Breaking News

ಸುದ್ದಿ

ಆ.11 ರಂದು ಅವಳಿ ನಗರದ ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ…

ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‌ಟಿ ಟ್ಯಾಂಕ್ ವ್ಯಾಪ್ತಿ : ತಳವಾರ ಓಣಿ ಕೆಲಗೇರಿ, ಬೇವಿನಕೊಪ್ಪ ಓಣಿ ಕೆಲಗೇರಿ, ದಲಿಯಾರ ಓಣಿ ಕೆಲಗೇರಿ, ಹರಿಜನಕೇರಿ ಕೆಲಗೇರಿ, ಗಾಯತ್ರಿಪುರಮ್ ಲೇಔಟ್, ಪೇಪರ್ ಮಿಲ್, ಗೋವಾ ಮೇನ್ ರೋಡ್, ಸಾಯಿ ನಗರ, ಮಹಾಂತ ನಗರ, ದುರ್ಗಾ ಕಾಲೋನಿ, ಪಡಿ ಬಸವೇಶ್ವರ ಕಾಲೋನಿ, ಐಶ್ವರ್ಯ ಲೇಔಟ್, ಭಾರತಿ ನಗರ ಕೆ.ಬಿ, ದ್ವಾರವಾಟಿಕಾ ಲೇಔಟ್.ಡಿ.ಸಿ.ಕಂಪೌAಡ್ ಜಿಎಲ್‌ಎಸ್‌ಆರ್ ಟ್ಯಾಂಕ್ ವ್ಯಾಪ್ತಿ : ಭಾವಿಕಟ್ಟಿ ಪ್ಲಾಟ್, ತುಂಗಭದ್ರಾ …

Read More »

ಪೋಲಿಸ್‌ ಇಲಾಖೆಯ ಹೊಸ ನಿಯಮ….

ಪೊಲೀಸ್ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಎರವಲು ಸೇವೆಯ ಅವಧಿಗೆ ಮಿತಿ ಹೇರಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಶೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ.ಇನ್ನು ಮುಂದೆ ಈ ಅವಧಿ ಮೂರು ವರ್ಷ ಮೀರುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದ್ದು ಸರ್ಕಾರದ ಸೂಚನೆಯಂತೆ ಹೊಸ ಮಾರ್ಗ ಸೂಚಿ ಜಾರಿ ಬಂದಿದೆ. ಎರವಲು ಸೇವೆಯ ಸಾಮಾನ್ಯ ಅವಧಿ ಮೂರು ವರ್ಷ ಪೂರ್ಣಗೊಂಡ ಬಳಿಕ ವಿಶೇಷ ಸಂದರ್ಭ ಅಥವಾ ವಿಶೇಷ ಕಾರಣ ಇದ್ದರೆ ಮಾತ್ರ ಸೀಮಿತ ಸಾಮಾನ್ಯ ಅವಧೀಯನ್ನು …

Read More »

ಪ್ರಹ್ಲಾದ ಜೋಶಿ ಅವರಿಗೆ ಶಾಸಕ ಎನ್.ಎಚ್.ಕೋನರಡ್ಡಿ ಕಿವಿಮಾತು…

ಧಾರವಾಡ: ಲೋಕಸಭಾ ಚುನಾವಣೆಗೂ ಮುನ್ನ ಮಹದಾಯಿ ಯೋಜನೆಗೆ ಜಾರಿಗೊಳಿಸಿ ಅದರ ಕ್ರೆಡಿಟ್ ಬೇಕಾದರೆ ನೀವೇ ತೆಗೆದುಕೊಳ್ಳಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಶಾಸಕ ಎನ್.ಎಚ್.ಕೋನರಡ್ಡಿ ಕಿವಿಮಾತು ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಮಹದಾಯಿ ಹೋರಾಟಗಾರರು ನಮ್ಮ ವಿರುದ್ಧ ಹೋರಾಟ ಮಾಡಲು ನಾವು ಬೇಡ ಎಂದಿಲ್ಲ. ಈ ಯೋಜನೆಗೆ ಕೇಂದ್ರ ಸರ್ಕಾರ ಅರಣ್ಯ ಇಲಾಖೆಯಿಂದ ಅನುಮತಿ ಕೊಡಿಸಬೇಕಿದೆ. ಆ ಅನುಮತಿ ಸಿಕ್ಕರೆ ನಾಳೆಯೇ ಕಾಮಗಾರಿ ಆರಂಭವಾಗಲಿದೆ. ಹೋರಾಟಗಾರರು ನಮ್ಮ …

Read More »

ಮಹಾದಾಯಿ ಯೋಜನೆ ವಿಳಂಬಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಪ್ರಮುಖ ಕಾರಣ: ಸ್ವಾಮೀಜಿ

