Breaking News

ಜಿಲ್ಲೆ

ಬಿರುಗಾಳಿ ಸಮೇತ ಸುರಿದ ಮಳೆಯಿಂದ ಲಕ್ಷಾಂತರ ರೂ ಪಾಲಿ ಹೌಸ್ ನಾಶ

ಒಂದು ಕಡೆ ಮುರಿದು ಬಿದ್ದಿರುವ ಪೈಪುಗಳು , ಇನ್ನೊಂದೆಡೆ ಹಾರಿ ಹೋದ ಪಾಲಿ ಹೌಸ್ ಮೇಲ್ಚಾವಣಿ , ಲಕ್ಷಾಂತರ ರೂ ಸಾಲ ಮಾಡಿ ನಿರ್ಮಿಸಿದ ಪಾಲಿ ಹೌಸ್ ತನ್ನ ಕಣ್ಣು ಮುಂದೆ ನಾಶವಾಗಿ ರೈತನ ಕಣ್ಣಲ್ಲಿ ನೀರು , ಈ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಮರಾವತಿ ಎಂಬ ಗ್ರಾಮದಲ್ಲಿ.ಬೀಚಗೊಂಡಹಳ್ಳಿ ಗ್ರಾಮದ ನಿವಾಸಿ ಚಿಕ್ಕಮುನಿಯಪ್ಪನಿಹೆ ಸೇರಿದ ಪಾಲಿ ಹೌಸ್ , ಇಳಿ ವಯಸ್ಸಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ …

Read More »

ವರುಣನ ಆರ್ಭಟಕ್ಕೆ ರೈತರ ಮುಖದಲ್ಲಿ ಮಂದಹಾಸ

ಚಿಕ್ಕೋಡಿ:ಬಿಸಿಲ ಬೇಗೆಯಿಂದ ತತ್ತರಿದ ಜನರಿಗೆ ವರುಣ ತಂಪಾರೆದು ರೈತರ ಮನದಲ್ಲಿ ಒಂದಿಷ್ಟು ಹೊಸ ಚಿಗುರು ಆರಂಭಸಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದಾಗಿ ಬರದ ಛಾಯೆಯಿಂದ ತತ್ತರಿಸಿದ್ದ ತಾಲ್ಲೂಕಿನಲ್ಲಿ ವರುಣನ ಅಬ್ಬರಕ್ಕೆ ರೈತರ ಮುಖದಲ್ಲಿ ಬರವಸೆಯ ನಗೆ ಮೂಡಿದೆ. ಸಿಡಿಲು-ಗುಡುಗು ಸಹಿತ ರಾತ್ರಿ ಎರಡು- ಮೂರು ಗಂಟೆಗಳ ಕಾಲ ಮಳೆಯಾಗಿದ್ದರಿಂದ ಇಂದಿನಿಂದ ಬಿತ್ತನೆಗೆ ಜಮೀನು ಹದಮಾಡಲು ರೈತರು ಮುಂದಾಗಿದ್ದಾರೆ.

Read More »

ಆಂಧ್ರದ ಕಮ್ಮವಾರಪಳ್ಳಿ ಯಲ್ಲಿ ಸೇಂದಿ ಸೇವಿಸಿ 12 ಜನ ಕಾರ್ಮಿಕರು ಅಸ್ವಸ್ಥ.

ಕಲುಷಿತ ಸೇಂದಿ ಸೇವಿಸಿ 12 ಜನ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಆಂಧ್ರದ ಕಮ್ಮವಾರಪಳ್ಳಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಬಾಗೇಪಲ್ಲಿ ತಾಲ್ಲೂಕಿನ ಗುಟ್ಟೆ ಪಾಳ್ಯ ನಿವಾಸಿಗಳು ಕಲುಷಿತ ಸೇಂದಿ ಸೇವಿಸಿದ್ದರು. ನಂತರ ಕುಡಿದ ಅಷ್ಟು ಜನರು ವಾಂತಿ ಭೇದಿಯಿಂದ ಒದ್ದಾಡುತ್ತಿದ್ದರು. ಕೂಡಲೇ ಸ್ಥಳಿಯರ ಸಹಾಯದಿಂದ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈಧ್ಯರ ವರಧಿ ಪ್ರಕಾರ ಸೇಂದಿ ಸೇವನೆಯಿಂದಲ್ಲೆ ಆರೋಗ್ಯದಲ್ಲಿ ಏರುಪೇರಾಗಿರುವುದಾಗಿ ತಿಳಿಸಿದ್ದಾರೆ. ಈ ಕುರಿತು . ಆಂಧ್ರದ …

Read More »

