹಿಳೆ ಮೇಲೆ ಹರಿದ ಕಾರು – ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮೈಸೂರು: ಚಾಲಕನ‌ ಅಚಾತುರ್ಯದಿಂದ ಕಾರೊಂದು ಫುಟ್​ಪಾತ್​ಗೆ ನುಗ್ಗಿ ಇಬ್ಬರು ಮಹಿಳೆಯರ ಮೇಲೆ ಹರಿದಿದೆ (Car hits on a woman). ಈ ವೇಳೆ ಮಹಿಳೆ ಗಾಯಗೊಂಡ ಘಟನೆ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಮೈಸೂರಿನ ದೇವರಾಜ ಅರಸು ರಸ್ತೆಯ ಯಶಸ್ವಿನಿ ಸಿಲ್ಕ್ ಮಳಿಗೆ ಮುಂಭಾಗದ ಪಾರ್ಕಿಂಗ್​ನಿಂದ ಹೊರಟಿದ್ದ ಕಾರೊಂದು ಚಾಲಕನ ಅಜಾಗರೂಕತೆಯಿಂದ ಏಕಾಏಕಿ ಫುಟ್​ಪಾತ್​ ಮೇಲೆ ನುಗ್ಗಿದೆ. ಈ ವೇಳೆ ಎದುರಿಗಿದ್ದ ಭಾಗ್ಯ ಮತ್ತು ಲಕ್ಷ್ಮೀ ಎಂಬುವರಿಗೆ …

Read More »

ಮಳೆ ಅವಾಂತರ: ಮನೆಯ ಗೋಡೆ ಕುಸಿದು ಕುಟುಂಬ ಪ್ರಾಣಾಪಾಯದಿಂದ ಪಾರು ಬಾಲಕನಿಗೆ ಗಾಯ

ಮಳೆಯ ಅವಾಂತರದಿಂದ ಮನೆಯ ಗೋಡೆ ಕುಸಿದಿರುವುದು, ಮೈಸೂರು: ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಮನೆಯ ಮಣ್ಣಿನ ಗೋಡೆ ಕುಸಿದು (wall collapse Due To Heavy Rain) ಬಿದ್ದು, ಬಾಲಕನ ಕಾಲಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರು ತಾಲೂಕಿನ ಗಣಿಗರ ಹುಂಡಿಯಲ್ಲಿ ನಡೆದಿದೆ. ಮೊಳೆ ಗ್ರಾಮದಲ್ಲಿಯೂ ಮನೆ ಬಿದ್ದ ಘಟನೆ ಜರುಗಿದೆ. ಗ್ರಾಮದ ಸಿದ್ದರಾಜು, ಜ್ಯೋತಿ ಎಂಬುವರ ಪುತ್ರ ವಿಕಾಸ್ (16)ಗಾಯಗೊಂಡ ಬಾಲಕ. ವಿಕಾಸ್​ನನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು …

Read More »

ಸಾಮೂಹಿಕ ವಿವಾಹದಲ್ಲಿ ಎಲ್ಲರ ಗಮನ ಸೆಳೆದ ಕುಬ್ಜ ಜೋಡಿ

ಬಾಗಲಕೋಟೆ: ಕುಬ್ಜ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಗಮನ ಸೆಳೆದ ಘಟನೆ ಬಾದಾಮಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮಹೇಶ್ ಹೊಸಗೌಡ್ರ ಸಮುದಾಯ ಭವನದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಕುಬ್ಜ ಯುವಕ-ಯುವತಿ ಹಸೆಮಣೆ ಏರಿದ್ದು, ವಿಶೇಷವಾಗಿತ್ತು. ಮೂಲತಃ ಬಾದಾಮಿ ತಾಲೂಕಿನ ಕುಟಕನಕೇರಿ ಗ್ರಾಮದ ನಿವಾಸಿ ರವಿ ನಾಯ್ಕರ್ (35) ಬೀಳಗಿ ಪಟ್ಟಣದ ಸುಜಾತ ತಳವಾರ (21) ಎಂಬ ಯುವತಿಯನ್ನು ವರಿಸಿದನು.ರವಿ ನಾಯ್ಕರ್​​ ಹುಬ್ಬಳ್ಳಿಯಲ್ಲಿ ಪಾನ್​ ಶಾಪ್​ ಹಾಕಿಕೊಂಡಿದ್ದಾನೆ. ಮದುವೆ ವಯಸ್ಸಾದರೂ, …

Read More »

ಕೌಟುಂಬಿಕ ಕಲಹ: ಮೈಸೂರಲ್ಲಿ ನೇಣಿಗೆ ಶರಣಾದ ASI.

