Breaking News

ಜಿಲ್ಲೆ

ದುಸ್ಸಾಹಾಸಕ್ಕೆ ಯುವಕ ಬಲಿ

ಕೋಲಾರ:- ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡುವ ವೇಳೆ ಆಯಾತಪ್ಪಿ ಬಿದ್ದ ಯುವಕ ಮೃತ ಪಟ್ಟಿರುವ ಘಟನೆ ಕೋಲಾರದ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ರಸ್ತೆಯಲ್ಲಿ ನಡೆದಿದೆ. ಬೈಕ್ ವೀಲಿಂಗ್ ಮಾಡುವ ವೇಳೆ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಯುವಕ ಸಾವನ್ನಪಿದ್ದಾನೆ. ಪಟ್ಟಣದ ರಹೀಮ್ ಕಾಂಪೌಂಡ್ ನಿವಾಸಿ ತಾಹೀದ್ (23) ಮೃತ ಯುವಕನಾಗಿದ್ದಾನೆ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ನೀರಿಗಾಗಿ ಬಡಿದಾಟ ಹಲವಾರು ಮಂದಿ ಗಾಯ ಸಾರ್ವಜನಿಕ ಆಸ್ಪತ್ರೆಗೆ ದಾಖಲು

ಚಿಂತಾಮಣಿ :ತಾಲ್ಲೂಕಿನ ಮುರುಗಮಲ್ಲ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗಲಾಟೆ ನಡೆದಿದ್ದು ಮಹಿಳೆಯರು ಪುರುಷರು ಮಕ್ಕಳು ಸೇರಿದಂತೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಗಾಯಗೊಂಡು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ . ಮುರುಗಮಲ್ಲ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುವ ಶಂಕರ್ ಮತ್ತು ಅವರ ಕುಟುಂಬದವರು ಇಂದು ಸಂಜೆ ತಮ್ಮ ಕುಟುಂಬದ ಮೂರು ಮನೆಗಳಿಗಾಗಿ ಮಾತ್ರ ಹೊಸ ನಲ್ಲಿಯನ್ನು ಹಾಕಿಸಿಕೊಳ್ಳುವುದನ್ನು ಪ್ರಶ್ನಿಸಿದ್ದಕ್ಕೆ ಶಂಕರ್ ಮತ್ತು ಅವರ …

Read More »

ರೈಲಿಗೆ ತಲೆ ಕೊಟ್ಟ ವೃದ್ದ

ಚಿಕ್ಕಬಳ್ಳಾಪುರ:ರೈಲಿಗೆ ತಲೆ ಕೊಟ್ಟು ವೃದ್ದನೊರ್ವ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಫುರ ಹೊರವಲಯದ ಜಡಲತಿಮ್ಮನಹಳ್ಳಿ ಬಳಿ ನಡೆದಿದೆ. ಸರಿ ಸುಮಾರು 65 ವರ್ಷದ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಚಿಕ್ಕಬಳ್ಳಾಫುರ ದಿಂದ ಬೆಂಗಳೂರಿಗೆ ಹೊರಟಿದ್ದ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಘಟನೆಯಲ್ಲಿ ತಲೆ ಮತ್ತು ದೇಹ ಎರಡು ತುಂಡಾಗಿವೆ. ಈ ಕುರಿತು ಯಶವಂತಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.

Read More »

ಚಾಲಕನ ಎಡವಟ್ಟಿನಿಂದ ಏಳು ಜನರು ದಾರುಣವಾಗಿ ದುರ್ಮರಣ

ತುಮಕೂರು: ಚಾಲಕನ ಎಡವಟ್ಟಿನಿಂದ ಏಳು ಜನರು ದಾರುಣವಾಗಿ ದುರ್ಮರಣ ಹೊಂದಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸಿದ್ದಾಪುರ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 75 ರ ಡಿವೈಡರ್ ದಾಟಿ ಪಲ್ಟಿಯಾದ ಇನೋವಾ ಕಾರಿನಲ್ಲಿದ್ದ ಎಂಟು ಮಂದಿಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಯಡಿಯೂರು ಕಡೆಯಿಂದ ಬೆಂಗಳೂರಿಗೆ ಸಾಗುತ್ತಿದ್ದ ವೇಳೆ ಕಾರು ಪಲ್ಟಿಯಾಗಿದೆ. ಈ ಕುರಿತು ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಘಟನೆಯಿಂದ ಎರಡು ಕಿಮೀ ಕ್ಕೂ ಹೆಚ್ಚು …