ಹುಬ್ಬಳ್ಳಿ: ಮಹಾದಾಯಿ ಯೋಜನೆ ವಿಳಂಬಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಪ್ರಮುಖ ಕಾರಣವಾಗಿದ್ದು, ನೀರಾವರಿ ಯೋಜನೆಯಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರವಾಗಿದ್ದು, ಈ ಬಗ್ಗೆ ಮಾಹಿತಿ ಕೊಟ್ಟರೂ ನ್ಯಾಯ ಸಿಗುತ್ತಿಲ್ಲ ಎಂದು ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಸ್ವಾಮೀಜಿ ಹೇಳಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಲಪ್ರಭಾ ಬಲದಂಡೆ ಕಾಲುವೆಯನ್ನು ನವೀಕರಣ ಮಾಡಲು2016-17 ನೇ ಸಾಲಿನಲ್ಲಿ ಟೆಂಡರ್ ಕರೆಯಲಾಗಿತ್ತು. ಅಂದಾಜು ಪತ್ರಿಕೆ, ಡಿಪಿಆರ್‌ಗಳಲ್ಲಿ ಬಹು ದೊಡ್ಡ ಭ್ರಷ್ಟಾಚಾರ ನಡೆದಿದ್ದು, ತುಪ್ಪರಿ ಹಳ್ಳದ …

Read More »

ಕೆಲಸಕ್ಕೂ, ಜನರಿಗೂ ನ್ಯಾಯ ಸಿಗಬೇಕು: ಡಿಕೆಶಿ

ಬೆಂಗಳೂರು: ಗುತ್ತಿಗೆದಾರರನ್ನು ಮಾಧ್ಯಮದವರ ಮುಂದೆ ಯಾರು ಕಳಿಸುತ್ತಿದ್ದಾರೆ ಅಂತ ಗೊತ್ತಿದೆ. ನನಗೆ ಎಲ್ಲವೂ ಗೊತ್ತಿದೆ ಎಂದು ಡಿಸಿಎಂ ಡಿ‌.ಕೆ. ಶಿವಕುಮಾರ್ ಟೀಕಿಸಿದ್ದಾರೆ. ಇಂದು ಸದಾಶಿವನಗರದಲ್ಲಿರುವ ನಿವಾಸದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಗುತ್ತಿಗೆದಾರರು ವಿರೋಧ ಪಕ್ಷದ ನಾಯಕರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದರು. ಕಾನೂನು ಪ್ರಕಾರ ತನಿಖೆ ಮಾಡಬೇಕು ಅಂತ ಹೇಳಿದ್ದೇವೆ. ಕೆಂಪಣ್ಣ ದೂರು ಕೊಟ್ಟಿದ್ದಾರೆ, ಅವರಿಗೆ ನ್ಯಾಯ ಒದಗಿಸಬೇಕು. ಕೆಲಸಕ್ಕೆ ನ್ಯಾಯ ಒದಗಿಸಬೇಕು, ಜನರಿಗೂ ನ್ಯಾಯ ಸಿಗಬೇಕು ಎಂದು …

Read More »

ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರ ವಿರುದ್ಧ ರಾಜ್ಯಪಾಲರಿಗೆ ದೂರು…

ಮಂಡ್ಯ: ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಹಿನ್ನೆಲೆ, ತನಿಖೆ ನಡೆಸಲು ಸಿಐಡಿ ಅಧಿಕಾರಿಗಳ ತಂಡ ಬುಧವಾರ ಜಂಟಿ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿ ಮಂಗಳವಾರ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಸಿಐಡಿ, ಐಜಿ ಪ್ರವೀಣ್‌ ಮಧುಕರ್‌ ಪವಾರ್‌ ನೇತೃತ್ವದ ತಂಡ ಜಿಲ್ಲಾಧಿಕಾರಿ ಕಚೇರಿ …

Read More »

ಭಾರತದಲ್ಲೂ ಸಾಕಷ್ಟು ಸಂಪತ್ತು ಇದ್ದು ಇನ್ನಷ್ಟು ವಿಸ್ತಾರವಾಗುವ ಅವಶ್ಯಕತೆ ಇದೆ: ದಿನೇಶ್ ಗುಂಡೂರಾವ್

ಬೆಂಗಳೂರು : ಸಿಂಗಾಪುರ ವಿಸ್ತೀರ್ಣದಲ್ಲಿ ಸಣ್ಣದಾದರೂ ಭಾರತಕ್ಕಿಂತ ಉತ್ತಮ ಸಾಧನೆ ಮಾಡಿದೆ. ಆದರೆ, ಭಾರತದಲ್ಲೂ ಸಾಕಷ್ಟು ಸಂಪತ್ತಿದ್ದು, ಅದು ಇನ್ನಷ್ಟು ವಿಸ್ತಾರವಾಗುವ ಅವಶ್ಯಕತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಭಾರತದ 76ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಸಿಂಗಾಪುರದ 58ನೇ ರಾಷ್ಟ್ರೀಯ ದಿನಾಚರಣೆ ಎರಡು ಶಕ್ತಿಗಳ ಒಗ್ಗೂಡುವಿಕೆಗೆ ಸಾಕ್ಷಿಯಾಗಿದೆ ಎಂದು ಸಚಿವರು ವ್ಯಾಖ್ಯಾನಿಸಿದರು. ಇಲ್ಲಿನ ಜ್ಞಾನಿ ಕಲೆಗಳು ರೂಪಕವನ್ನು ಒತ್ತಿ ಹೇಳುತ್ತವೆ. ಕಳೆದ …

Read More »

ತೆರೆದ ಬಾವಿಗೆ ಬಿದ್ದಿದ್ದ ಕಾಡು‌ಕೋಣ ರಕ್ಷಣೆ….

