Breaking News

ಧಾರವಾಡ

ವಿವಿಧ ಬೇಡಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಆಟೋ ರೀಕ್ಷಾ ಚಾಲಕ ಪ್ರತಿಭಟನೆ

ಧಾರವಾಡ :ನಗರದ ಶಾಲಾ ವಾಹನ ತಪಾಸಣೆ ಹಾಗೂ ಜಿಲ್ಲಾ ಆಟೋ ರೀಕ್ಷಾ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಆಟೋ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘದ ನೂರಾರು ಚಾಲಕರು ಪ್ರತಿಭಟನೆ ನಡೆಸಿದರು.ಸುಮಾರು ವರ್ಷಗಳಿಂದ ನಗರದಲ್ಲಿ ಆಟೋ ರೀಕ್ಷಾ ಹಾಗೂ ವ್ಯಾನ ಚಾಲಕರು ಶಾಲಾ ಮಕ್ಕಳನ್ನು ಕರೆದೊಯ್ಯುವ ಕಾರ್ಯದಲ್ಲಿ ತಮ್ಮ ತಮ್ಮ ಕುಟುಂಬ ಸಲುಹುದು ಹಾಗೂ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ನಿಭಾಯಿಸಿ ತಮ್ಮ ಜೀವನವನ್ನು …

Read More »

ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಅಪಘಾತ ಧಾರವಾಡದ ಒಂದೇ ಕುಟುಂಬದ 6 ಜನ ಮೃತ

ಧಾರವಾಡ : ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿನ ಕಾಶೀಳ ಬಳಿ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬಳಿ ರಸ್ತೆ ಅಪಘಾತದಲ್ಲಿ ಧಾರವಾಡದ ಒಂದೇ ಕುಟುಂಬದ 6 ಜನರು ಮೃತಪಟ್ಟಿದ್ದು, ಇಬ್ವರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ನಸುಕಿನಲ್ಲಿ ನಡೆದಿದೆ.ಅಪಘಾತದಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಎರಡೂವರೆ ವರ್ಷದ ಒಬ್ಬ ಬಾಲಕ ಮತ್ತು 5 ವರ್ಷದ ಬಾಲಕಿ ಮೃತಪಟ್ಟಿದ್ದು, ಇವರು ಧಾರವಾಡದ ನಿಜಾಮೋದಿನ ಸೌದಾಗರ ಎಂಬ ಕುಟುಂಬದವರು ಎನ್ನಲಾಗಿದೆ.ಚಾಲಕನ‌ ನಿಯಂತ್ರಣ ತಪ್ಪಿ …

Read More »

ಯುವ ಕೇಂದ್ರದ ಅನ್ಯಾಯ ಸರಿಪಡಿಸುವಂತೆ ಆಗ್ರಹ

ಧಾರವಾಡ :ಜಿಲ್ಲಾ ನೆಹರು ಯುವ ಕೇಂದ್ರದ ಯುವ ಸಮನ್ವಯ ಅಧಿಕಾರಿಗಳಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದು ಜಿಲ್ಲಾ ಘಟಕದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಹುಬ್ಬಳ್ಳಿಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯಿಂದ ಸೋಮವಾರ ನಗರದ ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಅವರಿಗೆ ಮನವಿ ಸಲ್ಲಿಸಿದರು.ಜಿಲ್ಲೆಯ ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳು ಕಳೆದ 7 ತಿಂಗಳಿಂದ ಯುವ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಮತ್ತು ಜಿಲ್ಲೆಯ ಒಳ್ಳೆಯ ರಾಷ್ಟ್ರೀಯ …

Read More »

ರಾಷ್ಟ್ರದ ಸ್ವಚ್ಛತೆ, ಸಂಪನ್ಮೂಲ ರಕ್ಷಣೆಗೆ ಪ್ರತಿಯೊಬ್ಬರೂ ಸೈನಿಕರಾಗೋಣ-ವಿ.ಶ್ರೀಶಾನಂದ

ಧಾರವಾಡ: ಸೈನಿಕರು ರಾಷ್ಟ್ರದ ಗಡಿ ರಕ್ಷಣೆಗಾಗಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಾರೆ. ಭಾರತೀಯರಾದ ನಾವು ರಾಷ್ಟçದ ರಕ್ಷಣೆ, ಸ್ವಚ್ಛತೆ, ಸಂಪನ್ಮೂಲಗಳ ರಕ್ಷಣೆಗಾಗಿ ಪ್ರತಿಯೊಬ್ಬರೂ ನಾಗರಿಕ ವಲಯದ ಸೈನಿಕರಾಗೋಣ ಎಂದು ರಾಜ್ಯ ಉಚ್ಛ ನ್ಯಾಯಾಲಯದ ರಜಿಸ್ಟಾರ್ ಜನರಲ್ ವಿ. ಶ್ರೀಶಾನಂದ ಹೇಳಿದರು.ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ಸ್ತೂಪದಲ್ಲಿ ಕಾರ್ಗಿಲ್ ವಿಜಯೋತ್ಸವದ 20ನೇ ವರ್ಷಾಚರಣೆ ಅಂಗವಾಗಿ ಸ್ಮಾರಕಕ್ಕೆ ಗೌರವ ಸಲ್ಲಿಸಿ ಮಾತನಾಡಿದ ಅವರು,ಯಾವುದೇ ರೀತಿಯ ಜಾತಿ ಧರ್ಮದ ಭೇದವಿಲ್ಲದೆ …