ಮಾವಿನ ಕಾಯಿ ತುಂಬಿದ್ದ ಟೆಂಪೋ ಪಟ್ಟಿ

ಟೈಯರ್ ಸ್ಪೋಟಗೊಂಡು ಮಾವಿನ ಕಾಯಿ ತುಂಬಿದ್ದ ಟೆಂಪೋ ಪಟ್ಟಿಯಾದ ಘಟನೆ ಚಿಂತಾಮಣಿ ತಾಲ್ಲೂಕಿನ ಎನ್ ಹೊಸಹಳ್ಳಿ ಗೇಟ್ ಬಳಿ ನಡೆದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸಕೋಟೆ ತಾಲ್ಲೂಕಿನ ಮಲ್ಲಿಮಾಕಲಪುರದ ನವೀನ್ ಎಂಬುವರಿಗೆ ಸೇರಿದ ಟೆಂಪೋವಾಗಿದ್ದು, ಚಿಂತಾಮಣಿ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ಟೆಂಪೋ ಪಲ್ಟಿಯಾದ ಘಟನೆ ಸಂಭವಿಸಿದೆ. ಈ ಕುರಿತುಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ತ್ರಿಭಾಷಾ ನೀತಿಗೆ ಕುಂ.ವೀರಭದ್ರಪ್ಪ ವಿರೋಧ

ತ್ರಿಬಾಷಾ ನೀತಿಗೆ ಕುಂ.ವೀರಭದ್ರಪ್ಪ ವಿರೋಧ ವ್ಯಕ್ತಪಡಿಸಿದರು. ಚಿತ್ರದುರ್ಗದಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಜೀವನ ಕನ್ನಡ ಭಾಷೆ ಮೇಲೆ ಅವಲಂಬಿಸಿದೆ. ಹಾಗಾಗಿ ಕನ್ನಡ ರಕ್ಷಿಸಿ ಹಿಂದಿ ವಿರೋಧಿಸಿ ಎಂದರು. ಹಿಂದಿ ಯಾವುದೇ ಕಾರಣಕ್ಕೂ ನಮ್ಮ ಗಡಿ ದಾಟದಂತೆ ನೋಡಿಕೊಳ್ಳಬೇಕು. ನಮ್ಮ ಕೆಂಪು-ಬಿಳಿ ರಕ್ತ ಕಣಗಳನ್ನ ಇನ್ನೊಂದು ಭಾಷೆ ಆಕ್ರಮಿಸದಂತೆ ನೋಡಿಕೊಳ್ಳಬೇಕು. ಹಿಂದಿ ಸಾಹಿತ್ಯವನ್ನ ನಾವು ಓದಿದ್ದೇವೆ. ಕನ್ನಡ ನಾಶವಾದರೆ ನಮ್ಮ ಜೀವನ ನಾಶವಾಗುತ್ತದೆ. …

Read More »

ರಂಜನ್ ಹಬ್ಬದ ಪ್ರಯುಕ್ತ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್

ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ತಾಲ್ಲೂಕು ಘಟಕದ ವತಿಯಿಂದ ಜಾಮಿಯ ಮಸೀದಿಯ ಆವರಣದಲ್ಲಿ ಬಡ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ಗಳನ್ನು ವಿತರಿಸಲಾಯಿತು. ಪುರಸಭೆ ಸದಸ್ಯೆ ಖಮ್ಮರ್ ಬೇಗಂ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು…ಪುರಸಭೆಯ ಮಾಜಿಅಧ್ಯಕ್ಷ ಕೆ.ಗೌಸ್ ಖಾನ್, ಪುರಸಭೆ ಮಾಜಿಸದಸ್ಯೆ ತಂಜೀಮಾಕೌಸರ್, ಮುಸ್ಲಿಂ ಸಮಾಜದ ಮುಖಂಡರಾದ ಹಾಫೀಜುಲ್ಲಾಶರೀಫ್, ನವೀದ್ ಅಹಮದ್, ಚಾಂದ್ ಪಾಶ, ಅಕ್ಬರ್ ಪಾಶ, ಶಬೀರ್ …

Read More »

ಕೋಟೆನಾಡಿನಲ್ಲಿ ಯುವಕನ ಮೇಲೆ ಬ್ಲೇಡ್ ದಾಳಿ

ಕೋಟೆ ನಾಡು ಚಿತ್ರದುರ್ಗದಲ್ಲಿ ದುಶ್ಚಟ ವ್ಯಸನಿಗಳ ಕಾಟ ಹೆಚ್ಚಾಗಿದ್ದು, ಪುಂಡರ ಬ್ಲೇಡ್ ದಾಳಿಗೆ ಸಿಲುಕಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿತ್ರದುರ್ಗದ ಜೆಸಿಆರ್ ಬಡಾವಣೆಯಲ್ಲಿ ಸಲ್ಯೂಷನ್ ವ್ಯಸನಿಗಳ ಆರು ಮಂದಿ ತಂಡ ಬಡೇಮಕಾನ್ ನಿವಾಸಿ ಕರೀಂ ಎಂಬ ಯುವಕನ ಮೇಲೆ ಬ್ಲೇಡ್ ನಿಂದ ದಾಳಿಮಾಡಿ, ಮೂರು ಸಾವಿರ ರೂಪಾಯಿ ನಗದು ಹಾಗು ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾರೆ. ದುಶ್ಚಟ ವ್ಯಸನಿಗಳ ದಾಳಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿರುವ ಯುವಕ ಕರೀಂ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ …

Read More »

ಆಹಾರ ಪದಾರ್ಥಗಳನ್ನು ಕದ್ದೋತ್ತಿದ್ದಾಗ ಸಿಕ್ಕಿಬಿದ್ದ ಅಂಗನವಾಡಿ ಕಾರ್ಯಕರ್ತೆ

ಅಂಗನವಾಡಿ ಮಕ್ಕಳಿಗೆ ಪೂರೈಕೆ ಮಾಡಬೆಕಿದ್ದ ಆಹಾರ ಪದಾರ್ಥಗಳನ್ನು ಕದ್ದು ಒಯ್ಯುತ್ತಿದ್ದ ಕಾರ್ಯಕರ್ತೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ನಡೆದಿದೆ. ಅಂಗನವಾಡಿ ಆಹಾರ ಕದ್ದು ಸಾಗಿಸುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಕಾಗವಾಡದ ಅಂಗನವಾಡಿ ಸಂಖ್ಯೆ ಏಳರಲ್ಲಿ ಘಟನೆ ಸಂಭವಿಸಿದ್ದು, ಲೂನಾ ಎಕ್ಸ ಎಲ್ ಬೈಕ್ ನಲ್ಲಿ ಆಹಾರ ಸಾಗಿಸುವಾಗ ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರು ಹಿಡಿದು ಅಂಗನವಾಡಿ ಕಾರ್ಯಕರ್ತೆಯ …

Read More »

ಸಿಬ್ಬಂದಿ ನಿರ್ಲಕ್ಷಕ್ಕೆ ಲಕ್ಷಾಂತರ ಮೌಲ್ಯದ ಔಷಧಿ ನಾಶ

ಸಿಬ್ಬಂದಿ ನಿರ್ಲಕ್ಷಕ್ಕೆ ಲಕ್ಷಾಂತರ ಮೌಲ್ಯದ ಔಷಧಿ ನಾಶವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖಿಳೆಗಾಂವ್ ಗ್ರಾಮದ ಉಪ ಆರೊಗ್ಯ ಕೆಂದ್ರದಲ್ಲಿ ಕಂಡು ಬಂದಿದೆ. ರಾಶಿ ರಾಶಿ ಔಷಧಿಯು ಅವಧಿ ಮುಗಿಯುತ್ತ ಬಂದರೂ ವಿತರಣೆಯಾಗದೆ ಹಾಗೇ ಉಳಿದಿತ್ತು. ಬಡವರಿಗೆ ಹಂಚಲು ತಂದ ಔಷಧಿ ವೈಧ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷಕ್ಕೆ ಬಳಕೆ ಆಗದೆ ಉಳಿದ ವಿಟಮಿನ್, ಐರನ್ ಕ್ಯಾಪ್ಸೂಲ್ ಔಷಧಿಗಳು ಎಂದು ತಿಳಿದು ಬಂದಿದೆ. ಈ ಕುರಿತು ಅಥಣಿ ಪೊಲಿಸ್ ಠಾಣೆ …

Read More »

ಕೋಲಾರದ ಎಸಿ ಹಾಗೂ ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರರಿಗೆ ಬಂಧನದ ವಾರೆಂಟ್

BIG exclusive ಕೋಲಾರದ ಎಸಿ ಹಾಗೂ ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರರಿಗೆ ಬಂಧನದ ವಾರೆಂಟ್ಯನ್ನು ಹೈಕೋರ್ಟ್ ನ್ಯಾಯಾಧೀಶ ಸತ್ಯನಾರಾಯಣರಿಂದ ಆದೇಶ ಹೊರಡಿಸಿದೆ. ಎಸಿ, ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರರನ್ನ ಬಂಧಿಸಿ ಕೋರ್ಟ್ ಗೆ ಹಾಜರುಪಡಿಸುವಂತೆ ಎಸ್ಪಿಗೆ ನಿರ್ದೇಶನ ನೀಡಲಾಗಿದೆ. ಜೂನ್ 7 ರಂದು ಬೆಳಗ್ಗೆ 10 ಗಂಟೆಗೆ ಹೈಕೋರ್ಟ್ ಹಾಲ್ ನಂ.5 ರಲ್ಲಿ ಹಾಜರುಪಡಿಸುವಂತೆ ಆದೇಶಿಸಿದ್ದು, ಭೂಮಿ ಕಳೆದಕೊಂಡ ದೂರುದಾರರಿಗೆ ಪರಿಹಾರ ನೀಡದಿರುವ ಹಿನ್ನಲೆಯಲ್ಲಿ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ. ಹಿನ್ನೆಲೆ ನೋಡುವುದಾದ್ರೇ …

Read More »