Breaking News

ಜಿಲ್ಲೆ

1978 ನನ್ನ ಜೀವನದ ಅಮೂಲ್ಯ ವರ್ಷ: ಡಾ.ವೀರೇಂದ್ರ ಹೆಗ್ಗಡೆ

ಧಾರವಾಡ : 1978 ರಲ್ಲಿ ನನ್ನ ಜೀವನದ ಅತಿ ಅಮೂಲ್ಯವಾದ ವರ್ಷ. ನನ್ನ ಮದುವೆಯಾಗಿದ್ದು 1978 ರಲ್ಲಿ ಆ ವರ್ಷದಲ್ಲಿ ಬಹಳಷ್ಟು ಅಭಿವೃದ್ಧಿ ‌ಕೆಲಸಗಳು ಆಗಿವೆ ಎಂದು ರಾಜ್ಯಸಭಾ ಸದಸ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ತಮ್ಮ ಮದುವೆಯ ನೆನಪನ್ನು ಮೆಲುಕು ಹಾಕಿದರು. ಜೆಎಸ್ಎಸ್ ಶಿಕ್ಷಣ ಸಮಿತಿಯ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧಾರವಾಡದಲ್ಲಿ ಜನತಾ ಶಿಕ್ಷಣ ಸಮಿತಿ ಪ್ರಾರಂಭ ಮಾಡಿದ ವರ್ಷ ಅದು. ಧಾರವಾಡದಲ್ಲಿ ಜೆಎಸ್ಎಸ್ ಧಾರವಾಡ …

Read More »

ಈಶ್ವರಿ ಫೌಂಡೇಶನ್ ವತಿಯಿಂದ ಸವಿಗಾನ ಕಾರ್ಯಕ್ರಮವನ್ನು ಅಕ್ಟೋಬರ್ 8 ರಂದು ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ

ಹುಬ್ಬಳ್ಳಿ :ಈಶ್ವರಿ ಫೌಂಡೇಶನ್ ವತಿಯಿಂದ ಪದ್ಮಶ್ರೀ, ಪದ್ಮವಿಭೂಷಣ ಹಾಗೂ ಸಂಗೀತ ದಿಗ್ಗಜರಾದ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಇವರ ಸ್ಮರಣೆಯ ಸವಿಗಾನ ಕಾರ್ಯಕ್ರಮವನ್ನು ಅಕ್ಟೋಬರ್ ೮ ರಂದು ಸಂಜೆ ೪.೩೦ ಕ್ಕೆ ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಈಶ್ವರಿ ಫೌಂಡೇಷನ್ ಸಂಸ್ಥಾಪಕರಾದ ಸಂತೋಷ್ ವರ್ಣೇಕರ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಅಧ್ಯಕ್ಷತೆಯನ್ನು ಈಶ್ವರಿ ಫೌಂಡೇಶನ್ …

Read More »

8 ರಂದು ಬಸವರಾಜ ಡೋಣೂರ ಅವರ ಕುರಿತು ವಿಚಾರ ಸಂಕಿರಣ.

ಧಾರವಾಡ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಕನ್ನಡ ಲೇಖಕರಾಗಿ ಸಾಮಾಜಿಕ ಚಿಂತಕರಾಗಿ ಮತ್ತು ಶೈಕ್ಷಣಿಕ ಆಡಳಿತಗಾರರಾಗಿ ಕರ್ನಾಟಕ ಮತ್ತು ಭಾರತದಲ್ಲಿ ತಮ್ಮದೇ ಆದ ಸ್ಥಾನ, ಶಿಷ್ಯವೃಂದ ಮತ್ತು ಗೆಳೆಯರ ಬಳಗ ಕಟ್ಟಿಕೊಂಡಿರುವ ಬಸವರಾಜ ಡೋಣೂರ ಅವರ ಸಾಹಿತ್ಯ ಮತ್ತು ಬದುಕಿನ ಕುರಿತು ಒಂದು ದಿನದ ವಿಚಾರ ಸಂಕಿರಣ, ಡೋಣಿ ಸಾಲು, A Melting Pot ಕೃತಿಗಳ ಬಿಡುಗಡೆ ಮತ್ತು ಸನ್ಮಾನ ಸಮಾರಂಭವನ್ನು ದಿ 08 ರಂದು , ಬೆಳಿಗ್ಗೆ 9.30 ಘಂ ಧಾರವಾಡದ …

Read More »

