Breaking News

ಸುದ್ದಿ

ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದು ನಗರಕ್ಕೆ ಬಂದಿದ್ದ ರಸ್ತೆ ಟೀ ಮಾರುತ್ತಿದ್ದ ವ್ಯಕ್ತಿಯನ್ನು ಅಪಹರಿಸಿದ್ದ ಪ್ರಕರಣಎಂಟು ಜನ ಆರೋಪಿಗಳ ಬಂಧನ….

ಬೆಂಗಳೂರು: ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದು ನಗರಕ್ಕೆ ಬಂದಿದ್ದ ರಸ್ತೆ ಟೀ ಮಾರುತ್ತಿದ್ದ ವ್ಯಕ್ತಿಯನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎಂಟು ಜನ ಆರೋಪಿಗಳನ್ನು ಹನುಮಂತನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶ್ರೀನಗರದ ನಿವಾಸಿಯಾಗಿರುವ 32 ವರ್ಷದ ತಿಲಕ್ ಮಣಿಕಂಠ ಎಂಬಾತನನ್ನು ಅಪಹರಿಸಿ ಹದಿನೈದು ಲಕ್ಷ ರೂ. ಸುಲಿಗೆ ಮಾಡಿದ್ದ ಕಾರ್ತಿಕ್, ರಾಹುಲ್ ಎಂಬಾತ ಸೇರಿದಂತೆ 8 ಜನರನ್ನು ಬಂಧಿಸಲಾಗಿದೆ. ನಗರದಲ್ಲಿ ಟೀ ವ್ಯಾಪಾರ ಮಾಡುತ್ತಿದ್ದ ತಿಲಕ್, ಗೋವಾಕ್ಕೆ ತೆರಳಿ …

Read More »

ರಾಜ್ಯ ಸರ್ಕಾರ ಮೈತ್ರಿ ಉದ್ದೇಶದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ: ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯ ಸರ್ಕಾರ ಮೈತ್ರಿ ಉದ್ದೇಶದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ. ನ್ಯಾಯಾಲಯದ ಆದೇಶ ಗೌರವಿಸಿ, ಅದನ್ನು ಪಾಲಿಸಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಮಜಾಯಿಷಿ ನೀಡಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ನಮ್ಮ ರೈತರ ಹಿತವನ್ನು ಕಾಯಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತನ್ನ ನಿರ್ಧಾರ ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದೇವೆ. ಕಾವೇರಿ ವಿಚಾರದಲ್ಲಿ ನಾವು ಕಾನೂನು, ಸಂವಿಧಾನ ಹಾಗೂ ಕೋರ್ಟ್ ಆದೇಶಕ್ಕೆ ಗೌರವ ನೀಡಬೇಕು” ಎಂದರು. …

Read More »

ಧಾರವಾಡ ಎಸ್ಪಿ ಕಚೇರಿಗೆ ಆಗಮಿಸಿದ ಗೃಹ ಸಚಿವ ಜೀ ಪರಮೇಶ್ವರ..

ಧಾರವಾಡ: ಧಾರವಾಡ ಎಸ್ಪಿ ಕಚೇರಿಗೆ ಆಗಮಿಸಿದ ಗೃಹ ಸಚಿವ ಜೀ ಪರಮೇಶ್ವರ ಬೆಳಗಾವಿಯಿಂದ ಧಾರವಾಡಕ್ಕೆ ಆಗಮಿಸಿದ ಜೀ ಪರಮೇಶ್ವರ. ಧಾರವಾಡ ಜಿಲ್ಲಾ ಪೊಲೀಸರ ವರಿಷ್ಠಧಿಕಾರಿ ಕಚೇರಿಗೆ ಭೇಟಿ ನೀಡಿದರು. ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಲಿರೋ ಸಚಿವ ಪರಮೇಶ್ವರ್.ಸಭೆಯಲ್ಲಿ ಗೃಹ ಸಚಿವರಿಗೆ ಮಾಹಿತಿ ನೀಡಲಿರೋ ಜಿಲ್ಲಾ ಪೊಲೀಸ ವರಿಷ್ಠಧಿಕಾರಿ ಲೋಕೇಶ್ ಜಗಲಾಸರ್.ಸಭೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಜರಾಗಿದ್ದಾರೆ.ಅಧಿಕಾರಿಗಳಿಂದ ಸಭೆಯಲ್ಲಿ ಮಾಹಿತಿ ಸಚಿವ ಜೀ ಪರಮೇಶ್ವರ. ಇಲಾಖೆಯ …

