Breaking News

ಜಿಲ್ಲೆ

ನಾಡಪ್ರಭು ಕೆಂಪೇಗೌಡ ಜಯಂತಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ, ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಚಾಮರಾಜನಗರದಲ್ಲಿ ಆಯೋಜಿಸಲಾಗಿದೆ. ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದಿಂದ ಕೆಂಪೇಗೌಡ ರಥಕ್ಕೆ ಸಮುದಾಯದ ಮುಖಂಡರು ಚಾಲನೆ ನೀಡಿದರು. ವಿವಿಧ ಕಲಾ ತಂಡಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸಮುದಾಯದ ಮುಖಂಡರು ಮೆರವಣಿಗೆಯಲ್ಲಿ ಭಾಗಿಯಾಗಿ, ಕೆಂಪೇಗೌಡರಿಗೆ ಜಯಘೋಷಣೆಗಳನ್ನ ಕೂಗಿ ಹರ್ಷ ವ್ಯಕ್ತಪಡಿಸಿದರು. ಬಳಿಕ ಜೆ ಹೆಚ್ ಪಟೇಲ್ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮಕ್ಕೆ ಜಿಲ್ಲಾ …

Read More »

ವೈದ್ಯರಿಲ್ಲದೆ ರೋಗಿಗಳ ಪರದಾಟ, ಮಾಹಿತಿ ಸಿಕ್ಕರೂ ಸ್ಥಳಕ್ಕೆ ಬಾರದ ಆರೋಗ್ಯಾಧಿಕಾರಿ

ವೈದ್ಯರಿಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ರೋಗಿಗಳು ಪರದಾಡಿ ಪ್ರತಿಭಟನೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸಿಂಗಸಂದ್ರದಲ್ಲಿ ನಡೆದಿದೆ. ಸಿಂಗಸಂದ್ರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರವಿದ್ದು ವೈದ್ಯರುಯಾವುದೇಮಾಹಿತಿ ನೀಡದೆ ಏಕಾಏಕಿ ರಜೆ ಹಾಕಿದ್ದು ಮಾಹಿತಿ ತಿಳಿಯದ ನೂರಾರು ರೋಗಿಗಳು ಗರ್ಭಿಣಿ ಮಹಿಳೆಯರು ಆಸ್ಪತ್ರೆಗೆ ಆಗಮಿಸಿ ವೈದ್ಯರಿಗಾಗಿ ಕಾದು ಕುಳಿತಿದ್ದರು. 12 ಗಂಟೆಯಾದರೂ ವೈದ್ಯರು ಬಾರದ ಹಿನ್ನೆಲೆ ಹಲವು ರೋಗಿಗಳು ಅಸ್ವಸ್ಥರಾಗಿ ಆಸ್ಪತ್ರೆಯ ಮುಂಭಾಗದಲ್ಲೇ ಮಲಗಿದ್ದರು . ಇನ್ನು …

Read More »

ಫಸ್ಟ್ ಗ್ರೇಡ್ ಕಾಲೇಜ್ ಮಂಡ್ಯ ಗೆ ಸ್ಥಳಾಂತರಕ್ಕೆ ವಿರೋಧ

ಚಿತ್ರದುರ್ಗ:- ಹಿರಿಯೂರು ತಾಲ್ಲೂಕಿನ ಜವಗೊಂಡ ಹಳ್ಳಿಯ ಫಸ್ಟ್ ಗ್ರೇಡ್ ಕಾಲೇಜ್ ಮಂಡ್ಯ ಗೆ ಸ್ಥಳಾಂತರ ಮಾಡಿದ ಹಿನ್ನಲೆಯಲ್ಲಿ ರಾಜ್ಯ ಸರಕಾರದ ವಿರುದ್ದ ಹಲವು ವಿಧ್ಯಾರ್ಥಿಗಳು ಹಾಗೂ ಪೋಷಕರು ಉಪವಾಸ ಸತ್ಯಾಗ್ರಹ ಮಾಡಿ ತಮ್ಮಆಕ್ರೋಶ ವ್ಯಕ್ತ ಪಡಿಸಿದರು. ಈ ಕುರಿತು ಸ್ಥಳಿಯ ಶಾಸಕರ ಮನವಿಗೂ ಬಗ್ಗದ ಮೈತ್ರಿ ಸರಕಾರ ನಡೆಯಿಂದಾಗಿ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಹಾಗು ಹಿರಿಯ ನಾಗರೀಕರು ಅಸ್ವಸ್ಥತರಾದರು.

