Breaking News

SPECIAL NEWS

ರಾಜ್ಯದಲ್ಲಿ ಒಂದೇ ದಿನ ಕೋವಿಡ್ ಸೋಂಕು ದಿಢೀರ್ ಏರಿಕೆ

ರಾಜ್ಯದಲ್ಲಿ ನಿನ್ನೆ ಒಂದೇ ದಿನ ಕೋವಿಡ್ ಸೋಂಕು ದಿಢೀರ್ ಏರಿಕೆಯಾಗಿರುವುದು ಮೂರನೇ ಅಲೆಯ ಸುಳಿವಲ್ಲವೇ? ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರಶ್ನಿಸಿದರು. ಶೇ.0.4ರಷ್ಟಿದ್ದ ಪಾಸಿಟಿವಿಟಿ ದರ ಶೇ.1.6ಕ್ಕೆ ಏರಿಕೆಯಾಗಿದೆ. ಇದು ಮೂರನೇ ಅಲೆ ಅಲ್ಲವೇ?ಎಂದು ಮಾಧ್ಯಮದವರನ್ನೇ ಮರು ಪ್ರಶ್ನಿಸಿದರು. ರಾಜ್ಯದಲ್ಲಿ ನಿನ್ನೆ 1290 ಪಾಸಿಟಿವ್ ಪ್ರಕರಣಗಳು ಬಂದಿದ್ದು ಇದರಲ್ಲಿ ಶೇ.90ರಷ್ಟು ಬೆಂಗಳೂರಿನಲ್ಲಿ ಸೇರಿವೆ. ನೆರೆ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಪರಿಶೀಲನೆ ಒಳಗೊಂಡಂತೆ ಸಾಮಾನ್ಯ ಜನರ ಮೇಲೆ …

Read More »

ಪ್ರಧಾನಿಗೆ ಕರಿಪತಾಕೆ ತೋರಿಸಿದ ಮಹಿಳೆ ಮೇಲೆ ಗುಂಡಿನ ದಾಳಿ

ಸುಲ್ತಾನಪುರ್: ಕಳೆದ ವರ್ಷದ ನವೆಂಬರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶಕ್ಕೆ ಪೂರ್ವಾಂಚಲ್ ಎಕ್ಸಪ್ರೆಸ್‍ವೇ ಉದ್ಘಾಟನೆಗೆ ಆಗಮಿಸಿದ್ದರು. ಅದೇ ವೇಳೆ ವೇದಿಕೆ ಸಮೀಪವೇ ಅವರಿಗೆ ಕರಿ ಪತಾಕೆ ಪ್ರದರ್ಶಿಸಿದ್ದೇ ಅಲ್ಲದೆ ʼಯೋಗಿ ಮುರ್ದಾಬಾದ್ʼ ಘೋಷಣೆಗಳನ್ನು ಕೂಗಿದ್ದ ಉತ್ತರ ಪ್ರದೇಶ ಕಾಂಗ್ರೆಸ್ ಕಾರ್ಯಕರ್ತೆ ರೀಟಾ ಯಾದವ್ ಅವರ ಮೇಲೆ ಸೋಮವಾರ ಸಂಜೆ ಗುಂಡಿನ ದಾಳಿ ನಡೆದಿದೆ.

Read More »

ಡಿಕೆ ಬ್ರದರ್ಸ್ ವಿರುದ್ಧ ಕುಮಾರಸ್ವಾಮಿ ಕಿಡಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವಿನ ಮಾತಿನ ಸಮರ ಮುಂದುವರಿದಿದೆ. ಇಂದು ಮಾಜಿ ಸಿಎಂ ಎಚ್ ಡಿಕೆ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿದ್ದು, “ಸಹೋದರರ ಆಟದ ಅಂತ್ಯ ಹತ್ತಿರ ಬಂದಿದೆ” ಎಂದಿದ್ದಾರೆ. “ಕಲ್ಲು ಬಂಡೆಗಳನ್ನು ನುಂಗಿ, ಮಣ್ಣು ಬಗೆದು ಪರರಿಗೆ ಬಿಕರಿ ಮಾಡಿಕೊಂಡು ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡು ಮೆರೆಯುತ್ತಿರುವ ʼಡಿಸೈನ್ ವೀರರಿಗೆʼ ನಮ್ಮ ನೆಲ, ನಮ್ಮ ಜಲ …

Read More »

