BigTv News
December 27, 2021
Breaking News, ಅಪರಾಧ, ಕರ್ನಾಟಕ, ಕರ್ನಾಟಕ, ಬೆಂಗಳೂರು, ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ : ಲಂಚ ಸ್ವೀಕರಿಸಿವಾಗ ಎಸಿಬಿ ಬಲೆಗೆ ಇಬ್ಬರು ಅರಣ್ಯ ಇಲಾಖೆಯ ಸಿಬ್ಬಂದಿ ಬಿದಿದ್ದಾರೆ. ವಲಯ ಅರಣ್ಯ ಅಧಿಕಾರಿ ಅನ್ನದಾನಯ್ಯ ನೀಲಗುಂದಮಠ ಮತ್ತು ಕಂಪ್ಯೂಟರ್ ಆಪರೇಟರ್ ಶಿವಶಂಕರ ಹಿರೇಮಠ ಬಲೆಗೆ ಬಿದ್ದವರು. ಮೃತ ವಾಚರ್ ಮನೊಬ್ಬರು ಪರಿಹಾರ ಹಣವನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 15 ಸಾವಿರ ರೂಪಾಯಿ ಲಂಚ ತಗೆದುಕೊಳ್ಳುವಾಗ ಇಬ್ಬರು ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದಿದ್ದಾರೆ. ಡಿವೈಎಸ್ಪಿ ಮಹಾಂತೇಶ ಜಿದ್ದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
Read More »
admin
December 27, 2021
Breaking News, ಆರೋಗ್ಯ, ಕರ್ನಾಟಕ, ದೆಹಲಿ, ದೇಶ-ವಿದೇಶ, ಸುದ್ದಿ
ಪಣಜಿ: ಯುಕೆಯಿಂದ ಹಿಂದಿರುಗಿದ 8 ವರ್ಷದ ಬಾಲಕನಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಪತ್ತೆಯಾಗಿದೆ. ಈ ಮೂಲಕ ಗೋವಾದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ವರದಿಯಾಗಿದೆ. ಡಿಸೆಂಬರ್ 17 ರಂದು ಇಂಗ್ಲೆಂಡ್‍ನಿಂದ ಆಗಮಿಸಿದ 8 ವರ್ಷದ ಬಾಲಕನಲ್ಲಿ ಓಮಿಕ್ರಾನ್ ಪತ್ತೆಯಾಗಿದ್ದು, ಇದು ರಾಜ್ಯದಲ್ಲಿ ದಾಖಲಾದ ಮೊದಲ ಓಮಿಕ್ರಾನ್ ಪ್ರಕರಣ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸೋಮವಾರ ತಿಳಿಸಿದ್ದಾರೆ. ಬಾಲಕನ ಗಂಟಲ ದ್ರವ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿಗೆ …
Read More »
admin
December 27, 2021
Breaking News, ಕರ್ನಾಟಕ, ದೇಶ-ವಿದೇಶ, ಬೆಂಗಳೂರು, ರಾಜಕೀಯ ಸುದ್ದಿ, ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಪಕ್ಷ ಮತ್ತು ಬಿಜೆಪಿ ನೇತೃತ್ವದ ಸರ್ಕಾರ ಉತ್ತಮ ಕೆಲಸವನ್ನು ಮಾಡುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿಯವರು ಅದ್ಬುತ ಕೆಲಸವನ್ನು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಚುನಾವಣೆ ಬೊಮ್ಮಾಯಿಯವರ ನೇತೃತ್ವದಲ್ಲಿ ನಡೆಯುತ್ತದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಕುಮಾರ್ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷ ಮತ್ತು ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ನಾಳೆ, ಮತ್ತು ನಾಡಿದ್ದು ಪಕ್ಷದ ಕಾರ್ಯಕಾರಣಿ ಸಭೆ ಇದೆ. …
Read More »
admin
December 27, 2021
Breaking News, ಕರ್ನಾಟಕ, ದೆಹಲಿ, ದೇಶ-ವಿದೇಶ, ಬೆಂಗಳೂರು, ರಾಜಕೀಯ ಸುದ್ದಿ, ಸುದ್ದಿ
