Breaking News

ಕರ್ನಾಟಕ

ವಿಜಯಲಕ್ಷ್ಮಿ ಶಿಬರೂರು ಹಾಗೂ ತಂಡದ ಮೇಲೆ ದೂರು ದಾಖಲು:

ಶಿವಮೊಗ್ಗ: ತನಿಖಾ ವರದಿಯಲ್ಲಿ ಹೆಸರು ಮಾಡಿರುವ ದಿಟ್ಟ ವರದಿಗಾರ್ತಿ ಎಂದು ಖ್ಯಾತಿ ಪಡೆದಿರುವ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಹಾಗೂ ತಂಡದ ಸದಸ್ಯರ ಮೇಲೆ ದೂರು ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 19-12-2023 ರಂದು ಮಾಳೂರು ಠಾಣಾ ASI ಕೃಷ್ಣಮೂರ್ತಿ ರವರಿಗೆ ಹೆದ್ದಾರಿ ಗಸ್ತು ಕರ್ತವ್ಯ ನಿರ್ವಹಿಸುವ ವೇಳೆ  ರಶೀದಿಯನ್ನು ಬರೆಯುತ್ತಿರುವಾಗ ಮತ್ತು ವಾಹನಗಳನ್ನು ಚೆಕ್ ಮಾಡುತ್ತಿದ್ದಾಗ ವಿಜಯಟೈಮ್ಸ್ ಚಾನಲ್ ನ ವಿಜಯಲಕ್ಷ್ಮೀ ಶಿಬರೂರು ಮತ್ತು …

Read More »

ಕಳಸಾ ಬಂಡೂರಿ ಯೋಜನೆಯನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಲು ಹಿಂಜರಿಯುತ್ತಿರುವುದರಿಂದ ರೈತ ಸಂಘಟನೆಗಳು ಪತ್ರ ಚಳುವಳಿ….

ಹುಬ್ಬಳ್ಳಿ: ತಂದೆ ತಾಯಿ ಕಿತ್ತಾಟದ ನಡುವೆ ಕೂಸು ಬಲಿಯಾದಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ, ನಮ್ಮ ಉತ್ತರ ಕರ್ನಾಟಕ ರೈತರು ಬಲಿಯಾಗುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಮಹದಾಯಿ, ಕಳಸಾ ಬಂಡೂರಿ ಯೋಜನೆಯನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಲು ಹಿಂಜರಿಯುತ್ತಿರುವುದರಿಂದ ರೈತ ಸಂಘಟನೆಗಳು ಪತ್ರ ಚಳುವಳಿ ಮಾಡಲು ಮುಂದಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಮಹದಾಯಿಗಾಗಿ ಉತ್ತರ ಕರ್ನಾಟಕದ ರೈತರು ಹೋರಾಟ ಮಾಡ್ತಾ ಬಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು …

Read More »

ಕೇಂದ್ರ ಸರ್ಕಾರದ ಜೊತೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವುದು ಒಬ್ಬ ಜವಾಬ್ದರಿಯುತ ಮುಖ್ಯಮಂತ್ರಿಗೆ ಇರಬೇಕಾದ ಪ್ರಮುಖ ಲಕ್ಷಣ,….

ಬೆಂಗಳೂರು: ಪ್ರಧಾನಿಮಂತ್ರಿ ನರೇಂದ್ರ ಮೋದಿಯನ್ನು ಭೇಟಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಅವಕಾಶ ಸಿಕ್ಕಿದೆ. ಮಂಗಳವಾರ ದೆಹಲಿಗೆ ಸಿದ್ದರಾಮಯ್ಯ ತೆರಳಲಿದ್ದಾರೆ. ಈ ಮಧ್ಯೆ ವಿಧಾನಮಂಡಲ ಅಧಿವೇಶನದಲ್ಲಿ ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ಅವರು ಮಾತನಾಡಿದ್ದನ್ನು ವಿಪಕ್ಷ ನಾಯಕ ಆರ್. ಅಶೋಕ್ ಅವರು ಪ್ರಸ್ತಾಪಿಸಿ ಕೆಲವು ಇತಿ ಮಿತಿಗಳ ಕುರಿತು ತಿಳಿಸಿದ್ದಾರೆ. ಇತ್ತೀಚಿನ ಚಳಿಗಾಲ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸಿಎಂ ಸಿದ್ದರಾಮಯ್ಯನವರು ರೋಷಾವೇಶ ಗಮನಿಸಿದರೆ ರಾಜ್ಯದ ಜನತೆಯ ಹಿತರಕ್ಷಣೆಗಿಂತ ತಮ್ಮ …

Read More »

ಬೆಳಗಾವಿಯ ಸುವರ್ಣ ವಿಧಾನಸೌಧವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಕರ್ನಾಟಕ ಸರ್ಕಾರ ಮುಂದಾಗಿದೆ….

