Breaking News

ಸುದ್ದಿ

ಮಹಿಳೆಯೊಬ್ಬಳ ಬಾಯಿಗೆ ಬಟ್ಟೆ ಹಾಕಿ, ಕೊಲೆ ಮಾಡಿರುವ ಘಟನೆ,ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ:ಮಹಿಳೆಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ವಿಜಯನಗರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕಮಲಮ್ಮ (54) ಎಂದು ಗುರುತಿಸಲಾಗಿದೆ. ವಿಜಯನಗರದ ಎರಡನೇ ತಿರುವಿನಲ್ಲಿರುವ ಮನೆಯಲ್ಲಿ ಕಮಲಮ್ಮ ಅವರು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಮಲಮ್ಮ ಅವರ ಪತಿ ಮಲ್ಲಿಕಾರ್ಜುನ ಅವರು ಹೊಸದುರ್ಗದಲ್ಲಿ ಎಕ್ಸಿಕ್ಯೂಟಿವ್‌ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.‌ಮಲ್ಲಿಕಾರ್ಜುನ ಅವರು ತಮ್ಮ ಸ್ನೇಹಿತರೊಂದಿಗೆ ಗೋವಾಗೆ ಪ್ರವಾಸಕ್ಕೆ ತೆರಳಿದ್ದರು.ಕಮಲಮ್ಮ ಮನೆಯಲ್ಲಿ ಒಬ್ಬರೇ ಇದ್ದರು. ಮಲ್ಲಿಕಾರ್ಜುನ ಅವರು ಪತ್ನಿ ಕಮಲಮ್ಮಗೆ ಹಲವು ಬಾರಿ ಕರೆ …

Read More »

ಬಸ್ ಮತ್ತು ಬೈಕ್ ನಡುವೆ ಅಪಘಾತ, ಇಬ್ಬರ ಸಾವು

ಮೈಸೂರಿನ ಹನೂರು ಬೆಟ್ಟದಲ್ಲಿ ಸ್ಕೂಟರ್ ಮತ್ತು ಸಾರಿಗೆ ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಕೂಟರ್ ಸವಾರನಿಗೆ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಲೆ ಮಾದೇಶ್ವರ ಬೆಟ್ಟದ ಮುಖ್ಯರಸ್ತಯ ತಾಳುಬೆಟ್ಟದ ಹತ್ತಿರ ಶನಿವಾರ ಮಧ್ಯಾಹ್ನದ ನಂತರ ನಡೆದಿದೆ.ತಾಲೂಕಿನ ಮಲೆ ಮಾದೇಶ್ವರ ಬೆಟ್ಟದ ಮುಖ್ಯರಸ್ತಯ ತಾಳು ಬೆಟ್ಟದ ನಾಲ್ಕನೇ ತಿರುವಿನ ಹತ್ತಿರ ಬಸ್ ಮತ್ತು ಸ್ಕೂಟರ್ ಮುಖ ಮುಖ ಡಿಕ್ಕಿಯಾಗಿ ಘಟನೆ ನಡೆದಿದ್ದು ಸ್ಕೂಟರ್ ಸಾವಾರ ಚಿನ್ನಪ್ಪ (34) ಎಂಬ …

Read More »

ಗದಗ ನಲ್ಲಿ ಗಾಂಜಾ ಮಾರಟ,ಇಬ್ಬರ ಬಂಧನ,

ಗದಗ ಪಟ್ಟಣದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ಗಾಂಜಾ ಸಂಗ್ರಹಿಸಿದ್ದ ಇಬ್ಬರು ಆರೋಪಿಗಳಿಗೆ ಐದು ವರ್ಷಗಳ ಕಾಲ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ‌ ಆದೇಶ ಹೊರಡಿಸಿದೆ. ಬೆಟಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಎಸ್.ಎಂ. ಕೃಷ್ಣ ನಗರಕ್ಕೆ ಹೋಗುವ ರಸ್ತೆ ಬಳಿಯ ಸೇತುವೆ ಕಟ್ಟೆಯ ಮೇಲೆ 27.2.2015ರ ಸಂಜೆ 4.30ರ ಹೊತ್ತಿಗೆ ಅಕ್ರಮವಾಗಿ 2ಕೆಜಿಯಷ್ಟು ಗಾಂಜಾವನ್ನು ತಮ್ಮ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುವ …

Read More »

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಸ್ ಅಪಘಾತ 10 ಪ್ರಯಾಣಿಕರಿಗೆ ಗಾಯ

