BigTv News
November 3, 2023
ಕ್ರಿಕೆಟ್, ಕ್ರೀಡೆ, ಸುದ್ದಿ
2023ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸಾಧನೆ ಪ್ರತಿಯೊಬ್ಬರೂ ಕೊಂಡಾಡುವಂಥದ್ದು. ವಿಶ್ವಕಪ್ ನಲ್ಲಿ ಭಾರತದ ವಿಜಯಗಾಥೆ ಮುಂದುವರೆದಿದೆ. ಶ್ರೀಲಂಕಾವನ್ನು 302 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಟಾಪ್ 4ಕ್ಕೆ ಅರ್ಹತೆ ಪಡೆದ ಮೊದಲ ದೇಶ ಭಾರತ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ತನ್ನ ಮಾರಕ ಬೌಲಿಂಗ್ ಮೂಲಕ 5 ವಿಕೆಟ್ ಕಬಳಿಸಿ ಬ್ಯಾಟ್ಸ್‌ಮನ್‌ಗಳನ್ನು ಮಕಾಡೆ ಮಲಗುವಂತೆ ಮಾಡಿದ್ದಾರೆ. ಶಮಿ ಆಟ ಎಲ್ಲರನ್ನೂ ಹುಬ್ಬೇರುವಂತೆ …
Read More »
BigTv News
November 3, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾವಣೆ ಮಾಧ್ಯಮ ಸೃಷ್ಟಿ. ಇದೀಗ ಸಿದ್ದರಾಮಯ್ಯ ಸಿಎಂ ಇದ್ದಾರೆ. ಅವರೇ ಮುಖ್ಯಮಂತ್ರಿ. ಮುಂದಿನ ಐದು ವರ್ಷ ಸಮರ್ಥವಾಗಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲಿದೆ ಎಂದು ನವಲಗುಂದ ಮತಕ್ಷೇತ್ರದ ಶಾಸಕ ಎನ್.ಹೆಚ್.ಕೊನರೆಡ್ಡಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಕುದುರೆ ತರಹ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಇಲ್ಲದವರು ಯಾರೋ ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಸರ್ಕಾರ ಬಿಳಿಸುವ ಬಗ್ಗೆ ಬಿಜೆಪಿಯವರ ಹಗಲು ಕನಸು ಕಾಣುತ್ತಿದ್ದಾರೆ ಎಂದು …
Read More »
BigTv News
November 3, 2023
ಕರ್ನಾಟಕ, ಬೆಂಗಳೂರು, ಸಿನಿಮಾ, ಸುದ್ದಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದ್ದು, ಕೇವಲ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಹೊಸ ಸಿನಿಮಾಕ್ಕಾಗಿ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಿನ್ನೆ ಸದ್ದಿಲ್ಲದೇ ಮಹೂರ್ತ ನೆರವೇರಿಸಲಾಗಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಮಿಲನ ಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿದ್ದು, ಅಜನೀಶ್ ಲೋಕನಾಥ್ ಅವರ ಮ್ಯೂಸಿಕ್ ಇರಲಿದೆಯಂತೆ. ಸದ್ಯ, ಸಿನಿಮಾಕ್ಕೆ ತಾತ್ಕಾಲಿಕವಾಗಿ ‘ಡಿ-57’ ಎಂಬ ಹೆಸರಿಡಲಾಗಿದೆ. ಇದು ಪಕ್ಕಾ ಮಾಸ್ ಎಂಟರ್‌ಟೈನರ್ …
Read More »
BigTv News
November 3, 2023
ಕ್ರಿಕೆಟ್, ಕ್ರೀಡೆ, ಸುದ್ದಿ