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಕರ್ನಾಟಕ ಸರ್ಕಾರ ಮುಂದಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಬೆಳಗಾವಿ ಸುವರ್ಣ ಸೌಧದ ಆವರಣದಲ್ಲಿ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸುವರ್ಣ ವಿಧಾನ ಸೌಧವನ್ನು ವಾರಾಂತ್ಯದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ತೆರೆದು ಪ್ರವಾಸಿ ತಾಣವನ್ನಾಗಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಶಿವಕುಮಾರ್ ತಿಳಿಸಿದರು.

Read More »

ಮಾನಸಿಕ ಖಿನ್ನತೆ ನಿರ್ವಹಣೆಗೆ ಟೆಲಿಮನಸ್ ಸಹಾಯವಾಣಿ ಕರ್ನಾಟಕದಲ್ಲಿ ಕಾರ್ಯ ನಿರ್ವಹಣೆ…

ಬೆಂಗಳೂರು: ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಪ್ರತಿಯೊಬ್ಬ ವ್ಯಕ್ತಿಗೂ ಜೀವನದ ಯಾವುದಾದಾರೂ ಒಂದು ಸನ್ನಿವೇಶಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಕಾಡುತ್ತದೆ. ಆಗ ಆತ್ಮಹತ್ಯೆಯೇ ಪರಿಹಾರವಲ್ಲ. ಉಚಿತ ಸಹಾಯವಾಣಿಗೆ ಕರೆ ಮಾಡಿ ಆರೋಗ್ಯ ಉತ್ತಮವಾಗಿಸಲು ಪ್ರಯತ್ನ ನಡೆಸಬಹುದು. ಮಾನಸಿಕ ಖಿನ್ನತೆ ನಿರ್ವಹಣೆಗೆ ಟೆಲಿಮನಸ್ ಸಹಾಯವಾಣಿ ಕರ್ನಾಟಕದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ರಾಜ್ಯದ ಎರಡು ಕಡೆ ಈ ಕೇಂದ್ರಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಜನರು ಉಚಿತ …

Read More »

ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತ ಒಂದಾಗಿರಬೇಕು ಒಂದಾಗಿರುತ್ತೆ : ಚಕ್ರವರ್ತಿ ಸೂಲಿಬೆಲೆ….

ಹುಬ್ಬಳ್ಳಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಮೂಲಕ ಮಹಿಳೆಯರು 2 ಸಾವಿರ ಪಡೆಯುತ್ತಿದ್ದಾರೆ. ಆದರೆ, ಕೋವಿಡ್ ಸಂಕಷ್ಟದ ಕಾಲದಲ್ಲಿ ಪ್ರಧಾನಿ ನರೇಂದ್ ರ ಮೋದಿ ಅವರು ದೇಶದ ಜನತೆಗೆ ಉಚಿತವಾಗಿ ಲಸಿಕೆ ನೀಡಿ ಜೀವದ ಗ್ಯಾರಂಟಿ ನೀಡಿದ್ದರು ಎನ್ನುವುದನ್ನು ಮರೆಯಬಾರದು ಎಂದು ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಮೋ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ಇನ್ನೂ ಮಲಗಿದರೆ ಎದ್ದೇಳುವಾಗ ಭಾರತವಿರದು ಸರಣಿ ಉಪನ್ಯಾಸ …

Read More »

ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಡುವೆ ಇಂದಿನಿಂದ ಬರೋಬ್ಬರಿ ಆರು ರೈಲುಗಳ ಸಂಚಾರ ಆರಂಭ..

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಡುವೆ ಇಂದಿನಿಂದ ಬರೋಬ್ಬರಿ ಆರು ರೈಲುಗಳ ಸಂಚಾರ ಆರಂಭವಾಗಲಿದ್ದು, ಇದರಿಂದ ದಿನಪೂರ್ತಿ ರೈಲು ಸೇವೆ ಲಭ್ಯವಾದಂತಾಗಿದೆ. ಇದರಿಂದ ಬೆಂಗಳೂರಿಗೆ ನಿತ್ಯ ಹೋಗಿ ಬರುವ ಸ್ಥಳೀಯರು, ವ್ಯಾಪಾರಸ್ಥರು, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲುಗಳ ಸೇವೆ ಆರಂಭಿಸಲಾಗಿತ್ತು. ಈ ರೈಲುಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಗೆ ಬಂದು ನಿಲ್ಲುತ್ತಿದ್ದವು. ಅಷ್ಟೂ ರೈಲುಗಳನ್ನು ಈಗ ಚಿಕ್ಕಬಳ್ಳಾ ಪುರದವರೆಗೂ ಸಂಚರಿಸಲು ಹಸಿರು ನಿಶಾನೆ ತೋರಲಾಗಿದೆ. …

Read More »

ನಟ ಯಶ್ ‘ಆಸ್ಕರ್’ ಮೇಲೆ ಕಣ್ಣಿಟ್ಟರಾ…?