Read More »

ಮೃತ ಬಾಲಕ ಅಂತ್ಯ ಸಂಸ್ಕಾರದ ವೇಳೆ ಎದ್ದು ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಕಿಮ್ಸ್ ನಿರ್ದೇಶಕ…

ಹುಬ್ಬಳ್ಳಿ: ಮೃತ ಬಾಲಕ ಅಂತ್ಯ ಸಂಸ್ಕಾರದ ವೇಳೆ ಎದ್ದು ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪಅಂಟರತಾನಿ ಆಸ್ಪತ್ರೆಯಲ್ಲಿ ಬಾಲಕ ಸಾವಿನಪ್ಪಿರುವ ಬಗ್ಗೆ ನಾವು ಹೇಳಿಲ್ಲ.ನಮ್ಮ ಆಸ್ಪತ್ರೆಯಿಂದ ಬಿಡುಗಡೆಯಾದಾಗ ಬಾಲಕ ಇನ್ನೂ ಬದುಕೇ ಇದ್ದ,ಆದರೆ ಬಾಲಕನ ಮೆದುಳಿನಲ್ಲಿ ನೀರು ತುಂಬಿಕೊಂಡಿತ್ತು,ಬಾಲಕ ಚಿಕಿತ್ಸೆ ಸ್ಪಂದನೆ ಮಾಡುತ್ತಿರಲಿಲ್ಲ ಎಂದರು. ನಾವು ಬಾಲಕನ ಪರಿಸ್ಥಿತಿ ವಿವರಣೆ ಮಾಡಿ ಬದುಕುವುದು ಕಷ್ಟ ಅಂತ ಹೇಳಿದ್ದೆವು, ಹೀಗಾಗಿ ಸ್ವಇಚ್ಛೆಯಿಂದ ಬಾಲಕನ ಪಾಲಕರು ಆಸ್ಪತ್ರೆಯಿಂದ ಕರೆದುಕೊಂಡು …

Read More »

ಮಹಿಳಾ ಮಂಡಳಿಗಳ ಹಾಗೂ ಡಿಎಸ್ಎಸ್ ವತಿಯಿಂದ ಪೊಲೀಸ್ ಆಯುಕ್ತ ರಿಗೆ ಸನ್ಮಾನ…

ಧಾರವಾಡ: ಭೀಮಸೇನಾ ಮಹಿಳಾ ಘಟಕ ಹಾಗೂ ನವಶಕ್ತಿ ಮಹಿಳಾ ಮಂಡಳ ಈಶ್ವರ್ ನಗರ ಎಪಿಎಂಸಿ ಗಣೇಶ್ ಕಾಲೋನಿ ಹುಬ್ಬಳ್ಳಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ನೂತನವಾಗಿ ಪೊಲೀಸ್ ಆಯುಕ್ತರಾಗಿ ಆಗಮಿಸಿದಂತ ಶ್ರೀಮತಿ ರೇಣುಕಾ ಸುಕುಮಾರ್ ಐಪಿಎಸ್ ಇವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು . ಈ ಸಂದರ್ಭದಲ್ಲಿ ಮುಖಂಡರುಗಳಾದ ಗಂಗಾ ಎಸ್ ಗಸ್ತಿ, ಗೀತಾ ಪಾಟೀಲ್, ಸುರೇಖಾ ಪೂಜಾರಿ, ಗೌರಮ್ಮ ಸತ್ಯಮ್ಮನವರ್, ಶಶಿಕಲಾ ಮುಗುದಯ್ಯನ ಮಠ …