ಮಕ್ಕಳ್ಳಿಗೆ ಕೋವಿಡ್ ಲಸಿಕೆ : 3 ನೇ ಸ್ಥಾನದಲ್ಲಿ ಬೀದರ್

ಬೀದರ್: ಕೊರೋನಾ ಮತ್ತು ಓಮ್ರಿಕಾನ್ ನಿಯಂತ್ರಣ ಮಾಡಲು ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.ಶಾಲಾ, ಕಾಲೇಜುಗಳಲ್ಲಿನ 15ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನಕ್ಕೆಚಾಲನೆ ನೀಡಿದ್ದು,ಜಿಲ್ಲೆಯಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಯಾನದ ಮೊದಲ ದಿನವಾದ ಸೋಮವಾರ ಶೇಕಡ 26.76 ರಷ್ಟು ವಿದ್ಯಾರ್ಥಿಗಳು ಮಾತ್ರ ಲಸಿಕೆ ಪಡೆದುಕೊಂಡರು. ಮಕ್ಕಳ ಲಸಿಕಾಕರಣದಲ್ಲಿ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಬೀದರ್‌ ಮೂರನೇ ಸ್ಥಾನದಲ್ಲಿ ಇದೆ.

Read More »

ಬೀಸಿದ ಮೋಸದ ಬೆಲೆಗೆ ಬಿದ್ದ ಹುಬ್ಬಳ್ಳಿ ಗಂಡು

ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ವಂಚನೆ ಮಾಡುವುದು ಹೊಸತೇನೂ ಅಲ್ಲ ಸಾಕಷ್ಟು ಮೋಸದ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಫೇಸ್‌ಬುಕ್‌ ಮೂಲಕ ಯುವಕನನ್ನು ಪರಿಚಿಯಿಸಿಕೊಂಡು ಅಮೆರಿಕದಿಂದ ಬರುತ್ತಿದ್ದೇನೆಂದು ನಂಬಿಸಿ ಯುವತಿ59,200 ರೂ. ವರ್ಗಾಯಿಸಿಕೊಂಡು ಆತನಿಗೆ ನಂಬಿಸಿ ನಂಬಿಸಿ ಕುತ್ತಿಗೆಯನ್ನು ಮುರಿದಿರುವ ಘಟನೆ ನಡೆದಿದೆ. ಇಲ್ಲಿಯ ಶಾಂತಿನಗರದ ನಿಖಿಲ್ ಶಾಹ ಅವರಿಗೆ ಅಶರ್ ಡಾಮಿನ್ ಎಂಬ ಯುವತಿ ಫೇಸ್‌ಬುಕ್ ರಿಕ್ವೆಸ್ಟ್ ಕಳುಹಿಸಿದ್ದಳು. ರಿಕ್ವೆಸ್ಟ್‌ಗೆ ನಿಖಿಲ್ ಒಪ್ಪಿಗೆ ಸೂಚಿಸಿದ್ದರು. ಬಳಿಕ ನಿಖಿಲ್ ಸ್ನೇಹ ಸಂಪಾದಿಸಿದ …

Read More »

ಸಚಿವ ಡಾ. ಅಶ್ವತ್ಥ್ ನಾರಾಯಣ ರಾಜೀನಾಮೆಗೆ ಆಗ್ರಹ

ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ಸಂಬಂಧಿಸಿದ ಬೃಹತ್ ಕಾರ್ಯಕ್ರಮವನ್ನು ರಾಮನಗರ ಜಿಲ್ಲೆಯಲ್ಲಿ ಆಯೋಜಿಸಲಾಗಿತ್ತು. ಸಚಿವ ಡಾ. ಅಶ್ವತ್ಥ್ ನಾರಾಯಣ ಅವರು ಭಾಷಣದ ಸಂದರ್ಭದಲ್ಲಿ ಅವಾಚ್ಯ ಶಬ್ಧಗಳನ್ನು ಬಳಸುವ ಜತೆಯಲ್ಲಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಅಗೌರವ ತರುವ ರೀತಿಯಲ್ಲಿ ವರ್ತಿಸಿರುವುದು ಖಂಡನೀಯ. ಈ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಪ್ರಮುಖ ಜನಪ್ರತಿನಿಧಿಗಳು ಕೂಡಾ ಭಾಗಿಯಾಗಿದ್ದರು. ಸಂಸದ ಡಿ.ಕೆ.ಸುರೇಶ್ ಅವರಿಗೆ ಅಗೌರವ ತರುವ ರೀತಿಯಲ್ಲಿ ಮಾತನಾಡಿರುವ ಹಾಗೂ ಗೂಂಡಾ …

Read More »