ನಟ ಯಶ್ ಅಂದುಕೊಂಡ ಗುರಿಯನ್ನು ಸಾಧಿಸುವ ತನಕ ನಿಲ್ಲಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಅದ್ರಲ್ಲೂ ಕನ್ನಡ ಸಿನಿಮಾಗಳಿಗೆ ಜಾಗತಿಕ ಕೀರ್ತಿಯನ್ನು, ಆಧುನಿಕ ಕಾಲದಲ್ಲಿ ಗಳಿಸಿಕೊಟ್ಟ ಯಶಸ್ಸು ಯಶ್‌ಗೆ ಸಲ್ಲಬೇಕು. ಯಶ್ ಇಂದು ತಮ್ಮ 19ನೇ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು ‘ಹೊಡೆದರೆ ಆನೆಯನ್ನೇ ಹೊಡೆಯಬೇಕು’ ಎನ್ನುವ ಅವರದ್ದೇ ಡೈಲಾಗ್‌ನಂತೆ ‘ಆಸ್ಕರ್’ ಮೇಲೆ ಕಣ್ಣಿಟ್ಟರಾ? ಅನ್ನೋ ಪ್ರಶ್ನೆ ಭುಗಿಲೆದ್ದಿದೆ ಕೆಜಿಎಫ್-1′ ತನ್ನ ಕೆಪಾಸಿಟಿ ತೋರಿಸಿತ್ತು, ಇದಾದ ನಂತರ 2022ರಲ್ಲಿ ‘ಕೆಜಿಎಫ್-2’ಗೆ …

Read More »

ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ವಾಗುವುದು ಯಾವಾಗ….?

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ವಾಗುವುದು ಯಾವಾಗ?. ಕರ್ನಾಟಕ ಸರ್ಕಾರ ಯೋಜನೆಯ ಡಿಪಿಆರ್‌ಗೆ ಒಪ್ಪಿಗೆ ನೀಡುವುದು ಯಾವಾಗ?. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲ ಸೌಕರ್ಯಗಳ ಇಲಾಖೆ ಖಾತೆ ಸಚಿವ ಎಂ. ಬಿ. ಪಾಟೀಲ್ ವಿಮಾನ ನಿಲ್ದಾಣದ ಕುರಿತು ಅಪ್‌ಡೇಟ್ ಕೊಟ್ಟಿದ್ದಾರೆ. ವಿಧಾನ ಪರಿಷತ್‌ನಲ್ಲಿ ಎಂಎಲ್‍ಸಿ ವೈ. ಎಂ. ಸತೀಶ್ ಕೇಳಿದ ಪ್ರಶ್ನೆಗೆ ಸಚಿವ ಎಂ. ಬಿ. ಪಾಟೀಲ್ ಪರವಾಗಿ …

Read More »
Featured Video Play Icon

ಅವಳಿ ನಗರದಲ್ಲಿ ಮೆಡಿಸಿನ್ ಮಾಫಿಯಾ….. ಬೀಳುತ್ತಾ ಇದಕ್ಕೆ ಕಡಿವಾಣ…?

ಹುಬ್ಬಳ್ಳಿ ಅವಳಿನಗರದಲ್ಲಿ ರಣ ರೋಚಕ ರಹಸ್ಯ ಕಾರ್ಯಾಚರಣೆ ಬಿಗ್ ಟಿವಿ ಬಿಚ್ಚಿಡ್ತಿದೆ ಮಹಾ ಮೆಡಿಸಿನ್ ಕರಾಳ ದಂಧೆ.ಎಕ್ಸಫೈರ್ ಆದ ಮೆಡಿಸಿನ್ ಸುಡೋ ಬದಲು ಗೊಡೌನ್ ನಿಂದ ಮರಾಟ ಮಾಡ್ತಿದ್ದಾರೆ ಖದೀಮರು.ಸತ್ತ ಔಷಧ ಹೊಟ್ಟೆಗೆ….ಸುಡಬೇಕಾದ ಮೆಡಿಸಿನ್ ಮತ್ತೆ ಮರಾಟ ಮಾಡ್ತಿದ್ದಾರೆ ಖದೀಮರು ಎರಡು ಗೊಡೌನ್ಗಳಲ್ಲಿ ನಡೆಯುತ್ತಿದೆ ಖದೀಮರ ಔಷಧಿ ದಂಧೆಯಾವ ಅವಳಿ ನಗರದಲ್ಲಿ ಮೆಡಿಸಿನ್ ಮಾಫಿಯಾ. ಬೀಳುತ್ತಾ ಇದಕ್ಕೆ ಕಡಿವಾಣ…? ಹುಬ್ಬಳ್ಳಿ ಅವಳಿನಗರದಲ್ಲಿ ರಣ ರೋಚಕ ರಹಸ್ಯ ಕಾರ್ಯಾಚರಣೆ ಬಿಗ್ ಟಿವಿ …

Read More »