Read More »

ಫಸ್ಟ್ ಗ್ರೇಡ್ ಕಾಲೇಜ್ ಮಂಡ್ಯ ಗೆ ಸ್ಥಳಾಂತರಕ್ಕೆ ವಿರೋಧ

ಚಿತ್ರದುರ್ಗ:- ಹಿರಿಯೂರು ತಾಲ್ಲೂಕಿನ ಜವಗೊಂಡ ಹಳ್ಳಿಯ ಫಸ್ಟ್ ಗ್ರೇಡ್ ಕಾಲೇಜ್ ಮಂಡ್ಯ ಗೆ ಸ್ಥಳಾಂತರ ಮಾಡಿದ ಹಿನ್ನಲೆಯಲ್ಲಿ ರಾಜ್ಯ ಸರಕಾರದ ವಿರುದ್ದ ಹಲವು ವಿಧ್ಯಾರ್ಥಿಗಳು ಹಾಗೂ ಪೋಷಕರು ಉಪವಾಸ ಸತ್ಯಾಗ್ರಹ ಮಾಡಿ ತಮ್ಮಆಕ್ರೋಶ ವ್ಯಕ್ತ ಪಡಿಸಿದರು. ಈ ಕುರಿತು ಸ್ಥಳಿಯ ಶಾಸಕರ ಮನವಿಗೂ ಬಗ್ಗದ ಮೈತ್ರಿ ಸರಕಾರ ನಡೆಯಿಂದಾಗಿ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಹಾಗು ಹಿರಿಯ ನಾಗರೀಕರು ಅಸ್ವಸ್ಥತರಾದರು.

Read More »

ಸುಲ್ತಾನ್ ಗೋಲ್ಡ್ ಶೋರೂಂಗೆ ಏಕಕಾಲದಲ್ಲಿ ದಾಳಿ

ಮಂಗಳೂರಿನ ಪ್ರತಿಷ್ಠಿತ ಸುಲ್ತಾನ್ ಗೋಲ್ಡ್ ಮತ್ತು ಸಿಟಿ ಗೋಲ್ಡ್ ಗೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಚಿನ್ನದ ವ್ಯಾಪಾರಿಗಳಿಗೆ ಶಾಕ್ ನೀಡಿದ್ದಾರೆ. ಕೇರಳದ ರವೂಫ್ ಗೆ ಸೇರಿದ ಮಂಗಳೂರಿನ ಕಂಕನಾಡಿಯಲ್ಲಿರುವ ಸುಲ್ತಾನ್ ಗೋಲ್ಡ್ ಮತ್ತು ಸಿಟಿ ಗೋಲ್ಡ್ ಮಳಿಗೆಯಲ್ಲಿ ನಿನ್ನೆಯಿಂದ ಕಡತಗಳನ್ನ ಐಟಿ ಅಧಿಕಾರಿಗಳು ಪರೀಶೀಲನೆ ನಡೆಸಿದ್ದಾರೆ. ಇನ್ನೂ ಉಡುಪಿ, ಮಂಗಳೂರು ಮತ್ತು ಶಿವಮೊಗ್ಗದ ಸುಲ್ತಾನ್ ಗೋಲ್ಡ್ ಶೋರೂಂಗೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

Read More »

ತಹಸೀಲ್ದಾರ್ ವಿರುದ್ಧ ಕಾಂಗ್ರೆಸ್ ಮುಖಂಡರ ಆಕ್ರೋಶ….

ನಾಡಪ್ರಭು ಕೆಂಪೇಗೌಡರ ಜಯಂತಿಯ ಕಾರ್ಯಕ್ರಮಕ್ಕೆ ಸಂಸದೆ ಸುಮಲತಾ ಅವರನ್ನು ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈ ಬಿಟ್ಟು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಸಂಸದರಿಗೆ ತಹಶಿಲ್ದಾರ್ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ತಹಸೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿದರು. ಅಧಿಕಾರದ ಮದದಿಂದ ತಹಸೀಲ್ದಾರ್ ಶಿವಮೂರ್ತಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಮಾಡಿರುವ ಕೈ ಕಾರ್ಯಕರ್ತರು ತಹಸೀಲ್ದಾರ್ ವರ್ಗಾವಣೆಗೆ ಒತ್ತಾಯಿಸಿದರು. ಇವರ ವಿರುದ್ಧ ಶಿಸ್ತು ಕ್ರಮಕ್ಕೆ ಡಿಸಿಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ. …