ಭಾನುವಾರ ಬೆಳಗ್ಗೆ ಟರ್ಮಿನಲ್ 2ರಿಂದ ಟರ್ಮಿನಲ್ 1ಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಷಟಲ್ ಬಸ್ ಅಪಘಾತವಾಗಿದೆ. ಅಪಘಾತದಲ್ಲಿ ಬಸ್‌ನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಘಟನೆಯಿಂದ 10 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್‌ನ ಚಾಲಕ ರಾತ್ರಿಯ ಪಾಳಯದಲ್ಲಿ ಕೆಲಸ ಮಾಡುತ್ತಿದ್ದು, ಆತನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಮುಂಜಾನೆ ನಡೆದ ಘಟನೆಯಿಂದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

Read More »

ನಾಡಿನಾದ್ಯಂತ ಮಣ್ಣೆತ್ತಿನ ಅಮವಾಸ್ಯೆ ಜೋರು –

ಧಾರವಾಡ: ಇಂದು ನಾಡಿನಾದ್ಯಂತ ಮಣ್ಣೆತ್ತಿನ ಅಮವಾಸ್ಯೆ ಆಚರಣೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಅಮವಾಸ್ಯೆಗೆ ಅದರದ್ದೇ ಆದ ವೈಶಿಷ್ಟ್ಯವಿದೆ. ಈ ದಿನ ರೈತಾಪಿ ವರ್ಗ ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜೆ ಮಾಡುತ್ತಾರೆ. ನಗರ ಪ್ರದೇಶಗಳಲ್ಲಿ ಮಣ್ಣಿನಿಂದ ಮಾಡಿದ ಎತ್ತುಗಳನ್ನು ತಂದು ಮಾರಾಟ ಮಾಡಲಾಗುತ್ತದೆ. ನಗರ ಪ್ರದೇಶದ ಜನ ಅದೇ ಮೂರ್ತಿಗಳನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡುತ್ತಾರೆ. ಇಂದು ಧಾರವಾಡದ ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿತ್ತು. ಮಣ್ಣಿನ ಎತ್ತುಗಳಿಗೆ ಭಾರಿ ಬೇಡಿಕೆ …

Read More »

ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆರಾಜ್ಯದ ವಿವಿಧ ಜಿಲ್ಲೆಗಳಿಂದ ತಂಡೋಪ ತಂಡವಾಗಿ ಆಗಮಿಸುತ್ತಿದ ಭಕ್ತರು

ಇಂದು ಅಮವಾಸ್ಯೆ ಹಿನ್ನಲೆ ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ ಮಹಿಳಾ ಭಕ್ತರ ದಂಡೇ ಹರಿದು ಬಂದಿದೆ ಸರ್ಕಾರದ ಶಕ್ತಿ ಯೋಜನೆ ಸದುಪಯೋಗ ಪಡೆದು ರಾಜ್ಯದ ವಿವಿಧ ಜಿಲ್ಲೆಗಳಿಂದ ತಂಡೋಪ ತಂಡವಾಗಿ ಆಗಮಿಸುತ್ತಿರುವ ಭಕ್ತರುಸಿದ್ಧಾರೂಢರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ.ತಡರಾತ್ರಿಯಿಂದಲೇ ಬೆಳಗಾವಿ, ಗದಗ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳಿಂದ ಭಕ್ತರ ಆಗಮನವಾಗುತ್ತಿದೆ ಮಹಿಳೆಯರು ತಮ್ಮ ಗ್ರಾಮದ ತಂಡ ಕಟ್ಟಿಕೊಂಡು ಫ್ರೀ ಬಸ್ ಟೂರ್ ಎಂಜಾಯ್ ಮಾಡುತ್ತಿದ್ದಾರೆ …

Read More »

ರೋಟರಿ ಸಂಸ್ಥೆಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ 18 ರಂದು

ಧಾರವಾಡ ಆರೋಗ್ಯವೇ ಭಾಗ್ಯ ರೋಟರಿ ಪರಿವಾರ ಧಾರವಾಡ ಇವರಿಂದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನುರಿತ ವೈದ್ಯರುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಎಂದು ಗಣೇಶ ಭಟ್ ತಿಳಸಿದರು . ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಣ್ಣು,ಕಿವಿ, ಮೂಗು, ಗಂಟಲು ,ದಂತ ಸಣ್ಣ ಮಕ್ಕಳು ಚರ್ಮ ಹೆಣ್ಣು ಮಕ್ಕಳು ಕಿಡ್ನಿ ಕ್ಯಾನ್ಸರ ,ಎಲ್ಲ ಸಹಜ ಕಾಯಿಲೆಗಳು ಸಕ್ಕರೆ ಕಾಯಿಲೆ ಬಿ.ಪಿ. ಎಲವು, ಕೀಲು ಆಯುರ್ವೆದ ಚಿಕಿತ್ಸೆ ಫಿಜಿಯೋ ಥೆರೆಪಿ ದಿ: 18 …

Read More »

