admin
September 12, 2019
ಚಿತ್ರದುರ್ಗ, ಜಿಲ್ಲೆ
ನಿನ್ನೆ ಬೈಕ್ ಗೆ ಲಾರಿ ಡಿಕ್ಕಿಹೊಡೆದ ಪರಿಣಾಮ ದಂಪತಿ ಸೇರಿ 3ಜನ ದುರ್ಮರಣ ಹೊಂದಿದ್ದರು. ಚಿತ್ರದರ್ಗ ಜಿಲ್ಲೆಯ ಹಿರೆಗುಂಟನೂರು ಗ್ರಾಮದ ಬಳಿ ಅಪಘಾತಸಂಭವಿಸಿತ್ತು. ಮೈನ್ಸ್ ತುಂಬಿದ ಲಾರಿ ಹರಿದ ಕಾರಣ ಮಾಂತೇಶ್ ನಾಯ್ಕ್ (30), ಪತ್ನಿ ದೀಪಾಬಾಯಿ (23), ಚೇತನ್ (10).ಮೃತ ಪಟ್ಟಿದ್ದರು. ಅಪಘಾತ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ಮತ್ತು ಸರಕಾರಿ ನೌಕರಿ ನೀಡಲು ಓತ್ತಾಯಿಸಿ ಇಂದು ಭೀಮಸಮುದ್ರ ಲಂಭಾಣಿ ಹಟ್ಟಿ ಗ್ರಾಮ ನಿವಾಸಿಗಳು ಮತ್ತು ಸಂಬಂದಿಕರಿಂದ ಜಿಲ್ಲಾಧಿಕಾರಿಯ …
Read More »
admin
September 12, 2019
ಜಿಲ್ಲೆ, ತುಮಕೂರು
ಚಿರತೆ ದಾಳಿಗೆ ಮೂರು ಮೇಕೆ ಬಲಿಯಾಗಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಗೌರಗಾನಹಳ್ಳಿಯಲ್ಲಿ ನಡೆದಿದೆ. ಕಳೆದ ರಾತ್ರಿ ಚಿಕ್ಕಣ್ಣ ಎಂಬ ರೈತನ ಕೊಟ್ಟಿಗೆ ನುಗ್ಗಿದ ಚಿರತೆ ಮೂರು ಮೇಕೆಗಳನ್ನ ಕೊಂದು ಹಾಕಿದ. ಹೊಲ ಗದ್ದೆ ತೋಟಗಳಲ್ಲಿ ದಾಳಿ ಮಾಡುತ್ತಿದ್ದ ಚಿರತೆಗಳು ಇದೀಗ ಗ್ರಾಮಕ್ಕೆ ಲಗ್ಗೆ ಇಡುತ್ತಿವೆ. ಇದರಿಂದ ಗ್ರಾಮಸ್ಥರು ಭಯಬೀತರಾಗಿದ್ದಾರೆ..ಅರಣ್ಯದಲ್ಲಿ ಆಹಾರ ಸಿಗದೆ ಪ್ರಾಣಿಗಳು ಹಳ್ಳಿ,ಪಟ್ಟಣಗಳತ್ತ ಲಗ್ಗೆ ಇಡುತ್ತಿವೆ. ಅರಣ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Read More »
admin
September 12, 2019
ಜಿಲ್ಲೆ, ಬೆಳಗಾವಿ
ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ. ಕುಮಾರ ತಗಣೆ (೨೫) ಸಾವನ್ನಪ್ಪಿದ ವ್ಯಕ್ತಿ.ಹಿಂಬದಿಯ ಸವಾರ ಅಪ್ಪಾಸಾಹೇಬ ಜಡೆಗೆ ಗಂಭೀರ ಗಾಯವಾಗಿದೆ. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
admin
September 12, 2019
ಜಿಲ್ಲೆ, ಬೆಂಗಳೂರು ಗ್ರಾಮಾಂತರ
ಕೆರೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲಾದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮರಸೂರು ಕೆರೆಯಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಕೆರೆಯಲ್ಲಿ ಈಜಲು ಹೋಗಿ ರೋಷನ್ 14 ವರ್ಷವಿದ್ಯಾರ್ಥಿ ನೀರು ಪಾಲಾಗಿದ್ದಾನೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನುರಿತ ಈಜುಗಾರರು ಶವ ಹೊರತೆಗೆದಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು,ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