ಕ್ರಿಕೆಟ್ ವಿಶ್ವದ ಅತ್ಯಂತ ಶ್ರೀಮಂತ ಕ್ರೀಡೆ, ಫುಟ್‌ಬಾಲ್ ಬಿಟ್ಟರೆ ಕ್ರಿಕೆಟ್ ಆಟದಲ್ಲೇ ಹೆಚ್ಚು ದುಡ್ಡು ಇದೆ ಅನ್ನೋದು ಜಗತ್ತಿಗೇ ಗೊತ್ತು. ಆದರೆ ಈ ದುಡ್ಡಿನ ಜೊತೆ ಕ್ರಿಕೆಟ್ ಆಟದಲ್ಲಿ ಕ್ರೇಜ್ ಇದೆ, ಖುಷಿ ಇದೆ, ದಾಖಲೆಗಳ ದೊಡ್ಡ ಇತಿಹಾಸವೇ ಇದೆ. ಹೀಗಿದ್ದಾಗಲೇ, ನಿನ್ನೆ ಶ್ರೀಲಂಕಾ ಕ್ರಿಕೆಟ್ ತಂಡ ಭಾರತದ ಎದುರು ಹೀನಾಯವಾಗಿ ಸೋತು ಹಲವು ಇತಿಹಾಸ ಸೃಷ್ಟಿ ಮಾಡಿ ಹೋಗಿದೆ ಗೊತ್ತಾ? ಕ್ರಿಕೆಟ್ ಭಾಷೆಯಲ್ಲಿ ‘ಡಕ್ ಔಟ್’ ಎಂಬ ಪದವು, …
Read More »
BigTv News
November 3, 2023
ಸುದ್ದಿ, ಹೈದರಾಬಾದ್
ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಗೆ ಕೆಲ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ತೆಲಂಗಾಣವು ಭಾರೀ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದೆ. ಆಡಳಿತಾರೂಢ ಬಿಆರ್‌ಎಸ್ ಹಾಗೂ ಬಿಜೆಪಿ ತೊರೆದಿರುವ ಹಲವು ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಈಗ ಮಾಜಿ ಸಿಎಂ ವೈಎಸ್ ರಾಜಶೇಖರ್ ರೆಡ್ಡಿ ಅವರ ಪುತ್ರಿ ವೈಎಸ್ ಶರ್ಮಿಳಾ ಅವರು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ ಮತ್ತು ಕಾಂಗ್ರೆಸ್ ಬೆಂಬಲ ನೀಡಿದ್ದಾರೆ. ವೈಎಸ್‌ಆರ್‌ಟಿಪಿ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರು ಶುಕ್ರವಾರ ಈ ನಿರ್ಧಾರ …
Read More »
BigTv News
November 3, 2023
ಕ್ರಿಕೆಟ್, ಕ್ರೀಡೆ, ಸುದ್ದಿ
2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ನೀಡುತ್ತಿರುವ ಅತ್ಯುತ್ತಮ ಪ್ರದರ್ಶನ ಮತ್ತು ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನ ನೋಡಿ ಪಾಕಿಸ್ತಾನದವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಕಾಲು ಕೆದರಿಕೊಂಡು ಏನಾದರೂ ಒಂದು ಆರೋಪ ಮಾಡುತ್ತಿದೆ. ಭಾರತ ತಂಡ ಈಗಾಗಲೇ ಏಳಕ್ಕೆ ಏಳು ಪಂದ್ಯಗಳ ಗೆಲುವಿನ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದರೆ, ಪಾಕಿಸ್ತಾನ ತಂಡ ಕೇವಲ ಮೂರು ಗೆಲುವು ಪಡೆದು ಸೆಮಿಫೈನಲ್‌ಗೆ ಅರ್ಹತೆ ಗಳಿಸಲು ಒದ್ದಾಡುತ್ತಿದೆ. ಇದೇ ವೇಳೆ ಶ್ರೀಲಂಕಾ ವಿರುದ್ಧ ಭಾರತದ ಗೆಲುವಿಗೆ …
Read More »
BigTv News