ಧಾರವಾಡದಲ್ಲಿ ಮಳೆಗಾಗಿ ಪೂಜೆ ಮೊರೆ ಹೋದ ಅಜ್ಜಿ: ಪೂಜೆ ಜೊತೆ ಹಾಡು ಹೇಳಿ ಮಳೆರಾನಿಗೆ ಅಹ್ವಾನ

ಧಾರವಾಡ: ರಾಜ್ಯದಲ್ಲಿ ಪೂರ್ವ ಮುಂಗಾರು ಸೇರಿ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನತೆ ಮಳೆಗಾಗಿ ಪೂಜೆ ಪ್ರಾರ್ಥನೆಯಲ್ಲಿ ತೋಡಗಿದ್ದು, ಅದೇ ರೀತಿ ಧಾರವಾಡದಲ್ಲಿ ಅಜ್ಜಿಯೊಬ್ಬರು ಗುರ್ಜಿ ಪೂಜೆ ಮಾಡುವ ಮೂಲಕ ಮಳೆರಾಯ ಅಹ್ವಾನಿಸಿದ್ದಾರೆ. ತಾಲೂಕಿನ ಮನಸೂರು ಗ್ರಾಮದ ನಿವಾಸಿ ರುದ್ರಮ್ಮಾ ಅಜ್ಜಿ ತಮ್ಮ ಮನೆಯ ಅಂಗಳದಲ್ಲಿ ಗುರ್ಜಿ ಪೂಜೆ ಮಾಡಿ, ಹಾಡು ಹೇಳುವ ಮೂಲಕ ವರುಣನನಿಗಾಗಿ ವಿಶೇಷ ಪ್ರಾರ್ಥನೆ ಮಾಡಿದರು.ಸಕಲ ಜೀವ ರಾಶಿಗಳ ಬದುಕು …

Read More »

ಜನ ಸಂಪರ್ಕ ಕಾರ್ಯಾಲಯ ಉದ್ಘಾಟನೆ

ಧಾರವಾಡ ನಾಗರಿಕರ ಅನುಕೂಲಕ್ಕಾಗಿ, ಧಾರವಾಡ 71 ಕ್ಷೇತ್ರದ ಮಾನ್ಯ ಶಾಸಕರಾದ ಸನ್ಮಾನ್ಯ ವಿನಯ ಕುಲಕರ್ಣಿ,ಜನ ಸಂತತ್ವಪರ್ಕ ಕಾರ್ಯಾಲಯವನ್ನು, ತಾಲೂಕ ಪಂಚಾಯತ ಆವರಣದಲ್ಲಿ ಮ.ನಿ.ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶ್ರೀ ಮುರುಘಾಮಠ ಇವರ ಅಮೃತ ಹಸ್ತದಿಂದ ಉಧ್ಘಾಟಿಸಿದರು.ಈ ಸಂದರ್ಭದಲ್ಲಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು ಪೂಜೆ ಸಲ್ಲಿಸಿ ಮಾತನಾಡಿ, ಈ ಕಾರ್ಯಲಯವನ್ನು ಸಾರ್ವಜನಿಕರ ಕುಂದುಕೊರೆತೆ ಆಲಿಸುವ ಹಿನ್ನೆಲೆಯಲ್ಲಿ ತೆರೆಯಲಾಗಿದ್ದು,ಇದರ ಸದುಪಯೋಗ ಪಡೆದುಕೊಳ್ಳಬೇಕು, ಪಾರದರ್ಶಕ ಆಡಳಿತಕ್ಕಾಗಿ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.ಈ ಸಂಧರ್ಭದಲ್ಲಿ ಬ್ಲಾಕ್ …

Read More »

ಎಸ್.ಡಿ.ಎಮ್.ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ

ಧಾರವಾಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ’ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ ಧಾರವಾಡವು ಪ್ರತಿಷ್ಠಿತ. ಇನ್ಸಿಟ್ಯೂಷನ್ ಆಫ್ ಎಲೆಕ್ಟ್ರಿಕ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ( ಐ. ಇ.ಇ.ಇ.) ಇಂಟನ್ಯಾ೯ಷನಲ್ ಕಾನ್ಪರೆನ್ಸ್ ಆನ್ ಅಪ್ಲೈಡ್ ಇಂಟೆಲಿಜೆನ್ಸ್ ಮತ್ತು ಸಸ್ಪೈನಬಲ್ ಕಂಪ್ಯೂಟರ್ ( ICATS , 2003 ) .. ಅನ್ವಯಿಕ ಬುದ್ಧಿವಂತಿಕೆ ಮತ್ತು ಸುಸ್ತಿರ ಹಪ್ಯೂಟಿಂಗ್ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ ( ICATS -2023) ವನ್ನು ಇನ್ನಿಟ್ಯೂಷನ್ ಆಫ್ ಎಲೆಕ್ನಿಕಲ್ ಅಂಡ ಎಲೆಕ್ಟ್ರಾನಿಕ್ಸ್ …

Read More »