admin
September 12, 2019
ಜಿಲ್ಲೆ, ಧಾರವಾಡ
ಲೋಕಸಭಾ ಚುನಾವಣೆ ಮುಗಿದು ಕೇಂದ್ರ ಸರಕಾರದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಾಯ್ತು.ಆದರೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾತ್ರ “ಮತದಾನ ನಮ್ಮ ಹಕ್ಕು, ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ”ಎನ್ನುವ ಮೂಲಕ ಜಾಗೃತಿ ನೀಡುತ್ತಿದೆ. ಕೆಲವು ಬಸ್‌ಗಳಲ್ಲಿ ನೀಡುವ ಟಿಕೇಟ್ ನಲ್ಲಿ ಜಾಗೃತಿ ಮೂಡಿಸುತ್ತಿದೆ.ಹೌದು.ಲೋಕಸಭಾ ಚುನಾವಣೆಗೆ ಮತದಾರರನ್ನು ತಪ್ಪದೆ ಮತದಾನ ಮಾಡುವಂತೆ ಚುನಾವಣಾ ಆಯೋಗ ಮಹತ್ವ ನೀಡುವ ಮೂಲಕ ನಿತ್ಯವೂ ಹಲವಾರು ರೀತಿಯಲ್ಲಿ ಜಾಗೃತಿ ಅಭಿಯಾನದ ಮೂಲಕ ಗಮನ …
Read More »
admin
September 12, 2019
ಜಿಲ್ಲೆ, ಬೆಂಗಳೂರು
ಭೂಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ಕೈಬಿಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ರೈತ ಸಂಘದಿಂದ ಇಂದು ರಾಜ್ಯವ್ಯಾಪಿ ಹೆದ್ದಾರಿ ತಡೆ ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರು-ಚೆನ್ನೈ, ಬೆಂಗಳೂರು-ಮಂಗಳೂರು, ಪುಣೆ ಹೆದ್ದಾರಿಗಳಲ್ಲಿ ಇಂದು ರಸ್ತೆ ಸಂಚಾರ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ರೈತ ಸಂಘದ ಹೆದ್ದಾರಿ ಬಂದ್ ಕ್ರಮಕ್ಕೆ ಹಸಿರು ಸೇನೆ ಸಂಘಟನೆ ಕೂಡ ಬೆಂಬಲ ವ್ಯಕ್ತಪಡಿಸಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆಯವರೆಗೂ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯಲಿವೆ. ಇದರ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆ …
Read More »
admin
September 12, 2019
ಚಿಕ್ಕಬಳ್ಳಾಪುರ, ಜಿಲ್ಲೆ
ಚಿಕ್ಕಬಳ್ಳಾಪುರ ನಗರ ಕಂದವಾರ ಹೊರವಲಯದ ಬೀಡು ಜಮೀನಿನಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಮೂವತ್ತು ವರ್ಷದ ಯುವಕನ ಮೇಲೆ ವಾಹನ ಹತ್ತಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತುಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »
admin
September 12, 2019
ಜಿಲ್ಲೆ, ತುಮಕೂರು
ಮೆಡಿಷನ್ ತಯಾರಿಕಾ ಘಟಕದ ಬಾಯ್ಲರ್ ಸ್ಪೋಟಗೊಂಡು ಹೊತ್ತಿ ಉರಿದ ಘಟನೆ ತುಮಕೂರಿನ ಸತ್ಯಮಂಗಲದಲ್ಲಿ ನಡೆದಿದೆ. ಇಲ್ಲಿನ ಬೇಳೂರು ಬಾಯರ್ ಮೆಡಿಷನ್ ತಯಾರಿಕಾ ಘಟಕದ ಬಾಯ್ಲರ್ ನ ರಿಯಾಕ್ಟರ್ ಇದ್ದಕ್ಕಿದ್ದಂತೆ ಇಂದು ಬೆಳಿಗ್ಗೆ8: 30 ಕ್ಕೆ ಸೋಲಿಕೆಯಾಗಿ ಸ್ಪೋಟಗೊಂಡಿದೆ. ಸ್ಟೋಟದ ತೀವ್ರತೆಗೆ ಚಾವಣಿ ಕಿತ್ತು ಹೋಗಿದ್ದು ಗ್ರಾಮದ ಸುತ್ತಮುತ್ತ ಬಿದ್ದಿದೆ. ಅಲ್ಲದೇ ಗ್ರಾಮದ ನಾಲ್ವರು ಗಾಯಗೊಂಡಿದ್ದಾರೆ. ಸ್ಪೋಟಗೊಂಡ ವಿಷ ಅನಿಲ ಗ್ರಾಮಸ್ಥರ ಉಸಿರಾಟಕ್ಕೆ ತೊಂದರೆಯುಂಟು ಮಾಡಿತ್ತು. ಘಟನೆಯಿಂದ ಸುಮಾರು ಮೂರು ಕಿಮೀ …
Read More »
admin
September 12, 2019
ಕೋಲಾರ, ಜಿಲ್ಲೆ
ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ಘಟನೆ ಕೋಲಾರದ ಕೆಜಿಎಫ್ ನ ಚಾಂಪಿಯನ್ ರೀಫ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಚಾರ್ಲ್ಸ್(33) ಕಾಲು ಕಳೆದುಕೊಂಡ ವ್ಯಕ್ತಿ. ಚಲಿಸುವ ರೈಲು ಹತ್ತುವಾಗ ಆಯ ತಪ್ಪಿ ರೈಲಿಗೆ ಸಿಲುಕಿದ್ದನು. ಕೂಡಲ್ಲೇ ಸ್ಥಳೀಯರ ಸಹಾಯದಿಂದ ರೈಲ್ವೇ ಸಿಬ್ಬಂದಿಗಳು ಗಾಯಾಳು ಚಾರ್ಲ್ಸ್ ನನ್ನ ಕೋಲಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅದೃಷ್ಟವಶಾತ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು, ತನ್ನ ಕಾಲನ್ನು ಕಳೆದುಕೊಂಡಿದ್ದಾನೆ. ಈ ಕುರಿತು ಬಂಗಾರಪೇಟೆ …
Read More »
admin
September 12, 2019
ಜಿಲ್ಲೆ, ಮಂಡ್ಯ
ನಾವು ನೀವೆಲ್ಲಾ ಹಲವು ಬಗೆಯ ಬೈಕ್ ಗಳನ್ನು ನೋಡಿದ್ದೇವೆ. ಆ ಬೈಕ್ ರಸ್ತೆಯ ಮೇಲು ಓಡತ್ತೇ ಹಾಗೂ ನೀರಿನ ಮೇಲು ಸೈ. ಆದ್ರೇ ಮರ ಗಿಡಗಳ ಮೇಲೆ ಅಂದರೇ ನಂಬ್ತೀರಾ..! . ನಂಬಲ್ಲೇ ಬೇಕು. ಈ ಪ್ರಪಂಚದಲ್ಲಿ ಇನ್ನೂ ಏನೇನ್ ಕಂಡುಹಿಡಿದು ತಯಾರು ಮಾಡುತ್ತಾರೋ ಈ ಕಣ್ಣಲ್ಲಿ ನೋಡಬೇಕಾದ ದೃಶ್ಯ ಬೇಕಾದಷ್ಟಿದೆ ಮರ ಹತ್ತುವ ಈ ಬೈಕ್ ಮೇಷನ್ ಕಂಡು ಹಿಡಿದಿದ್ದಾರೆ . ನೋಡಿದ ಕ್ಷಣದ ಮಟ್ಟಿಗೆಅಂತೂ ಯಾರನ್ನ್ ಬೇಕಿದ್ರು …
Read More »