Breaking News

ಜಿಲ್ಲೆ

ಶೀಘ್ರದಲ್ಲೇ ರೈತರಿಗೆ ಸಿಗಲಿದೆ ಪಿಎಂ ಕಿಸಾನ್ 14ನೇ ಕಂತು: ಇಲ್ಲಿದೆ ಡಿಟೇಲ್ಸ್!

ಕೇಂದ್ರ ಸರ್ಕಾರವು ದೇಶದ ಲಕ್ಷಗಟ್ಟಲೆ ರೈತರಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನು ನೀಡಬಹುದು. ವಾಸ್ತವವಾಗಿ, ದೇಶದ ರೈತರಿಗೆ ಆರ್ಥಿಕ ಸಹಾಯಕ್ಕಾಗಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಈ ಯೋಜನೆಯಡಿ ಇದುವರೆಗೆ 13ನೇ ಕಂತಿನವರೆಗೆ ರೈತರಿಗೆ ಲಾಭವಿದೆ. ಈಗ ರೈತರು PM ಕಿಸಾನ್ 14 ನೇ ಕಂತು ದಿನಾಂಕ 2023 ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ, 27 ಜುಲೈ 2023 ರಂದು, ರಾಜಸ್ಥಾನದ ಸಿಕಾರ್‌ನಲ್ಲಿನ ಕಾರ್ಯಕ್ರಮದಿಂದ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದ …

Read More »

ಗ್ಯಾಸ್‌ ಬೆಲೆಯಲ್ಲಿ 100 ರೂಪಾಯಿ ಇಳಿಸಿದ ಕೇಂದ್ರ ಸರ್ಕಾರ: ಇಂದು ಮಧ್ಯರಾತ್ರಿಯಿಂದಲೇ ದರ ಜಾರಿ!

ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಮಂಗಳವಾರ ಇಳಿಸಿವೆ. 19ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ (99.75 ರೂಪಾಯಿ) ಅಂದಾಜು 100 ರೂಪಾಯಿ ಇಳಿಕೆಯಾಗಿದೆ. ಕೋಲ್ಕತ್ತ 1,802.50 ರೂ, ಮುಂಬೈ 1,640.50 ರೂಪಾಯಿ ಇದ್ದರೆ ಇನ್ನು ಚೆನ್ನೈನಲ್ಲಿ 19 ಕೆಜಿಯ ಒಂದು ಸಿಲಿಂಡರ್ ಬೆಲೆ 1,852.50 ರೂಪಾಯಿ ಆಗಿದೆ. ಜುಲೈ 4 ರಂದು ಎಲ್​ಪಿಸಿ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಪರಿಷ್ಕರಿಸಿದ್ದವು. ಪರಿಣಾಮ …

Read More »

ಯಾವ ತರಕಾರಿಗೆ ಎಷ್ಟಿದೆ ದರ ನೋಡೋಣ?

ಬೆಂಗಳೂರು: ದುನಿಯಾ ದಿನೇ ದಿನೇ ಕಾಸ್ಟ್ಲಿ ಆಗ್ತಿದೆ.ಜನ ಸಾಮಾನ್ಯರಂತೂ ಅಂತೂ ಬದುಕೋಕೆ ಆಗ್ತಿಲ್ಲ.ಪೆಟ್ರೋಲ್,ಡಿಸೇಲ್ ಎಲ್ಪಿಜಿ ಗ್ಯಾಸ್ ,ಕರೆಂಟ್ ಬಿಲ್ ಗಗನಕ್ಕೇರಿದೆ.ಇಷ್ಟು ಸಾಲದು ಅಂತ ಹಾಲು, ಮೊಸರು, ದುಬಾರಿಯಾಗ್ತಿದೆ. ಹಾಗೆ ಈಗ ತರಕಾರಿ ಬೆಲೆಯಲ್ಲೂ ಏರಿಕೆಯಾಗಿದೆ. ಒಂದೇ ವಾರದಲ್ಲಿ ತರಕಾರಿ ಬೆಲೆ ದುಪ್ಪಟ್ಟು ಆಗಿರುವುದು ತಲೆ ನೋವಾಗಿ ಪರಿಣಮಿಸಿದೆ. ಪರಿಣಾಮವಾಗಿ ಹೋಟೆಲ್‌ಗಳಲ್ಲೂ ತಿನಿಸು ದರ ಹೆಚ್ಚಳವಾಗಿದೆ. ಯಾವ್ಯಾವ ತರಕಾರಿ ಬೆಲೆ ಎಷ್ಟಿದೆ? (kg) ಟೊಮೆಟೋ – 150 ರೂ. ಮೆಣಸಿನಕಾಯಿ – …

Read More »