ಯುವ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವು…

ಮಂಗಳೂರು:ಕರ್ತವ್ಯದ ಮೇಲಿದ್ದಾಗ ಹೆಡ್ ಕಾನ್ಸಟೇಬಲ್ ರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಮಂಗಳೂರಿನ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್​ಟೇಬಲ್ ಸೇಮನಗೌಡ ಚೌಧರಿ ಮೃತಪಟ್ಟವರಾಗಿದ್ದಾರೆ.ಮೂಲತಃ ವಿಜಯಪುರದರಾದ ಸೋಮನಗೌಡ ಚೌಧರಿ 2016 ರ ಬ್ಯಾಚ್‌ನ ಸಿಬ್ಬಂದಿಯಾಗಿ ಸೇವೆಗೆ ಸೇರಿಕೊಂಡಿದ್ದರು.ಸಿಎಆ‌ರ್ ಕಾನ್ಸ್​ಟೇಬಲ್ ಆಗಿ ವೃತ್ತಿಗೆ ಸೇರ್ಪಡೆಗೊಂಡಿದ್ದ ಬಳಿಕ ಹೆಡ್‌ ಕಾನ್ಸ್​ಟೇಬಲ್ ಆಗಿ ಬಡ್ತಿ ಪಡೆದಿದ್ದರು.ಇದೀಗ ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕಂಟ್ರೋಲ್ ರೂಂ ಇನ್ಸ್​ಪೆಕ್ಟರ್‌ರ ವಾಹನ ಚಾಲಕನಾಗಿ ಕರ್ತವ್ಯದಲ್ಲಿದ್ದರು ಮೂರು ವರ್ಷಗಳ …

Read More »

ಅರಮನೆಯ ವಿದ್ಯುದ್ದೀಪಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ….

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯೇ ವಿದ್ಯುತ್‌ ದೀಪಗಳಿಂದ ಜಗಮಗಿಸುವ ಅರಮನೆ. ಈ ಅರಮನೆ ದಸರಾ ಮಾತ್ರವಲ್ಲದೆ ಎಲ್ಲ ದಿನಗಳಲ್ಲಿಯೂ ರಾತ್ರಿ ವೇಳೆ ನಿಗದಿತ ಅವಧಿಯಲ್ಲಿ ವಿದ್ಯುದ್ದೀಪಗಳಿಂದ ಮಿನುಗುತ್ತಾ ಗಮನಸೆಳೆಯುತ್ತದೆ. ಈ ಸುಂದರ ದೃಶ್ಯಗಳನ್ನು ಸವಿಯಲೆಂದೇ ಪ್ರವಾಸಿಗರು ಅರಮನೆಯತ್ತ ನೆರೆಯುತ್ತಾರೆ. ಅರಮನೆಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಲ್ಬ್‌ಗಳಿಂದ ಅಲಂಕೃತಗೊಂಡಿದ್ದು, ಈ ಬಲ್ಬ್‌ಗಳು ಹಲವು ಕಾರಣಗಳಿಗೆ ಹಾಳಾಗುತ್ತವೆ. ಅಂತಹ ಬಲ್ಬ್‌ಗಳನ್ನು ತೆಗೆದು ಹೊಸ ಬಲ್ಬ್‌ಗಳನ್ನು ಅಳವಡಿಸುವ ಕಾರ್ಯ …

Read More »

ಶೋಭಾ ಕರಂದ್ಲಾಜೆ ವಿರುದ್ಧ ಎಚ್.ಕೆ.ಪಾಟೀಲ್ ಗರಂ ಆಗಿದ್ಯಾಕೆ?

ಗದಗ: ಕಾವೇರಿ ವಿಚಾರದಲ್ಲಿ ರಾಜ್ಯಸರ್ಕಾರ ಯಡವಟ್ಟು ಮಾಡಿದೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರಕ್ಕೆ ಸಚಿವ ಎಚ್ ಕೆ ಪಾಟೀಲ್ ಆಕ್ರೋಶ ವ್ತಕ್ತಪಡಿಸಿದ್ದಾರೆ ಶೋಭಾ ಕರಂದ್ಲಾಜೆ ಮಹತ್ವದ ಸ್ಥಾನದಲ್ಲಿದ್ದಾರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಎರಡೂ ರಾಜ್ಯಗಳನ್ನ ಕೂಡಿಸಿ ಕೇಂದ್ರ ಸರ್ಕಾರ ಪರಿಹಾರ ಕಂಡುಹಿಡಿಯಬೇಕು ಇದು ಕೇಂದ್ರ ಸರ್ಕಾರದ ಆದ್ಯ ಕರ್ತವ್ಯ ನಮ್ಮ ಕಾವೇರಿ ಸ್ಥಿತಿ ಬಗ್ಗೆ ಚರ್ಚೆ ಮಾಡಬೇಕು ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಹೇಳಿದರು. …

Read More »

ಗಾಂಧಿ ಜಯಂತಿ ಅಂಗವಾಗಿ ನೈರುತ್ಯ ರೆಲ್ವೇಯಿಂದ ಬಹುಮಾನ ವಿತರಣೆ….