Read More »

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಪ್ರತಿನಿಧಿಗಳ ಜೊತೆ ಸಭೆ: ಸಂತೋಷ್‌ ಲಾಡ್‌

ಬೆಂಗಳೂರು: ವಿಕಾಸಸೌಧದಲ್ಲಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಪ್ರತಿನಿಧಿಗಳ ಜೊತೆ ಸಭೆ ನಡೆಸಿದರು. ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಚಿವರು ವಿಸ್ತೃತ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಕಾರ್ಮಿಕ ಆಯುಕ್ತರಾದ ಶ್ರೀ ಡಾ.ಎಚ್.ಎನ್.ಗೋಪಾಲಕೃಷ್ಣ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಸಿಇಒ ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ಭಾರತಿ. …

Read More »

ಧಾರವಾಡದ ಶಿವಾಜಿ ಮಹಾರಾಜ ಪದವಿ ಕಾಲೇಜು ಸಭಾಂಗಣದಲ್ಲಿ ನಾಳೆ ಪವಾಡ ರಹಸ್ಯ ಬಯಲು ಕಾರ್ಯಕ್ರಮ….

ಧಾರವಾಡ: ಧಾರವಾಡದ ಶಿವಾಜಿ ಮಹಾರಾಜ ಪದವಿ ಕಾಲೇಜು ಸಭಾಂಗಣದಲ್ಲಿ ನಾಳೆ ಶುಕ್ರವಾರ ಮದ್ಯಾಹ್ನ 2,30, ಗಂಟೆಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಖ್ಯಾತ ಪವಾಡ ತಜ್ಞರು, ಕುಂದಗೋಳ ತಾಲೂಕಿನ ಭಾರತ ಜ್ಞಾನ ವಿಜ್ಞಾನ ಸಮಿತಿಯ ಅದ್ಯಕ್ಷರೂ ಆಗಿರುವ ಡಾ, ಮಂಜುನಾಥ ಬಾರಕೇರ ಅವರಿಂದ ವೈಜ್ಞಾನಿಕ ಮನೋವೃತ್ತಿ ಮೂಡಿಸುವ ಉದ್ದೇಶದಿಂದ, ನ್ಯಾಶನಲ್ ಸೈಂಟಿಫಿಕ್ ಟೆಂಪರ್ ಡೇ ಅಂಗವಾಗಿ, ಈ ಕಾರ್ಯಕ್ರಮ ಜರುಗಲಿದ್ದು, ಮರಾಠ ವಿದ್ಯಾ ಪ್ರಸಾರಕ ಮಂಡಳಿ ಶ್ರೀ ಛತ್ರಪತಿ ಶಿವಾಜಿ …

Read More »

ಆಗಸ್ಟ್ 26 ರಂದು ರಂಭಾಪುರಿ ಶ್ರೀ ಪೀಠ ದರ್ಶನ ಪ್ರವಾಸ….