Read More »

ಮಳೆಯ ಆರ್ಭಟಕ್ಕೆ ವಾಹನ ಸಂಚಾರಕ್ಕೂ ಅಡ್ಡಿ

ರಾಮನಗರ :- ನಗರದಾದ್ಯಂತ ಸುರಿದ ದಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.ಇಂದು ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ‌ ರಸ್ತೆಯಲ್ಲಿಯೇ ನೀರು ಹರಿಯಲಾರಂಬಿಸಿದ್ದಿರಂದ ಕೆಲಕಾಲ ಬಸ್ ಸಂಚಾರ ಕೂಡ ಅಸ್ತವ್ಯಸ್ತವಾಗಿತ್ತು. ನಗರ ಪ್ರದೇಶದಲ್ಲಿಯೇ ಬಿರುಗಾಳಿಗೆ ಎರಡು ಮರಗಳು ನೆಲಕ್ಕುರುಳಿದವು. ಇನ್ನೂ ಕೆಂಗಲ್ ಬಳಿ ಬಿದ್ದ ಮಳೆಗೆ ವಿದ್ಯುತ್ ಕಂಬ ನೆಲಕ್ಕುರುಳಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಇಂದು ವಾಹನ ದಟ್ಟಣೆ ಹೆಚ್ಚಾಗಿದ್ದು ಮಳೆಯ ಆರ್ಭಟಕ್ಕೆ ವಾಹನ ಸಂಚಾರಕ್ಕೂ …

Read More »

ಸಚಿವ ಜಮೀರ್ ಅಹ್ಮದ್ ಸತ್ಯ ಬೇರೆನೇ ಇದೆ

ದುಬೈ : ಸಚಿವ ಜಮೀರ್ ಅಹ್ಮದ್ ಖಾನ್ ನನಗೆ ಸಹಾಯ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಸತ್ಯ ಬೇರೆನೇ ಇದೆ ಎಂದು ಐಎಂಎ ಜುವ್ಯೆಲರ್ಸ ಮಾಲೀಕ ಮನ್ಸೂರ್ ಅಲಿಖಾನ್ ತಿಳಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಭ್ರಷ್ಟಚಾರ ವ್ಯವಸ್ಥೆ ನನ್ನನ್ನೂ ದಿವಾಳಿ ಹಂತಕ್ಕೆ ತಂದು ನಿಲ್ಲಿಸಿದೆ. ಯಾರ್ಯಾರು ನನ್ನ ಬಳಿ ಹಣವನ್ನ ಕಿತ್ತು ತಿಂದಿದ್ದಾರೆ ಅವರ ಬಳಿ ವಸೂಲಿ ಮಾಡಿಕೊಳ್ಳಿ ಎಂದು ಹೇಳಿದ್ದಾನೆ.. ನ್ಯಾಯಾಲಯದ ಮುಂದೆ ಹೇಳ್ತಿನಿ. ಇದರ ಹಿಂದೆ ದೊಡ್ಡ ದೊಡ್ಡ …

Read More »

ಸಾಲದ ಬಾಧೆಯಿಂದ ಆತ್ಮಹತ್ಯೆಗೆ ಶರಣಾದ ಕುಟುಂಬಕ್ಕೆ ಶಾಸಕರಿಂದ ಸಾಂತ್ವನ

ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ದೊಡ್ಡತರಹಳ್ಳಿ ಗ್ರಾಮಕ್ಕೆ ಶಾಸಕ ಡಾ.ನಾರಾಯಣಗೌಡ ಭೇಟಿ ನೀಡಿ ಸಾಲದ ಬಾಧೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮಂಜುಶೆಟ್ಟಿ(35) ಅವರ ಪತ್ನಿ ಪ್ರೀತಿ(22) ಅವರಿಗೆ 50ಸಾವಿರ ರೂ ಸಹಾಯ ಧನ ನೀಡಿ ಸಾಂತ್ವನ ಹೇಳಿದರು. ಸಮಸ್ಯೆಗಳಿಗೆ ಸಾವೇ ಪರಿಹಾರವಲ್ಲ. ಆತ್ಮವಿಶ್ವಾಸ ದಿಂದ ಸವಾಲುಗಳು ಹಾಗೂ ಸಮಸ್ಯೆಗಳನ್ನು ಎದುರಿಸಬೇಕು. ಆತ್ಮಹತ್ಯೆಗೆ ಶರಣಾಗುವ ಮುನ್ನ ನಿಮ್ಮನ್ನೇ ನಂಬಿರುವ ಕುಟುಂಬದ ಸದಸ್ಯರನ್ನು ಒಮ್ಮೆ ನೆನಪಿಸಿಕೊಳ್ಳಬೇಕು ಎಂದು …

Read More »