ಕಮಲದ ರಾಜ್ಯಾಧ್ಯಕ್ಷ ಬಂಧನ

ಹೈದರಾಬಾದ್: ಕೊರೋನಾ ಹಾವಳಿ ಹೆಚ್ಚಿದಂತೆ ಜನರಲ್ಲಿ ಕ್ರಮಗಳನ್ನು ಕೈಗೊಳ್ಳುವುದಾಗಿ ಸರ್ಕಾರ ನಿಯಮಗಳನ್ನು ಜಾರಿ ಗೊಳಿಸಿದೆ. ಆದರೆ ಕೋವಿಡ್ ನಿಯಂತ್ರಣ  ಕ್ರಮಗಳನ್ನು ಪಾಲಿಸದೇ, ಕೋವಿಡ್ ಪ್ರಕರಣಗಳಸಂಖ್ಯೆ ಹೆಚ್ಚಾದಂತ ಸಂದರ್ಭದಲ್ಲಿಯೇ ಪ್ರತಿಭಟನೆಗೆ ಇಳಿದಿದ್ದಂತ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕಿಡಿಕಾರಿರುವಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್  ಬಂಧನ ಪ್ರಜಾಪ್ರಭುತ್ವದ ಕಗ್ಗೊಲೆಯೇ ಸರಿ ಎಂಬುದಾಗಿ ಕಿಡಿಕಾರಿದ್ದಾರೆ.

Read More »

ಲಂಚ ಪಡೆದ ಆರೋಪ : ಇನ್ಸ್ಪೆಕ್ಟರ್ ಸಸ್ಪೆಂಡ್

ಬೆಂಗಳೂರು: ಲಂಚ ಪಡೆದ ಆರೋಪದಡಿ ಮಡಿವಾಳ ಇನ್ಸ್ಪೆಕ್ಟರ್ ಓರ್ವರನ್ನು ಸಸ್ಪೆಂಡ್ ಮಾಡಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ. ಮಡಿವಾಳ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ನಾಯಕ್ ಅಮಾನತು ಆಗಿರುವ ಅಧಿಕಾರಿ ಎಂದು ಹೇಳಲಾಗಿದೆ. ವರದಕ್ಷಿಣೆ ಕಿರುಕುಳ ಸಂಬಂಧ ಅಜಯ್ ಎಂಬ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೋರ್ಟ್ ಗೆ ಹಾಜರಾಗದೇ ಇದುದ್ದರಿಂದ ಆರೋಪಿ ವಿರುದ್ಧ ವಾರಂಟ್ ಜಾರಿ …

Read More »

ಭಾರಿ ಮೊತ್ತದ ವಿವಿ ಕ್ಯಾಂಪಸ್ ಸ್ಥಾಪನೆ

ಬೆಂಗಳೂರು:ನೂರು ಎಕರೆ ವಿಸ್ತಾರದಲ್ಲಿ 320 ಕೋಟಿ ವೆಚ್ಚದಲ್ಲಿ ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾನಿಲಯ ತಲೆ ಎತ್ತಲಿದೆ .ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ   ನಿರ್ಮಾಣ ಗೊಳ್ಳಲಿದೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸುತ್ತಾರೆ. ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯಲ್ಲಿ ಈ ವಿವಿ ಕ್ಯಾಂಪಸ್ ಸ್ಥಾಪನೆಯಾಗಲಿದೆ. ವೇದ, ವಿಜ್ಞಾನ, ಗಣಿತ ಹಾಗೂ ವಿಜ್ಞಾನ ತಂತ್ರಜ್ಞಾನಕ್ಕೆ ಸಂಸ್ಕೃತ ಭಾಷೆಯ ಕೊಡುಗೆ ಅನನ್ಯ. ಇದರ ಕುರಿತು ಜಗತ್ತಿನ ವಿವಿಧ ಮೂಲೆಗಳಿಂದ ಅಧ್ಯಯನ ಮಾಡಲು …

Read More »

ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಬಿಳಿಬಂಗಾರ

ರಾಯಚೂರು: ಬಾರಿ ಹತ್ತಿಗೂ ಭಾರೀ ಬೆಲೆ ಸಿಕ್ಕಿದ್ದು, ಬೆಳೆಗಾರರಿಗೆ ನಿಟ್ಟುಸಿರು ಬಿಡುವಂತಾಗಿದೆ. ಕೃಷಿಕರು ಒಂದೆಡೆ ಇಳುವರಿ ಬಂದಿಲ್ಲ ಎಂದು ಪೇಚಾಡುವ ಹೊತ್ತಲ್ಲೇ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತಿರುವುದು ಸಮಾಧಾನಕರವಾಗಿದೆ. ಕಳೆದ ತಿಂಗಳು ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆ ಸುರಿದು ಬೆಳೆಗಳಿಗೆಲ್ಲ ಕುತ್ತುಂಟಾಯಿತು. ಇಳುವರಿ ಕಡಿಮೆಯಾಗಲು ಇದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಆದರೆ, ಕೆಲವೆಡೆ ಮಳೆ ಸುರಿದರೂ ಉತ್ತಮ ಇಳುವರಿ ಸಿಕ್ಕಿದೆ. ಫಸಲು ಕಡಿಮೆ ಬಂದಿರುವ ಕಡೆ ದರ ಹೆಚ್ಚಳ ಕೈ ಹಿಡಿದರೆ, …

Read More »