ಹುಬ್ಬಳ್ಳಿ: ನೈರುತ್ಯ ರೈಲ್ವೆ ಯಿಂದ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು.ನೈರುತ್ಯ ರೈಲ್ವೆಯ ಜಿಎಂ ಸಂಜೀವ್ ಕಿಶೋರ್ ಗಾಂಧೀಜಿ ಪುತ್ಥಳಿಗೆ ಪುಷ್ಪಾರ್ಪಣೆ ಮಾಡಿದರು.ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಪಾಕ್ಷಿಕ ಆಚರಣೆದೇಶಭಿಮಾನ ಮೂಡಿಸೋ ಗೀತೆಗಳ ಗಾಯನ, ನೃತ್ಯ ನಡೆಯಿತು.ಇದೆ ವೇಳೆ ಸ್ವಚ್ ಭಾರತ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಜಿಎಂ ಸಂಜೀವ್ ಕಿಶೋರ್ ಅವರಿಂದ ವಿತರಣೆ ಮಾಡಿಸಲಾಯಿತು.ಚಿತ್ರಕಲಾ ಸ್ಪರ್ಧೆಯಲ್ಲಿ ಚಿನ್ಮಯ ವಿದ್ಯಾಲಯದ ಕಾವ್ಯ ಪ್ರಥಮ, …

Read More »

ಜೆಡಿಎಸ್​ ಪಕ್ಷದ ಮತ್ತೊಂದು ವಿಕೆಟ್ ಪತನ

ಬೆಂಗಳೂರು : ಕಾಂಗ್ರೆಸ್​ನ ಆಪರೇಷನ್​ ಹಸ್ತಕ್ಕೆ ಜೆಡಿಎಸ್​ ಪಕ್ಷದ ಮತ್ತೊಂದು ವಿಕೆಟ್ ಪತನವಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರಿಗೆ ತವರು ಜಿಲ್ಲೆಯಲ್ಲಿಯೇ ದೊಡ್ಡ ಶಾಕ್ ನೀಡಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದ ಜೆಡಿಎಸ್​ನ ಮಾಜಿ ಶಾಸಕ ಎಂ.ಸಿ. ಅಶ್ವತ್ಥ್ ಅವರು ಜೆಡಿಎಸ್​ ತ್ಯಜಿಸಿ ಇಂದು ಅಧಿಕೃತವಾಗಿ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಅಶ್ವತ್ಥ್ ಹಾಗೂ …

Read More »

ಶಿವಮೊಗ್ಗ ಕೋಮು ಗಲಭೆ: ಯಾರೋ ಮಾನಸಿಕ ಸ್ಥಿಮಿತ ಕಳೆದುಕೊಂಡವರು ಈ ರೀತಿ ಮಾಡಿರೋದು: ಮಧು ಬಂಗಾರಪ್ಪ

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದಿರುವುದು ಕೋಮುಗಲಭೆಯಲ್ಲ (Communal Violence), ಯಾರೋ ಮಾನಸಿಕ ಸ್ಥಿಮಿತ ಕಳೆದುಕೊಂಡವರು ಈ ರೀತಿ ಮಾಡಿದ್ದಾರೆ. ಉಳಿದ ಎಲ್ಲಾ ಕಡೆ ಹಬ್ಬ ಚೆನ್ನಾಗಿಯೇ ಆಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ವಿಸರ್ಜನೆ ಹಾಗೂ ಈದ್ ಮಿಲಾದ್ ಎರಡು ಒಂದೇ ದಿನ ಇತ್ತು. ಈ ಬಗ್ಗೆ ಸಭೆ ಮಾಡಿದ್ದೆವು. ಈ ವೇಳೆ ಮುಸ್ಲಿಂ ಬಾಂಧವರು ಭಾನುವಾರ ಮೆರವಣಿಗೆ ಮಾಡುವುದಾಗಿ ಹೇಳಿದ್ದರು. ಇಲ್ಲಿ …

Read More »

ಧಾರ್ಮಿಕ ಹಬ್ಬಗಳು ಇರುವಾಗ ಅಗತ್ಯ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ: ಬೊಮ್ಮಾಯಿ ಕಿಡಿ!

ಬೆಂಗಳೂರು: ಶಿವಮೊಗ್ಗ ಸೂಕ್ಷ್ಮ ಪ್ರದೇಶ ಎಂದು ಎಲ್ಲರಿಗೂ ಗೊತ್ತಿದೆ. ಆದರೂ ಧಾರ್ಮಿಕ ಹಬ್ಬಗಳು ಇರುವಾಗ ಅಗತ್ಯ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ. ಈ ಸರ್ಕಾರದ್ದು ಗಾಂಧಿ ವಿರೋಧಿ ನೀತಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದ ಗಲಾಟೆ (Communal Violence) ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಶಿವಮೊಗ್ಗ ಪ್ರಕ್ಷುಬ್ಧ ನಗರ ಎಂದು ಎಲ್ಲರಿಗೂ ಗೊತ್ತಿದೆ. ಈ ಹಿಂದೆ ಸಹ ಹಲವು ಅಹಿತಕರ ಘಟನೆಗಳು …

Read More »