ತಿರುಪತಿ ಲಡ್ಡು ಪ್ರಸಾದಕ್ಕೆ ನಂದಿನ ತುಪ್ಪ ಪೂರೈಕೆ ಸ್ಥಗಿತಗೊಳಿಸಲಾಗಿದೆ

ಬೆಂಗಳೂರು: ಕಳೆದ ಒಂದೂವರೆ ವರ್ಷದ ಹಿಂದೆಯೇ. ಅಂದರೆ, ಬಿಜೆಪಿ ಸರ್ಕಾರದ ಅವಧಿಯಲ್ಲೇ ತಿರುಪತಿ ಲಡ್ಡು ಪ್ರಸಾದಕ್ಕೆ ನಂದಿನ ತುಪ್ಪ ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ತಿರುಪತಿ ಪ್ರಸಾದಕ್ಕೆ ನಂದಿನ ತುಪ್ಪ ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂಬ ಸುದ್ದಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಕೆಎಂಎಫ್ ಎಂಡಿ ಜಗದೀಶ್, ತಿರುಪತಿ ಪ್ರಸಾದಕ್ಕೆ ಒಂದೂವರೆ ವರ್ಷದ ಹಿಂದೆಯೇ ನಂದಿನಿ ತುಪ್ಪ ಪೂರೈಕೆ ನಿಲ್ಲಿಸಲಾಗಿದೆ. ಒಂದೂವರೆ ವರ್ಷದ ಹಿಂದೆ ನಾವು 345 ಮೆಟ್ರಿಕ್ ಟನ್ …

Read More »

ಇಂದಿನಿಂದ ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆಯ ಬಿಸಿ ಹಾಲು ತಿಂಡಿ ಊಟದ ದರ ಹೆಚ್ಚಳ

ಬೆಂಗಳೂರು: ಇಂದಿನಿಂದ ಹಾಲಿನ ದರ ಜೊತೆಗೆ ತರಕಾರಿ , ಹಾಗೂ ಹೋಟೆಲ್‌ ತಿಂಡಿ , ಊಟದ ದರದಲ್ಲಿ ಸಹ ರೇಟ್‌ ಹೆಚ್ಚಾಗಿದೆ. ಬೆಲೆ ಏರಿಕೆಯ ಬಿಸಿ ಇಂದು ಬೆಳಗಿನಿಂದಲೇ ಜನರಿಗೆ ತಗುಲಿದೆ. ಟೊಮೆಟೊ ಬೆಲೆ ಜಾಸ್ತಿ, ಗ್ಯಾಸ್ ಬೆಲೆ ಏರಿಕೆ, ಹಾಲಿನ ಬೆಲೆ ಹೆಚ್ಚಳ ಇದೀಗ ಹೋಟೆಲ್‌ಗಳ ಸರದಿ ಇದೇ ಆಗಸ್ಟ್ 1ರಿಂದ ಹೋಟೆಲ್‌ಗಳಲ್ಲಿ ಊಟ-ತಿಂಡಿ ಮಾಡುವುದು, ಟೀ-ಕಾಫಿ ಕುಡಿಯುವುದು ದುಬಾರಿಯಾಗಲಿದೆ. ಕೈ ಗ್ಯಾರಂಟಿ ಘೋಷಣೆ ಹಿನ್ನೆಲೆ ಜನರು ಖುಷಿಯಲ್ಲಿರಬೇಕಾದರೆ, …

Read More »

ಖಡಕ್ ಆಫೀಸರ್ ಎಸಿಪಿ ಜಿ ಅನುಷಾ ಟ್ರಾನ್ಸ್‌ಫರ್

ಧಾರವಾಡ ಶಹರದ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಜಿ. ಅನುಷಾ ಅವರು ಹುಬ್ಬಳ್ಳಿಯ ಹೆಸ್ಕಾಂನ ಜಾಗೃತದಳಕ್ಕೆ ವರ್ಗಾವಣೆಯಾಗಿದ್ದರು. ಇದೀಗ ಅವರನ್ನ ಸರಕಾರ ಅಲ್ಲಿಂದ ವರ್ಗಾವಣೆ ಮಾಡಲಾಗಿದೆ. ಹುಬ್ಬಳ್ಳಿಯ ಹೆಸ್ಕಾಂನ ಜಾಗೃತದಳದಲ್ಲಿದ್ದ ಜಿ. ಅನುಷಾರನ್ನ ಬೆಂಗಳೂರಿನ ಬೆಸ್ಕಾಂಗೆ ವರ್ಗಾಯಿಸಲಾಗಿದೆ. ಈ ಮೂಲಕ ಜಿ. ಅನುಷಾ ಅವರ ಅವಳಿನಗರದಲ್ಲಿನ ಕರ್ತವ್ಯ ಮುಗಿದಿದೆ. ಧಾರವಾಡದಲ್ಲಿ ಇದ್ದಾಗ ಜಿ. ಅನುಷಾ ಅವರು ಉತ್ತಮವಾಗಿ ಕೆಲಸ ಮಾಡಿದ್ದರು ಎನ್ನಲಾಗಿದೆ.

