admin
December 27, 2021
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು- ಬೆಂಗಾವಲು ವಾಹನ ಸಿಬ್ಬಂದಿಯ ಎಡವಟ್ಟಿನಿಂದಾಗಿ ಕೋವಿಡ್ ಮೃತರಿಗೆ ಪರಿಹಾರ ಕಾರ್ಯಕ್ರಮಕ್ಕೆ ತೆರಳಬೇಕಿದ್ದ ಸಿಎಂ ಬೊಮ್ಮಾಯಿ ಅವರು ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂಗೆ ವಿಳಂಬವಾಗಿ ತಲುಪಿದ ಪ್ರಸಂಗ ನಡೆಯಿತು. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿನ ಕಾರ್ಯಕ್ರಮಕ್ಕೆ ಹೋಗುವಾಗ ದಾರಿ ತಪ್ಪಿದ ಮುಖ್ಯಮಂತ್ರಿಗಳ ವಾಹನವು ಸುತ್ತು ಹಾಕಿಕೊಂಡು ತೆರಳಿತು. ಬೆಂಗಾವಲು ವಾಹನ ಸಿಬ್ಬಂದಿ ಮುಖ್ಯಮಂತ್ರಿಗಳು ತೆರಳಬೇಕಾದ ಮಾರ್ಗ ನಕ್ಷೆಯಲ್ಲಿ ಗೊಂದಲ ಮಾಡಿಕೊಂಡಿರುವುದು ಈ ಗೊಂದಲಕ್ಕೆ ಕಾರಣವಾಗಿದೆ. ಕಾಪೆರ್ರೇಷನ್ ಸರ್ಕಲ್‍ನಿಂದ ಬಸವನಗುಡಿಗೆ ಬರಬೇಕಿದ್ದ …
Read More »
admin
December 27, 2021
Breaking News, ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಒಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ನಾಳೆಯಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ಡಿಸೆಂಬರ್ 28ರ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದ್ದು, ಕರ್ಫ್ಯೂ ಸಂದರ್ಭದಲ್ಲಿ ಯಾರೂ ಹೊರಗಡೆ ಅನಗತ್ಯವಾಗಿ ಓಡಾಟ ನಡೆಸುವಂತಿಲ್ಲ. ಎಲ್ಲೆಡೆ ನಾಕಾಬಂದಿ ಹಾಕಿ ನಿರ್ಬಂಧ ವಿಧಿಸಲಾಗುತ್ತಿದೆ ಎಂದರು. ಬಸ್, ಕ್ಯಾಬ್ ಸೇವೆ ಇರಲಿದೆ. …
Read More »
admin
December 27, 2021
Breaking News, ಕರ್ನಾಟಕ, ಬೆಂಗಳೂರು, ವಿಶೇಷ ಸುದ್ದಿ, ಸಿನಿಮಾ
ಬೆಂಗಳೂರು: ಚಂದನವನದ ಸಿಂಪಲ್ ಬ್ಯೂಟಿ ಶ್ವೇತಾ ಶ್ರೀವಾತ್ಸವ್ ಕ್ರಿಸ್‍ಮಸ್ ದಿನ ಬಹಳ ಅರ್ಥ ಪೂರ್ಣವಾಗಿ ಕಳೆದಿದ್ದು, ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಶ್ವೇತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ಅವರು ಮಾಡುವ ವರ್ಕೌಟ್ ಮತ್ತು ದಿನನಿತ್ಯದ ವಿಶೇಷ ಭಾಗವನ್ನು ಫೋಟೋ ಅಥವಾ ವೀಡಿಯೋ ಮೂಲಕ ಅಭಿಮಾನಿಗಳಿಗೆ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ಇಂದು ಅವರು ವಿಶೇಷ ವೀಡಿಯೋವನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದು, ಕ್ರಿಸ್ಮಸ್ ಸಮಯವನ್ನು ನಾನು ಚೆನ್ನಾಗಿ ಕಳೆದಿದ್ದೇನೆ. ಈ …
Read More »
admin
December 27, 2021
Breaking News, ಕರ್ನಾಟಕ, ದೆಹಲಿ, ಬೆಂಗಳೂರು, ಸುದ್ದಿ
ಪಾಟ್ನಾ: ಬಿಹಾರದ ಹಿರಿಯ ಸಮಾಜವಾದಿ ನಾಯಕ ಶಿವಾನಂದ ತಿವಾರಿ ಅವರೆ ಫೋನ್ ಕರೆ ಮಾಡಿದ ದುಷ್ಕರ್ಮಿಯೋರ್ವ ನಿಂದಿಸಿದ್ದಲ್ಲದೆ, ಜೀವ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ. ಶಿವಾನಂದ ತಿವಾರಿ ಅವರು ಇತ್ತೀಚಿಗಷ್ಟೆ ಪತ್ರಿಕಾ ಸಂದರ್ಶನವೊಂದರಲ್ಲಿ ವಿ.ಡಿ ಸಾವರ್ಕರ್ ಕುರಿತಾಗಿ ಹೇಳಿಕೆಯನ್ನು ನೀಡಿದ್ದರು. ಆ ಸಂದರ್ಶನದಲ್ಲಿ ಸಾವರ್ಕರ್ ಅವರಿಗೆ ಗೋವನ್ನು ಪೂಜಿಸುವ ಪರಿಕಲ್ಪನೆ ಸುತಾರಾಂ ಇಷ್ಟವಿರಲಿಲ್ಲ ಎಂದಿದ್ದರು. ಶಿವಾನಂದ ತಿವಾರಿ ಅವರು ಜಯಪ್ರಕಾಶ್ ನಾರಾಯಣ್ ಹಾಗೂ ರಾಮಮನೋಹರ್ ಲೋಹಿಯ ಥರದ ಮಹಾನ್ ನಾಯಕರೊಡನೆ ಅವರೊಂದಿಗೆ ಕೆಲಸ …
Read More »
admin
December 27, 2021
Breaking News, ಕರ್ನಾಟಕ, ಬೆಂಗಳೂರು, ವಾಣಿಜ್ಯ, ವಿಜಯಪುರ, ವಿಶೇಷ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ : ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆ ಗಳಿಸಿರುವ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ರೈಲ್ವೆ ನಿಲ್ದಾಣ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಬಹುದಿನಗಳ ನಿರೀಕ್ಷೆಯಲ್ಲಿದ್ದ ಎಲೆಕ್ಟ್ರಿಕಲ್ ರೈಲು ಸಂಚಾರವನ್ನು ಆರಂಭಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ.ಹುಬ್ಬಳ್ಳಿಯಿಂದ ಟ್ರೈನ್ No 16592 ಮೈಸೂರು- ಹುಬ್ಬಳ್ಳಿ ಹಂಪಿ ಎಕ್ಸ್‌ಪ್ರೆಸ್ ಮತ್ತು ಟ್ರೈನ್ No 17225 ವಿಜಯವಾಡ - ಹುಬ್ಬಳ್ಳಿ ಅಮರಾವತಿ ಎಕ್ಸ್‌ಪ್ರೆಸ್ ಎಲೆಕ್ಟ್ರಿಕಲ್ ಎರಡು ರೈಲುಗಳು …
Read More »
BigTv News
December 25, 2021
Breaking News, ಕರ್ನಾಟಕ, ಬೆಂಗಳೂರು, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ
admin
December 22, 2021
Breaking News, ಕರ್ನಾಟಕ, ಬೆಂಗಳೂರು, ಬೆಳಗಾವಿ
ಬೆಳಗಾವಿ: ಶಿಕ್ಷಣ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆ ವಿಶ್ವವಿದ್ಯಾಲಯದಿಂದಲೇ ಪ್ರಾರಂಭವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಳಗಾವಿಯ ಹಿರೇಬಾಗೇವಾಡಿ ಮಲ್ಲಪ್ಪನ ಗುಡ್ಡದ ಹೊಸ ನಿವೇಶನದಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕಟ್ಟಡಗಳ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಇಂದಿನ ಸವಾಲುಗಳ ಹಾಗೂ ಬದಲಾವಣೆಯ ಯುಗಕ್ಕೆ ಹೊಂದಿಕೊಳ್ಳುವ ಶಿಕ್ಷಣ ವ್ಯವಸ್ಥೆ ಅತ್ಯಂತ ಅವಶ್ಯಕ ಎಂದರು. ಪಠ್ಯದಲ್ಲಿರುವ ವಿದ್ಯೆ ಹಾಗೂ ಜಗತ್ತಿನಲ್ಲಿ ಬಳಕೆಯಾಗುತ್ತಿರುವ ವಿದ್ಯೆಯಲ್ಲಿ ಬಹಳಷ್ಟು ಅಂತರ ಇದೆ. ಇವರೆಡರ …