Read More »

ಕಾರ್ಗಿಲ್ ದಿನ ಆಚರಣೆ

ಧಾರವಾಡ: ಭಜರಂಗದಳ ವತಿಯಿಂದ ಶುಕ್ರವಾರ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ಸ್ತೂಪದಲ್ಲಿ ಪುಷ್ಪರಾರ್ಚನೆ ಮಾಡಿ,ಯೋಧರಿಗೆ ಸನ್ಮಾನ ಮಾಡಿದರು.ಈ ವೇಳೆ ಭಜರಂಗದಳದ ಜಿಲ್ಲಾ ಸಂಚಾಲಕ ಶಿವಾನಂದ ಸತ್ತಿಗೇರಿ, ಜಿಲ್ಲಾ ಸಹ ಸಂಚಾಲಕ ಅಕ್ಷಯ ಕುಲಕರ್ಣಿ,ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎಚ್ ಪಾಟೀಲ್, ನಗರ ಸಂಚಾಲಕ ಪ್ರೀತೇಶ ಜಾಧವ್, ಗೋ ರಕ್ಷಾ ಪ್ರಮುಖ ಮಹಾದೇವ ಕೋರಿ,ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಹೂಗಾ ಬಿಜೆಪಿ ಯುವ ಮೊರ್ಚಾ ಅಧ್ಯಕ್ಷ …

Read More »

ಆ್ಯಂಬುಲೆನ್ಸ್‌ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

ಧಾರವಾಡ:ಹೆರಿಗೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದ ಗರ್ಭಿಣಿಯೊಬ್ಬರು ಮಾರ್ಗ ಮಧ್ಯದಲ್ಲಿಯೇ ಆ್ಯಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಧಾರವಾಡದ ಹೈಕೋರ್ಟ್‌ ಬಳಿ ನಡೆದಿದೆ.ದುರ್ಗದಕೇರಿ ಗ್ರಾಮದ ಕಾವೇರಿ ಮಾಳಗಿ ಎಂಬ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿತ್ತು.ಇಂದು‌ ಬೆಳಗಿನ ಜಾವ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಆ್ಯಬುಲೆನ್ಸ್‌ನ ರಸ್ತೆ ಪಕ್ಕ ನಿಲ್ಲಿಸಿ 108 ಸಿಬ್ಬಂದಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.ಆ್ಯಂಬುಲೆನ್ಸ್​ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಕಾವೇರಿ. ಹೆರಿಗೆಯಾದ ಬಳಿಕ ತಾಯಿ ಮತ್ತು ಮಗು …

Read More »

ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಡಿಸಿ ಸೂಚನೆ

ಹುಬ್ಬಳ್ಳಿ:ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವ ನಿಟ್ಟಿನಲ್ಲಿ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.ಮಹಾನಗರ ಪಾಲಿಕೆ ಆಯಕ್ತರ ಸಭಾಭವನದಲ್ಲಿ ಪಿಒಪಿ ಗಣೇಶ ಮೂರ್ತಿ ನಿಷೇಧ ಕುರಿತು ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ಕಳೆದ ವರ್ಷ ಕಟ್ಟುನಿಟ್ಟಾಗಿ ಕ್ರಮ ಜರುಗಿಸಿದ ಹಿನ್ನೆಲೆಯಲ್ಲಿ ಪಿಒಪಿ ಮೂರ್ತಿ ತಯಾರಿಕೆ ಹಾಗೂ ಪ್ರತಿಷ್ಠಾಪನೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಸಂಪೂರ್ಣವಾಗಿ ನಿಷೇಧಿಸಬೇಕು …

Read More »