ನವದೆಹಲಿ:ಜನತಾ ದಳ (ಯುನೈಟೆಡ್) ನ ರಾಜ್ಯಸಭಾ ಸಂಸದ ಮತ್ತು ಕೈಗಾರಿಕೋದ್ಯಮಿ ಮಹೇಂದ್ರ ಪ್ರಸಾದ್ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 81 ವರ್ಷದ ಪ್ರಸಾದ್ ಭಾನುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಸಂಸತ್ತಿನ ಶ್ರೀಮಂತ ಸದಸ್ಯರಲ್ಲಿ ಒಬ್ಬರು ಎಂದು ಅಂದಾಜಿಸಲಾಗಿದೆ. ಬಿಹಾರದಿಂದ ಏಳು ಬಾರಿ ರಾಜ್ಯಸಭಾ ಸಂಸದರಾಗಿದ್ದರು ಮತ್ತು ಒಮ್ಮೆ ಲೋಕಸಭೆಗೆ ಚುನಾಯಿತರಾಗಿದ್ದರು.ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. …
Read More »
admin
December 27, 2021
Breaking News, ಕರ್ನಾಟಕ, ದೆಹಲಿ, ದೇಶ-ವಿದೇಶ, ಬೆಂಗಳೂರು, ರಾಜಕೀಯ ಸುದ್ದಿ, ಸುದ್ದಿ
ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ತಮ್ಮ ಮಗಳ ನಿಶ್ಚತಾರ್ಥದ ಫೋಟೋವನ್ನು ಡಿಸೆಂಬರ್ 25ರಂದು ಇನ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಪುತ್ರಿ ಶಾನೆಲ್ಲೆ ಇರಾನಿ ನಿಶ್ಚಿತಾರ್ಥಕ್ಕೆ ಶುಭಕೋರಿದ್ದಾರೆ. ಸ್ಮೃತಿ ಇರಾನಿ ಹಂಚಿಕೊಂಡಿರುವ ಮೊದಲ ಫೋಟೋದಲ್ಲಿ ಶಾನೆಲ್ಲೆಗೆ ಅರ್ಜುನ್ ಮೊಣ ಕಾಲಿನ ಮೇಲೆ ಕುಳಿತು ಪ್ರೀತಿಯ ನಿವೇದನೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಎರಡನೇ ಚಿತ್ರದಲ್ಲಿ ಅರ್ಜುನ್ ಭಲ್ಲಾ ಮತ್ತು ಶಾನೆಲ್ಲೆ ನಿಶ್ಚಿತಾರ್ಥದ ಬಳಿಕ ತೆಗೆದುಕೊಂಡಿರುವ ಸೆಲ್ಫಿ ಫೋಟೋ ಕಾಣಬಹುದಾಗಿದೆ. ಫೋಟೋ ಶೇರ್ ಮಾಡುವುದರೊಂದಿಗೆ …
Read More »
admin
December 27, 2021
Breaking News, ಕರ್ನಾಟಕ, ಬೆಂಗಳೂರು, ರಾಜಕೀಯ ಸುದ್ದಿ, ವಿಶೇಷ ಸುದ್ದಿ, ಸುದ್ದಿ, ಹಾವೇರಿ
ಹಾವೇರಿ : ಕೋಡಿಮಠದ ಶ್ರೀಗಳು ಆಗಾಗ ಕೆಲವೊಂದಿಷ್ಟು ಬಾರಿ ಜಗತ್ತನ್ನು ಉದ್ದೇಶಿಸಿ ಹಾಗೂ ಜನರ ಒಳಿತನ್ನು ಉದ್ದೇಶಿಸಿ ಮುಂಬರುವ ರಾಜಕೀಯದ ವಿಚಾರಗಳನ್ನು ಹೇಳುತ್ತಾ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾರೆ. ಕೆಲವೊಂದಿಷ್ಟು ಭವಿಷ್ಯ ನುಡಿದು ಜನರಿಗೆ ಮುನ್ಸೂಚನೆ ನೀಡುತ್ತಾರೆ. ಆದರೆ, ಈ ಕೋಡಿ ಮಠದ ಶ್ರೀಗಳ ಮಾತನ್ನು ಕೆಲವರು ನಂಬುವುದಿಲ್ಲ. ಇನ್ನೂ ಕೆಲವರು ಅವರ ಮಾತಿನ ಮೇಲೆ ನಿಲ್ಲುತ್ತಾರೆ. ಹೌದು ಇತ್ತೀಚಿಗಷ್ಟೇ ರಾಣೆಬೆನ್ನೂರಿನಲ್ಲಿ ಕೋಡಿಮಠದ ಶ್ರೀಗಳಾದ ಶಿವಾನಂದ ಸ್ವಾಮೀಜಿ ಅವರು ನಡೆಸಿದ …
Read More »
admin
December 23, 2021
Breaking News, ಕರ್ನಾಟಕ, ಬೆಂಗಳೂರು, ರಾಜಕೀಯ ಸುದ್ದಿ, ಸುದ್ದಿ