ಧಾರವಾಡ : ಪವಿತ್ರ ಶ್ರಾವಣ ಮಾಸ ನಿಮಿತ್ತ ಧಾರವಾಡ ವೀರಶೈವ ಜಂಗಮ ಸಂಸ್ಥೆಯು ಪಂಚಪೀಠ ದರ್ಶನ ಪ್ರವಾಸ ಕಾರ್ಯಕ್ರಮ ಅಂಗವಾಗಿ ವೀರಶೈವ ಲಿಂಗಾಯತರ ಪುಣ್ಯಕ್ಷೇತ್ರ ಬಾಳೆಹೊನ್ನುರು ರಂಭಾಪುರಿ ಶ್ರೀಪೀಠ ದರ್ಶನ ಪ್ರವಾಸವನ್ನು ಆಗಸ್ಟ್ 26 ರಂದು ಆಯೋಜಿಸಿದೆ.ಆಗಸ್ಟ್ 26 ರಂದು ಮಧ್ಯಾಹ್ನ 1 ಗಂಟೆಗೆ ಧಾರವಾಡದಿಂದ ಹೊರಟು, ಸಂಜೆ ರಂಭಾಪುರಿ ಪೀಠ ತಲುಪಲಾಗುತ್ತದೆ.ಆಗಸ್ಟ್ 27 ಬೆಳಿಗ್ಗೆ ಶ್ರೀ ಪೀಠದಲ್ಲಿ ಶ್ರಾವಣ ಮಾಸದ ನಿಮಿತ್ತ ಮದ್ದ್ ರಂಭಾಪುರಿ ಜಗದ್ಗುರು ಪ್ರಸನ್ನರೇಣುಕ ಡಾ.ವೀರಸೋಮೇಶ್ವರ …

Read More »

ಜನಸಂಪರ್ಕ ಕಾರ್ಯಾಲಯ ಮಿನಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಉದ್ಘಾಟನೆ…..

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಶಾಸಕ ಎಮ್.ಆರ್.ಪಾಟೀಲ್ ಅವರ ಜನಸಂಪರ್ಕ ಕಾರ್ಯಾಲಯ ಇಲ್ಲಿನ ಮಿನಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಉದ್ಘಾಟನೆ ಮಾಡಲಾಯಿತು. ಕ್ಷೇತ್ರದ ಹಿರಿಯ ನಾಗರಿಕರು ಈ ಕಾರ್ಯಾಲಯವನ್ನು ರಿಬ್ಬನ್ ಕತ್ತಿರುವ ಮೂಲಕ ಶಾಸಕರ ಸಮ್ಮುಖದಲ್ಲಿ ಉದ್ಘಾಟನೆ ಮಾಡಿದರು. ಬಳಿಕ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಗೋಳ ರಾಜ್ಯದಲ್ಲಿಯೇ ಹಿಂದೂಳಿದ ತಾಲೂಲು ಎಂಬ ಹಣೆಪಟ್ಟಿ ಹೊತ್ತಿದೆ. ನಮ್ಮ ಕ್ಷೇತ್ರದಲ್ಲಿ ರೈತಾಪಿ ವರ್ಗವೇ ಹೆಚ್ಚಿದ್ದು, …

Read More »

ಧಾರವಾಡದಲ್ಲಿ ಲೋಕಾಯುಕ್ತ ಶಾಕ್.. ಅಧಿಕಾರಿ ಮನೆ ಮೇಲೆ ದಾಳಿ

ಧಾರವಾಡ: ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ ನಡೆದಿದೆ ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಸಹಾಯಕ ಆಯುಕ್ತರಾಗಿದ್ದ ಧಾರವಾಡದ ನಿವಾಸಿಯ ಮನೆಯ ಮೇಲೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ರೇಡ್ ನಡೆದಿದ್ದು, ಮಹತ್ವದ ದಾಖಲೆಗಳು ಲಭಿಸಿವೆಯಂತೆ. ಧಾರವಾಡದ ಸಪ್ತಾಪುರದ ಮಿಚಿಗನ್ ಲೇ ಔಟ್‌ನಲ್ಲಿರುವ ಕೋಟಿ ಕೋಟಿ ಬೆಲೆಬಾಳುವ ಮನೆಯನ್ನ ಹೊಂದಿರುವ ಸಂತೋಷ ಆನಿಶೆಟ್ಟರ್, ಸದ್ಯ ಬೆಳಗಾವಿ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆನಿಶೆಟ್ಡರ್ ಮನೆಯಲ್ಲಿ ತನಿಖೆ ಆರಂಭಿಸಿರುವ ಲೋಕಾಯುಕ್ತ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿದ್ದು, ಮತ್ತಷ್ಟು …

Read More »