November 3, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಜೋರಾಗಿಯೇ ಕೇಳಿಬರುತ್ತಿದೆ. ಸ್ವಪಕ್ಷದಲ್ಲೇ ಭಿನ್ನಮತಗಳು ಕೂಡ ಭುಗಿಲೆದ್ದಿವೆ. ಇದರ ಬೆನ್ನಲೇ ಇದೀಗ ಇಂದು (ನವೆಂಬರ್ 03) ಡಿ.ಕೆ.ಶಿವಕುಮಾರ್ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಈ ವೇಳೆ ಅವರನ್ನು ಸ್ವಾಗತಿಸಲು ಒಬ್ಬೇ ಒಬ್ಬ ಶಾಸಕರು ಮಾತ್ರ ಆಗಮಿಸಿದ್ದರು. ಇನ್ನು ಉಳಿದ ಶಾಸಕರು ಗೈರಾಗಿದ್ದ ಈ ಸನ್ನೀವೇಶ ಹಲವು ಊಹಾಪೋಹಗಳಿಗೂ ಕಾರಣವಾಗಿದೆ.ಧಾರವಾಡ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಜನ ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಸ್ವಾಗತಕ್ಕೆ ನವಲಗುಂದ …
Read More »
BigTv News
November 2, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರ ಎಟಿಎಂ ಆಗಿರುವುದಕ್ಕೆ ರಾಜ್ಯಕ್ಕೆ ವರಿಷ್ಠರು ಭೇಟಿ ನೀಡಿದ್ದಾರೆ. ಕೆಸಿ ವೇಣುಗೋಪಾಲ್ ಮತ್ತು ಸುರ್ಜೆವಾಲ ರಾಜ್ಯಕ್ಕೆ ಆಗಮಿಸಿದ್ದಾರೆ. ಎಲೆಕ್ಷನ್ ಟಾರ್ಗೆಟ್ ನೀಡಲು ಅವರಿಬ್ಬರೂ ರಾಜ್ಯಕ್ಕೆ ಬಂದಿದ್ದರು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆರೋಪಿಸಿದರು.ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜನರಿಗೆ ನೀಡಿದ ಆಶ್ವಾಸನೆ ಈಡೇರಿಸಲು ಪರದಾಡುತ್ತಿದೆ.ಸರ್ಕಾರದ ಮೇಲೆ ನಿಯಂತ್ರಣವಿಲ್ಲದೆ ಸಿಎಂ ವಿಚಿತ್ರ ಪರಿಸ್ಥಿತಿಯಲ್ಲಿದ್ದಾರೆ. ರಾಜ್ಯದ ಅಭಿವೃದ್ಧಿ ಕಾರ್ಯ ಸಂಪೂರ್ಣವಾಗಿ ಸ್ಥಗಿತವಾಗಿದೆ ಉಚಿತ …
Read More »
BigTv News
November 2, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ನಡುವೆ ನಾಯಕತ್ವಕ್ಕಾಗಿ ಬಣಗಳ ಜಗ್ಗಾಟ ನಡೆಯುತ್ತಿದೆ. ಅದು ಈಗ ತಾರಕಕ್ಕೇರಿದೆ. ವರ್ಗಾವಣೆ ದಂಧೆ ಮುಂದುವರೆದಿದೆ. ಉಪ ಮುಖ್ಯಮಂತ್ರಿ ಉಪಟಳಕ್ಕೆ ಕಡಿವಾಣ ಹಾಕಲು ಡಿನ್ನರ್ ಮೀಟಿಂಗ್ ಆರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾವೇರಿ ಜಲ ನ್ಯಾಯಮಂಡಳಿ ಮುಂದೆ ನೀರಿನ ಪರಿಸ್ಥಿತಿಯನ್ನು ಸಮರ್ಥವಾಗಿ ಮಂಡಿಸಲು ವಿಫಲವಾಗಿದೆ. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ …
Read More »
BigTv News
November 2, 2023
News, ಕರ್ನಾಟಕ, ಜಿಲ್ಲೆ, ರಾಜಕೀಯ, ವಿಜಯಪುರ, ಸುದ್ದಿ
ವಿಜಯನಗರ: 5 ವರ್ಷ ನಾನೇ ಸಿಎಂ ಆಗಿ ಮುಂದುವರಿಯುವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆ ಕುರಿತಂತೆ ಹೊಸಪೇಟೆಯಲ್ಲಿ ಪ್ರತಿಕ್ರಿಯಿಸಿದ ಅವರು, ಐದು ವರ್ಷ ನಮ್ದೇ ಸರ್ಕಾರ ಇರುತ್ತೆ. ಐದು ವರ್ಷ ನಾನೇ ಮುಂದುವರಿಯುವೆ ಎಂದಿದ್ದಾರೆ. ಡಿಸಿಎಂ ವಿಚಾರ ತಿರ್ಮಾನ ಮಾಡೋದು ಹೈಕಮಾಂಡ್, ನಮ್ಮದು ನ್ಯಾಷನಲ್ ಪಾರ್ಟಿ, ಏನೇ ತೀರ್ಮಾನ ಆದ್ರು ಹೈಕಮಾಂಡ್ ಜೊತೆ ಚರ್ಚೆ ಮಾಡಿಯೇ ಆಗುವುದು ಎಂದಿದ್ದಾರೆ. ಸರ್ಕಾರ ಬೀಳುತ್ತೆ ಎಂಬ …
Read More »