ಬೆಂಗಳೂರು: ಬೆಳಗಾವಿಯಲ್ಲಿ ಹೆಚ್ಚುತ್ತಿರುವ ಎಂಇಎಸ್ ಪುಂಡಾಟಿಕೆಯ ಕುರಿತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿದ್ದಾರೆ. ಕಲಾ ಗಂಗೋತ್ರಿ 50ನೇ ವರ್ಷದ ಪ್ರೇಸ್ ಮೀಟ್ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಮರಾಠ ಮಂಡಳಿಯನ್ನು ತಡೆಹಿಡಿಯಬೇಕು. ಇದೊಂದು ರಾಜಕೀಯ ಪಿತೂರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿನಿಧಿಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದಿದ್ದಾರೆ. ನಾನು ಮರಾಠ ವಿರೋಧಿಯಲ್ಲ. ಆದರೆ ಯಾವುದೇ ಕಾರಣಕ್ಕೂ ಬಾವುಟವನ್ನು ಸುಡುವುದು ಸರಿಯಲ್ಲ. ನಮ್ಮವರ ಮೇಲೆ ಕೇಸ್ ಹಾಕಿರುವುದನ್ನು ವಾಪಾಸ್ ತೆಗೆದುಕೊಳ್ಳಬೇಕು. ನಾವು ಬಿಡಿ …
Read More »
admin
December 23, 2021
Breaking News, ಕರ್ನಾಟಕ, ಗದಗ, ಸುದ್ದಿ
ರೋಣ : ಪಟ್ಟಣದ ಮಾದಿಗ ಮೀಸಲಾತಿ ಹೋರಾಟ ಸಮಿತಿಯವತಿಯಿಂದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ತಹಸೀಲ್ದಾರರ ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಗದಗ ಜಿಲ್ಲಾ ಎಸ್ ಪಿಯವರ ಕಾರ್ಯಾಲಯದಲ್ಲಿ ದಲಿತರ ಕುಂದುಕೊರತೆ ಸಭೆ ಆಯೋಜಿಸಿ ಕುಂದುಕೊರತೆಯ ವಿಷಯದ ಬಗ್ಗೆ ಚೆರ್ಚೆ ಮಾಡುತ್ತಿರುವಾಗ ದಲಿತ ಸಮಾಜದ ಮುಖಂಡರೆಲ್ಲರಿಗೂ ಏರು ಧ್ವನಿಯಲ್ಲಿ ಬೆದರಿಸಿ ಏಕ ವಚನದಲ್ಲಿ ಗದರಿಸಿ ಏ ಸುಮ್ಮನೆ ಕುಳಿತುಕೊಳ್ಳಿ ಎಂದು ತಮ್ಮ ಅಧಿಕಾರದ ಧರ್ಪ …
Read More »
admin
December 23, 2021
Breaking News, ಕರ್ನಾಟಕ, ಧಾರವಾಡ, ಲೈಫ್ ಸ್ಟೈಲ್, ಸುದ್ದಿ
ಕಲಘಟಗಿ: ವೇದಾಂತ ಫೌಂಡೇಶನ್ ನ ನಂದಘರ್ ಅಂಗನವಾಡಿ ಕೇಂದ್ರ ಹಾಗೂ ರುಡ್‌ಸೆಟ್ ಸಂಸ್ಥೆಯ ಸಹಯೋಗದೊಂದಿಗೆ ಗ್ರಾಮೀಣ ಯುವಜನತೆಯ ಸಹಕಾರದಿಂದ ಕಲಘಟಗಿಯ ತಾಲೂಕಿನ ಜಿನ್ನೂರು ಗ್ರಾಮದಲ್ಲಿ ಉಚಿತವಾಗಿ ಕೌಶಲ್ಯಾಭಿವೃದ್ದಿಯ ಸ್ವದ್ಯೋಗ ತರಬೇತಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರುಡ್ ಸೆಟ್ ಸಂಸ್ಥೆಯ ಸಹಾಯಕರಾದ ನಾಗೇಶ್ ಶಿಂಧೆ ಇವರು ಮಾತನಾಡಿ ನಾಲ್ಕು ವಿಭಾಗಗಳ ತರಬೇತಿಗಳಾದ ಕೃಷಿ,ಸೇವಾ,ಉತ್ಪಾದನಾ,ವ್ಯವಹಾರ ವಿಭಾಗ ಹೀಗೆ ಹೈನುಗಾರಿಕೆ ಮೊಬೈಲ್ ರಿಪೇರಿ,ಸಿದ್ದ ಉಡುಪು ತಯಾರಿಕೆ ಆಹಾರ ಉತ್ಪನ್ನಗಳ ತಯಾರಿಕೆ ಕಂಪ್ಯೂಟರ್ ಡಿಡಿಟಿಪಿ ಕಂಪ್ಯೂಟರ್ …
Read More »
BigTv News
December 23, 2021
Breaking News, ಕರ್ನಾಟಕ, ಧಾರವಾಡ, ರಾಜಕೀಯ ಸುದ್ದಿ, ಸುದ್ದಿ
ಧಾರವಾಡ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪುರಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪುರಸಭೆ ವ್ಯಾಪ್ತಿಯ ಒಟ್ಟು 23 ವಾರ್ಡ್‍ಗಳಲ್ಲಿ ಡಿಸೆಂಬರ್ 27 ರಂದು ಮತದಾನ ಜರುಗಲಿದೆ. ಚುನಾವಣೆಯನ್ನು ಮುಕ್ತವಾಗಿ ಮತ್ತು ಶಾಂತಿಯುತವಾಗಿ ಜರುಗಿಸುವ ಹಿತದೃಷ್ಟಿಯಿಂದ ಡಿ.27 ರಂದು ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ ಜರುಗಲಿರುವ ಸಂತೆ, ಜಾತ್ರೆ ಮತ್ತು ಉತ್ಸವಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ.-
Read More »