Read More »
admin
December 22, 2021
Breaking News, ಕರ್ನಾಟಕ, ಬೆಂಗಳೂರು, ಬೆಳಗಾವಿ, ರಾಜಕೀಯ ಸುದ್ದಿ, ಸುದ್ದಿ
ಬೆಳಗಾವಿ: ಕಲಾಪ ವರದಿ ಮಾಡಲು ಬಂದ ಮಾಧ್ಯಮಗಳಿಗೆ ಸುವರ್ಣಸೌಧ ಪ್ರವೇಶಕ್ಕೆ ನಿರ್ಬಂಧ ಹೇರಿದ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎನ್ನುತ್ತಿರುವವರು ಸಂವಿಧಾನದ ಒಂದು ಕಾಲನ್ನೇ ಮುರಿಯುತ್ತಿದ್ದಾರೆಂದು ತರಾಟೆಗೆ ತೆಗೆದುಕೊಂಡಿದ್ದಾರೆ, ಟ್ವೀಟ್‍ನಲ್ಲಿ ಏನಿದೆ?ಸುವರ್ಣಸೌಧಕ್ಕೆ ಮಾಧ್ಯಮಗಳನ್ನು ನಿರ್ಬಂಧ ಮಾಡಿರುವ ಕ್ರಮ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಈಗಾಗಲೇ ಜನರ ಆಕ್ರೋಶಕ್ಕೆ ತುತ್ತಾಗಿರುವ ಬಿಜೆಪಿ ಸರ್ಕಾರ ನಾಡಿನ ಸಮಸ್ಯೆಗಳನ್ನು ‘ವಿಷಯಾಂತರ’ ಮಾಡಲು …
Read More »
admin
December 22, 2021
Breaking News, ಅಪರಾಧ, ಕರ್ನಾಟಕ, ಬೆಂಗಳೂರು, ಸುದ್ದಿ, ಹಾಸನ
ಹಾಸನ: ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡರಜಗಲಿ ಗ್ರಾಮದಲ್ಲಿ ಯುವಕರೇ ಅಕ್ರಮ ಮದ್ಯ ಮಾರಾಟ ತಡೆಗೆ ಮುಂದಾಗಿದ್ದು, ಗ್ರಾಮಕ್ಕೆ ತಲುಪಿದ್ದ ಮದ್ಯ ವಶಕ್ಕೆ ಪಡೆದು ನಡು ರಸ್ತೆಯಲ್ಲಿಯೇ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 15 ದಿನಗಳ ಹಿಂದೆ ಗ್ರಾಮ ಚನ್ನಯ್ಯ ಅವರ ಪತ್ನಿ ಮದ್ಯ ಸೇವನೆಯಿಂದ ಮೃತಪಟ್ಟಿದ್ದರು. ಇದರಿಂದ ಎಚ್ಚೆತ್ತ ಗ್ರಾಮದ ಯುವಕರು ಗ್ರಾಮದಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲು ನಿರ್ಧರಿಸಿದ್ದರು. ಅದರಂತೆ ಬ್ಯಾಡರಜಗಲಿ ಗ್ರಾಮದಲ್ಲಿ ಮದ್ಯ ಮಾರಾಟ …
Read More »
admin
December 22, 2021
Breaking News, ಅಪರಾಧ, ಕರ್ನಾಟಕ, ಚಿತ್ರದುರ್ಗ, ಬೆಂಗಳೂರು, ರಾಜಕೀಯ ಸುದ್ದಿ, ಸುದ್ದಿ
ಚಿತ್ರದುರ್ಗ : ಹಣ ದ್ವಿಗುಣ ವಂಚನೆ ಆರೋಪದ ಮೇಲೆ ಇಲ್ಲಿನ ನಗರಸಭೆ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ನಗರಸಭೆಯ 4ನೇ ವಾರ್ಡ್ ಜೆಡಿಎಸ್ ಸದಸ್ಯ ಚಂದ್ರಶೇಖರ್ ಅಲಿಯಾಸ್ ಚಂದ್ರು ಬಂಧಿತ ಆರೋಪಿಯಾಗಿದ್ದಾರೆ. ಚಂದ್ರಶೇಖರ್ ಖೋಟಾ ನೋಟು ಕಿಂಗ್ ಪಿನ್ ಎಂದೇ ಕುಖ್ಯಾತನಾಗಿರುವ. ಸಾಕಷ್ಟು ಪ್ರಕರಣಗಳಲ್ಲಿ ಬೇಕಾಗಿದ್ದ. ಆದರೆ, ಯಾವುದೇ ದಾಖಲೆಗಳು ಸಿಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಇತ್ತೀಚೆಗೆ ದೊಡ್ಡಬಳ್ಳಾಪುರ ಮೂಲದ ನಾಗರಾಜ್ ಎಂಬುವರಿಗೆ ವಂಚಿಸಿರುವ ಬಗ್ಗೆ ಚಿತ್ರದುರ್ಗದಲ್ಲಿ ಚಂದ್ರಶೇಖರ್ ವಿರುದ್ದ ಪ್ರಕರಣ …
Read More »