Read More »

ಧಾರವಾಡದ ಅಜ್ಜಿಗೆ ಆಸರೆದ ಜಯ ಕರ್ನಾಟಕ ಜನಪರ ವೇದಿಕೆಯಿಂದ

ಧಾರವಾಡದ ತಪೋವನ ಬೈಪಾಸ್ ರಸ್ತೆಯ ಪಕ್ಕದಲ್ಲಿ ಸುಮಾರು ತಿಂಗಳಗಳಿಂದ ಸುಮಾರು 65, ವಯಸ್ಸಿನ ಒಬ್ಬ ಅಜ್ಜಿಯು ಇವತ್ತು ನಾಳೆ ಬಿದ್ದು ಹೋಗುವಂತಹ ಗುಡಿಸಿಲಿನಲ್ಲಿ ಅನ್ನ ನೀರು ಇಲ್ಲದೆ ವಾಸಿಸುತ್ತಿದ್ದಳು, ಈ ವಿಷಯ ನಮ್ಮ ವೇದಿಕೆಗೆ ರಂದು ಗೊತ್ತಾಗಿ ಅಜ್ಜಿ ಹತ್ತಿರ ಹೋಗಿ ವಿಚಾರಣೆ ಮಾಡಿದಾಗ ಅವಳ‌‌ ಹೆಸರು ಶಿವಗಂಗವ್ವ ಮೆಣಸಿನಕಾಯಿ, ಇವಳಿಗೆ ನಾಲ್ಕು ಜನ ಅಣ್ಣ – ತಮ್ಮಂದಿರು ಇವರು ಧಾರವಾಡದ‌ ನೆಹರೂ ನಗರದ ನಿವಾಸಿಯಾಗಿದ್ದು, ಆದರೆ ಈ ಅಜ್ಜಿಯನ್ನು …

Read More »

ಧಾರವಾಡ ಎಸಿಪಿ ವಿಜಯಕುಮಾರ ವರ್ಗಾವಣೆ

ರಾಜ್ಯ ಸರ್ಕಾರ ಇಂದು 45 ಜನ ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿದ್ದು, ಅದರಲ್ಲಿ ಧಾರವಾಡ ಎಸಿಪಿಯಾಗಿದ್ದ ವಿಜಯಕುಮಾರ ತಳವಾರ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಧಾರವಾಡ ಎಸಿಪಿಯಾಗಿದ್ದ ವಿಜಯಕುಮಾರ ಅವರನ್ನು ದಕ್ಷಿಣ ವಿಭಾಗ ಹುಬ್ಬಳ್ಳಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Read More »

ಡಾ.ಬಿ.ಎಚ್ ಮೋರೆ ಅವರಿಗೆ ಬೀಳ್ಕೊಡುಗೆ ಸಮಾರಂಭ

ಧಾರವಾಡ : ಇಲ್ಲಿನ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಭೀಮರಾವ್ ಎಚ್ ಮೋರೆ ಸೇವಾ ನಿವೃತ್ತಿಯ ಬೀಳ್ಕೊಡುಗೆ ಹಾಗೂ ಭೀಮರಾವ್ ಎಚ್ ಮೋರೆ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಧಾರವಾಡ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ನಳಿನಿ ಬೆಂಗೇರಿ ಮಾತನಾಡಿ, ಕಳೆದ 30 ವರ್ಷಗಳಿಂದ ಇತಿಹಾಸ ಪ್ರಾಧ್ಯಾಪಕರಾಗಿ ಬಿ.ಎಚ್. ಮೋರೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶ್ರಮವಹಿಸಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು. ಉತ್ತಮ …

Read More »

ಐಷಾರಾಮಿ ಕಾರುಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಕಳ್ಳನ ಬಂದನ….

ಮೈಸೂರು: ನಗರದ ವಿವಿ ಪುರಂ ಪೊಲೀಸರ ನಿದ್ದೆಗೆಡಿಸಿದ್ದ ಐಷಾರಾಮಿ ಕಾರುಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಕಳ್ಳತನ ಪ್ರಕರಣವನ್ನು ಇದೀಗ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಬೆಂಗಳೂರು ಮೂಲದ ಕುಖ್ಯಾತ ವೃತ್ತಿಪರ ಖದೀಮನನ್ನು ಬಂಧಿಸಿದ್ದು, ಈತ ಒಬ್ಬನೇ ಕಾರು ಕಳ್ಳತನದ ಜೊತೆಗೆ ಮನೆಗಳ್ಳತನ ಸಹ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಐಷಾರಾಮಿ ಕಾರುಗಳ ಸರಣಿ ಕಳ್ಳತನ ಮಾಡುತ್ತಿದ್ದ ಈತ, ಮೈಸೂರಿನಲ್ಲೇ 2-3 ಐಷರಾಮಿ ಕಾರುಗಳನ್ನು ಕದ್ದು ಬೇರೆಯವರಿಗೆ ಮಾರಾಟ …

Read More »