ಶಿವಮೊಗ್ಗ: ತೆರೆದ ಬಾವಿಗೆ ಬಿದ್ದಿದ್ದ ಕಾಡು‌ಕೋಣವನ್ನು ರಕ್ಷಣೆ ಮಾಡಲಾಗಿದೆ. ಸಾಗರ ತಾಲೂಕು ಚಿಪ್ಪಲಿ ಲಿಂಗದಹಳ್ಳಿಯ ಜೇನು ಕೃಷಿ ಕಟ್ಟಡದ ಬಳಿ ಇರುವ ತೆರೆದ ಬಾವಿಗೆ ಕಾಡುಕೋಣ ಬಿದ್ದಿತ್ತು. ಈ ಬಾವಿಯು ಸುಮಾರು 25 ಅಡಿ ಆಳದ್ದಾಗಿದ್ದು, ರಸ್ತೆ ದಾಟುವಾಗ ಎರಡು ಕಾಡೆಮ್ಮೆಗಳು ಕೃಷಿ ಕಟ್ಟಡದ ಕಾಂಪೌಂಡ್ ಮೇಲೆ ಜಿಗಿದಿವೆ. ಈ ವೇಳೆ, ದೊಡ್ಡ ಕಾಡುಕೋಣ ಜೋರಾಗಿ ಜಿಗಿದು ಓಡಿ ಹೋಗಿದೆ. ಆದರೆ, ಸುಮಾರು 9 ವರ್ಷ ಪ್ರಾಯದ ಸಣ್ಣ ಕಾಡುಕೋಣ …

Read More »

ಎಮ್ಮಿಕೇರಿ ಸರ್ಕಾರಿ ಶಾಲೆಯ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಮತ್ತು ವನಮಹೋತ್ಸವ ಆಚರಣೆ….

ಧಾರವಾಡದ ಎಮ್ಮಿಕೇರಿ ಸರ್ಕಾರಿ ಶಾಲೆಯ ಆವರಣದಲ್ಲಿ ಮಾಳಮಡ್ಡಿಯ ನಿವಾಸಿಗಳಿಂದ ಸ್ವಚ್ಛತಾ ಅಭಿಯಾನ ಮತ್ತು ವನಮಹೋತ್ಸ ಕಾರ್ಯಕ್ರಮ ಆಚರಿಸಲಾಯಿತು. ವಾರ್ಡ್ನನ ಕಾರ್ಪೊರೇಟರ್ ಶ್ರೀ ವಿಷ್ಣುತೀರ್ಥ ಕೊರ್ಲಹಳ್ಳಿ ಅವರ ನೇತ್ರತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದ ಜೊತೆಗೆ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಾಗರಿಕರು ಹಾಗೂ ಪೌರ ಕಾರ್ಮಿಕರ ಜೊತೆಗೂಡಿ ಸ್ವಚ್ಚತಾ ಕಾರ್ಯ ಹಾಗೂ ಗಿಡ ನೆಡುವ ಕಾರ್ಯಕ್ರಮ ಜರಗಿತು. ಈ …

Read More »

ಜನರ ಮೇಲಿರುವ ಹಣದುಬ್ಬರದ ಒತ್ತಡ ಕಡಿಮೆ ಮಾಡಲು ಸರ್ಕಾರವು ಹೊಸ ಯೋಜನೆ….

ವಿಶ್ವದಲ್ಲಿ ಹಣದುಬ್ಬರ ಹೆಚ್ಚಾಗುತ್ತಲೇ ಇದೆ. ಇದರಿಂದ ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಆಗಿದ್ದು, ಇದರಿಂದ ತೊಂದರೆ ಆಗುತ್ತಿರುವುದು ರಾಜ್ಯದ ಸಾಮಾನ್ಯ ಜನರಿಗೆ. ಹಾಗಾಗಿ ಜನರ ಮೇಲಿರುವ ಹಣದುಬ್ಬರದ ಒತ್ತಡ ಕಡಿಮೆ ಮಾಡಲು ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ. ಇದು ಸರ್ಕಾರ ಹೊರತಂದಿರುವ ಸೋಲಾರ್ ರೂಫ್ ಟಾಪ್ ಪ್ಯಾನೆಲ್ ಯೋಜನೆ (Solar Rooftop Panel Scheme) ಆಗಿದೆ. ಈ ಯೋಜನೆಯ ಮೂಲಕ ನೀವು 25 ವರ್ಷಗಳ ಕಾಲ ವಿದ್ಯುತ್ ಬಿಲ್ …

Read More »