Read More »

ಪಾದಚಾರಿಗಳಿಗೆ ಕಾರು ಡಿಕ್ಕಿ ಒರ್ವ ಸ್ಥಳದಲ್ಲೇ ಸಾವು

ಉಡುಪಿ:ಕುಂದಾಪುರದಿಂದ ಬ್ರಹ್ಮಾವರ ಕಡೆ ಅತೀ ವೇಗವಾಗಿ ಬರುತ್ತಿದ್ದ ಮಾರುತಿ ಈಕೊ ಕಾರು ಸಾಲಿಗ್ರಾಮ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಮಾತನಾಡುತ್ತಿದ್ದ ಕಾರ್ಕಡ ಹಾಡಿಮನೆ ನಿವಾಸಿ ಚಂದ್ರ (46)ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮ್ರತಪಟ್ಟರೆ,ಇವರ ದೂರದ ಸಹೋದರ ನಾರಾಯಣ (50)ಗಂಭೀರ ಗಾಯಗೊಂಡ ಬ್ರಹ್ಮಾವರ ಮಹೇಶ್ ಆಸ್ಪತ್ರೆ ಗೆ ದಾಖಲಿಸಿದ್ದು, ಗಂಭೀರ ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆ ಗೆ ಮಣಿಪಾಲ ಆಸ್ಪತ್ರೆ ಗೆ ದಾಖಿಸಿದ್ದಾರೆ.ಅಪಘಾತವೆಸಗಿದ ಕಾರು ಚಾಲಕ ನೂರ್ …

Read More »

ಕೋಟ್ಯಂತರ ರೂಪಾಯಿ ಪಂಗಾನಾಮಾ ಹಾಕಿದ್ದ ಆರೋಪಿ ಬಂಧನ

ಚಿತ್ರದುರ್ಗ:-ಗ್ರೇಟ್ ಸೌಹಾರ್ದ ಮಲ್ಟೀ ಪರ್ಪಸ್ ಸಹಕಾರಿ ಬ್ಯಾಂಕ್ ಮಾಲೀಕ ಶಕೀಲ್ ಅಹಮ್ಮದ್ ಅವರನ್ನು ವಂಚನೆ ಪ್ರಕರಣದಲ್ಲಿ ಬಂದನ ಮಾಡಲಾಗಿದೆ.ಚಿತ್ರದುರ್ಗದ ಟೌನ್ ಸ್ಟೇಷನ್ ಪೊಲೀಸ್‌ ರಿಂದ ಕಾರ್ಯಚರಣೆ ನಡೆಸಿದ್ದು, ಕೋಟ್ಯಂತರ ರೂಪಾಯಿ ಪಂಗಾನಾಮಾ ಹಾಕಿದ್ದ ಮಾಲಿಕ ಶಕೀಲ್ ಅಹಮ್ಮದ್ ನಿನ್ನೆ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹೂಡಿಕೆದಾರರು ನೀಡಿದ್ದ ದೂರಿನ ಹಿನ್ನಲೆ ಬ್ಯಾಂಕ್ ಮುಖ್ಯಸ್ಥ ನನ್ನು ತಡ ರಾತ್ರಿ ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Read More »

ಬೀಗ ಮುರಿದು ಚಿನ್ನಾಭರಣ ಕಳವು

ಕೋಲಾರ: ಮನೆ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿರುವ ಘಟನೆ ಕೋಲಾರದ ಕಾರಂಜಿಕಟ್ಟೆಯ 12ನೇ ಕ್ರಾಸ್ ನಲ್ಲಿ ನಡೆದಿದೆ. ಕೋಲಾರದ ಬೆಸ್ಕಾಂ ನೌಕರ ಪ್ರಭಾಕರ್ ಮನೆಯವರು ಊರಿಗೆ ಹೋಗಿದ್ದಾಗ ಬೀಗ ಹೊಡೆದು ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಸ್ಥಳಕ್ಕೆ ಕೋಲಾರ ನಗರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »