Breaking News

ಬೆಂಗಳೂರು

ಮಾಸ್ಕ್‌ ಹಾಕೊಳ್ಳಿ ಎಂದಿದ್ದಕ್ಕೆ ಕರ್ತವ್ಯ ನಿರತ ಪೋಲಿಸ್‌ ಸಿಬ್ಬಂದಿ ಮೇಲೆ ಹಲ್ಲೆ

ಬೆಂಗಳೂರು : ಮಾಸ್ಕ್ ಧರಿಸಿ ಎಂದು ಬುದ್ದಿವಾದ ಹೇಳಿದಕ್ಕೆ ಅಸಮಾಧಾನಗೊಂಡು ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.ಅಲ್ಲದೇ, ಏಕಾಏಕಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಯುವಕರ ಪುಂಡಾಟವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದ್ದಾರೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More »

ಮಾಲ್‌ ಹಾಗೂ ಚಿತ್ರಮಂದಿರಗಳಲ್ಲಿ ಶೇ 50 ರಷ್ಟು ಅನುಮತಿ-ತಜ್ಞರ ಮುಂದೆ ಪ್ರಸ್ತಾವನೆ-ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ರೂಪಾಂತರಿ ಒಮಿಕ್ರಾನ್ ಹಾಗು ಡೆಲ್ಟಾ ಹೆಚ್ಚಳ ಹಿನ್ನೆಲೆಯಲ್ಲಿ ಮಾಲ್ ಹಾಗು ಚಿತ್ರಮಂದಿರದಲ್ಲಿ ಸಾರ್ವಜನಿಕರಿಗೆ ಶೇ50ರಷ್ಟು ಅನುಮತಿ ನೀಡುವ ಪ್ರಸ್ತಾವನೆಯನ್ನು ತಜ್ಞರ ಸಮಿತಿ ಮುಂದಿಟ್ಟು ಪರಿಶೀಲನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ತಜ್ಞರ ಸಲಹೆಗಳನ್ನು ಪಡೆದು ನಿರ್ಧಾರ ಕೈಗೊಳ್ಳಲಾಗುವುದು. ಬೆಂಗಳೂರು ವೈದ್ಯರಿಗೆ ಒಮಿಕ್ರಾನ್ ಸೋಂಕು ಹಿನ್ನೆಲೆಯಲ್ಲಿ ಅವರ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕ ಪತ್ತೆ ಮಾಡಿದ್ದೇವೆ ಎಂದು ತಿಳಿಸಿದರು. ಸಂಪುಟ ವಿಸ್ತರಣೆ …

Read More »

ಸಿ ಎಂ ಬದಲಾವಣೆ ವಿಚಾರ ಕೇವಲ ರುಮರ್ಸ್ – ಪ್ರಲ್ಹಾದ ಜೋಶಿ ಸ್ಪಷ್ಟನೆ‌

ಹುಬ್ಬಳ್ಳಿ ರಾಜ್ಯದಲ್ಲಿ ಸಿಎಂ ಬದಲಾವಣೆ ಹೇಳಿಕೆ ವಿಚಾರ ಸಿಎಂ ಬದಲಾವಣೆ ಅನ್ನೋದು ಕೇವಲ ರುಮರ್ಸ್ ಅವರು ಹೇಳಿದ್ದು ಈಗಲೇ ಆಗ್ತಾರೆ ಅಂತ ಅಲ್ಲ ಬಸವರಾಜ ಬೊಮ್ಮಾಯಿ ಬದಲಾಗಲ್ಲ, ರಾಜ್ಯದ ನಾಯಕರಿಗೆ ಕೇಂದ್ರದ ಪರವಾಗಿ ನಾನು ಹೇಳುತ್ತಿದ್ದೇನೆ ಸಿಎಂ ಬದಲಾವಣೆ ಬಗ್ಗೆ ಯಾರು ಹಾಗೆ ಮಾತನಾಡಬಾರದು ಪ್ರಧಾನಿ ಮತ್ರಿಗಳನ್ನ ದೇವೇಗೌಡರು ಭೇಟಿಯಾಗಿದ್ರು ಆದ್ರೆ ಅದರಲ್ಲಿ ಯಾವುದೇ ರಾಜಕೀಯ ಇಲ್ಲ ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ ಆದ್ರೆ ಹಾಸನದಲ್ಲಿ ಐಐಟಿ ಆಗಬೇಕು ಅಂತ …

Read More »

ಗುತ್ತಿಗೆದಾರರ ಸಂಘದಿಂದ ಪ್ರಧಾನಿಗೆ ಪತ್ರ ವಿಚಾರ. ಅದೊಂದು ಬೇಸ್ ಲೆಸ್ ಆರೋಪ.-ಪ್ರಲ್ಹಾದ ಜೋಶಿ

ಹುಬ್ಬಳ್ಳಿ- ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ.ಅವರ ಹತ್ತಿರ ಏನಾದ್ರು ಸಾಕ್ಷಿ ಇದ್ರೆ ಕೊಡ್ಲಿ.ಅದನ್ನ ತನೀಖೆ ಮಾಡೋಣ.ಮೋದಿ ಸರ್ಕಾರದಲ್ಲಿ ಭ್ರಷ್ಟಾಚಾರವನ್ನ ಸಹಿಸೋದಿಲ್ಲ.ಹೀಗಾಗೇ ಅವರು ದೂರು ನೀಡಲಿ. ಸಿಎಂ ಬದಲಾವಣೆಯಾಗ್ತಾರೆ ಎನ್ನೋ ಈಶ್ವರಪ್ಪ ಹೇಳಿಕೆ ವಿಚಾರ.ಆ ರೀತಿ ಏನು ಇಲ್ಲ.ಸಿಎಂ ಬದಲಾಣೆಯಾಗೋದಿಲ್ಲ.೨೦೨೩ ರ ವರೆಗೂ ಬೊಮ್ಮಾಯಿಯವರೇ ಸಿಎಂ ಆಗ್ತಾರೆ.ಈಶ್ವರಪ್ಪನವರು ಶಿಘ್ರವೇ ಬದಲಾವಣೆ ಆಗ್ತಾರೆ ಅಂತ ಹೇಳಿಲ್ಲ.ಆದ್ರೂ ಈ ರೀತಿ ಹೇಳಿಕೆ ನೀಡೋದು ತಪ್ಪು.ಪ್ರಧಾನಿಯವರನ್ನ ದೇವೆಗೌಡ್ರು ಭೇಟಿಯಾಗಿದ್ದಾರೆ.ಅವರು ಕೆಲವು ವಿಷಯಗಳ ಬಗ್ಗೆ …

Read More »

ವಿಧಾನ ಪರಿಷತ್ ಚುನಾವಣೆ ಗೆಲವು ನಿಶ್ಚಿತ-ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿ ವಿಧಾನ ಪರಿಷತ್ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಿಗಲಿದೆ 2014 ರಿಂದ ಹಲವು ವಿಚಾರದಲ್ಲಿ ಬದಲಾವಣೆ ಆಗಿದೆ ಗ್ರಾಮೀಣಾಭಿವೃದ್ಧಿಯಲ್ಲಿ ಬಜೆಟ್ ನಲ್ಲಿ ಬಹಳಷ್ಟು ಹಣವನ್ನ ಇಡಲಾಗಿದೆ ನರೇಗಾ ಯೋಜನೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ ಈ ಹಿಂದೆ ಹಳೆ ಕಲ್ಲು ಹೊಸ ಬಿಲ್ಲು ಅನ್ನೋತರ ಇತ್ತು ಆದ್ರೆ ನಾವು ನೇರವಾಗಿ ಯಾರು ಕೆಲಸ ಮಾಡ್ತಾರೆ ಅವರ ಖಾತೆಗೆ ಹಣ ಹಾಕಿದ್ದೀವಿ ಕೆಲಸ ತೋರಿಸಿ …

Read More »

ಹಿರಿಯ ನಟ ಶಿವರಾಮ್​​ ನಿಧನ.. ಸಂತಾಪ ಸೂಚಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಇಂದು ಕಳಚಿದೆ. ಸ್ಯಾಂಡಲ್​​​ವುಡ್​​​ನಲ್ಲಿ ಶಿವರಾಮಣ್ಣ ಎಂದು ಗುರುತಿಸಿಕೊಂಡಿದ್ದ ನಟ ಶಿವರಾಮ್(83)​​ ಇಂದು ಕೊನೆಯುಸಿರೆಳೆದಿದ್ದಾರೆ. ಇವರ ನಿದಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಪೂಜೆ ಮಾಡುತ್ತಿದ್ದ ವೇಳೆ ತಲೆ ತಿರುಗಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇವರನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿತ್ತು. ಆದರೆ ಇಂದು ಅವರ ಆರೋಗ್ಯ …

Read More »

ಕನ್ನಡದ ಹಿರಿಯ ನಟ ಶಿವರಾಂ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸ್ಯಾಂಡಲ್‍ವುಡ್‍ನ ‘ಶಿವರಾಮಣ್ಣ’ ಎಂದೇ ಖ್ಯಾತರಾಗಿದ್ದ ಶಿವರಾಂ ಇಂದು ನಿಧನ ಹೊಂದಿದ್ದಾರೆ. ಕೆಲವು ದಿನಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದರು. ನಂತರ ಮನೆಯಲ್ಲಿ ಅಯ್ಯಪ್ಪ ಪೂಜೆ ಮಾಡುತ್ತಿದ್ದ ವೇಳೆ  ಕಾಲು ಜಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿ ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬ್ರೇನ್ ಡ್ಯಾಮೇಜ್ ನಿಂದ ಕೋಮಾದಲ್ಲಿದ್ದರು.  ಆದರೆ ಇದೀಗ …

Read More »

ಕಿರಿಕ್‌ ಕೀರ್ತಿ ಮೇಲೆ ಬಿಯರ್‌ ಬಾಟಲಿಯಿಂದ ಹಲ್ಲೇ!