ರಾಜ್ಯ ಶಾಸಕರ ವಿರುದ್ಧ ಕಿಡಿ ಕಾರಿದ ಕೋಡಿಹಳ್ಳಿ

ಧಾರವಾಡ: ಇವತ್ತು ಮೂರು ಪಕ್ಷಗಳು ಮೂರು ಬಿಟ್ಟಿವೆ,ನಾಡಿನಲ್ಲಿ ಬರಗಾಲ, ರೈತರ ಸಮಸ್ಯೆ,ನೀರಿನ ಸಮಸ್ಯೆಗೆ ರಾಜೀನಾಮೆ ಕೊಡಲಿಲ್ಲ.ಇವತ್ತು 30 ಕೋಟಿ ಅಧಿಕಾರಕ್ಕೆ ರಾಜೀನಾಮೆ ನೀಡಿದ್ದಾರೆ, ಅಂತಹವರಿಗೆ ಚಿ..ಥೂ ಎಂದು ಉಗಿರಿ ಎಂದುಕರ್ನಾಟಕ ರಾಜ್ಯ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.ನಗರದ ಕಲಾಭವನದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಜಿಲ್ಲಾ ಹಸಿರು ಸೇನೆ ವತಿಯಿಂದ ಸಾಲಗಾರ ನಾನಲ್ಲ, ಸಾಲ ನನ್ನದಲ್ಲ ಎಂಬ ಘೋಷ ವಾಕ್ಯದ ಮೂಲಕ 39 ನೇ …

Read More »

ಡೋಮಿನೋಸ್ ಪಿಜ್ಜಾ ಸಿಬ್ಬಂದಿಗಳಿಂದ ಸೇಫ್ಟಿ ಡ್ರೈವ್ ಬೈಕ್ ಜಾಥಾ!

ಧಾರವಾಡ :ರಸ್ತೆ ಸುರಕ್ಷತಾ ಮತ್ತು ಹೆಲ್ಮೆಟ್ ಕಡ್ಡಾಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಂಗಳವಾರ ನಗರದ ಗೋಕುಲ ರಸ್ತೆಯಲ್ಲಿನ ಅರ್ಬನ್ ಒಯಸಿಸ್ ಮಾಲ್ ನ ಡೋಮಿನೋಸ್ ಪಿಜ್ಜಾದ ಸಿಬ್ಬಂದಿಗಳಿಂದ ವಿವಿದ ನಗರಗಳಲ್ಲಿ ಬೈಕ್ ಮೂಲಕ ಸಂಚರಿಸಿ ಸೇಫ್ಟಿ ಡ್ರೈವ್ ಬೈಕ್ ಜಾಥಾ ನಡೆಸಿದರು.ಈ ಸಂದರ್ಭ ನಗರದ ಪ್ರಮುಖ ನಗರಗಳಿಗೆ ತೆರಳಿ ರಸ್ತೆ ಸುರಕ್ಷತೆ, ಹೆಲ್ಮೆಟ್ ಕಡ್ಡಾಯ, ರಸ್ತೆ ಸಂಚಾರ ನಿಯಮ ಪಾಲಿಸುವಂತೆ ಜಾಥಾ ನಡೆಸಿದರು.ಡೋಮಿನೋಸ್ ಪಿಜ್ಜಾದ ಮ್ಯಾನೇಜರ್ ಶ್ವೇತ …

Read More »

ಬಹುಮಹಡಿ ಕಟ್ಟಡ ಕುಸಿತ ಪ್ರಕರಣದ ಮಾಲೀಕರಿಗೆ ಷರತ್ತುಬದ್ಧ ಜಾಮೀನು

ಧಾರವಾಡ: ಬಹುಮಹಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ನಾಲ್ವರು ಮಾಲೀಕರಿಗೆ ಧಾರವಾಡದ 3ನೇ ಹೆಚ್ಚುವರಿ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದೆ.ಕಟ್ಟಡದ ಎಂಜಿನಿಯರ್ ಹೊರತುಪಡಿಸಿ ಮಾಲೀಕರಿಗೆ ಜಾಮೀನು ಮಂಜೂರು ಮಾಡಲಾಗಿದ್ದು, ಮಾ. 19ರಂದು ಕುಸಿದುಬಿದ್ದ ಕಟ್ಟಡದಡಿ ಸಿಲುಕಿ 19 ಜನ ಮೃತಪಟ್ಟಿದ್ದರು.ಕಟ್ಟಡ ಕುಸಿದ ಎರಡು ದಿನಗಳ ನಂತರ ಮಾಲೀಕರು ಪೊಲೀಸರಿಗೆ ಶರಣಾಗಿದ್ದರು. ಗಂಗಣ್ಣ ಶಿಂತ್ರಿ, ಬಸವರಾಜ ನಿಗದಿ, ಮಹಾಬಲೇಶ್ವರ ಪುರದನಗುಡಿ, ರವಿ ಸಬರದ ಜಾಮೀನು ಪಡೆದ ಮಾಲೀಕರಾಗಿದ್ದಾರೆ. ಕಟ್ಟಡದ ನಾಲ್ವರು …

Read More »