ಆತ್ಮಹತ್ಯೆಗೆ ಶರಣಾದ ಎಎಸ್‌ ಐ ಶಿವಕುಮಾರಸ್ವಾಮಿ ಮೈಸೂರು: ನಗರದ ವಿವಿ ಪುರಂ ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್​ಐವೊಬ್ಬರು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ(ASI Suicide) ಶರಣಾಗಿರುವ ಘಟನೆ ನಡೆದಿದೆ.ಶಿವಕುಮಾರಸ್ವಾಮಿ (54) ಆತ್ಮಹತ್ಯೆಗೆ ಶರಣಾದ ಎಎಸ್ಐ. ಇವರು ಗೌರಿಶಂಕರ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೌಟುಂಬಿಕ ಕಲಹದ ಹಿನ್ನೆಲೆ ಬೇಸತ್ತು ಶಿವಕುಮಾರಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಕುರಿತು ಕೆ.ಆರ್. ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

Read More »

ಪುನೀತ್‌ ಹೃದಯಾಗಾತಕ್ಕೂ ಜೀಮ್‌ ಗೂ ಯಾವುದೇ ಸಂಭಂದವಿಲ್ಲ-ಕೃಷ್ಣ ಚಿಕ್ಕತುಂಬಳ

ಹುಬ್ಬಳ್ಳಿ: ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಬೆನ್ನಲ್ಲೇ ಕೆಲವೊಂದು ಕಿಡಿಗೇಡಿಗಳು ವ್ಯಾಯಾಮ ಶಾಲೆ, ಕುಸ್ತಿ, ಫಿಟನೆಸ್ ಸೆಂಟರ್ ಹಾಗೂ ಜಿಮ್ ಗೆ ಹೋಗುವುದಿಂದ ಹೃದಯಾಘಾತ ಹೆಚ್ಚಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದ್ದು, ಸಾರ್ವಜನಿಕರು ಇದಕ್ಕೆ ತಲೆಕೊಡದೇ ತಜ್ಞರ ಸಲಹೆ ಮೇರೆಗೆ ಆರೋಗ್ಯ ಸಂಬಂಧಿಸಿದ ವ್ಯಾಯಾಮವನ್ನು ವ್ಯವಸ್ಥಿತವಾಗಿ ಮಾಡಬಹುದೆಂದು ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟು ಮತ್ತು ಚಲನಚಿತ್ರ ನಟ ಕೃಷ್ಣ ಚಿಕ್ಕತುಂಬಳ‌ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ …

Read More »

ಸಿಎಂ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡ್ತಿದ್ದಾರೆ- ಸಿಎಂ ಬದಲಾಗುವುದಿಲ್ಲ..

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಧಾರವಾಡ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಅವರು ಬದಲಾವಣೆ ಆಗುವುದಿಲ್ಲ ಎಂಬ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಒಳ್ಳೆಯ ಕೆಲಸ ಮಾಡುತ್ತಾರೋ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿ ಕೆಟ್ಟಾಗಲೇ ಮುಖ್ಯಮಂತ್ರಿ ಆಗಿರುತ್ತಾರೆ. ಬೊಮ್ಮಾಯಿ ಈಗ ಮುಖ್ಯಮಂತ್ರಿ ಆಗಿದ್ದಾರೆ. ಅವರು ಬದಲಾವಣೆ ಆಗುವುದಿಲ್ಲ. ಒಳ್ಳೆಯ …

Read More »

ಪುನೀತ್ ಭಾವಚಿತ್ರದ ಮೇಲಿನ ಧೂಳು ಒರೆಸಿ ಮುತ್ತಿಟ್ಟ ವೃದ್ಧೆ..

ಪುನೀತ್ ಭಾವಚಿತ್ರದ ಮೇಲಿನ ಧೂಳು ಒರೆಸಿ ಮುತ್ತಿಟ್ಟ ವೃದ್ಧೆ ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜ್​​​ಕುಮಾರ್ (Puneet rajkumar) ಅಕಾಲಿಕ ನಿಧನದಿಂದ ಕೋಟ್ಯಂತರ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ಪುನೀತ್ ಭೌತಿಕವಾಗಿಲ್ಲದಿದ್ದರೂ ನಾನಾ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಬಸ್ ಮೇಲಿನ ಪುನೀತ್ ರಾಜಕುಮಾರ್​​ ಅವರ ಭಾವಚಿತ್ರಕ್ಕೆ ವೃದ್ಧೆಯೊಬ್ಬರು (Old women) ಮುತ್ತಿಟ್ಟು, ಸೆರಗಿನಿಂದ ಮುಖ ಸವರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​​ ವೈರಲ್ ಆಗಿದೆ. ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಸಾರಿಗೆ ಸಂಸ್ಥೆಯ ಬಸ್ …

Read More »

ಬಿಟ್ ಕಾಯಿನ್ ಪ್ರಕರಣ ಅಂತ್ಯ ಕಾಣುವವರೆಗೂ ಬಿಡುವುದಿಲ್ಲ : ಡಿಕೆಶಿ

ಬೆಂಗಳೂರು :ಪ್ರಧಾನಿ ಹೇಳಿದ್ದಾರೆ ಎಂಬ ಕಾರಣಕ್ಕೆ ಬಿಟ್ ಕಾಯಿನ್ ಪ್ರಕರಣವನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಬಹುದು. ಆದರೆ ಕಾಂಗ್ರೆಸ್ ಈ ವಿಷಯ ತಾರ್ಕಿಕ ಅಂತ್ಯಕಾಣುವವರೆಗೂ ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ನಿನ್ನೆ ಮುಖ್ಯಮಂತ್ರಿಯವರು ಪ್ರಧಾನಿಯವರನ್ನು ಭೇಟಿ ಮಾಡಿದ ಬಳಿಕ ಬಿಟ್ ಕಾಯಿನ್ ವಿಚಾರವನ್ನು ಬಿಟ್ಟು ಹಾಕುವಂತೆ ಪ್ರಧಾನಿ ಸಲಹೆ ಮಾಡಿದ್ದಾರೆ. ಹಾಗಾಗಿ ಅವರು ಅದನ್ನು ಕೈಬಿಡಬಹುದು. ಇದು …

Read More »