ಬೆಂಗಳುರು ; ಸ್ನೇಹಿತರ ಜತೆ ಗುರುವಾರ (ಡಿ.2) ರಾತ್ರಿ ಪಬ್‌ಗೆ ತೆರಳಿದ್ದ ಕಿರಿಕ್​ ಕೀರ್ತಿ ಮೇಲೆ ಹಲ್ಲೆ ಮಾಡಲಾಗಿದೆ. ಅದಕ್ಕೆ ಕಾರಣ ಆಗಿರುವುದು ಒಂದೇ ಒಂದು ಫೋಟೋ! ಹೌದು, ಬೆಂಗಳೂರಿನ ಸದಾಶಿವನಗರದ ಪಬ್‌ವೊಂದರಲ್ಲಿ ಮಾರಾಮಾರಿ ನಡೆದಿದೆ. ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಕೀರ್ತಿ ಅವರ ಫೋಟೋ ಕ್ಲಿಕ್ಕಿಸಿದ್ದರು. ಫೋಟೋ ಕ್ಲಿಕ್ಕಿಸಿದ್ದನ್ನು ಕೀರ್ತಿ ಪ್ರಶ್ನೆ ಮಾಡಿದರು. ಫೋಟೋ ತೆಗೆದ ವ್ಯಕ್ತಿಗೆ ಬಾಯಿಗೆ ಬಂದಂತೆ ಬೈಯ್ದಿದ್ದೂ ಅಲ್ಲದೇ ಮೊಬೈಲ್​ ಕಸಿದುಕೊಳ್ಳಲು ಮುಂದಾದರು. ಆ …

Read More »

ರಾಜ್ಯಕ್ಕೆ ಓಮಿಕ್ರಾನ್‌ ಭೀತಿ-ಸಿಎಂ ಬೊಮ್ಮಾಯಿ ತಜ್ಞರ ಜೊತೆ ಹೈವೋಲ್ಟೆಜ್ ಮೀಟಿಂಗ್

ಬೆಂಗಳೂರು : ರಾಜ್ಯದಲ್ಲಿ ಇಬ್ಬರಲ್ಲಿ ಕೋವಿಡ್-19ನ ಹೊಸ ಪ್ರಭೇದ ಒಮಿಕ್ರೋನ್‌ ದೃಢಪಟ್ಟಿರುವ ಹಿನ್ನೆಲೆಯಲ್ಲಿ ನೂತನ ಮಾರ್ಗಸೂಚಿ ರಚನೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಜ್ಞರೊಂದಿಗೆ ಸಭೆ ನಡೆಸುತ್ತಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್, ಸಚಿವ ಗೋವಿಂದ ಕಾರಜೋಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಹಿರಿಯ ಅಧಿಕಾರಿ ಮಂಜುನಾಥ್ ಪ್ರಸಾದ್, ಪಾಲಿಕೆ ಅಧಿಕಾರಿಗಳು, ಪರಿಣತರು ಹಾಗೂ ಇತರೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ.‌ ಸಿಎಂ ಬೊಮ್ಮಾಯಿ ತಜ್ಞರ …

Read More »

ಕರ್ನಾಟಕದ ಮೂಲಕ ಭಾರತಕ್ಕೆ ಓಮಿಕ್ರಾನ ಎಂಟ್ರಿ

ಬೆಂಗಳೂರು: ರಾಜ್ಯದ ಇಬ್ಬರಲ್ಲಿ ಓಮಿಕ್ರಾನ ವೈರಸ್ ಪತ್ತೆಯಾಗಿದ್ದು, ಬೆಂಗಳೂರಿನ ಇಬ್ಬರಲ್ಲಿ ಓಮಿಕ್ರಾನ್ ಪತ್ತೆಯಾಗಿದೆ.ದೇಶದಲ್ಲೇ ಮೊದಲ ಎರಡು ಕೇಸ್ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು.ರಾಜ್ಯದ ಮೂಲಕ ಭಾರತಕ್ಕೆ ಓಮಿಕ್ರಾನ ಪತ್ತೆಯಾಗಿದೆ.ಡೆಲ್ಟಾ ವೈರಸ್ ಗಿಂತ ಅತಿ ವೇಗವಾಗಿ ಈ ವೈರಸ್ ಹರಡುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಸಿಲಿಕಾನ್ ಸಿಟಿ ಬೆಂಗಳೂರಿಗೆ ಓಮಿಕ್ರಾನ ಡಬಲ್ ಶಾಕ್ ನೀಡಿದೆ.ಬೆಂಗಳೂರಿನ 64 ಹಾಗೂ 46 ವರ್ಷದ ವೃದ್ದರಲ್ಲಿ ಓಮಿಕ್ರನಾ ಪತ್ತೆಯಾಗಿದೆ. ಒಟ್ಟಿನಲ್ಲಿ ಸಿಲಿಕಾನ್ ಸಿಟಿ ಮೂಲಕ ಓಮಿಕ್ರಾಮಮನ …

Read More »