ಮಳೆಯಿಂದಾಗಿ ಕೃಷ್ಣಾ ತೀರದ ರೈತರು ಫುಲ್ ಖುಷ್

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ಹುಕ್ಕೇರಿ ತಾಲೂಕುಗಳಲ್ಲಿ ಇಂದು ಧಾರಕಾರ ಮಳೆಯಾಗಿದ್ದು, ಜನ ಜೀವನ ಅಸ್ಥವ್ಯಸ್ಥವಾಗದೆ, ಮಳೆಯಿಂದಾಗಿ ಮಳೆ ರಸ್ತೆಗಳು ಸಂಪೂರ್ಣ ಮುಚ್ಚಿಹೋಗಿವೆ.ಇನ್ನೂ ಸರಿಯಾಗಿ ರಸ್ತೆ ಕಾಣದೆ ವಾಹನ ಸವಾರರ ಪರದಾಟ ಮಾಡುವ ದೃಶ್ಯಗಳು ಸಾಮಾನ್ಯವಾಘಿತ್ತು. ಯಕ್ಸಂಬಾ ದಿಂದ ಯಡೂರು ಮಾರ್ಗವಾಗಿ ಅಂಕಲಿಗೆ ಬರುವ ಒಳ ಮಾರ್ಗ ಜಲಾವೃತವಾಗಿತ್ತು. ಕಳೆದ 5 ಗಂಟೆಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ತೀರದ ರೈತರು ಫುಲ್ ಖುಷ್ ಆಗಿದ್ದಾರೆ.

Read More »

ಬೆಂಕಿಗೆ ಬಿದ್ದ ದೇವರು

ಕೊಂಡ ಆಯುವಾಗ ಆಯತಪ್ಪಿ ದೇವರ ಮೂರ್ತಿ ಕೆಳಗೆ ಬಿದ್ದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅಪ್ಪಗೆರೆ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ತೈಲೂರಮ್ಮ ದೇವಿಯ ಜಾತ್ರಾ ಮಹೋತ್ಸವ ದ ಅಂಗವಾಗಿ ಕೊಂಡ ಆಯುವ ವೇಳೆ ಪೂಜೆ ಕುಣಿತ ಹೊತ್ತ ಗೋಪಿಸ್ವಾಮಿಯವರಿಗೆ ಆಯತಪ್ಪಿ ದೇವರ ವಿಗ್ರಹ ಕೇಳಗೆ ಬಿದಿದ್ದು, ಅದೃಷ್ಟವಶ ಯಾವುದೆ ಗಾಯಗಳಾಗದೆ ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಇನ್ನೂ ದೇವರ ಮೂರ್ತಿ ಕೆಳಗೆ ಬಿದ್ದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆಶಾಂತಿಯ …

Read More »

ಕಾಂಕ್ರೀಟಿಕರಣ ಕಾಮಗಾರಿಯ ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ

ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕಿಕ್ಕೇರಿ ಹೋಬಳಿ ಕೇಂದ್ರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಒಂದು ಕೋಟಿ ರೂಪಾಯಿ ವೆಚ್ಚದ ಕಾಂಕ್ರೀಟಿಕರಣ ಕಾಮಗಾರಿಯನ್ನು ಶಾಸಕ ಡಾ.ನಾರಾಯಣಗೌಡ ವೀಕ್ಷಿಸಿ ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಕಾಂಕ್ರೀಟ್ ಕಾಮಗಾರಿಯ ಕ್ಯೂರಿಂಗ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ನಾರಾಯಣಗೌಡರು ಅವರೇ ನೀರಿನ ಪೈಪನ್ನು ಕೈಯ್ಯಲ್ಲಿ ಹಿಡಿದುಕೊಂಡು ನೀರನ್ನು ಸಿಂಪಡಿಸಿ ತೋರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣೇಗೌಡ, ಶಂಭೂ, ಕೆ.ವಿ.ಬಲರಾಮ, ಲೋಕೇಶ್, …

Read More »

ಬೆಳಗಾವಿ ಕ್ಷೇತ್ರ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ತಿಳಿಸಿದ ಅಂಗಡಿ

ಬೆಳಗಾವಿ ಲೋಕಸಭೆ ಕ್ಷೇತ್ರ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ನಡಸಲಾಯಿತು. ಚುನಾವಣೆಯಲ್ಲಿ ಸುರೇಶ್ ಅಂಗಡಿಗೆ ಗೆಲುವು ಸಾಧಿಸುವುದಕ್ಕೆ ದುಡಿದ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೆ ಸುರೇಶ್ ಅಂಗಡಿ ಸೇರಿದಂತೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಮಹಾದೇವಪ್ಪ ಯಾದವಾಡ, ಅಭಯ ಪಾಟೀಲ, ಅನಿಲ್ ಬೆನಕೆ ಅಭಿನಂದನೆ ತಿಳಿಸಿದರು. ಬೆಳಗಾವಿಯ ಗಾಂಧಿಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಶಾಲು ಹೊದಿಸಿ, ಹೂಗುಚ್ಚ ನೀಡಿ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅಭಿನಂದಿಸಿದರು.

Read More »